ಬರಲಿದೆ ಏರ್‌ಟೆಲ್ 4ಜಿ ಯ ಕಮಾಲಿನ ಸೇವೆ

Written By:

4 ಜಿ ಸೇವೆಗಳ ವಿಷಯದಲ್ಲಿ ಏರ್‌ಟೆಲ್ ಹೆಚ್ಚಿನ ಪ್ರಗತಿಯನ್ನು ಕಂಡುಕೊಂಡಿದೆ. ರಿಲಾಯನ್ಸ್ ಜಿಯೊ, ವೋಡಾಫೋನ್ ಮತ್ತು ಐಡಿಯಾ ಸೆಲ್ಯುಲಾರ್‌ಗೂ ಮಿಗಿಲಾಗಿ ಬಳಕೆದಾರರಿಗೆ 4ಜಿ ಸೇವೆಯ ಸರ್ವ ಸೌಲಭ್ಯವನ್ನು ಕಂಪೆನಿ ಒದಗಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.

ಓದಿರಿ: ಏರ್‌ಟೆಲ್‌ ಗ್ರಾಹಕರೇ ಯಾವಾಗಲು ಸ್ಮಾರ್ಟ್‌

ಇಂದಿನ ಲೇಖನದಲ್ಲಿ ಏರ್‌ಟೆಲ್ ಹಮ್ಮಿಕೊಂಡಿರುವ ಯೋಜನೆಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪಾಲುದಾರಿಕೆ

ಪಾಲುದಾರಿಕೆ

ಹ್ಯಾಂಡ್‌ಸೆಟ್ ತಯಾರಿಕಾ ಕಂಪೆನಿಗಳಾದ ಸ್ಯಾಮ್‌ಸಂಗ್ ಮತ್ತು ಆಪಲ್‌ನೊಂದಿಗೆ ಏರ್‌ಟೆಲ್ ಪಾಲುದಾರಿಕೆಯನ್ನು ಮಾಡಿಕೊಂಡಿದೆ.

ಆನ್‌ಲೈನ್ ರೀಟೈಲರ್ ಫ್ಲಿಪ್‌ಕಾರ್ಟ್‌

ಆನ್‌ಲೈನ್ ರೀಟೈಲರ್ ಫ್ಲಿಪ್‌ಕಾರ್ಟ್‌

ಆನ್‌ಲೈನ್ ರೀಟೈಲರ್ ಫ್ಲಿಪ್‌ಕಾರ್ಟ್‌ನೊಂದಿಗೆ 4ಜಿ ಸೇವೆಗಳ ಉತ್ತಮತೆಗಾಗಿ ಇದು ಒಪ್ಪಂದವನ್ನು ಮಾಡಿಕೊಂಡಿದೆ.

4ಜಿ ಸೌಲಭ್ಯವುಳ್ಳ ಹ್ಯಾಂಡ್‌ಸೆಟ್

4ಜಿ ಸೌಲಭ್ಯವುಳ್ಳ ಹ್ಯಾಂಡ್‌ಸೆಟ್

4ಜಿ ಸೌಲಭ್ಯವುಳ್ಳ ರೂ 5,000 ಬೆಲೆಯ ಹ್ಯಾಂಡ್‌ಸೆಟ್ ಅನ್ನು ಕಂಪೆನಿ ಹೊರತರುವ ಯೋಜನೆಯಲ್ಲಿದೆ. ಇನ್ನು ಅತಿ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಲಾಂಚ್ ಮಾಡುವ ತಯಾರಿಯಲ್ಲಿ ಕಂಪೆನಿ ಇದೆ.

ಮೊಬೈಲ್ ಡೇಟಾ ರೆವೆನ್ಯೂ

ಮೊಬೈಲ್ ಡೇಟಾ ರೆವೆನ್ಯೂ

ಮೊಬೈಲ್ ಡೇಟಾ ರೆವೆನ್ಯೂ ಅದರಲ್ಲೂ ಭಾರತದ ರೆವೆನ್ಯೂ 21.5 ಶೇಕಡಾದಷ್ಟು ಕೊಡುಗೆಯನ್ನು ನೀಡಿದೆ. ಇನ್ನು ಡೇಟಾ ಸರಾಸರಿ ಆದಾಯ ಪ್ರತೀ ಬಳಕೆದಾರರಿಂದ ರೂ 42 ರಿಂದ ರೂ 193 ಕ್ಕೆ ಏರಿಕೆಯಾಗಿದೆ.

ಏರಿಕೆ

ಏರಿಕೆ

ಪ್ರತೀ ಗ್ರಾಹಕರ ಡೇಟಾ ಬಳಕೆ 35.9 ಶೇಕಡಾದಷ್ಟು ಏರಿಕೆಯಾಗಿದೆ.

ಮೊಬೈಲ್ ಟವರ್‌

ಮೊಬೈಲ್ ಟವರ್‌

ಆಫ್ರಿಕಾ ಪ್ರಾಂತ್ಯದಲ್ಲಿ ತನ್ನೆಲ್ಲಾ ಮೊಬೈಲ್ ಟವರ್‌ಗಳನ್ನು ಮಾರಾಟ ಮಾಡುವ ಯೋಜನೆಯನ್ನು ಕಂಪೆನಿ ಹಮ್ಮಿಕೊಂಡಿದೆ. ಇನ್ನು ಈ ಯೋಜನೆಗೆ ಕಂಪೆನಿ ಹಮ್ಮಿಕೊಂಡಿರುವ ಆದಾಯ ರೂ 704 ಮಿಲಿಯನ್‌ನಿಂದ ರೂ 491 ಆಗಿದೆ.

ಕಾಲ್ ಡ್ರಾಪ್‌ ಸಮಸ್ಯೆ

ಕಾಲ್ ಡ್ರಾಪ್‌ ಸಮಸ್ಯೆ

ಕಾಲ್ ಡ್ರಾಪ್‌ನಂತಹ ಸಮಸ್ಯೆಗಳಿಗೆ ಸರಕಾರದೊಂದಿಗೆ ಕಂಪೆನಿ ಕಾರ್ಯನಿರ್ವಹಿಸುತ್ತಿದೆ. ಎಲ್ಲಾ ಸೆಲ್ ಟವರ್‌ಗಳನ್ನು ಅಭಿವೃದ್ಧಿಪಡಿಸುವ ಮೂಲಕ ನೆಟ್‌ವರ್ಕ್ ಇನ್‌ಫ್ರಾಸ್ಟ್ರಕ್ಚರ್ ಅನ್ನು ಭದ್ರಪಡಿಸುತ್ತಿದೆ.

ಕಠಿಣ ಪೈಪೋಟಿ

ಕಠಿಣ ಪೈಪೋಟಿ

ರಿಲಾಯನ್ಸ್ ಜಿಯೊ, ವೋಡಾಫೋನ್ ಮತ್ತು ಐಡಿಯಾ ಸೆಲ್ಯುಲಾರ್‌ಗೆ ಕಠಿಣ ಪೈಪೋಟಿಯನ್ನು ನೀಡುವುದಕ್ಕಾಗಿ ಏರ್‌ಟೆಲ್ ಭರ್ಜರಿ ಹುನ್ನಾರವನ್ನೇ ನಡೆಸಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Airtel has taken the lead when it comes to 4G services. The company has launched services ahead of Reliance Jio, Vodafone and Idea Cellular, allowing it to get the first movers advantage.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot