ಭಾರತಕ್ಕೆ ಬರಲಿದೆ ಝಡ್‌ಟಿಇ ಮೊಬೈಲ್‌ ಕಂಪೆನಿಯ ಸ್ಮಾರ್ಟ್‌ಫೋನ್‌ಗಳು

Posted By:

ಭಾರತದ ಸ್ಮಾರ್ಟ್‌‌ಫೋನ್‌ ಮಾರುಕಟ್ಟೆಯ ಮೇಲೆ ಈಗ ಚೀನಾ ಕಂಪೆನಿಗಳ ಕಣ್ಣು ಬಿದ್ದಿದೆ. ವಿಶ್ವದ ಸ್ಮಾರ್ಟ್‌ಫೋನ್‌‌ ಮಾರುಕಟ್ಟೆಯಲ್ಲಿ ಆರನೇ ಸ್ಥಾನದಲ್ಲಿರುವ ಚೀನಾ ಮೊಬೈಲ್‌ ಕಂಪೆನಿ ಝಡ್‌ಟಿಇ ಭಾರತದಲ್ಲೂ ತನ್ನ ಸ್ಮಾರ್ಟ್‌ಫೋನ್‌‌ ಬಿಡುಗಡೆ ಮಾಡಲಿದೆ.

ಝಡ್‌ಟಿಇ ತನ್ನ ಪ್ರಖ್ಯಾತ ಸ್ಮಾರ್ಟ್‌ಫೋನ್‌ ಝಡ್‌ಟಿಇ ಗ್ಯ್ರಾಂಡ್‌ ಎಸ್‌ನ್ನು ಭಾರತದಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಈ ಸಂಬಂಧ ಗಿಝ್‌ಬಾಟ್‌ ಜೊತೆ ಮಾತನಾಡಿದ ಝಡ್‌ಟಿಇ ಇಂಡಿಯಾದ ಮಾರುಕಟ್ಟೆ ವಿಭಾಗದ ನಿರ್ದೇಶಕ ಅಮಿತ್‌ ಸಕ್ಸೇನಾ, ಇದೇ ದೀಪಾವಳಿಯಲ್ಲಿ ಮೂವತ್ತು ಸಾವಿರ ಬೆಲೆಯಲ್ಲಿ ಈ ಸ್ಮಾರ್ಟ್‌ಫೋನ್‌ನ್ನು ಬಿಡುಗಡೆ ಮಾಡುವ ಮೂಲಕ ಭಾರತದಲ್ಲಿ ಮಾರುಕಟ್ಟೆ ವಿಸ್ತರಿಸಲು ಮುಂದಾಗುತ್ತಿದ್ದೇವೆ ಎಂದು ಹೇಳಿದ್ದಾರೆ.

ಝಡ್‌ಟಿಯ ಬಿಡುಗಡೆ ಮಾಡಲಿರುವ ಸ್ಮಾರ್ಟ್‌ಫೋನ್‌ ಗ್ಯ್ರಾಂಡ್‌ ಎಸ್‌ ವಿನ್ಯಾಸಕ್ಕೆ ಈ ವರ್ಷದ ಐಎಫ್‌ ಡಿಸೈನ್‌(iF Design ) ಪ್ರಶಸ್ತಿ ಸಿಕ್ಕದ್ದು, ಇದೇ ಹುಮ್ಮಸ್ಸಿನಲ್ಲಿ ಕಂಪೆನಿ ಭಾರತದಲ್ಲೂ ಈ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡುತ್ತಿದೆ.

ಭಾರತಕ್ಕೆ ಬರಲಿದೆ ಝಡ್‌ಟಿಇ ಮೊಬೈಲ್‌ ಕಂಪೆನಿಯ ಸ್ಮಾರ್ಟ್‌ಫೋನ್‌ಗಳು

ಝಡ್‌ಟಿಇ ಗ್ಯ್ರಾಂಡ್‌ ಎಸ್‌

ವಿಶೇಷತೆ:
5 ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌
ಆಂಡ್ರಾಯ್ಡ್ 4.1 ಜೆಲ್ಲಿ ಬೀನ್‌ ಓಎಸ್‌
1.7 GHz ಕ್ವಾಡ್‌ ಕೋರ್‌ ಪ್ರೊಸೆಸರ್‍
16 GB ಆಂತರಿಕ ಮೆಮೋರಿ
2 GB RAM
13 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1780 mAh ಬ್ಯಾಟರಿ

ಸ್ಮಾರ್ಟ್‌ಫೋನ್‌ಗಳ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿPlease Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot