Home
ಸುದ್ದಿಜಾಲ

ಭಾರತೀಯ ವಿದ್ಯಾರ್ಥಿಗಳಿಗೆ ಮಣೆ: ಆಪಲ್ ನಿಂದ ಮೊದಲ ಬಾರಿಗೆ ಕ್ಯಾಂಪಸ್ ಸೆಲೆಕ್ಷನ್..!

ಭಾರತೀಯ ಮಾರುಕಟ್ಟೆಯಲ್ಲಿ ನೂತನ ಐಫೋನ್ X ಸದ್ದು ಮಾಡುತ್ತಿರುವ ಬೆನ್ನಲೇ ಆಪಲ್ ಪಾಳಯದಿಂದ ಸಂತಸದ ಸುದ್ದಿಯೊಂದು ಲಭ್ಯವಾಗಿದೆ. ವಿಶ್ವದ ನಾನಾ ಕಂಪನಿಗಳಲ್ಲಿ ಭಾರತೀಯ ಮೂಲದ ಟ್ಯಾಲೆಂಟ್ ಗಳನ್ನು ಕಾಣಬಹುದಾಗಿದೆ. ಹಾಗಾಗಿ ಆಪಲ್ ಸಹ ಭಾರತೀಯ ಮೂಲದ ಟ್ಯಾಲೆಂಟ್‌ಗಳನ್ನು ನೇರಾವಾಗಿ ಹುಡುಕಲು ಭಾರತಕ್ಕೆ ಆಗಮಿಸುತ್ತಿದೆ.

ಭಾರತೀಯ ವಿದ್ಯಾರ್ಥಿಗಳಿಗೆ ಮಣೆ: ಆಪಲ್ ನಿಂದ ಮೊದಲ ಬಾರಿಗೆ ಕ್ಯಾಂಪಸ್ ಸೆಲೆಕ್ಷನ್..

ಓದಿರಿ: ಆನ್‌ಲೈನಿನಲ್ಲಿ ಐಫೋನ್ X ಖರೀದಿಸುವ ಮುನ್ನ ಎಚ್ಚರ..!

ಇದೇ ಮೊದಲ ಬಾರಿಗೆ ಆಪಲ್ ಭಾರತೀಯ ಕಾಲೇಜುಗಳಿಗೆ ಭೇಟಿ ನೀಡುತ್ತಿದೆ. ಅಲ್ಲಿರುವ ಟ್ಯಾಲೆಂಟ್ ಗಳನ್ನು ಆಯ್ದು ತನ್ನ ಬತ್ತಳಿಕೆಗೆ ಸೇರಿಸಿಕೊಳ್ಳಲಿದೆ ಎನ್ನಲಾಗಿದೆ. ಈಗಾಗಲೇ IIIT-H ಕಾಲೇಜಿಗೆ ಮೊದಲ ಭೇಟಿಯನ್ನು ನೀಡಲಿದೆ. ಭಾರತೀಯ ವಿದ್ಯಾರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದ್ದು, ಆಪಲ್‌ನಲ್ಲಿ ಕೆಲಸ ಮಾಡುವ ಅವಕಾಶವನ್ನು ಪಡೆದುಕೊಳ್ಳಲಿದ್ದಾರೆ.

300 ವಿದ್ಯಾರ್ಥಿಗಳಿಗೆ ಅವಕಾಶ:

300 ವಿದ್ಯಾರ್ಥಿಗಳಿಗೆ ಅವಕಾಶ:

ಆಪಲ್ ಈ ಬಾರಿ ಮೊದಲಿಗೆ ಕ್ಯಾಂಪಸ್ ಸಂದರ್ಶನದ ಮೂಲಕ ಸುಮಾರು 300 ಭಾರತೀಯ ವಿದ್ಯಾರ್ಥಿಗಳನ್ನು ತನ್ನ ಕಂಪನಿಗೆ ಸೇರಿಸಿಕೊಳ್ಳಲಿದೆ ಎನ್ನಲಾಗಿದೆ. BTech ಮತ್ತು MTech ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿದೆ.

ಹೈದರಬಾದ್ ಇಲ್ಲವೇ ಬೆಂಗಳೂರು:

ಹೈದರಬಾದ್ ಇಲ್ಲವೇ ಬೆಂಗಳೂರು:

ಆಪಲ್ ಗೆ ಆಯ್ಜೆಯಾದ ವಿದ್ಯಾರ್ಥಿಗಳು ಹೈದರಬಾದ್ ಇಲ್ಲವೇ ಬೆಂಗಳೂರಿನಲ್ಲಿರುವ ಆಪಲ್ ಕಂಪನಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎನ್ನಲಾಗಿದೆ. ಆ ನಂತರದಲ್ಲಿ ವಿಶ್ವದ ನಾನಾ ಮೂಲೆಯಲ್ಲಿರುವ ಆಪಲ್ ಕಂಪನಿಗಳಿಗೆ ಆದ್ಯತೆಯ ಮೇರೆಗೆ ತೆರಳಿದ್ದಾರೆ ಎನ್ನಲಾಗಿದೆ.

ದೈತ್ಯ ಕಂಪನಿಗಳು:

ದೈತ್ಯ ಕಂಪನಿಗಳು:

ಆಪಲ್ ಮಾತ್ರವಲ್ಲದೇ ಗೂಗಲ್ ಮತ್ತು ಮೈಕ್ರೋಸಾಫ್ಡ್ ಕಂಪನಿಗಳು ಸಹ ಭಾರತೀಯ ಟ್ಯಾಲೆಂಟ್‌ಗಳಿಗೆ ಹೆಚ್ಚಿನ ಆದ್ಯತೆಯನ್ನು ಇತ್ತೀಚಿನ ದಿನಗಳಲ್ಲಿ ಕಾಣಬಹುದಾಗಿದೆ. ಇದರಿಂದಾಗಿ ಭಾರತದ ಖ್ಯಾತಿಯೂ ಉತ್ತುಂಗಕ್ಕೆ ಏರುತ್ತಿದೆ ಎನ್ನುವ ಮಾತು ಕೇಳಿಬಂದಿದೆ.

Best Mobiles in India

English summary
Apple set to hire engineers from Indian colleges the first time. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+