Home
ಸುದ್ದಿಜಾಲ

ನಿಮ್ಮ iOS ಡಿವೈಸ್‌ ಪೆಗಾಸಸ್ ಸ್ಪೈವೇರ್‌ ದಾಳಿಗೆ ಒಳಗಾಗಿದೆಯಾ?ಈ ರೀತಿ ಚೆಕ್‌ ಮಾಡಿ

ಸ್ಮಾರ್ಟ್ ಡಿವೈಸ್‌ಗಳ ವಿಭಾಗದಲ್ಲಿ iOS ಡಿವೈಸ್‌ಗಳು ಹೆಚ್ಚು ಭದ್ರತಾ ಫೀಚರ್ಸ‌ ಹೊಂದಿರಲಿವೆ ಎಂದು ನಿಮ್ಮೆಲ್ಲರಿಗೂ ತಿಳಿದ ವಿಚಾರ. ಆದರೂ ಸ್ಕ್ಯಾಮರ್‌ಗಳು ಈ ಡಿವೈಸ್‌ಗಳ ಒಳಗೂ ನುಸುಳುವ ಯತ್ನ ನಡೆಸುತ್ತಾರೆ. ಆದರೆ, ತಕ್ಷಣಕ್ಕೆ ಎಚ್ಚೆತ್ತುಕೊಳ್ಳುವ ಆಪಲ್‌ ಅಥವಾ ಸಂಬಂಧಿಸಿದ ಸಂಸ್ಥೆಗಳು ತನ್ನದೇ ಆದ ನವೀಕರಣವನ್ನೂ ನೀಡುವ ಮೂಲಕ ಬಳಕೆದಾರರ ಆತಂಕ ದೂರ ಮಾಡುವ ಕೆಲಸ ಮಾಡುತ್ತದೆ.

ಹೌದು, ಆಪಲ್‌ ಡಿವೈಸ್‌ಗಳು ಹೆಚ್ಚಿನ ಭದ್ರತಾ ಫೀಚರ್ಸ್‌ ಹೊಂದಿದ್ದರೂ ಸಹ ಎಲ್ಲೋ ಒಂದು ಸಣ್ಣ ದೋಷವನ್ನೇ ದುರುಪಯೋಗ ಮಾಡಿಕೊಳ್ಳುವ ಸ್ಕ್ಯಾಮರ್‌ಗಳು ಡಿವೈಸ್‌ನಲ್ಲಿನ ಖಾಸಗಿ ಮಾಹಿತಿ ಹಾಗೂ ಬ್ಯಾಂಕ್‌ ಮಾಹಿತಿ ಖದಿಯಲು ಮುಂದಾಗುತ್ತಾರೆ. ಹಾಗಿದ್ರೆ ನಿಮ್ಮ iOS ಡಿವೈಸ್‌ ಪೆಗಾಸಸ್ ಸ್ಪೈವೇರ್‌ ನಿಂದ ಪ್ರಭಾವಿತ ಆಗಿದೆಯೇ ಎಂದು ತಿಳಿದುಕೊಳ್ಳುವುದು ಅಗತ್ಯವಾದ ವಿಷಯವಾಗಿದೆ. ಇದನ್ನು ಹೇಗೆ ತಿಳಿಯುವುದು? ಎಚ್ಚರಿಕೆ ವಹಿಸುವುದು ಹೇಗೆ? ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ನಿಮ್ಮ iOS ಡಿವೈಸ್‌ ಪೆಗಾಸಸ್ ಸ್ಪೈವೇರ್‌ ದಾಳಿಗೆ ಒಳಗಾಗಿದೆಯಾ?, ಚೆಕ್‌ ಮಾಡಿ...

iOS ಡಿವೈಸ್‌ಗಳಲ್ಲಿ ಪೆಗಾಸಸ್ ಸ್ಪೈವೇರ್: ಪೆಗಾಸಸ್ ಸ್ಪೈವೇರ್‌ನ (Pegasus Spyware) ಹೆಚ್ಚುತ್ತಿರುವ ಬೆದರಿಕೆಗೆ ಪ್ರತಿಕ್ರಿಯೆಯಾಗಿ, ಕ್ಯಾಸ್ಪರ್ಸ್ಕಿಯ ಗ್ಲೋಬಲ್ ರಿಸರ್ಚ್ ಮತ್ತು ಅನಾಲಿಸಿಸ್ ತಂಡವು iOS ಬಳಕೆದಾರರಿಗೆ ಹೊಸ ಪತ್ತೆ ವಿಧಾನ ಮತ್ತು ರಕ್ಷಣಾತ್ಮಕ ಕ್ರಮಗಳನ್ನು ನೀಡಿದೆ. ಈ ಪತ್ತೆ ವಿಧಾನವು Shutdown.log ಫೈಲ್ ಅನ್ನು ಬಳಕೆ ಮಾಡುತ್ತದೆ. ಈ ಅತ್ಯಾಧುನಿಕ ಡಿಜಿಟಲ್ ಬೆದರಿಕೆಗಳಿಗೆ ತಮ್ಮದೇ ಆದ ದುರ್ಬಲತೆಯನ್ನು ನಿರ್ಣಯಿಸಲು ಇದು ಬಳಕೆದಾರರನ್ನು ಅನುಮತಿಸುತ್ತದೆ.

ಪೆಗಾಸಸ್ನ ಹೊಸ ವೇರಿಯಂಟ್‌ಗಳಾದ Reign ಮತ್ತು Predator ನಂತಹ ಅತ್ಯಾಧುನಿಕ iOS ಸ್ಪೈವೇರ್ ಬೆದರಿಕೆಗಳಿಂದ ಬಳಕೆದಾರರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸೂಚಿಸಲಾಗಿದೆ. ನೀವು ಐಫೋನ್ ಬಳಕೆದಾರರಾಗಿದ್ದರೆ ಮತ್ತು ನಿಮ್ಮ ಫೋನ್‌ನಲ್ಲಿ ಕೆಲವು ಸ್ಪೈ ಸಾಫ್ಟ್‌ವೇರ್ ಲೋಡ್ ಆಗಿದೆ ಎಂದು ಭಾವಿಸಿದರೆ ಇನ್ಮುಂದೆ ಭಯಪಡುವ ಅಗತ್ಯವಿಲ್ಲ. ಇದರೊಂದಿಗೆ ಈ ತಂತ್ರಜ್ಞಾನವು ಮುಂಬರುವ ಸೈಬರ್ ದಾಳಿಗಳ ಬಗ್ಗೆ ಐಫೋನ್ ಬಳಕೆದಾರರನ್ನು ಎಚ್ಚರಿಸುತ್ತದೆ ಎನ್ನಲಾಗಿದೆ. ಪೆಗಾಸಸ್ ಪತ್ತೆಗಾಗಿ ಈ ಟೂಲ್ಸ್‌ ಅನ್ನು ಗಿಟ್‌ಹಬ್‌ ನಲ್ಲಿ ಸಾರ್ವಜನಿಕವಾಗಿ ಹಂಚಿಕೊಳ್ಳಲಾಗಿದೆ. ಇದನ್ನು ಮ್ಯಾಕ್‌ಓಎಸ್‌, ವಿಂಡೋಸ್‌ ಮತ್ತು ಲೀನಕ್ಸ್‌ ಬಳಕೆದಾರರು ಬಳಕೆ ಮಾಡಬಹುದಾಗಿದೆ.

ನಿಮ್ಮ iOS ಡಿವೈಸ್‌ ಪೆಗಾಸಸ್ ಸ್ಪೈವೇರ್‌ ದಾಳಿಗೆ ಒಳಗಾಗಿದೆಯಾ?, ಚೆಕ್‌ ಮಾಡಿ...

ಕ್ಯಾಸ್ಪರ್ಸ್ಕಿ ತಜ್ಞರ ಪ್ರಕಾರ, ಪೆಗಾಸಸ್ ನಂತಹ ಬೇಹುಗಾರಿಕೆ ಆಪ್‌ಗಳು ನಿಮ್ಮ ಫೋನ್‌ನ shutdown.log ಫೈಲ್‌ನಲ್ಲಿ ಕುರುಹುಗಳನ್ನು ಬಿಡುತ್ತವೆ. ಹೆಚ್ಚಿನ ಜನರಿಗೆ ಈ ಫೈಲ್ ಬಗ್ಗೆ ತಿಳಿದಿಲ್ಲ. ಆದರೆ ಇದು ಎಲ್ಲಾ ಐಫೋನ್‌ಗಳಲ್ಲಿದೆ ಮತ್ತು ಫೋನ್ ಆಫ್ ಮಾಡಿದಾಗ ಅದು ಅದರಲ್ಲಿ ರೆಕಾರ್ಡ್ ಆಗುತ್ತದೆ. ಈ ಟ್ಯಾಗ್‌ಗಳಿಂದಾಗಿ, ಹೆಚ್ಚಿನ ಫೋನ್‌ಗಳು ಪೆಗಾಸಸ್‌ನಿಂದ ಸೋಂಕಿಗೆ ಒಳಗಾಗಿವೆಯೇ ಅಥವಾ ಇಲ್ಲವೇ ಎಂಬುದನ್ನು ನಾವು ಕಂಡುಹಿಡಿಯಬಹುದು. ಇದರರ್ಥ ಸೋಂಕಿತ ಬಳಕೆದಾರರು ತಮ್ಮ ಫೋನ್ ಅನ್ನು ಮರುಪ್ರಾರಂಭಿಸಿದರೆ, ಪೆಗಾಸಸ್-ಸಂಬಂಧಿತ ಅಕ್ರಮಗಳು shutdown.log ಫೈಲ್‌ನಲ್ಲಿ ಬಹಿರಂಗಗೊಳ್ಳುತ್ತವೆ ಎಂದಿದ್ದಾರೆ.

- ಕ್ಯಾಸ್ಪರ್ಸ್ಕಿ ಪ್ರಕಾರ, ಪೆಗಾಸಸ್ ಅನ್ನು ತೆಗೆದುಹಾಕುವುದು ಅಷ್ಟು ಸುಲಭವಲ್ಲವಾದರೂ, ಅದನ್ನು ಇನ್ನೂ ತಪ್ಪಿಸಬಹುದು. ಇದನ್ನು ಮಾಡಲು ನೀವು ಕೆಲವು ಹಂತಗಳನ್ನು ಅನುಸರಿಸಬೇಕು ಎಂದು ತಿಳಿಸಲಾಗಿದೆ. ಅಂದರೆ ಪ್ರತಿದಿನ ನಿಮ್ಮ ಐಫೋನ್ ಡಿವೈಸ್‌ ಅನ್ಉ ರೀಸ್ಟಾರ್ಟ್‌ ಮಾಡಿದಾಗ ಸ್ಟೋರೇಜ್‌ ಅನ್ನು ತೆರವುಗೊಳಿಸಿ. iOS16 ಲಾಕ್ ಮೋಡ್ ಅನ್ನು ಸಕ್ರಿಯಗೊಳಿಸಿ ಎಂದು ತಿಳಿಸಲಾಗಿದ್ದು, ಸ್ಪೈವೇರ್‌ನಿಂದ ನಿಮ್ಮ ಸಾಧನವನ್ನು ಸುರಕ್ಷಿತವಾಗಿರಿಸಲು ಇದು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.

- ಲಾಕ್‌ಡೌನ್ ಮೋಡ್ ಬಳಕೆ ಮಾಡಬಹುದು ಎಂದು ಸೂಚಿಸಲಾಗಿದೆ. ಆಪಲ್‌ನ ಲಾಕ್‌ಡೌನ್ ಮೋಡ್ iOS ಮಾಲ್‌ವೇರ್ ಪ್ರವೇಶಿಸುವುದನ್ನು ತಡೆಯುತ್ತದೆ ಎಂದು ಕೆಲವು ವರದಿಗಳು ಹೇಳುತ್ತವೆ. ಇದರೊಂದಿಗೆ ಐಮೆಸೆಜ್‌ ಮತ್ತು ಫೇಸ್‌ಟೈಮ್‌ ಆಫ್ ಮಾಡಲು ಸಹ ಸೂಚಿಸಲಾಗಿದೆ. ಇವೆರಡೂ ಸಹ ಆಕ್ರಮಣಕಾರರು ಶೂನ್ಯ-ಕ್ಲಿಕ್ ದಾಳಿಗಳನ್ನು ಕಳುಹಿಸಲು ಬಳಸಬಹುದು. ಅವುಗಳನ್ನು ಆಫ್ ಮಾಡುವುದರಿಂದ ಸ್ಪೈವೇರ್ ಪಡೆಯುವ ಅಪಾಯವನ್ನು ಕಡಿಮೆ ಮಾಡಬಹುದು.

ನಿಮ್ಮ iOS ಡಿವೈಸ್‌ ಪೆಗಾಸಸ್ ಸ್ಪೈವೇರ್‌ ದಾಳಿಗೆ ಒಳಗಾಗಿದೆಯಾ?, ಚೆಕ್‌ ಮಾಡಿ...

- ಇನ್ನು ನಿಮ್ಮ ಫೋನ್‌ಗೆ ಯಾವುದೇ ಲಿಂಕ್‌ ಬಂದರೂ ಸಹ ಆ ಲಿಂಕ್‌ಗಳೊಂದಿಗೆ ಜಾಗರೂಕರಾಗಿರಿ. ಸಂದೇಶಗಳಲ್ಲಿನ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ, ಏಕೆಂದರೆ ಕೆಲವು ಪೆಗಾಸಸ್ ಬಳಕೆದಾರರು ಎಸ್‌ಎಮ್‌ಎಸ್‌, ಇಮೇಲ್ ಅಥವಾ ಇತರ ಆಪ್‌ಗಳ ಮೂಲಕ ಒನ್‌ ಕ್ಲಿಕ್ ದಾಳಿಗಳನ್ನು ಮಾಡಲು ಮುಂದಾಗಿರುತ್ತಾರೆ. ಜೊತೆಗೆ ನಿಮ್ಮ ಬ್ಯಾಕ್‌ಅಪ್‌ಗಳು ಮತ್ತು ಸಿಸ್‌ಡಿಯಾಗ್‌ಗಳನ್ನು ಪರಿಶೀಲಿಸಿ.

Best Mobiles in India

English summary
It is essential to know if an iOS device is affected by Pegasus spyware. How to know this? How to be careful? See here for more information.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+