Subscribe to Gizbot

2017 ರಲ್ಲಿ ಬಿಡುಗಡೆಯಾಗುತ್ತದೆ ಶ್ಯೋಮಿಯ ಫ್ಲೆಕ್ಸಿಬಲ್ ಸ್ಮಾರ್ಟ್‌ಫೋನ್!?

Written By:

ಪ್ರಸ್ತುತ ಸ್ಮಾರ್ಟ್‌ಫೋನ್‌ ಪ್ರಪಂಚ ಬದಲಾಗುತ್ತಿರುವ ವೇಗ ನೋಡಿದರೆ ಮುಂದಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳು ಯಾವ ಯಾವ ಆಕಾರದಲ್ಲಿ ಮಾರುಕಟ್ಟೆಗೆ ಬರುತ್ತವೆ ಎನ್ನುವ ಯೋಚನೆಯೂ ಮಾಡಲಾಗದು! ಕೆಲವೇ ವರ್ಷಗಳ ಹಿಂದೆ ಟಚ್‌ಸ್ಕ್ರೀನ್ ಮೊಬೈಲ್‌ಗಳು ಮಾರುಕಟ್ಟೆಗೆ ಬರುತ್ತಿವೆ ಎಂದರೆ ನಂಬದಿದ್ದ ಜನರು ಇಂದು ಯಾವ ರೀತಿಯ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಿಡುಗಡೆಯಾಗುತ್ತವೆ ಎಂದು ಕಾದು ಕುಳಿತಿದ್ದಾರೆ.!

ಇನ್ನು ಹೊಸ ಸುದ್ದಿ ಏನೆಂದರೆ, ಸ್ಮಾರ್ಟ್‌ಫೋನ್‌ ತಂತ್ರಜ್ಞಾನದ ಮುಂದುವರೆದ ಭಾಗವಾಗಿ ಗುರುತಿಸಿಕೊಂಡಿರುವ ಫ್ಲೆಕ್ಸಿಬಲ್ ಸ್ಮಾರ್ಟ್‌ಫೋನ್‌ಗಳು 2017 ರಲ್ಲಿ ಸ್ಮಾರ್ಟ್‌ಫೋನ್‌ ಪ್ರಪಂಚಕ್ಕೆ ಕಾಲಿಡುತ್ತಿವೆ ಎನ್ನುವ ವರದಿಯೊಂದು ಬಿತ್ತರವಾಗಿದೆ!.

2017 ರಲ್ಲಿ ಬಿಡುಗಡೆಯಾಗುತ್ತದೆ ಶ್ಯೋಮಿಯ ಫ್ಲೆಕ್ಸಿಬಲ್ ಸ್ಮಾರ್ಟ್‌ಫೋನ್!?

ಜಿಯೋ ಎಫೆಕ್ಟ್!! ಮೂರು ತಿಂಗಳು ಉಚಿತ ಕರೆ ಮತ್ತು ಇಂಟರ್‌ನೆಟ್ ಘೋಷಿಸಿದ ಏರ್‌ಟೆಲ್‌!!

ಹೌದು, ಇನ್ಕ್ವಿರರ್ ಅನ್ನುವ ಸಂಸ್ಥೆ ಈ ಬಗ್ಗೆ ಅಂತರ್ಜಾಲದಲ್ಲಿ ವಿಡಿಯೋ ಮತ್ತು ಚಿತ್ರಗಳನ್ನು ಹರಿಬಿಟ್ಟಿದ್ದು, ಚೀನಾದ ಆಪಲ್ ಎಂದು ಹೆಸರು ಮಾಡಿರುವ ಪ್ರಖ್ಯಾತ ಮೊಬೈಲ್ ಕಂಪೆನಿ ಶ್ಯೋಮಿ ಫ್ಲೆಕ್ಸಿಬಲ್ ಸ್ಮಾರ್ಟ್‌ಫೋನ್‌ ಅನ್ನು 2017 ರಲ್ಲಿ ಬಿಡುಗಡೆ ಮಾಡುತ್ತದೆ ಎಂದು ಹೇಳಿದೆ!.

2017 ರಲ್ಲಿ ಬಿಡುಗಡೆಯಾಗುತ್ತದೆ ಶ್ಯೋಮಿಯ ಫ್ಲೆಕ್ಸಿಬಲ್ ಸ್ಮಾರ್ಟ್‌ಫೋನ್!?

2017 ನೇ ವರ್ಷದ ಕೊನೆಯಲ್ಲಿ ಶ್ಯೋಮಿ ಫ್ಲೆಕ್ಸಿಬಲ್ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲಾಗುತ್ತದೆ ಎನ್ನಲಾಗಿದ್ದು, ಮತ್ತು ಭಾರತದ ಸ್ಮಾರ್ಟ್‌ಫೋನ್‌ ದಿಗ್ಗಜ ಸ್ಯಾಮಸಂಗ್ ಕೂಡ 2017 ರ ವೇಳೆಗೆ ಕ್ಸಿಬಲ್ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತವೆ ಎನ್ನಲಾಗಿದೆ. ಆಪಲ್ ಸಂಸ್ಥೆ ಕೂಡ ಫ್ಲೆಕ್ಸಿಬಲ್ ಸ್ಮಾರ್ಟ್‌ಫೋನ್‌ ವಿನ್ಯಾಸ ಪೇಟೆಂಟ್ ಗಾಗಿ ಅರ್ಜಿ ಸಲ್ಲಿಸಿದೆ

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
xiaomi, lenovo and Samsung are said to be working on flexible displays. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot