ಫ್ಲಿಪ್‌ಕಾರ್ಟ್‌ನಲ್ಲಿ ಮಾತ್ರವೇ ಲಭ್ಯವಾಗುವ 'ದೇಶ್ ಕಾ ಸ್ಮಾರ್ಟ್‌ಫೋನ್' ಬೆಲೆ ಎಷ್ಟು.?
ದೇಶಿಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಆನ್‌ಲೈನ್ ಶಾಪಿಂಗ್ ತಾಣಗಳ ಪಾತ್ರ ಮಹತ್ವದಿಂದ ಕೂಡಿದೆ. ಇದರಲ್ಲಿ ದೈತ್ಯ ಕಂಪನಿಗಳಾದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ಗಳು ಇದರಲ್ಲಿ ಬಹುಪಾಲನ್ನು ತಮ್ಮದಾಗಸಿಕೊಂಡಿವೆ. ದೇಶದಲ್ಲಿ ಲಾಂಚ್ ಆಗುವ ಶೇ.90% ಮೊಬೈಲ್‌ಗಳು ಈ ಎರಡು ತಾಣಗಳಲ್ಲಿಯೇ ಎಕ್ಸ್‌ಕ್ಲೂಸಿವ್‌ಆಗಿ ಸೇಲ್ ಆಗುತ್ತಿರುವುದೇ ಇದಕ್ಕೆ ಸಾಕ್ಷಿ.

ಓದಿರಿ: ಜಿಯೋ ಸೆಡ್ಡು ಹೊಡೆಯಲು ಬೆಂಗಳೂರಿಗರಿಗೆ ಮಾತ್ರವೇ ಸ್ಪೆಷಲ್ ಪ್ಲಾನ್ ನೀಡಿದ ACT ಬ್ರಾಡ್ ಬ್ಯಾಂಡ್..!
ಇದೇ ಮಾದರಿಯಲ್ಲಿ ಮಾರುಕಟ್ಟೆಯಲ್ಲಿ ಹೆಚ್ಚು ಚಾಲ್ತಿಯಲ್ಲಿರುವ ಶಿಯೋಮಿ ಹೊಸದಾಗಿ ಇದೇ ನವೆಂಬರ್ 30ರಂದು ಲಾಂಚ್ ಮಾಡಲಿರುವ 'ದೇಶ್ ಕಾ ಸ್ಮಾರ್ಟ್‌ಫೋನ್' ಫ್ಲಿಪ್‌ಕಾರ್ಟಿನಲ್ಲಿ ಮಾತ್ರವೇ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ. ಈ ಹಿಂದೆ ರೆಡ್‌ಮಿ 4A ಸ್ಮಾರ್ಟ್‌ಫೋನ್ ಕೇವಲ ಅಮೆಜಾನ್‌ನಲ್ಲಿ ಮಾತ್ರವೇ ಮಾರಾಟವಾಗಿದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು.

ಮೂರು ಸಾಧ್ಯತೆ:
ಶಿಯೋಮಿ ಬಿಡುಗಡೆ ಮಾಡುವ ಸ್ಮಾರ್ಟ್‌ಫೋನ್ ಕುರಿತ ಮೂರು ಸಾಧ್ಯತೆಗಳಿದ್ದು, ಒಂದು ನೋಟ್ 5 ಸ್ಮಾರ್ಟ್‌ಫೋನ್ ಇಲ್ಲವೇ ನೂತನ ಸರಣಿ 'R' ಸ್ಮಾರ್ಟ್‌ಫೋನ್ ಎನ್ನಲಾಗಿದೆ. ಇದನ್ನು ಬಿಟ್ಟರೇ ರೆಡ್‌ಮಿ 5A ಲಾಂಚ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.


ರೆಡ್‌ಮಿ 5A ಬಿಡುಗಡೆ ಸಾಧ್ಯತೆ:
ಮೂಲಗಳ ಪ್ರಕಾರ ಶಿಯೋಮಿ ಭಾರತದಲ್ಲಿ ನಿರ್ಮಿಸಿರುವ ರೆಡ್‌ಮಿ 5A ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲಿದೆ ಎನ್ನುವ ಮಾಹಿತಿಯೊಂದು ಲಭ್ಯವಾಗಿದೆ. ಈ ಸ್ಮಾರ್ಟ್‌ಫೋನ್ ಬೆಲೆ ರೂ. 5500ಗಳಾಗಿದೆ ಎನ್ನಲಾಗಿದ್ದು, ನವೆಂಬರ್ 30ಕ್ಕೆ ಈ ಬಗ್ಗೆ ಹೆಚ್ಚಿನ ಮಾಹಿತಿ ದೊರೆಯಲಿದೆ.

ವಿಶೇಷತೆಗಳೇನು?:
ರೆಡ್‌ಮಿ 5A ಸ್ಮಾರ್ಟ್‌ಫೋನಿನಲ್ಲಿ 5 ಇಂಚಿನ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಅಲ್ಲದೇ 2GB RAM ಮತ್ತು 16GB ಇಂಟರ್ನಲ್ ಮೆಮೊರಿಯನ್ನು ಇದರಲ್ಲಿ ನೀಡಲಾಗಿದೆ. ಸ್ನಾಪ್‌ಡ್ರಾಗನ್ 425 ಪ್ರೋಸೆಸರ್ ಅನ್ನು ಇದರಲ್ಲಿದ್ದು, 3000mAh ಬ್ಯಾಟರಿಯನ್ನು ಅಳವಡಿಸಲಾಗಿದೆ.

ಕ್ಯಾಮೆರಾ ಹೇಗಿದೆ..?
ರೆಡ್‌ಮಿ 5A ಸ್ಮಾರ್ಟ್‌ಪೋನಿನ ಹಿಂಭಾಗದಲ್ಲಿ 13 MP ಕ್ಯಾಮೆರಾವನ್ನು ನೀಡಲಾಗಿದ್ದು, ಮುಂಭಾಗದಲ್ಲಿ 5MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಅಲ್ಲದೇ ಡ್ಯುಯಲ್ ಸಿಮ್ ಹಾಕಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ.


Click it and Unblock the Notifications








