ಶಿಯೋಮಿಯ ಮತ್ತೊಂದು ಪೋನ್ 30ನೇ ತಾರೀಖು ಲಾಂಚ್!!..ಅತ್ಯಂತ ಕಡಿಮೆ ಬೆಲೆಯ 4G ಫೋನ್?
ಇದೇ ತಿಂಗಳು 30 ನೇ ತಾರೀಖಿನಂದು ಮತ್ತೊಂದು ರೆಡ್‌ಮಿ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವುದಾಗಿ ಶಿಯೋಮಿ ಇಂಡಿಯಾ ಟ್ವಿಟ್ ಮಾಡುವ ಮೂಲಕ ತಿಳಿಸಿದೆ.!!
ಪ್ರಸ್ತುತ ಭಾರತದ ನಂಬರ್ ಒನ್ ಮೊಬೈಲ್ ಬ್ರಾಂಡ್ ಎಂಬ ಹೆಸರು ಪಡೆದಿರುವ ಶಿಯೋಮಿ ಕಂಪೆನಿ ಭಾರತೀಯ ಗ್ರಾಹಕರಿಗೆ ಮತ್ತೊಂದು ಸಿಹಿಸುದ್ದಿ ನೀಡಿದೆ.! ಇದೇ ತಿಂಗಳು 30 ನೇ ತಾರೀಖಿನಂದು ಮತ್ತೊಂದು ರೆಡ್‌ಮಿ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವುದಾಗಿ ಶಿಯೋಮಿ ಇಂಡಿಯಾ ಟ್ವಿಟ್ ಮಾಡುವ ಮೂಲಕ ತಿಳಿಸಿದೆ.!!
'ದೇಶ್ ಕಾ ಸ್ಮಾರ್ಟ್‌ಫೋನ್' ಟ್ಯಾಗ್‌ನಲ್ಲಿ ಶಿಯೋಮಿಯ ಹೊಸ ರೆಡ್‌ಮಿ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವ ಸುದ್ದಿ ನೀಡಿದ್ದು, ಆದರೆ, ಯಾವ ಫೋನ್ ಬಿಡುಗಡೆ ಮಾಡುತ್ತಿರುವುದಾಗಿ ತಿಳಿಸಿಲ್ಲ.!ಹಾಗಾದರೆ, ಇಂಗ್ಲೀಷ್ ಮಾಧ್ಯಮಗಳು ಹೇಳಿರುವಂತೆ ಶಿಯೋಮಿ ಯಾವ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಬಹುದು ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಕಡಿಮೆ ಬೆಲೆಯ 4G ಫೋನ್!!
ಭಾರತದಲ್ಲಿ ಕಡಿಮೆ ಬೆಲೆಯ ಉತ್ತಮ ಫೋನ್‌ಗಳನ್ನು ಜನರು ಹೆಚ್ಚು ಇಷ್ಟಪಡುತ್ತಿರುವುದರಿಂದ ಶಿಯೋಮಿ ಅತ್ಯಂತ ಕಡಿಮೆ ಬೆಲೆಯಲ್ಲಿ 4G ಸ್ಮಾರ್ಟ್‌ಫೋನ್ ಪರಿಚಯಿಸುವ ಹಂಬಲದಲ್ಲಿದೆ.! ಕಡಿಮೆ ಬೆಲೆಯ 4G ಫೋನ್ ತಯಾರಿಕೆಗೆ ಶಿಯೋಮಿಗೆ ಒಲವಿರುವುದನ್ನು ಶಿಯೋಮಿ ಇಂಡಿಯಾದ ಮುಖ್ಯಸ್ಥ ಮನುಕುಮಾರ್ ಜೈನ್ ಅವರು ಈ ಹಿಂದೆ ಹೇಳಿದ್ದರು.!!

ಗ್ರಾಮೀಣ ಭಾಗದತ್ತ ಶಿಯೋಮಿ!!
ಈಗಾಗಲೇ ನಗರ ಪ್ರದೇಶಗಳಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿರುವ ಶಿಯೋಮಿ ಗ್ರಾಮೀಣ ಬಾಗದತ್ತ ಮುಖಮಾಡಿದೆ. ಹಾಗಾಗಿ, 5000 ರೂಪಾಯಿಗಳಿಗಿಂತ ಕಡಿಮೆ ಬೆಲೆಯಲ್ಲಿ 4G ಸ್ಮಾರ್ಟ್‌ಫೋನ್ ಪರಿಚಯಿಸುವ ಮೂಲಕ ಗ್ರಾಮೀಣ ಭಾಗಕ್ಕೂ ತನ್ನ ಲಗ್ಗೆಹಾಕಲು ಶಿಯೋಮಿ ಮುಂದಾಗಿದೆ ಎನ್ನಲಾಗಿದೆ.!!

ಮೇಡ್ ಇಂಡಿಯಾ ಫೋನ್!!
ಭಾರತದಲ್ಲಿ ಶಿಯೋಮಿ ಲಾಂಚ್ ಮಾಡುತ್ತಿರುವ ನೂತನ ಸ್ಮಾರ್ಟ್‌ಫೋನ್ ಭಾರತದಲ್ಲಿಯೇ ತಯಾರಿಸಲ್ಪಟ್ಟಿರುವ ಫೋನ್ ಆಗಿದೆ. ಹಾಗಾಗಿ, ಭಾರತದಲ್ಲಿಯೇ ಫೋನ್ ತಯಾರಿಸಿರುವದರಿಂದ ಬಾರತೀಯರಿಗಾಗಿಯೇ ಈ ಫೋನ್ ತಯಾರಾಗಿದೆ ಎನ್ನಬಹುದು.!!

ಶಿಯೋಮಿ ರೆಡ್‌ಮಿ 4A ಪರ್ಯಾಯ?
ಶಿಯೋಮಿ ಕಂಪೆನಿ ರೆಡ್‌ಮಿ ಸ್ಮಾರ್ಟ್‌ಫೋನ್ ರಿಲೀಸ್ ಮಾಡುವುದಾಗಿ ಹೇಳಿಕೊಂಡಿರುವುದರಿಂದ ಶಿಯೋಮಿ ''ರೆಡ್‌ಮಿ 4A'' ಪರ್ಯಾಯ ಸ್ಮಾರ್ಟ್‌ಫೋನ್ ಬಿಡುಗಡೆಯಾಗಬಹುದು ಎಂದು ಹೇಳಲಾಗಿದೆ. ಏಕೆಂದರೆ, ಶಿಯೋಮಿ ಕಂಪೆನಿ ಅತ್ಯಂತ ಕಡಿಮೆ ಬೆಲೆಯ ಫೋನ್ 5,999 ರೂಪಾಯಿಗಳಿಗೆ "ಶಿಯೋಮಿ 'ರೆಡ್‌ಮಿ 4A" ಆಗಿದೆ.!!

ರೆಡ್‌ಮಿ ನೋಡ್ 5 ಸಹ ಆಗಿರಬಹುದು!!
ಇಷ್ಟಲ್ಲದೆ, ಶಿಯೋಮಿ ರೆಡ್‌ಮಿ ನೋಟ್ 5 ಫೋನ್ ಸಹ ಬಿಡುಗಡೆ ಮಾಡುವ ನಿರೀಕ್ಷೆ ಸಹ ಹಲವರಲ್ಲಿ ಮೂಡಿದೆ. ರೆಡ್‌ಮಿ ನೋಟ್ 4 ಯಶಸ್ಸಿನ ಉತ್ತುಂಗದಲ್ಲಿರುವ ಶಿಯೋಮಿ ರೆಡ್‌ಮಿ ನೋಟ್ 5 ಫೋನ್ ಪರಿಚಯಿಸಿ ಭಾರತದ ಮೊಬೈಲ್ ದಿಗ್ಗಜನಾಗಿ ಬೆಳೆಯುವ ಗುರಿಯನ್ನು ಹೊಂದಿದೆ.!!
ಓದಿರಿ:ಕ್ಯಾಲ್ಕುಲೇಟರ್ ಒಳಗೆ ಫೈಲ್/ವಿಡಿಯೋ ಹೈಡ್ ಮಾಡಬಹುದು!!..ಈ ಸೂಪರ್ ಪ್ಲಾನ್ ಗೊತ್ತಾ?


Click it and Unblock the Notifications








