ಕ್ಯಾಲ್ಕುಲೇಟರ್ ಒಳಗೆ ಫೈಲ್/ವಿಡಿಯೋ ಹೈಡ್ ಮಾಡಬಹುದು!!..ಈ ಸೂಪರ್ ಪ್ಲಾನ್ ಗೊತ್ತಾ?

ಇಂದಿನ ಲೇಖನದಲ್ಲಿ ಆಂಡ್ರಾಯ್ಡ್ ಬಳಕೆದಾರರರು ಯಾರಿಗೂ ತಿಳಿಯದಂತೆ ಕ್ಯಾಲ್ಕುಲೇಟರ್ ಒಳಗೆ ಫೈಲ್ ಹೈಡ್ ಮಾಡುವುದು ಹೇಗೆ ಎಂಬುದನ್ನು ತಿಳಿಸಿಕೊಡುತ್ತೇನೆ.!!

|

ಹಲವರ ಸ್ಮಾರ್ಟ್‌ಫೋನ್‌ನಲ್ಲಿ ಹೈಡ್ ಮಾಡಬೇಕಿರುವ ಹಲವು ಫೈಲ್, ವಿಡಿಯೋಗಳು ಇರುತ್ತವೆ. ಹಾಗಾಗಿ, ಅವರು ಪ್ಯಾಟ್ರನ್ ಲಾಕ್ ಅಥವಾ ಪಾಸ್‌ವರ್ಡ್ ಲಾಕ್‌ಗಳ ಮೂಲಕ ಆಪ್‌ಗಳನ್ನು ಲಾಕ್ ಮಾಡಿ ಯಾರಿಗೂ ತೆರಯಲಾರದಂತೆ ಮಾಡಿಟ್ಟಿರುತ್ತಾರೆ. ಆದರೆ, ಇದು ಕೆಲವೊಮ್ಮೆ ನಮ್ಮ ಮುಜುಗರಕ್ಕೋ ಅಥವಾ ತೊಂದರೆಗೆ ಕಾರಣವಾಗುತ್ತದೆ.!!

ಹೌದು, ಸ್ಮಾರ್ಟ್‌ಫೋನ್‌ ಅನ್ನು ಗೆಳೆಯರೊ ಅಥವಾ ಮನೆಯಲ್ಲಿಯೇ ಯಾರಿಗಾದರೂ ನೀಡಿದಾಗ ಇಂತಹ ಮುಜುಗರವನ್ನು ಎದುರಿಸಬೇಕಾಗಿದೆ. ಹಾಗಾಗಿ, ಇಂದಿನ ಲೇಖನದಲ್ಲಿ ಆಂಡ್ರಾಯ್ಡ್ ಬಳಕೆದಾರರರು ಯಾರಿಗೂ ತಿಳಿಯದಂತೆ ಕ್ಯಾಲ್ಕುಲೇಟರ್ ಒಳಗೆ ಫೈಲ್ ಹೈಡ್ ಮಾಡುವುದು ಹೇಗೆ ಎಂಬುದನ್ನು ತಿಳಿಸಿಕೊಡುತ್ತೇನೆ.! ಹಾಗಾದರೆ ಹೇಗೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಕ್ಯಾಲ್ಕುಲೇಟರ್ ಒಳಗೆ ವಿಡಿಯೋ ಹೈಡ್!!

ಕ್ಯಾಲ್ಕುಲೇಟರ್ ಒಳಗೆ ವಿಡಿಯೋ ಹೈಡ್!!

ಯಾರಾದರೂ ನಿಮ್ಮ ಸ್ಮಾರ್ಟ್‌ಫೋನ್ ಪಡೆದುಕೊಂಡರೆ ಅವರು ಕ್ಯಾಲ್ಕುಲೇಟರ್ ಓಪನ್ ಮಾಡುವುದಿಲ್ಲ ಅಲ್ಲವೇ? ಅದೇ ತಂತ್ರವನ್ನು ಹಿಂದಿಟ್ಟುಕೊಂಡು ಆಪ್ ಒಂದು ನಿಮ್ಮನ್ನು ಸೆಕ್ಯೂರ್ ಮಾಡಲು ಬಂದಿದೆ. ನಿಮ್ಮ ಪೈಲ್‌ಗಳನ್ನು ಕ್ಯಾಲುಕೇಟರ್‌ನಲ್ಲಿಟ್ಟು ಯಾರಿಗೂ ಅನುಮಾನ ಬಾರದಂತೆ ಅವುಗಳನ್ನು ಸಂಗ್ರಹಣೆ ಮಾಡಿಕೊಳ್ಳುತ್ತವೆ.!!

ಯಾರಿಗೂ ಅನುಮಾನ ಬರೊಲ್ಲಾ!!

ಯಾರಿಗೂ ಅನುಮಾನ ಬರೊಲ್ಲಾ!!

ಕ್ಯಾಲ್ಕುಲೇಟರ್ ಒಳಗೆ ಯಾರು ಫೈಲ್ ಇಡುತ್ತಾರೆ ಎಂದು ಯಾರಿಗೂ ಅನುಮಾನ ಬರೊಲ್ಲಾ. ಒಂದು ವೇಳೆ ಅವರಿಗೆ ಈ ಆಪ್‌ ಬಗ್ಗೆ ತಿಳಿದರೂ ಸಹ ಈ ಆಪ್‌ನಲ್ಲಿ ಕ್ಯಾಲ್ಕುಲೇಟರ್ ಕೆಲಸ ಕೂಡ ನಡೆಯುವುದರಿಂದ ನಿಮ್ಮನ್ನು ಕೇಳಲು ಸಾಧ್ಯವಾಗದೆ ಸುಮ್ಮನಾಗುತ್ತಾರೆ.! ಇನ್ನು ಮಕ್ಕಳಿಗೆ ಮೊಬೈಲ್ ಕೊಡುವಾಗ ಯೋಚನೆಯೇ ಇರುವುದಿಲ್ಲ.!!

ಆಪ್ ಯಾವುದು?

ಆಪ್ ಯಾವುದು?

ಕ್ಯಾಲ್ಕುಲೇಟರ್ ಮೂಲಕ ನಿಮ್ಮ ಕಾಸಾಗಿ ಡೇಟಾ ಸೆಕ್ಯೂರ್ ಮಾಡುವ ಆ ಆಪ್ ಹೆಸರ ''ಸ್ಮಾರ್ಟ್‌ ಹೈಡ್ ಕ್ಯಾಲ್ಕುಲೇಟರ್''! ಈ ಆಪ್ ಅನ್ನು ನೀವು ಇನ್ಸ್ಟಾಲ್ ಮಾಡಿಕೊಂಡೆ ನಿಮ್ಮೆಲ್ಲಾ ಮಾಹಿತಿಗಳನ್ನು ಈ ಆಪ್‌ನಲ್ಲಿ ಸೆಕ್ಯೂರ್ ಮಾಡಬಹುದು. ವಿಶೇಷವೆಂದರೆ ಈ ಆಪ್‌ನಲ್ಲಿ ಪಾಸ್‌ವರ್ಡ್ ಸೆಟ್ ಮಾಡುವುದು ಕ್ಯಾಲ್ಕುಲೇಟರ್‌ನಲ್ಲಿ ಲೆಕ್ಕ ಮಾಡಿದಂತೆ ಇರುತ್ತದೆ.!!

ಆಪ್ ಬಳಕೆ ಹೇಗೆ?

ಆಪ್ ಬಳಕೆ ಹೇಗೆ?

ಆಪ್ ಅನ್ನು ನೀವು ಇನ್‌ಸ್ಟಾಲ್ ಮಾಡಿಕೊಂಡ ನಂತರ ನಿಮ್ಮ ಫೋನ್‌ನಲ್ಲಿ ಈ ಆಪ್ ಕ್ಯಾಲ್ಕುಲೇಟರ್ ಐಕಕಾನ್‌ನಲ್ಲಿ ಸೇವ್ ಆಗುತ್ತದೆ. ನಂತರ ಈ ಆಪ್‌ ಅನ್ನು ಓಪನ್ ಮಾಡಿ ಸೆಟ್ಟಿಂಗ್ಸ್‌ಗೆ ತೆರಳಿ ನಿಮ್ಮ ಪಾಸ್‌ವರ್ಡ್ ಸೆಟ್ ಮಾಡಿಕೊಳ್ಳಬೇಕು. ಹೀಗೆ ಮಾಡಿದ ನಂತರ ಮತ್ತೆ ನೀವು ಆಪ್ ತೆರೆಯಲು ಪಾಸ್‌ವರ್ಡ್ ನೀಡಿ ''=' ಐಕಾನ್ ಕ್ಲಿಕ್ ಮಾಡಬೇಕು.!!

ಗ್ಯಾಲರಿಯಲ್ಲಿ ಇರೊಲ್ಲಾ.!!

ಗ್ಯಾಲರಿಯಲ್ಲಿ ಇರೊಲ್ಲಾ.!!

''ಸ್ಮಾರ್ಟ್‌ ಹೈಡ್ ಕ್ಯಾಲ್ಕುಲೇಟರ್'' ಆಪ್‌ ಮೂಲಕ ನಿಮಗೆ ಯಾವ ಫೈಲ್ ಅಥವಾ ವಿಡಿಯೋಗಳು ಬೇಕೊ ಅವುಗಳನ್ನು ಈ ಆಪ್‌ ತೆರೆದು ಹೈಡ್ ಮಾಡಬಹುದು.! ಇಲ್ಲಿ ಹೈಡ್ ಮಾಡಿದ ಆಪ್‌ಗಳು ಗ್ಯಾಲರಿಯಲ್ಲಿ ಸಹ ಕಾಣಸಿಗದಂತೆ ಈ ಆಪ್ ಎಚ್ಚರಿಕೆಯನ್ನು ವಹಿಸುತ್ತದೆ.!! ಹಾಗಾಗಿ, ಸೂಪರ್ ಅಲ್ವಾ!?

ಲಾಂಚ್ ಆಯ್ತು ಶಿಯೋಮಿ 'ಮೈ ನೋಟ್ 3'!!..ಬೆಚ್ಚಿಬಿತ್ತು ಮೊಬೈಲ್ ಜಗತ್ತು!!ಲಾಂಚ್ ಆಯ್ತು ಶಿಯೋಮಿ 'ಮೈ ನೋಟ್ 3'!!..ಬೆಚ್ಚಿಬಿತ್ತು ಮೊಬೈಲ್ ಜಗತ್ತು!!

Best Mobiles in India

English summary
We are going to share the trick on how to hide important files and folders inside calculator app on Android device.to know. more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X