Home
ಸುದ್ದಿಜಾಲ

ಈ ಅಂಗಡಿಯಲ್ಲಿ ಹೊಸ ಫೋನ್‌ ಖರೀದಿಸಿದ್ರೆ 2 KG ಟೊಮ್ಯಾಟೋ ಉಚಿತ!

ಭಾರತ ಯಾವಾಗಲೂ ಕೆಲವು ವಿಶೇಷವಾದ ಘಟನೆಗಳಿಗೆ ಸಾಕ್ಷಿಯಾಗುತ್ತದೆ ಇರುತ್ತದೆ. ಅದರಂತೆ ಟೊಮ್ಯಾಟೋ(tomato) ಹಾಗೂ ಸ್ಮಾರ್ಟ್‌ಫೋನ್‌(smartphones) ಸಂಬಂಧ ಹೊಸ ಬೆಳವಣಿಗೆಯೊಂದು ಸಂಭವಿಸಿದ್ದು, ಇದು ದೇಶದಲ್ಲಿ ಬಹಳ ಕುತೂಹಲ ಮೂಡಿಸಿದೆ. ಅಷ್ಟೇ ಅಲ್ಲ ಈ ಮೂಲಕ ಈ ವ್ಯಕ್ತಿ ಭಾರೀ ಲಾಭ ಸಹ ಗಳಿಕೆ ಮಾಡುತ್ತಿದ್ದಾನೆ.

ಹೌದು, ಸ್ಮಾರ್ಟ್‌ಫೋನ್‌ಗಳನ್ನು ಮಾರುವವರು ಸಾಮಾನ್ಯವಾಗಿ ಫೋನ್‌ಗಳ ಜೊತೆಗೆ ಇತರೆ ಸ್ಮಾರ್ಟ್ ಡಿವೈಸ್‌ಗಳನ್ನು ಉಚಿತವಾಗಿ ನೀಡುವುದನ್ನು ನೀವು ಗಮನಿಸಿರಬಹುದು. ಅಥವಾ ಈ ರೀತಿಯ ಆಫರ್‌ ಮೂಲಕ ನೀವು ಫೋನ್‌ ಖರೀದಿ ಸಹ ಮಾಡಿರಬಹುದು. ಆದರೆ, ಇಲ್ಲೊಂದು ಅಂಗಡಿಯಲ್ಲಿ ಫೋನ್ ಖರೀದಿ ಮಾಡಿದ್ರೆ ಎರಡು ಕೆಜಿ ಟೊಮ್ಯಾಟೋ ಅನ್ನು ಉಚಿತವಾಗಿ ನೀಡಲಾಗುತ್ತಿದೆ. ಹಾಗಿದ್ರೆ, ಈ ಘಟನೆ ಎಲ್ಲಿಯದು?, ಅಷ್ಟಕ್ಕೂ ಸ್ಟೋರ್‌ ಮಾಲೀಕ ಈ ನಿರ್ಧಾರ ಮಾಡಿದ್ದು ಯಾಕೆ? ಎಂಬ ಇಂಟ್ರೆಸಿಂಗ್‌ ಮಾಹಿತಿ ಇಲ್ಲಿದೆ ನೋಡಿ.

ಈ ಅಂಗಡಿಯಲ್ಲಿ ಹೊಸ ಫೋನ್‌ ಖರೀದಿಸಿದ್ರೆ 2 KG ಟೊಮ್ಯಾಟೋ ಉಚಿತ!

ಫೋನ್‌ ಖರೀದಿಸಿದ್ರೆ ಟೊಮ್ಯಾಟೋ ಫ್ರೀ...: ಭಾರತದಲ್ಲಿ ಟೊಮ್ಯಾಟೋ ಖರೀದಿ ಮಾಡುವವರು ಈಗ ಶ್ರೀಮಂತರು ಮಾತ್ರ ಎಂಬ ಪರಿಸ್ಥಿತಿ ನಿರ್ಮಾಣ ಆಗಿದೆ. ಇದಕ್ಕೆ ಕಾರಣ ಏರುತ್ತಿರುವ ಬೆಲೆ. ಇದು ಒಂದು ಕಡೆ ರೈತರಿಗೆ ವರದಾನವಾದರೂ ಖರೀದಿ ಮಾಡುವವರಿಗೆ ಮಾತ್ರ ಕಣ್ಣೀರು ತರಿಸುತ್ತದೆ. ಇದನ್ನೆ ಸದುಪಯೋಗಪಡಿಸಿಕೊಂಡಿರುವ ಅಂಗಡಿ ಮಾಲೀಕರೋರ್ವರು ತಮ್ಮ ಸ್ಟೋರ್‌ನಲ್ಲಿ ಫೋನ್‌ ಖರೀದಿ ಮಾಡುವ ಗ್ರಾಹಕರಿಗೆ ಉಚಿತವಾಗಿ ಟೊಮ್ಯಾಟೋ ನೀಡುತ್ತಿದ್ದಾರೆ.

ಈ ಉಚಿತ ಟೊಮ್ಯಾಟೋ ಕೊಡುಗೆಯನ್ನು ಮಧ್ಯಪ್ರದೇಶದ ಆಶೋಕನಗರ ಜಿಲ್ಲೆಯ ಅಭಿಷೇಕ್ ಅಗರ್ವಾಲ್ ಆರಂಭಿಸಿದ್ದಾರೆ. ಇವರು ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುತ್ತಿದ್ದು, ಗ್ರಾಹಕರನ್ನು ಸೆಳೆಯಲು ಉಚಿತ ಟೊಮ್ಯಾಟೋ ಕೊಡುಗೆಯನ್ನು ಘೋಷಣೆ ಮಾಡಿದ್ದಾರೆ. ಈ ಕೊಡುಗೆಯ ಪ್ರಕಾರ ಯಾರು ಈ ಅಂಗಡಿಯಿಂದ ಸ್ಮಾರ್ಟ್‌ಫೋನ್ ಖರೀದಿಸುತ್ತಾರೋ ಅವರು ಇಲ್ಲಿ ಎರಡು ಕೆಜಿ ಟೊಮ್ಯಾಟೋ ಪಡೆದುಕೊಳ್ಳಹುದು. ವಿಶೇಷ ಏನೆಂದರೆ ಈವರೆಗೆ ಸುಮಾರು ಅರವತ್ತು ಕೆಜಿಗೂ ಹೆಚ್ಚಿನ ಟೊಮೆಟೊವನ್ನು ಉಚಿತವಾಗಿ ನೀಡಲಾಗಿದೆಯಂತೆ.

ಉಚಿತ ಟೊಮ್ಯಾಟೊ ಆಫರ್‌ ನೀಡುತ್ತಿರುವುದರಿಂದಾಗ ಮೊಬೈಲ್‌ ಖರೀದಿಗೆ ಬರಲು ಜನರಲ್ಲಿ ಉತ್ಸಾಹ ಹೆಚ್ಚಾಗಿದೆ ಎಂದು ಹೇಳಿರುವ ಮಾಲೀಕ, ಸದ್ಯ ಟೊಮ್ಯಾಟೊ ಬೆಲೆ ದುಬಾರಿಯಾಗುತ್ತಿದೆ. ಪ್ರತಿ ಸ್ಮಾರ್ಟ್‌ಫೋನ್‌ನ ಖರೀದಿಯ ಮೇಲೆ ಗ್ರಾಹಕರಿಗೆ 2 ಕೆಜಿ ಟೊಮ್ಯಾಟೊವನ್ನು ಉಚಿತವಾಗಿ ನೀಡುತ್ತಿದ್ದೇವೆ. ಈ ಕೊಡುಗೆಯಿಂದ ನಾವು ಸಾಕಷ್ಟು ಪ್ರಯೋಜನ ಪಡೆದಿದ್ದೇವೆ. ಹಾಗೆಯೇ ಜನರಿಗೆ ಟೊಮ್ಯಾಟೊವನ್ನು ಉಚಿತವಾಗಿ ನೀಡುವಲ್ಲಿ ನಾವು ತುಂಬಾ ಸಂತಸಗೊಂಡಿದ್ದೇವೆ ಎಂದಿದ್ದಾರೆ.

ಮುಂದುವರೆದು ಮಾತನಾಡಿರುವ ಅವರು ಟೊಮ್ಯಾಟೊ ಕೆಜಿಗೆ ಈಗ 150ರೂ.ಗಳಿಗೂ ಹೆಚ್ಚಿನ ಬೆಲೆ ಹೊಂದಿದೆ. ಇಂದಿನ ಯುಗದಲ್ಲಿ ಗ್ರಾಹಕರನ್ನು ಸೆಳೆಯಲು ಶೋರೂಂಗಳಲ್ಲಿ ವಿವಿಧ ರೀತಿಯ ಆಫರ್‌ಗಳನ್ನು ನೀಡಲಾಗುತ್ತದೆ. ಇಂತಹ ಪೈಪೋಟಿಯ ಸಮಯದಲ್ಲಿ ಟೊಮ್ಯಾಟೊ ಬೆಲೆಯನ್ನೇ ಆಧಾರವಾಗಿಟ್ಟುಕೊಂಡು ನಮ್ಮಲ್ಲಿ ಸ್ಮಾರ್ಟ್‌ಫೋನ್ ಖರೀದಿಸಿದರೆ ಎರಡು ಕೆಜಿ ಟೊಮ್ಯಾಟೊ ಉಚಿತವಾಗಿ ನೀಡುತ್ತೇವೆ ಎಂದು ಬ್ಯಾನರ್‌ ಹಾಕಿದ್ದೇವೆ ಎಂದು ಹೇಳಿದ್ದಾರೆ.

ಈ ರೀತಿ ಬ್ಯಾನರ್‌ ಹಾಕಿದ ಮೇಲೆ ನಮ್ಮ ಅಂಗಡಿಗೆ ಬರುವ ಗ್ರಾಹಕರ ಸಂಖ್ಯೆ ಬಹಳ ಹೆಚ್ಚಾಗಿದೆ. ಜೊತೆಗೆ ಹಲವಾರು ಜನರು ಅಂಗಡಿಗೆ ಬಂದು ಈ ಆಫರ್‌ ಎಷ್ಟು ದಿನದ ವರೆಗೆ ಇರಲಿದೆ ಎಂದು ಸಹ ವಿಚಾರಿಸಿಕೊಂಡು ಹೋಗುತ್ತಿದ್ದಾರೆ. ಇದು ನಮಗೆ ತುಂಬಾ ಸಂತೋಷ ಉಂಟು ಮಾಡಿದ್ದು, ಸಮಗೆ ತುಂಬಾ ಲಾಭದಾಯಕವಾಗಿದೆ ಎಂದಿದ್ದಾರೆ. ಇನ್ನು ಈ ಟೊಮ್ಯಾಟೊ ವಿಚಾರ ದೇಶದಲ್ಲಿ ಟ್ರೋಲ್‌ ಹಾಗೂ ಮೀಮ್ಸ್ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದುಕೊಳ್ಳುತ್ತಿದೆ.

ಈ ಅಂಗಡಿಯಲ್ಲಿ ಹೊಸ ಫೋನ್‌ ಖರೀದಿಸಿದ್ರೆ 2 KG ಟೊಮ್ಯಾಟೋ ಉಚಿತ!

ಏನೇ ಆದರೂ ಜನರನ್ನು ವಿವಿಧ ರೀತಿಯಲ್ಲಿ ಮರುಳು ಮಾಡಿ ವಂಚಿಸುವ ಈ ಕಾಲಘಟ್ಟದಲ್ಲಿ ಗಗನಕ್ಕೇರಿರುವ ಟೊಮ್ಯಾಟೊವನ್ನು ಅದೂ ಸಹ ಎರಡು ಕೆಜಿ ಟೊಮ್ಯಾಟೊ ವನ್ನು ಉಚಿತವಾಗಿ ನೀಡುವ ಮೂಲಕ ಈ ಅಂಗಡಿ ಮಾಲೀಕ ವಿಶೇಷವಾದ ವ್ಯಾಪಾರ ತಂತ್ರವನ್ನು ಬಳಕೆ ಮಾಡಿದ್ದಾನೆ. ಇದು ಅಂಗಡಿ ಮಾಲೀಕನಿಗೂ ಲಾಭ ಹಾಗೂ ಅಂಗಡಿಯಲ್ಲಿ ಫೋನ್‌ ಖರೀದಿ ಮಾಡಿದವರಿಗೂ ಲಾಭ.

Best Mobiles in India

English summary
You may have noticed that sellers of smartphones often give away phones along with other smart devices for free. But if you buy a phone in a store here, you will get free two kg tomato.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+