ಝೋಲೋದಿಂದ ಮಿಡ್‌ ರೇಂಜ್‌ ಸ್ಮಾರ್ಟ್‌ಫೋನ್‌ ಬಿಡುಗಡೆ

Written By:

ದೇಶೀಯ ಸ್ಮಾರ್ಟ್‌‌ಫೋನ್‌ ತಯಾರಕಾ ಕಂಪೆನಿ ಝೋಲೋ ಮಾರುಕಟ್ಟೆಗೆ ಮಿಡ್‌ ರೇಂಜ್‌ ಡ್ಯುಯಲ್‌ ಸಿಮ್‌ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ.ಝೋಲೋ ಕ್ಯೂ 1010ಐ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದ್ದು,13,499 ರೂಪಾಯಿ ಬೆಲೆಯನ್ನು ನಿಗದಿ ಮಾಡಿದೆ.

ಈ ಸ್ಮಾರ್ಟ್‌‌ಫೋನ್‌ ಹಿಂದುಗಡೆ 8 ಎಂಪಿ ಕ್ಯಾಮೆರಾವನ್ನು ಒಳಗಿಂಡಿದೆ. ಝೋಲೋ ಈ ಸ್ಮಾರ್ಟ್‌ಫೋನಿನ ಕ್ಯಾಮೆರಾಕ್ಕೆ f/ 2.0 ಅಪರ್ಚರ್‌ ಇರುವ ಸೋನಿ Exmor R ಸೆನ್ಸರ್‌ ಮತ್ತು5 ಲೆನ್ಸ್‌ ಮೊಡ್ಯೂಲ್‌ ಸಹ ನೀಡಿದೆ.ಮುಂದುಗಡೆ 2 ಎಂಪಿ ಕ್ಯಾಮೆರಾವನ್ನು ಸಹ ಈ ಸ್ಮಾರ್ಟ್‌‌ಫೋನ್‌ ಹೊಂದಿದೆ.

ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌ ಹೊಂದಿದ್ದರೂ,ಕಿಟ್‌ಕ್ಯಾಟ್‌ ಓಎಸ್‌ಗೆ ಅಪ್‌ಗ್ರೇಡ್‌ ಮಾಡಬಹುದು ಎಂದು ಝೋಲೋ ಹೇಳಿದೆ.1.3 GHz ಕ್ವಾಡ್‌ಕೋರ್‌‌‌ ಮೀಡಿಯಾ ಟೆಕ್‌ ಪ್ರೊಸೆಸರ್‌,1ಜಿಬಿ ರ್‍ಯಾಮ್‌,8ಜಿಬಿ ಆಂತರಿಕ ಮೆಮೊರಿ, 8 ಎಂಪಿ ಹಿಂದುಗಡೆ ಕ್ಯಾಮೆರಾವನ್ನು ಸ್ಮಾರ್ಟ್‌ಫೋನ್‌ ಒಳಗೊಂಡಿದೆ.

 ಝೋಲೋದಿಂದ ಮಿಡ್‌ ರೇಂಜ್‌ ಸ್ಮಾರ್ಟ್‌ಫೋನ್‌ ಬಿಡುಗಡೆ

ಝೋಲೋ ಕ್ಯೂ 1010ಐ
ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
5 ಇಂಚಿನ ಎಚ್‌ಡಿ ಐಪಿಎಸ್‌ ಸ್ಕ್ರೀನ್‌(1280 x 720 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌(ಕಿಟ್‌ಕ್ಯಾಟ್‌ ಓಎಸ್‌ಗೆ ಅಪ್‌ಗ್ರೇಡ್‌ ಮಾಡಬಹುದು)
1.3 GHz ಕ್ವಾಡ್‌ಕೋರ್‌‌‌ ಮೀಡಿಯಾ ಟೆಕ್‌ ಪ್ರೊಸೆಸರ್‌
1ಜಿಬಿ ರ್‍ಯಾಮ್‌
8ಜಿಬಿ ಆಂತರಿಕ ಮೆಮೊರಿ
8 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
32 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್‌‌,ಜಿಪಿಎಸ್‌
2250 mAh ಬ್ಯಾಟರಿ

ನಿರಂತರ ಸುದ್ದಿಗಾಗಿ ಕನ್ನಡ ಗಿಝ್‌‌ಬಾಟ್‌‌ನ್ನು ಫೇಸ್‌ಬುಕ್‌ನಲ್ಲಿ Like ಮಾಡಿ, ಟ್ವೀಟರ್‌ನಲ್ಲಿ Follow ಮಾಡಿ‌.

ಇದನ್ನೂ ಓದಿ: ಫೇಸ್‌ಬುಕ್‌ ಅಕೌಂಟ್‌ ಹ್ಯಾಕ್‌ ಆಗಿದೆಯೋ? ಇಲ್ಲವೋ ಪತ್ತೆ ಮಾಡುವುದು ಹೇಗೆ?

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot