Home
ಮೊಬೈಲ್

ಸೋನಿಯಿಂದ ಶಕ್ತಿಶಾಲಿ ಸ್ಮಾರ್ಟ್‌ಪೋನ್ ಬಿಡುಗಡೆ: 4K ಡಿಸ್‌ಪ್ಲೇ, ಸ್ನಾಪ್‍ಡ್ರಾಗನ್ 835 ಪ್ರೋಸೆಸರ್

ಜಪಾನ್ ಮೂಲದ ಸೋನಿ ಮತ್ತೊಮ್ಮೆ ತನ್ನ ಹೊಸ ಪೋನಿನ ಡಿಸ್‌ಪ್ಲೇಯಿಂದ ಸುದ್ದಿಯಾಗಿದೆ.

By Srinidhi

ಸದ್ಯದ ಸ್ಮಾರ್ಟ್‌ಪೋನ್ ಮಾರುಕಟ್ಟೆಯಲ್ಲಿ ಸ್ವಲ್ಪ ಮಂಕಾದಂತೆ ಕಾಣುತ್ತಿದ್ದ ಜಪಾನ್ ಮೂಲದ ಸೋನಿ ಮತ್ತೊಮ್ಮೆ ತನ್ನ ಹೊಸ ಪೋನಿನ ಡಿಸ್‌ಪ್ಲೇ ಯಿಂದ ಸುದ್ದಿಯಾಗಿದೆ. ಇದೇ ಮೊದಲ ಬಾರಿಗೆ ತನ್ನ ಸ್ಮಾರ್ಟ್‌ಪೋನಿಗೆ 4K ರೆಸಲ್ಯೂಷನ್ ಹೊಂದಿರುವ ಡಿಸ್‌ಪ್ಲೇಯನ್ನು ಅಳವಡಿಸಿದೆ.

ಸೋನಿಯಿಂದ ಶಕ್ತಿಶಾಲಿ ಸ್ಮಾರ್ಟ್‌ಪೋನ್ ಬಿಡುಗಡೆ: 4K ಡಿಸ್‌ಪ್ಲೇ

ಓದಿರಿ: 15 ಸಾವಿರಕ್ಕೆ ಲಭ್ಯ ಕ್ಸಿಯೋಮಿಯ ಹೊಸ Mi 5c ಸ್ಮಾರ್ಟ್‌ಪೋನು..!!

ಬಾರ್ಸಿಲೋನದಲ್ಲಿ ನಡೆಯುತ್ತಿರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್ ನಲ್ಲಿ ಸೋನಿ ನೂತನ ಎರಡು ಸ್ಮಾರ್ಟ್‌ಪೊನುಗಳನ್ನು ಬಿಡುಗಡೆ ಮಾಡಿದ್ದು, ಸೋನಿ Xperia XZs ಮತ್ತು Xperia XZ Premium ಎಂಬ ಎರಡು ಫೋನುಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ Xperia XZ Premium 4K ಡಿಸ್‌ಪ್ಲೇ ಹೊಂದಿದೆ ಎನ್ನಲಾಗಿದೆ.

4K ರೆಸಲ್ಯೂಷನ್ ಡಿಸ್‌ಪ್ಲೇ

4K ರೆಸಲ್ಯೂಷನ್ ಡಿಸ್‌ಪ್ಲೇ

5.5 ಇಂಚಿನ 4K HDR ಡಿಸ್‌ಪ್ಲೇಯನ್ನು ಹೊಂದಿರುವ ಮೊದಲ ಸ್ಮಾರ್ಟ್‌ಪೋನ್ ಎಂಬ ಖ್ಯಾತಿಗೆ Xperia XZ Premium ಪಾತ್ರವಾಗಿದೆ. 3840 x 2160p ಗುಣಮಟ್ಟವನ್ನು ಹೊಂದಿರುವ ಈ ಡಿಸ್‌ಪ್ಲೇ ಸ್ಮಾರ್ಟ್‌ಪೋನುಗಳಲ್ಲಿ ಇದೇ ಮೊದಲ ಭಾರಿಗೆ ಬಳಸಲಾಗಿದೆ ಎನ್ನಲಾಗಿದೆ. ಇದಕ್ಕೆ ಗೂರಿಲ್ಲಾ ಗ್ಲಾಸ್ 5 ಸುರಕ್ಷತೆಯನ್ನು ಒದಗಿಸಿದೆ.

ಆಂಡ್ರಾಯ್ಡ್ 7.1 ನ್ಯಾಗಾದಲ್ಲಿ ಕಾರ್ಯಚರಣೆ:

ಆಂಡ್ರಾಯ್ಡ್ 7.1 ನ್ಯಾಗಾದಲ್ಲಿ ಕಾರ್ಯಚರಣೆ:

ಸ್ನಾಪ್‍ಡ್ರಾಗನ್ 835 ಅಕ್ಟಾಕೋರ್ ಪ್ರೊಸೆಸರ್ ಬಳಸುತ್ತಿರುವ ಮೊದಲ ಸ್ಮಾರ್ಟ್‌ಪೋನು Xperia XZ Premium ಆಗಲಿದ್ದು, 4K HDR ಗುಣಮಟ್ಟದ ವಿಡಿಯೋ ಪ್ಲೇಯಾಗಲು ಮತ್ತು ಹೆಚ್ಚಿನ ಗ್ರಾಫಿಕ್ಸ್ ಇರುವ ಗೇಮ್‌ಗಳನ್ನು ಆಡಲು ಸೂಕ್ತವಾಗಿದೆ ಮತ್ತು Adreno 540 ಗ್ರಾಫಿಕ್ಸ್ ಪ್ರೊಸೆಸರ್ ಈ ಪೋನಿನಲ್ಲಿದೆ.

4GB RAM, 64 GB ROM:

4GB RAM, 64 GB ROM:

Xperia XZ Premium ಸ್ಮಾರ್ಟ್‌ಪೋನಿನಲ್ಲಿ 4GB RAM ಅಡಕವಾಗಿದ್ದು, ಇದರೊಂದಿಗೆ 64 GB ಇಂಟರ್ನಲ್ ಮೆಮೊರಿಯನ್ನು ಈ ಪೋನು ಹೊಂದಿದೆ. ಅಲ್ಲದೇ ಮೈಕ್ರೊ SD ಕಾರ್ಡ್‌ ಹಾಕುವ ಮೂಲಕ 256 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳಬಹುದು

19 MP ಹಿಂಬದಿ ಕ್ಯಾಮರೆ, 13 MP ಸೆಲ್ಪಿ ಕ್ಯಾಮೆರಾ:

19 MP ಹಿಂಬದಿ ಕ್ಯಾಮರೆ, 13 MP ಸೆಲ್ಪಿ ಕ್ಯಾಮೆರಾ:

Xperia XZ Premium ಸ್ಮಾರ್ಟ್‌ಪೋನಿನಲ್ಲಿ ಸೋನಿ ಗುಣಮಟ್ಟದ ಕ್ಯಾಮೆರಾವನ್ನು ಅಳವಡಿಸಿದ್ದು, ಹಿಂಬದಿಯಲ್ಲಿ 19 MP ಕ್ಯಾಮೆರಾವನ್ನು ಅಳವಡಿಸಿದ್ದು, ಈ ಕ್ಯಾಮರೆ ಪೇಸ್ ಡಿಟೆಕ್ಷನ್, ಲೇಸರ್ ಅಟೋಫೋಕಸ್ ಆಯ್ಕೆಗಳನ್ನು ಒಳಗೊಂಡಿದ್ದು, LED ಫ್ಲಾಶ್ ಸಹ ನೀಡಲಾಗಿದೆ. ಅಲ್ಲದೇ ಈ ಕ್ಯಾಮೆರಾ 8X ಡಿಜಿಟಲ್ ಜೂಮ್ ಸಹ ಹೊಂದಿದೆ. ಇದರೊಂದಿಗೆ ಮುಂಭಾಗದಲ್ಲಿ ಉತ್ತಮ ಸೆಲ್ಪಿ ತೆಗೆಯಲು 13 MP ಕ್ಯಾಮೆರಾ ನೀಡಲಾಗಿದೆ.

 ಬೆಲೆ:

ಬೆಲೆ:

ಏಪ್ರಿಲ್ 5ರಂದು ಮಾರುಕಟ್ಟೆಗೆ ಆಗಮಿಸಲಿರುವ Xperia XZ Premium ಬೆಲೆ 799 ಡಾಲರ್ ಗಳಾಗಿದ್ದು, ಭಾರತೀಯ ರೂಪಾಯಿಗಳಲ್ಲಿ 55,000 ರೂಗಳಾಗಿದೆ.

Best Mobiles in India

English summary
The Xperia XZ Premium, similar to the Xperia XZs, houses a 19MP rear shooter in addition to a 13MP front shooter. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+