ಫೇಸ್‌ಬುಕ್‌ ಅಕೌಂಟ್‌ ಹ್ಯಾಕ್‌ ಆಗಿದೆಯೋ? ಇಲ್ಲವೋ ಪತ್ತೆ ಮಾಡುವುದು ಹೇಗೆ?

Posted By:

ಫೇಸ್‌ಬುಕ್‌ ಅಕೌಂಟ್‌ ಬಗ್ಗೆ ಎಷ್ಟೇ ಸುರಕ್ಷಿತವಾಹಿಸಿದ್ದರೂ ಕೆಲವೊಮ್ಮೆ ನಮಗೆ ಗೊತ್ತಿಲ್ಲದಂತೆ ನಮ್ಮ ಅಕೌಂಟ್‌ನ್ನು ಕೆಲವರು ಬಳಸುತ್ತಿರುತ್ತಾರೆ. ಹೆಚ್ಚಾಗಿ ಸ್ನೇಹಿತರ ಮನೆಯಲ್ಲಿ, ಹೊರಗಡೆಯ ಸೈಬರ್‌ ಶಾಪ್‌ನಲ್ಲಿ ಲಾಗ್‌ ಔಟ್‌ ಮಾಡದಿದ್ದರೆ ನಮ್ಮ ಫೇಸ್‌ಬುಕ್‌ ಅಕೌಂಟಿನ ಪಾಸ್‌ವರ್ಡ್‌ ಪತ್ತೆ ಹಚ್ಚಿ ಓಪನ್‌ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ.

ಆದರೆ ಈ ರೀತಿ ನಿಮಗೆ ಗೊತ್ತಿಲ್ಲದೇ ನಿಮ್ಮ ಫೇಸ್‌ಬುಕ್‌ ಅಕೌಂಟ್‌ನ್ನು ಯಾರು ಎಲ್ಲಿ ಎಷ್ಟು ಗಂಟೆಯ ಹಿಂದೆ ಬಳಸುತ್ತಿದ್ದಾರೆ ಎಂಬುದನ್ನು ತಿಳಿಯಬಹುದು.ಜೊತಗೆ ನಿಮ್ಮ ಸಮಸ್ಯೆಯಾದಲ್ಲಿ ಫೇಸ್‌ಬುಕ್‌ಗೆ ತಿಳಿಸಬಹುದು. ಮುಂದಿನ ಪುಟದಲ್ಲಿ ಅಕೌಂಟ್‌ ಹ್ಯಾಕ್‌ ಆಗಿದೆಯೋ? ಇಲ್ಲವೋ ?ಎಂದು ಪತ್ತೆ ಮಾಡುವ ವಿಧಾನವನ್ನು ತಿಳಿಸಲಾಗಿದೆ.ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ ಪರೀಕ್ಷಿಸಿಕೊಳ್ಳಿ

ನಿರಂತರ ಸುದ್ದಿ ಪಡೆಯಲು ಫೇಸ್‌ಬುಕ್‌ನಲ್ಲಿ ಕನ್ನಡ ಗಿಝ್‌ಬಾಟ್‌ನ್ನು Like ಮಾಡಿ ಟ್ವೀಟರ್‌ನಲ್ಲಿ Follow ಮಾಡಿ.

ಇದನ್ನೂ ಓದಿ: ಫೇಸ್‌ಬುಕ್‌ ವಿಡಂಬನಾ ಚಿತ್ರಗಳು: ನೋಡಿ ಎಂಜಾಯ್‌ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಸ್ಟೆಪ್‌ -1

1


ಮೊದಲು ಬಲಗಡೆ ಇರುವ gear iconನಲ್ಲಿ ಸೆಟ್ಟಿಂಗ್ಸ್ ಮೆನುವನ್ನು ಆರಿಸಿಕೊಳ್ಳಿ.

 ಸ್ಟೆಪ್‌ -2

2


ನಂತರ ಇಲ್ಲಿ 'Securtity' ಕ್ಲಿಕ್‌ ಮಾಡಿ ಬಳಿಕ ಇಲ್ಲಿ ' Active Sessions ' 'Edit' ಆಯ್ಕೆಯನ್ನು ಆರಿಸಿಸಿಕೊಳ್ಳಿ.

ಸ್ಟೆಪ್‌ -3

3


ಈಗ ನೀವು ಈ ಹಿಂದೆ ಫೇಸ್‌ಬುಕ್‌ನ್ನು ಯಾವ ಸ್ಥಳದಿಂದ ಯಾವಾಗ ಓಪನ್‌ ಮಾಡಿದ್ದಿರಿ,ಯಾವ ಬ್ರೌಸರ್‌, ಡೆಸ್ಕ್‌ಟಾಪ್‌,ಮೊಬೈಲ್‌ ಎಲ್ಲಾ ಮಾಹಿತಿಗಳು ಕಾಣುತ್ತದೆ. ಒಂದು ವೇಳೆ ಬೇರೆ ಯಾರಾದರೂ ನಿಮ್ಮ ಅಕೌಂಟ್‌ ಒಪನ್‌ ಮಾಡಿದ್ದರೂ ಸ್ಥಳದ ಮಾಹಿತಿಯನ್ನು ನೀವು ನೋಡಬಹುದು.

 ಸ್ಟೆಪ್‌ -4

4


ಒಂದು ವೇಳೆ ನಿಮ್ಮ ಬದಲಾಗಿ ಬೇರೆ ಯಾರಾದರೂ ನಿಮ್ಮ ಫೇಸ್‌ಬುಕ್‌ ಅಕೌಂಟ್‌ ಓಪನ್‌ ಮಾಡಿದ್ದರೆ, ಫೇಸ್‌‌ಬುಕ್‌ಗೆ ತಿಳಿಸಬಹುದು. gear icon ನಲ್ಲಿರುವ Report Problem ಕ್ಲಿಕ್‌ ಮಾಡುವ ಮೂಲಕ ನಿಮ್ಮ ಸಮಸ್ಯೆಯನ್ನು ತಿಳಿಸಬಹುದು.

ಸ್ಟೆಪ್‌ -5

5

ಒಂದು ವೇಳೆ ಪಾಸ್‌ವರ್ಡ್ ಬದಲಾಯಿಸಬೇಕು ಎಂದು ಯೋಚಿಸಿದ್ದಲ್ಲಿ ಪಾಸ್‌ವರ್ಡ್‌ನ್ನು ಬದಲಾಯಿಸಬಹುದು. setttings---General Account Settings--- ತೆರಳಿ ಹೊಸ ಪಾಸ್‌ವರ್ಡ್‌ನ್ನು ಕ್ರಿಯೆಟ್‌ ಮಾಡಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot