Home
ಮೊಬೈಲ್

ಶಿಯೋಮಿ ಬೆಸ್ಟ್‌: 3 ನಿಮಿಷದಲ್ಲಿ ಮಾರಾಟವಾದ ಫೋನ್ ಸಂಖ್ಯೆ ಬೆಚ್ಚಿ ಬೆರಗಾಗಿಸುವುದು..!

By Srinidhi

ದಿನೇ ದಿನೇ ಚೀನಾ ಮೂಲದ ಶಿಯೋಮಿ ಕಂಪನಿಯೂ ಭಾರತೀಯ ಮಾರುಕಟ್ಟೆಯಲ್ಲಿ ಹಿಡಿತವನ್ನು ಸಾಧಿಸುತ್ತಿದೆ ಎನ್ನಲಾಗಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಶಿಯೋಮಿ ನಮ್ಮ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ ಎಲ್ಲಾ ಬಜೆಟ್ ಫೋನ್‌ಗಳು ಬಿಸಿ ದೋಸೆಯಂತೆ ಖಾಲಿಯಾಗುತ್ತಿದೆ. ಇಂದು ಫ್ಲಾಷ್ ಸೇಲಿನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದ ರೆಡ್‌ಮಿ Y1 ಮತ್ತು ರೆಡ್‌ಮಿ Y1 ಲೈಟ್ ಸ್ಮಾರ್ಟ್‌ಫೋನ್ ಕ್ಷಣಾರ್ದದದಲ್ಲಿ ಸೋಲ್ಡ್ ಔಟ್ ಆಗಿದೆ.

ಶಿಯೋಮಿ ಬೆಸ್ಟ್‌: 3 ನಿಮಿಷದಲ್ಲಿ ಮಾರಾಟವಾದ ಫೋನ್ ಸಂಖ್ಯೆ ಬೆಚ್ಚಿ ಬೆರಗಾಗಿಸುವುದು

ಓದಿರಿ: ಭಾರತೀಯ ವಿದ್ಯಾರ್ಥಿಗಳಿಗೆ ಮಣೆ: ಆಪಲ್ ನಿಂದ ಮೊದಲ ಬಾರಿಗೆ ಕ್ಯಾಂಪಸ್ ಸೆಲೆಕ್ಷನ್..!

ಇದು ಮೊದಲ ಬಾರಿಯಲ್ಲ ಎನ್ನಲಾಗಿದೆ ಈ ಹಿಂದೆ ಶಿಯೋಮಿ ನೋಟ್ 4. ರೆಡ್‌ಮಿ 4A ಮತ್ತು ರೆಡ್‌ಮಿ 4 ಸ್ಮಾರ್ಟ್‌ಫೋನ್‌ಗಳು ಕ್ಷಣ ಮಾತ್ರದಲ್ಲಿ ಫ್ಲಾಷ್ ಸೇಲ್‌ನಲ್ಲಿ ಸೋಲ್ಡ್ ಔಟ್ ಆಗಿದನ್ನು ನಾವಿಲ್ಲಿ ಸ್ಮರಿಸಬಹುದಾಗಿದೆ. ಇದಲ್ಲದೇ ಭಾರತದಲ್ಲಿ ಈ ವರ್ಷ ಅತೀ ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್ ಸಹ ಶಿಯೋಮಿಯದ್ದೇ ಆಗಿರುವುದು ಮತ್ತೊಂದು ವಿಶೇಷತೆ ಎನ್ನಲಾಗಿದೆ.

Xiaomi Redmi Y1 : ಶಿಯೋಮಿಯ ಮೊದಲ ಸೆಲ್ಪಿ ಫೋನ್ ರೆಡ್‌ಮಿ Y1
ಮೂರು ನಿಮಿಷದಲ್ಲಿ 1,50,000 ಫೋನ್ ಮಾರಾಟ..!

ಮೂರು ನಿಮಿಷದಲ್ಲಿ 1,50,000 ಫೋನ್ ಮಾರಾಟ..!

ಭಾರತೀಯ ಮಾರುಕಟ್ಟೆಯಲ್ಲಿ ಶಿಯೋಮಿ ಫೋನ್‌ಗಳನ್ನು ಬಿಟ್ಟರೇ ಇನ್ಯಾವುದೇ ಕಂಪನಿಯ ಸ್ಮಾರ್ಟ್‌ಫೋನ್‌ಗಳು ಇಷ್ಟು ಪ್ರಮಾಣದಲ್ಲಿ ಇಷ್ಟು ಕಡಿಮೆ ಅವಧಿಯಲ್ಲಿ ಮಾರಾಟವಾಗಿಲ್ಲ ಎನ್ನಲಾಗಿದೆ ರೆಡ್‌ಮಿ Y1 ಮತ್ತು ರೆಡ್‌ಮಿ Y1 ಲೈಟ್ ಸ್ಮಾರ್ಟ್‌ಫೋನ್ ಮೂರು ನಿಮಿಷದಲ್ಲಿ 1,50,000 ಯೂನಿಟ್ ಮಾರಾಟವಾಗಿದೆ ಎನ್ನಲಾಗಿದೆ.

ಮತ್ತೇ ಪ್ಲಾಷ್ ಸೇಲ್ ಇದೆ:

ಮತ್ತೇ ಪ್ಲಾಷ್ ಸೇಲ್ ಇದೆ:

ಶಿಯೋಮಿ ಫೋನ್‌ಗಳು 10ಕ್ಕಿಂತಲೂ ಹೆಚ್ಚು ಬಾರಿ ಫ್ಲಾಷ್ ಸೇಲ್‌ನಲ್ಲಿ ಕಾಣಿಸಿಕೊಂಡ ದಾಖಲೆಯನ್ನು ನಿರ್ಮಿಸಿವೆ. ಇದೇ ಮಾದರಿಯಲ್ಲಿ ರೆಡ್‌ಮಿ Y1 ಮತ್ತು ರೆಡ್‌ಮಿ Y1 ಲೈಟ್ ಸ್ಮಾರ್ಟ್‌ಫೋನ್‌ಗಳು ಇದೇ ನವೆಂಬರ್ 15ರಂದು ಮತ್ತೊಂಮ್ಮೆ ಫ್ಲಾಷ್ ಸೇಲಿನಲ್ಲಿ ಕಾಣಿಸಿಕೊಳ್ಳಲಿದೆ.

ಅಮೆಜಾನ್ ಮತ್ತು ಮಿ.ಕಾಮ್:

ಅಮೆಜಾನ್ ಮತ್ತು ಮಿ.ಕಾಮ್:

ಈ ರೆಡ್‌ಮಿ Y1 ಮತ್ತು ರೆಡ್‌ಮಿ Y1 ಲೈಟ್ ಸ್ಮಾರ್ಟ್‌ಫೋನ್‌ಗಳು ಶಾಪಿಂಗ್ ಜಾಲತಾಣ ಅಮೆಜಾನ್ ಮತ್ತು ಶಿಯೋಮಿ ಕಂಪೆನಿಯ ಮಿ.ಕಾಮ್ ತಾಣದಲ್ಲಿ ಖರೀದಿಗೆ ಲಭ್ಯವಿತ್ತು. ಎರಡೂ ವೆಬ್‌ಸೈಟ್‌ಗಳಲ್ಲಿ ಮಧ್ಯಾಹ್ನ 12 ಗಂಟೆಗೆ ಸೇಲ್ ಆರಂಭವಾಗಿತ್ತು.

ಸೆಲ್ಫಿಫೋನ್‌ಗಳು:

ಸೆಲ್ಫಿಫೋನ್‌ಗಳು:

ರೆಡ್‌ಮಿ Y1 ಮತ್ತು ರೆಡ್‌ಮಿ Y1 ಲೈಟ್ ಸ್ಮಾರ್ಟ್‌ಫೋನ್ ಸೆಲ್ಪಿಗೆ ಹೆಚ್ಚು ಆದ್ಯತೆಯನ್ನು ನೀಡಿದ ಸ್ಮಾರ್ಟ್‌ಫೋನ್‌ಗಳಾಗಿವೆ. 16MP ಸೆಲ್ಫಿ ಕ್ಯಾಮೆರಾ ಹೊಂದಿರುವ ರೆಡ್‌ಮಿ Y1 ಸ್ಮಾರ್ಟ್‌ಫೋನ್ ಅನ್ನು ಕೇವಲ 8,999 ರೂ.ಗೆ ದೊರೆಯುತ್ತಿತ್ತು.

Best Mobiles in India

English summary
Xiaomi Sold Over 1,50,000 Units of Redmi Y1 and Redmi Y1 Lite Within 3 Minutes. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+