Subscribe to Gizbot

3GB RAM, ಪ್ಯಾನಿಕ್‌ ಬಟನ್‌ನ 'ವೀಡಿಯೊಕಾನ್ ಕ್ಯೂಬ್ 3' 8,490 ರೂಗೆ ಲಾಂಚ್‌

Written By:

ವೀಡಿಯೊಕಾನ್ ತನ್ನ ಹೊಸ ಸ್ಮಾರ್ಟ್‌ಫೋನ್ 3GB RAM, ಪ್ಯಾನಿಕ್‌ ಬಟನ್‌ನ "ವೀಡಿಯೊಕಾನ್ ಕ್ಯೂಬ್ 3' ಬಿಡುಗಡೆ ಬಗ್ಗೆ ಪ್ರಕಟಣೆ ನೀಡಿದೆ. ಸ್ಮಾರ್ಟ್‌ಫೋನ್‌ ಬೆಲೆ ರೂ.8,490 ಆಗಿದ್ದು, ದೇಶದಾದ್ಯಂತ ರೀಟೇಲ್ ಸ್ಟೋರ್‌ಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ.

3GB RAM, ಪ್ಯಾನಿಕ್‌ ಬಟನ್‌ನ 'ವೀಡಿಯೊಕಾನ್ ಕ್ಯೂಬ್ 3' 8,490 ರೂಗೆ ಲಾಂಚ್‌

ವೀಡಿಯೊಕಾನ್ ಬಿಡುಗಡೆ ಮಾಡುತ್ತಿರುವ 'ವೀಡಿಯೊಕಾನ್‌ ಕ್ಯೂಬ್‌ 3' ಸ್ಮಾರ್ಟ್‌ಫೋನ್‌ ವಿಶೇಷವಾಗಿ 'SOS-Be Safe' ಎಂಬ ತುರ್ತುಪರಿಸ್ಥಿತಿಗೆ ಪ್ರಿತಿಕ್ರಿಯೆ ನೀಡುವ ಆಪ್‌ ಹೊಂದಿದ್ದು, ಆಪ್‌ ಪವರ್‌ ಬಟನ್‌ ಅನ್ನು ಪ್ಯಾನಿಕ್‌ ಬಟನ್‌ ಆಗಿ ಬಳಸಿಕೊಳ್ಳಲಿದೆ. ಈ ಆಪ್‌ ಇತರೆ ಫೀಚರ್‌ಗಳಾಗಿ " ಅಲರ್ಟ್, ವಾಕ್‌ ವಿತ್ ಮಿ, ರೀಚ್‌ ಆನ್‌ ಟೈಮ್"ಗಳನ್ನು ಹೊಂದಿದೆ.

'ವೀಡಿಯೊಕಾನ್ ಕ್ಯೂಬ್ 3' 5 ಇಂಚಿನ HD ಡಿಸ್‌ಪ್ಲೇ ಜೊತೆಗೆ, 2.5D ಬಾಗಿದ ಗಾಜಿನ ಡಿಸ್‌ಪ್ಲೇ ಅನ್ನು 294ppi ಪಿಕ್ಸೆಲ್‌ ಸಾಂದ್ರತೆಯೊಂದಿಗೆ ಹೊಂದಿದೆ. 1.3GHz ಕ್ವಾಡ್‌ ಕೋರ್ ಮೀಡಿಯಾಟೆಕ್ MT6735 ಪ್ರೊಸೆಸರ್‌ನಿಂದ ಸಂಯೋಜನೆಗೊಂಡಿದ್ದು, 3GB RAM ಹೊಂದಿದೆ. ಸ್ಮಾರ್ಟ್‌ಫೋನ್‌ 3000mAh ಬ್ಯಾಟರಿ ಸಾಮರ್ಥ್ಯ ಮತ್ತು ಶೇ.20 ವೇಗದ ಚಾರ್ಜಿಂಗ್ ಫೀಚರ್‌ ಹೊಂದಿದೆ.

3GB RAM, ಪ್ಯಾನಿಕ್‌ ಬಟನ್‌ನ 'ವೀಡಿಯೊಕಾನ್ ಕ್ಯೂಬ್ 3' 8,490 ರೂಗೆ ಲಾಂಚ್‌

'ವೀಡಿಯೊಕಾನ್ ಕ್ಯೂಬ್ 3' 32GB ಆಂತರಿಕ ಸ್ಟೋರೇಜ್‌ ಹೊಂದಿದ್ದು, ಮೈಕ್ರೋ ಎಸ್‌ಡಿ ಕಾರ್ಡ್‌ ಮೂಲಕ ಶೇಕರಣಾ ಸಾಮರ್ಥ್ಯ ಹೆಚ್ಚಿಸಬಹುದು. ಡ್ಯುಯಲ್‌ ಎಲ್‌ಇಡಿ ಫ್ಲ್ಯಾಶ್‌ನ 13MP ಹಿಂಭಾಗ ಕ್ಯಾಮೆರಾ ಮತ್ತು 5MP ಸೆಲ್ಫಿ ಶೂಟರ್ ಎಲ್‌ಇಡಿ ಫ್ಲ್ಯಾಶ್‌ ಕ್ಯಾಮೆರಾ ಹೊಂದಿದೆ. ಸ್ಮಾರ್ಟ್‌ಫೋನ್‌ ಆಂಡ್ರಾಯ್ಡ್ 6.0 ಮಾರ್ಷ್‌ಮಲ್ಲೊ ಆಪರೇಟಿಂಗ್‌ ಸಿಸ್ಟಮ್‌ ಹೊಂದಿದ್ದು, ಡ್ಯುಯಲ್‌ ಸಿಮ್, 4G VoLTE, ವೈಫೈ, ಬ್ಲೂಟೂತ್‌, ಜಿಪಿಎಸ್, ಮೈಕ್ರೋ USB ಪೋರ್ಟ್, ಜಿ-ಸೆನ್ಸಾರ್‌, ಲೈಟ್ ಸೆನ್ಸಾರ್‌, ಭಾವಸೂಚಕ ನಿಯಂತ್ರಣ ಮತ್ತು ಡ್ಯುಯಲ್‌ ವಾಟ್ಸಾಪ್ ಸಂಪರ್ಕಗಳನ್ನು ಹೊಂದಿದೆ.

 

English summary
Videocon Cube 3 with Panic Button, 3GB of RAM launched at Rs 8,490. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot