Home
ಸುದ್ದಿಜಾಲ

ಜಿಯೋ ಸೆಡ್ಡು ಹೊಡೆಯಲು ಬೆಂಗಳೂರಿಗರಿಗೆ ಮಾತ್ರವೇ ಸ್ಪೆಷಲ್ ಪ್ಲಾನ್ ನೀಡಿದ ACT ಬ್ರಾಡ್ ಬ್ಯಾಂಡ್..!

By Srinidhi

ದೇಶದ ಅತೀ ದೊಡ್ಡ ಫೈಬರ್ ಬ್ರಾಡ್ ಬ್ಯಾಂಡ್ ಸೇವೆಯನ್ನು ನೀಡುತ್ತಿರುವ ACT ಬ್ರಾಡ್ ಬ್ಯಾಂಡ್ ಬೆಂಗಳೂರಿಗರಿಗೆ ಹೊಸದೊಂದು ಪ್ಲಾನ್ ವೊಂದನ್ನು ಲಾಂಚ್ ಮಾಡಿದೆ. ACT ಎಂಟರ್ಟೆನ್‌ಮೆಂಟ್ ಬ್ರಾಡ್‌ಬ್ಯಾಂಡ್ ಪ್ಲಾನ್ ಅನ್ನು ಘೋಷಣೆ ಮಾಡಿದ್ದು, ಈ ಹೊಸ ಆಫರ್ ಮೂಲಕ ಹೆಚ್ಚಿನ ಗ್ರಾಹಕರನ್ನು ಸೆಳೆಯುವ ಕಾರ್ಯಕ್ಕೆ ಮುಂದಾಗಿದೆ ಎನ್ನಲಾಗಿದೆ.

ಜಿಯೋ ಸೆಡ್ಡು ಹೊಡೆಯಲು ಬೆಂಗಳೂರಿಗರಿಗೆ ಮಾತ್ರವೇ ಸ್ಪೆಷಲ್ ಪ್ಲಾನ್ ನೀಡಿದ ACT

ಓದಿರಿ: ಜಿಯೋ ಪ್ರೈಮ್ ಸದಸ್ಯರಿಗೆ ಮತ್ತೊಂದು ಸುವರ್ಣಾವಕಾಶ ನೀಡಿದ ಅಂಬಾನಿ..!

ಈ ಹೊಸ ಪ್ಲಾನ್‌ನಲ್ಲಿ ಬೆಂಗಳೂರು ACT ಬ್ರಾಡ್ ಬ್ಯಾಂಡ್ ಗ್ರಾಹಕರು ಇಂಗ್ಲೀಷ್ ಮತ್ತು ಹಿಂದಿ ಸೇರಿದಂತೆ ಪ್ರಾದೇಶಿಕ ಭಾಷೆಗಳ ಅತೀ ಹೆಚ್ಚು ನಿಮಿಮಾಗಳನ್ನು, ಎಕ್ಸ್‌ಕ್ಲೂಸಿವ್ ಟಿವಿ ಶೋಗಳನ್ನು ಮತ್ತು ಲೈವ್ ಟಿವಿ ಚಾನಲ್‌ಗಳನ್ನು ನೋಡುವ ಅವಕಾಶವನ್ನು ಪಡೆದುಕೊಳ್ಳಲಿದ್ದಾರೆ. ಈ ಕುರಿತ ಹೆಚ್ಚಿನ ಮಾಹಿತಿ ಮುಂದಿನಂತಿದೆ.

ಪ್ಲಾನ್ ಬೆಲೆ ಎಷ್ಟು..?

ಪ್ಲಾನ್ ಬೆಲೆ ಎಷ್ಟು..?

ACT ಬ್ರಾಡ್ ಬ್ಯಾಂಡ್ ಪ್ರತಿ ತಿಂಗಳಿಗೆ ರೂ.1149ಕ್ಕೆ 160GB ಡೇಟಾವನ್ನು ಬಳಕೆಗೆ ನೀಡಲಿದ್ದು, ಇದುವೇ 75 Mbps ವೇಗದಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಈ ಪ್ಲಾನ್ ನಿಂದಾಗಿ ACT ಬ್ರಾಡ್ ಬ್ಯಾಂಡ್ ಬಳಕೆದಾರರು ಹೆಚ್ಚಿನ ಮನರಂಜನೆಯನ್ನು ಪಡೆಯಬಹುದಾಗಿದೆ.

ಪ್ಲಾನ್ ಪಡೆಯುವುದು ಹೇಗೆ..?

ಪ್ಲಾನ್ ಪಡೆಯುವುದು ಹೇಗೆ..?

ಬೆಂಗಳೂರಿಗರೂ ACT ಎಂಟರ್ಟೆನ್‌ಮೆಂಟ್ ಬ್ರಾಡ್‌ಬ್ಯಾಂಡ್ ಪ್ಲಾನ್ ಅನ್ನು ಕಂಪನಿಯ ವೆಬ್‌ಸೈಟಿನಿಂದಲೂ ಪಡೆಯಬಹುದು, ಇಲ್ಲವಾದರೆ ಕಸ್ಟಮರ್ ಕೇರ್‌ಗೆ ಕರೆ ಮಾಡಿ ಸಹ ಈ ಫ್ಲಾನ್ ಅನ್ನು ಆಕ್ಟೀವ್ ಮಾಡಿಕೊಳ್ಳಬಹುದಾಗಿದೆ.

ಏರ್‌ಟೆಲ್‌-ಜಿಯೋಗೆ ಸೆಡ್ಡು:

ಏರ್‌ಟೆಲ್‌-ಜಿಯೋಗೆ ಸೆಡ್ಡು:

ಸದ್ಯ ಬ್ರಾಡ್ ಬ್ಯಾಂಡ್ ಸೇವೆಯನ್ನು ನೀಡುವುದರಲ್ಲಿ ಮುಂಚುಣಿಯಲ್ಲಿರುವ ಏರ್‌ಟೆಲ್ ಹಾಗೂ ಇನ್ನೇನು ಸೇವೆಯನ್ನು ಆರಂಭಿಸಲು ತುದಿಗಾಲಿನಲ್ಲಿ ನಿಂತಿರುವ ರಿಲಯನ್ಸ್ ಮಾಲೀಕತ್ವದ ಜಿಯೋ ಎರಡಕ್ಕೂ ಹೊಡೆತ ನೀಡುವಂತೆ . ACT ಎಂಟರ್ಟೆನ್‌ಮೆಂಟ್ ಬ್ರಾಡ್‌ಬ್ಯಾಂಡ್ ಪ್ಲಾನ್ ಅನ್ನು ಘೋಷಣೆ ಮಾಡಲಾಗಿದೆ.

Best Mobiles in India

English summary
ACT Fibernet introduces ACT Entertainment Broadband Plan in Bengaluru at Monthly Rental of Rs. 1149. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+