ಜಿಯೋ ಎಫೆಕ್ಟ್!! ಮೂರು ತಿಂಗಳು ಉಚಿತ ಕರೆ ಮತ್ತು ಇಂಟರ್‌ನೆಟ್ ಘೋಷಿಸಿದ ಏರ್‌ಟೆಲ್‌!!

Written By:

ಏರ್‌ಟೆಲ್ ಈ ರೀತಿಯಾಗಿ ದರಸಮರಕ್ಕೆ ನಿಲ್ಲುತ್ತದೆ ಎಂದು ಯಾವೋರ್ವರು ಊಹೆ ಸಹ ಮಾಡಿರಲಿಲ್ಲ!. ಟೆಲಿಕಾಂ ಪ್ರಪಂಚದಲ್ಲಿ ಜಿಯೋ ಹೊಡೆತಕ್ಕೆ ಏರ್‌ಟೆಲ್ ಅನುಭವಿಸಿರುವಷ್ಟು ನಷ್ಟವನ್ನು ಮತ್ತಿನಾವ ಟೆಲಿಕಾಂ ಕಂಪೆನಿಯೂ ಅನುಭವಿಸಿಲ್ಲ ಎನ್ನಬಹುದು. ಇನ್ನು ನಂ 1 ಟೆಲಿಕಾಂ ಆಗಿದ್ದ ಏರ್‌ಟೆಲ್‌ಗೆ ಇದೀಗೆ ಉಳಿವಿನ ಪ್ರಶ್ನೆ ಎದುರಾಗಿದೆ! ಹಾಗಾಗಿ ಇದೀಗ ಏರ್‌ಟೆಲ್ ಸಹ ಉಚಿತವಾಗಿ ಮೂರು ತಿಂಗಳು ಇಂಟರ್‌ನೆಟ್ ಮತ್ತು ಕರೆಮಾಡುವ ಆಫರ್‌ ನೀಡಿದೆ!!

ಹೌದು, ಏರ್‌ಟೆಲ್ ತನ್ನ ಬ್ರಾಡ್‌ಬ್ಯಾಂಡ್ ಸೇವೆಯನ್ನು ಉಚಿತವಾಗಿ ನೀಡಲು ನಿರ್ಧರಿಸಿದೆ. ಏರ್‌ಟೆಲ್ ಬ್ರಾಡ್‌ಬ್ಯಾಂಡ್ ಕನೆಕ್ಷನ್ ಪಡೆದರೆ ಅನ್‌ಲಿಮಿಟೆಡ್ ಇಂಟರ್‌ನೆಟ್ ಮತ್ತು ಅನ್‌ಲಿಮಿಟೆಡ್ ಕರೆ ಮಾಡಬಹುದಾದ ಆಫರ್ ನೀಡಿದೆ. ಜಿಯೋವಿನ "ಜಿಯೋಫೈ" ಬ್ರಾಡ್‌ಬ್ಯಾಂಡ್ ಸ್ಪೀಡ್‌ಗಿಂತ ಅಂದರೆ 40 MBPS ಸ್ಪೀಡ್‌ನಲ್ಲಿ ಏರ್‌ಟೆಲ್ ತನ್ನ ಸೇವೆಯನ್ನು ನೀಡಲಿದೆ!

ಮಾರ್ಚ್‌ವೇಳೆಗೆ ಮತ್ತೊಂದು ದಾಖಲೆ ನಿರ್ಮಿಸಲಿದೆ ಜಿಯೋ!..ಏನು ಗೊತ್ತಾ!?

ಹಾಗಾದರೆ ಮನೆಮಂದಿಯೆಲ್ಲ ಒಟ್ಟಿಗೆ ಉಪಯೋಗಿಸಬಹುದಾದ ಏರ್‌ಟೆಲ್‌ನ ಬ್ರಾಡ್‌ಬ್ಯಾಂಡ್ ಸೇವೆಯನ್ನು ಹೇಗೆ ಪಡೆಯುವುದು ಮತ್ತು ಮೂರು ತಿಂಗಳು ಉಚಿತ ಇಂಟರ್‌ನೆಟ್ ಸೇವೆಯನ್ನು ಪಡೆಯುವುದು ಹೇಗೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಏರ್‌ಟೆಲ್‌ನ ಅಫಿಶಿಯಲ್ ವೆಬ್‌ಸೈಟ್‌ ತೆರೆಯಿರಿ.

ಏರ್‌ಟೆಲ್‌ನ ಅಫಿಶಿಯಲ್ ವೆಬ್‌ಸೈಟ್‌ ತೆರೆಯಿರಿ.

ಏರ್‌ಟೆಲ್‌ನ ಅಫಿಶಿಯಲ್ ವೆಬ್‌ಸೈಟ್‌ www.airtel.in ತೆರೆಯಿರಿ ನಂತರ ನಿಮ್ಮ ನಗರವನ್ನು ಆಯ್ಕೆ ಮಾಡಿ. ನಂತರ ಏರ್‌ಟೆಲ್‌ ಬ್ರಾಡ್‌ಬ್ಯಾಂಡ್‌ನ ಹಲವು ಸೇವೆಗಳು ತೆರೆದುಕೊಳ್ಳುತ್ತವೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 ಕನೆಕ್ಷನ್ ಆಯ್ದುಕೊಳ್ಳಿ.

ಕನೆಕ್ಷನ್ ಆಯ್ದುಕೊಳ್ಳಿ.

ಏರ್‌ಟೆಲ್ ಬ್ರಾಡ್‌ಬ್ಯಾಂಡ್ ಕನೆಕ್ಷನ್ ನೀಡಲು ತೆಗೆದುಕೊಳ್ಳುವ ಶುಲ್ಕವನ್ನು ನೀಡಿದೆ. ಅದರಲ್ಲಿ 1000ರೂ ಮೇಲ್ಪಟ್ಟ ಕನೆಕ್ಷನ್ ಆಯ್ದುಕೊಳ್ಳಿ. 1000ರೂ ಮೇಲ್ಪಟ್ಟ ಕನೆಕ್ಷನ್ ಆಯ್ದುಕೊಂಡರೆ ನೀವು ಮೂರುತಿಂಗಳು ಅನ್‌ಲಿಮಿಟೆಡ್ ಇಂಟರ್‌ನೆಟ್ ಕನೆಕ್ಷನ್ ಪಡೆಯಬಹುದು.

ನಿಮ್ಮ ವಿಳಾಸ ನಮೂದಿಸಿ.

ನಿಮ್ಮ ವಿಳಾಸ ನಮೂದಿಸಿ.

ನಿಮ್ಮ ಆಯ್ಕೆಯ ಬ್ರಾಡ್‌ಬ್ಯಾಂಡ್‌ ಕನೆಕ್ಷನ್ ಆಯ್ದನಂತರ ನಿಮ್ಮ ವಿಳಾಸ ಮತ್ತು ನಿಮ್ಮ ಫೋನ್‌ ನಂಬರ್‌ ಅನ್ನು ಆಯ್ದುಕೊಳ್ಳಿ. ನಂತರ ನಿಮ್ಮ ಮನೆಗೆ ಏರ್‌ಟೆಲ್‌ ಕನೆಕ್ಷನ್ ಪಡೆಯಿರಿ.

ಏರ್‌ಟೆಲ್ ಬ್ರಾಡ್‌ಬ್ಯಾಂಡ್ ಉಪಯೋಗ ಏನು?

ಏರ್‌ಟೆಲ್ ಬ್ರಾಡ್‌ಬ್ಯಾಂಡ್ ಉಪಯೋಗ ಏನು?

ಆಫಿಸ್ ಮತ್ತು ಮನೆಗಳಿಗೆ ಏರ್‌ಟೆಲ್‌ ಬ್ರಾಡ್‌ಬ್ಯಾಂಡ್ ಸಂಪರ್ಕ ಪಡೆದುಕೊಂಡರೆ ಹೆಚ್ಚು ಅನುಕೂಲವಾಗುತ್ತದೆ. ಒಮ್ಮೆ ಕೇವಲ 1000 ರೂಪಾಯಿ ಖರ್ಚು ಮಾಡಿದರೆ ಮೂರುತಿಂಗಳ ಉಚಿತ ಇಂಟರ್‌ನೆಟ್ ಮತ್ತು ಕರೆಮಾಡುವ ಸೌಲಭ್ಯವನ್ನು ಹೊಂದಬಹುದು. ಇದು ಜಿಯೋಗಿಂತಲು ಉತ್ತಮವಾಗಿದ್ದು, 40 MBps ವೇಗವನ್ನು ಹೊಂದಿದೆ.!

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
GET Unlimited airtel Internet FREE for 3 months. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot