ಏರ್‌ಟೆಲ್‌ ಗ್ರಾಹಕರೇ ಯಾವಾಗಲು ಸ್ಮಾರ್ಟ್‌

By Suneel
|

ಸ್ಮಾರ್ಟ್‌ಯುಗದಲ್ಲಿರುವ ಎಲ್ಲರೂ ಇಂದು ಅಧಿಕವಾಗಿ ಸ್ಮಾರ್ಟ್‌ಫೋನ್‌ ಬಳಸುತ್ತಿದ್ದಾರೆ. ನಾವು ಬಳಸುವ ಸ್ಮಾರ್ಟ್‌ಫೋನ್‌ ಯಾವಾಗಳು ಸ್ಮಾರ್ಟ್‌ ಆಗಿರಬೇಕಾದರೆ ಅದಕ್ಕೆ ಇಂಟರ್ನೆಟ್‌ ಸಂಪರ್ಕ ಇರಲೇಬೇಕು. ಆಗ ಮಾತ್ರ ಆ ಸ್ಮಾರ್ಟ್‌ಫೋನ್‌ ಅತಿ ಹೆಚ್ಚು ಸ್ಮಾರ್ಟ್‌ ಆಗಿ ಕಾಣುವುದು. ಈ ಹೇಳಿಕೆ ಖಂಡಿತ ಸರಿ ಎಂದು ಎಲ್ಲರೂ ಭಾವಿಸಲೇ ಬೇಕು.

ಓದಿರಿ: ನೀರಿನಲ್ಲಿ ಈಜುವ, ಗಾಳಿಯಲ್ಲಿ ಹಾರುವ ರೋಬೋ

ಇಂಟರ್‌ನೆಟ್‌ ಬಳಸಿದರೆ ಸ್ಮಾರ್ಟ್‌ಫೋನ್‌ ಅತಿ ಹೆಚ್ಚು ಸ್ಮಾರ್ಟ್‌ ಆಗುತ್ತದೆ ಹೌದು, ಆದರೆ ಯಾವ ನೆಟ್‌ವರ್ಕ್‌ ಉತ್ತಮ ಎಂದು ಬಹು ಸಂಖ್ಯಾತರಿಗೆ ತಿಳಿದಿಲ್ಲಾ. ಆದರೆ ಇಂದಿನ ಲೇಖನದಲ್ಲಿ ಗಿಜ್‌ಬಾಟ್‌ ಟೆಲಿಕಾಂ ಆಪರೇಟರ್‌ ಕಂಪನಿಗಳಲ್ಲೇ ಉತ್ತಮ ರೀತಿಯ ಸೇವೆ ನೀಡಿ ಅತಿಹೆಚ್ಚು ಲಾಭಗಳಿಸಿರುವ ಏರ್‌ಟೆಲ್‌ ಬಗ್ಗೆ ಒಂದಷ್ಟು ವಿಶೇಷ ಮಾಹಿತಿಯನ್ನು ನೀಡುತ್ತಿದೆ. ಕಾರಣ ಇಂದು ಹೆಚ್ಚು ಸ್ಮಾರ್ಟ್‌ಫೋನ್‌ ಬಳಕೆದಾರರು 4G ಸೇವೆ ನೀಡುತ್ತಿರುವ ಏರ್‌ಟೆಲ್‌ ಗ್ರಾಹಕರಾಗಿದ್ದಾರೆ. ಹಾಗಾದರೆ ಏರ್‌ಟೆಲ್‌ ತನ್ನ ಬೆಳವಣಿಗೆಯಲ್ಲಿ ಏನೆಲ್ಲಾ ಅಂಶಗಳನ್ನು ಒಳಗೊಂಡಿದೆ ಎಂಬುದನ್ನು ಈ ಲೇಖನ ಓದಿ ತಿಳಿಯಿರಿ.

ದೇಶದ ಉನ್ನತ ಟಿಲಿಕಾಂ ಆಪರೇಟರ್‌

ದೇಶದ ಉನ್ನತ ಟಿಲಿಕಾಂ ಆಪರೇಟರ್‌

ದೇಶದ ಉನ್ನತ ಟಿಲಿಕಾಂ ಆಪರೇಟರ್‌ ಭಾರತಿ ಏರ್‌ಟೆಲ್‌ ಸೆಪ್ಟೆಂಬರ್‌ ತ್ರೈಮಾಸಿಕಕ್ಕೆ ಅಂತ್ಯಗೊಂಡಂತೆ ಶೇಕಡ 10.1 ನೆಟ್‌ ಪ್ರಾಫಿಟ್ ಪಡೆದಿರುವ ಬಗ್ಗೆ ವರದಿಯಾಗಿದ್ದು, ರೂ.1,523 ಕೋಟಿ ನಿವ್ವಳ ಲಾಭ ಗಳಿಸಿದೆ.

ಕಳೆದ ಹಣಕಾಸು ವರ್ಷ

ಕಳೆದ ಹಣಕಾಸು ವರ್ಷ

ಕಳೆದ ಹಣಕಾಸು ವರ್ಷ ಜುಲೈ- ಸೆಪ್ಟೆಂಬರ್‌ ತ್ರೈಮಾಸಿಕದ ಆಧಾರದ ಮೇಲೆ ರೂ.1383 ನಿವ್ವಳ ಲಾಭ ಗಳಿಸಿರುವ ಬಗ್ಗೆ ಏರ್‌ಟೆಲ್‌ ಹೇಳಿಕೆ ನೀಡಿದೆ.

ಭಾರತಿ ಏರ್‌ಟೆಲ್‌

ಭಾರತಿ ಏರ್‌ಟೆಲ್‌

ಭಾರತಿ ಏರ್‌ಟೆಲ್‌ ಕಳೆದ ಎರಡನೇ ತ್ರೈಮಾಸಿಕ ಅವಧಿಯಲ್ಲಿ ರೂ.22,845 ಕೋಟಿ ಗಳಿಸಿತ್ತು, ಆದರೆ ಈ ವರ್ಷದ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಲಾಭ ಶೇಕಡ 4.3 ಏರಿಕೆಯಾಗಿದ್ದು, ರೂ 23,836 ಕೋಟಿ ಗಳಿಸಿದೆ.

 ಹೈ-ಸ್ಪೀಡ್‌ ಇಂಟರ್ನೆಟ್‌ ಆಕ್ಸೆಸ್‌

ಹೈ-ಸ್ಪೀಡ್‌ ಇಂಟರ್ನೆಟ್‌ ಆಕ್ಸೆಸ್‌

ಸ್ಮಾರ್ಟ್‌ಫೋನ್‌ ಬಳಕೆದಾರರು ಏರ್‌ಟೆಲ್‌ನ ಹೈ-ಸ್ಪೀಡ್‌ ಇಂಟರ್ನೆಟ್‌ ಆಕ್ಸೆಸ್‌ ಪಡೆಯುತ್ತಿರುವುದರಿಂದ ಮೊಬೈಲ್‌ ಡಾಟಾ ಆದಾಯ ಶೇಕಡ 49.8 ಹೆಚ್ಚಾಗಿದ್ದು, ರೂ 3,806 ಕೋಟಿ ಲಾಭ ಗಳಿಸಿದೆ, ಹಾಗೂ ಡಾಟಾ ಟ್ರಾಫಿಕ್‌ ಶೇಕಡ 76.3 ಕ್ಕೆ ಜಂಪ್‌ ಆಗಿದೆ. ಒಟ್ಟಾರೆ ಆದಾಯದ ಶೇಕಡ 16 ರಷ್ಟು ಆದಾಯವನ್ನು ಕಳೆದ ತ್ರೈಮಾಸಿಕ್ಕಿಂತ ಹೆಚ್ಚು ಗಳಿಸಿದೆ.

ವಾಯ್ಸ್‌ ನಿಮಿಷದಲ್ಲಿ ಕುಸಿತ

ವಾಯ್ಸ್‌ ನಿಮಿಷದಲ್ಲಿ ಕುಸಿತ

ಕಂಪನಿಯ ಹೇಳಿಕೆ ಪ್ರಕಾರ, 2015-2016ರ ಏಪ್ರಿಲ್‌-ಜೂನ್‌ ಅವಧಿಯಲ್ಲಿ ಏರ್‌ಟೆಲ್‌ 342,987 ಮಿಲಿಯನ್‌ನಿಂದ 336,002 ಮಿಲಿಯನ್‌ಗೆ ವಾಯ್ಸ್‌ ನೆಟ್‌ವರ್ಕ್‌ ನಲ್ಲಿ ಕುಸಿತ ಕಂಡಿದೆ.

 ಲಾಭ

ಲಾಭ

ಈ ತ್ರೈಮಾಸಿಕದಲ್ಲಿ ಬಡ್ಡಿ, ಟ್ಯಾಕ್ಸ್‌, ಡಿಪ್ರಿಶಿಯೇಶನ್ ಮತ್ತು ಸಾಲ ತೀರಿಸುವಿಕೆ ಎಲ್ಲಾ ಕಳೆದು ರೂ 8,265 ಕೋಟಿ ಲಾಭ ಗಳಿಸಿದೆ. ಆದರೆ ಕಳೆದ ಇದೇ ತ್ರೈಮಾಸಿಕದಲ್ಲಿ ರೂ 7,749 ಕೋಟಿ ಲಾಭ ಗಳಿಸಿತ್ತು.

ಗೋಪಾಲ್‌ ವಿಟ್ಟಲ್

ಗೋಪಾಲ್‌ ವಿಟ್ಟಲ್

ಭಾರತದಲ್ಲಿ ಏರ್‌ಟೆಲ್‌ ಲಾಭಗಳಿಕೆ ಕಳೆದ ಎರಡು ತ್ರೈಮಾಸಿಕದಲ್ಲಿ ಶೇಕಡ 13.3 ಕಳೆದ 12 ತ್ರೈಮಾಸಿಕಗಳಿಗೆ ಹೋಲಿಸಿದರೆ ಬೆಳವಣಿಗೆಯಾಗಿದೆ. ವ್ಯವಹಾರಿಕವಾಗಿ ಭಾರತದಲ್ಲಿಯ 334 ನಗರಗಳಲ್ಲಿ 4G ಇಂಟರ್ನೆಟ್‌ ಸೇವೆ ಲಾಂಚ್‌ ಮಾಡುವುದರೊಂದಿಗೆ ಡಾಟಾ ಮಾರುಕಟ್ಟೆಯಲ್ಲಿ ಉತ್ತಮ ಬೆಳವಣಿಗೆಯ ಸ್ಥಾನದಲ್ಲಿದೇವೆ ಎಂದು ಭಾರತಿ ಏರ್‌ಟೆಲ್‌ ಎಂಡಿ ಮತ್ತು ಸಿಇಒ ಗೋಪಾಲ್‌ ವಿಟ್ಟಲ್‌ ಹೇಳಿದ್ದಾರೆ.

ಮೊಬೈಲ್‌ ಡಾಟಾ ಲಾಭ

ಮೊಬೈಲ್‌ ಡಾಟಾ ಲಾಭ

ಭಾರತಿ ಏರ್‌ಟೆಲ್‌ ಮೊಬೈಲ್‌ ಡಾಟಾ ಲಾಭ ಶೇಕಡ 21.5 ಕ್ಕೆ ಏರಿಕೆಯಾಗಿದೆ. ಇದು ಕಳೆದ ವರ್ಷ ಶೇಕಡ 14.5 ಇತ್ತು. ಪ್ರತಿ ಡಾಟಾ ಬಳಕೆದಾರನಿಂದ ರೂ 42 ರಿಂದ ರೂ 193 ವರೆಗೆ ಲಾಭ ಹೆಚ್ಚಾಗಿದೆ.

ಏರ್‌ಟೆಲ್‌ ಬಳಕೆದಾರರು

ಏರ್‌ಟೆಲ್‌ ಬಳಕೆದಾರರು

ಏರ್‌ಟೆಲ್‌, 20 ದೇಶಗಳಾದ್ಯಂತ 340 ಮಿಲಿಯನ್‌ ಗ್ರಾಹಕರನ್ನು ಹೊಂದಿದೆ. ಅಲ್ಲದೇ ಭಾರತದಲ್ಲಿ ಈ ತ್ರೈಮಾಸಿಕದಲ್ಲಿ ಶೇಕಡ 3.1 ರಿಂದ ಶೇಕಡ 3.5 ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ.

ವಾಯ್ಸ್‌ ರಿಯಲೈಶೇಷನ್

ವಾಯ್ಸ್‌ ರಿಯಲೈಶೇಷನ್

ವಾಯ್ಸ್‌ ರಿಯಲೈಶೇಷನ್ ಪ್ರತಿ ನಿಮಿಷಕ್ಕೆ 3.11 ಪೈಸೆ ಡ್ರಾಪ್‌ ಆಗಿದೆ. ಎರಡನೇ ತ್ರೈಮಾಸಿಕದಲ್ಲಿ 37.69 ಪೈಸೆ ಇದ್ದದ್ದು, ಈಗ 34.58 ಪೈಸೆ ಆಗಿದೆ.

Best Mobiles in India

English summary
Country's top telecom operator Bharti Airtel has reported a 10.1% jump in net profit to Rs 1,523 crore for the quarter ended September, bolstered by a sharp growth in mobile data usage.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X