IQOO: ಐಕ್ಯೂ Z9 ಟರ್ಬೋ ಸ್ಮಾರ್ಟ್‌ಫೋನ್ ವಿನ್ಯಾಸ ಬಹಿರಂಗ!
ಐಕ್ಯೂ ಸ್ಮಾರ್ಟ್‌ಫೋನ್‌ಗಳು (iqoo smartphone) ವಿವಿಧ ಫೀಚರ್ಸ್ ಆಯ್ಕೆ ಪಡೆದಿದ್ದು, ಬಳಕೆದಾರರಿಗೆ ಭಿನ್ನ ಅನುಭವ ನೀಡಲಿವೆ. ಈ ನಡುವೆ ಐಕ್ಯೂ Z9 ಟರ್ಬೋ ಸ್ಮಾರ್ಟ್‌ಫೋನ್‌ನ (IQOO Z9 Turbo smartphone) ವಿನ್ಯಾಸ ಬಹಿರಂಗ ಆಗಿದ್ದು, ಸ್ಮಾರ್ಟ್‌ಫೋನ್ ವಲಯದಲ್ಲಿ ಹೊಸ ಅಲೆಯನ್ನೇ ಉಂಟು ಮಾಡಿದೆ.
ಹೌದು, ಐಕ್ಯೂ Z9 ಟರ್ಬೋ ಸ್ಮಾರ್ಟ್‌ಫೋನ್ ಬಗ್ಗೆ ಕೆಲವು ಮಾಹಿತಿ ಲೀಕ್ ಆಗಿವೆ. ಈ ಫೋನ್ 6,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, ಸ್ನಾಪ್‌ಡ್ರಾಗನ್ 8s ಜನ್ 3 ಚಿಪ್‌ಸೆಟ್ (Snapdragon 8s Gen 3 chipset) ಬಲ ಪಡೆದುಕೊಂಡಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್ ಏನೆಲ್ಲಾ ಫೀಚರ್ಸ್ ಪಡೆದಿದೆ? ಅನ್ನೋ ಪ್ರಮುಖ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಐಕ್ಯೂ Z9 ಟರ್ಬೋ ಸ್ಮಾರ್ಟ್‌ಫೋನ್: ಐಕ್ಯೂ ಈ ತಿಂಗಳು ಚೀನಾದಲ್ಲಿ ಕೈಗೆಟುಕುವ ಬೆಲೆಯಲ್ಲಿ ಐಕ್ಯೂ Z9 ಟರ್ಬೋ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಲಿದೆ. ಈ ಫೋನ್‌ನ ವಿನ್ಯಾಸ, ಚಿಪ್‌ಸೆಟ್, ಬ್ಯಾಟರಿ ಗಾತ್ರ ಮತ್ತು ಇತರ ವಿವರಗಳನ್ನು ದೃಢೀಕರಿಸುವ ಹೊಸ ಫೋಟೋವನ್ನು ಇದೀಗ ಶೇರ್ ಮಾಡಲಾಗಿದ್ದು, ಚಿತ್ರದ ಪ್ರಕಾರ ಫ್ಲಾಟ್ ಎಡ್ಜ್‌ಗಳು ಮತ್ತು ಸ್ಕ್ವಾರಿಶ್ ಕ್ಯಾಮೆರಾ ಮಾಡ್ಯೂಲ್ ಅನ್ನು ಒಳಗೊಂಡಿದೆ ಎಂದು ತಿಳಿದುಬಂದಿದೆ.
ಈ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಆಯ್ಕೆ ಪಡೆದಿದ್ದು, ಓಐಎಸ್ ಲೋಗೋವನ್ನು ಹೊಂದಿದೆ. ಈ ಕ್ಯಾಮೆರಾ ಮಾಡ್ಯೂಲ್ ಪಕ್ಕದಲ್ಲಿ ಡ್ಯುಯಲ್ ಟೋನ್ ಡ್ಯುಯಲ್ ಎಲ್ಇಡಿ ಫ್ಲ್ಯಾಶ್ ಅನ್ನು ಇರಿಸಲಾಗಿದ್ದು, ವಿನ್ಯಾಸದ ವಿಷಯದಲ್ಲಿ ಇದು ಐಕ್ಯೂ 12 ಸರಣಿಯ ಸ್ಟ್ರಿಪ್ಡ್ ಡೌನ್ ಆವೃತ್ತಿಯಂತೆ ಕಾಣುತ್ತಿದೆ. ಇದರ ಜೊತೆಗೆ ಸ್ನಾಪ್‌ಡ್ರಾಗನ್ 8s ಜನ್ 3 ಚಿಪ್‌ಸೆಟ್ ಅನ್ನು ಹೊಂದಿರುವ ಮೊದಲ ಬ್ಯಾಚ್ ಫೋನ್‌ಗಳಲ್ಲಿ ಒಂದಾಗಿದೆ.

ಐಕ್ಯೂ Z9 ಟರ್ಬೋ ಗ್ರಾಫಿಕ್ಸ್ ಅನ್ನು ನಿರ್ವಹಿಸಲು ಸ್ವತಂತ್ರ ಚಿಪ್, 6K VC ಶಾಖ ಪ್ರಸರಣ ವ್ಯವಸ್ಥೆ ಮತ್ತು ಬೃಹತ್ 6,000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬರುತ್ತದೆ ಎಂದು ತಿಳಿದುಬಂದಿದೆ. ಕೆಲವು ಲೀಕ್ ಮಾಹಿತಿ ಪ್ರಕಾರ ಈ ಸ್ಮಾರ್ಟ್‌ಫೋನ್ 80W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಎಂದು ತಿಳಿದುಬಂದಿದೆ.
ಐಕ್ಯೂ Z9 ಟರ್ಬೋ ಸ್ಮಾರ್ಟ್‌ಫೋನ್ 6.78 ಇಂಚಿನ ಫ್ಲಾಟ್ OLED ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, 1.5K ರೆಸಲ್ಯೂಶನ್ ಮತ್ತು 144Hz ರಿಫ್ರೆಶ್ ದರವನ್ನು ನೀಡುತ್ತದೆ ಎಂದು ವರದಿಗಳು ಬಹಿರಂಗಪಡಿಸಿವೆ. ಇದರ ಜೊತೆಗೆ ಈ ಸ್ಮಾರ್ಟ್‌ಫೋನ್ 12 GB / 16 GB LPDDR5x RAM ಮತ್ತು 512 GB ಇನ್‌ಬಿಲ್ಟ್ UFS 4.0 ಸ್ಟೋರೇಜ್ ಆಯ್ಕೆಯೊಂದಿಗೆ ಬರುವ ನಿರೀಕ್ಷೆಯಿದೆ. ಇದು 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ + 8-ಮೆಗಾಪಿಕ್ಸೆಲ್ (ಅಲ್ಟ್ರಾ-ವೈಡ್) ಡ್ಯುಯಲ್ ಕ್ಯಾಮೆರಾ ವ್ಯವಸ್ಥೆಯನ್ನು ಹೊಂದಿರಬಹುದು.
ಐಕ್ಯೂ ಆನಿವರ್ಸರಿ ಸೇಲ್: ಈ ನಡುವೆ ಐಕ್ಯೂ ಆನಿವರ್ಸರಿ ವಿಶೇಷ ಸೇಲ್ ಅನ್ನು ಆಯೋಜನೆ ಮಾಡಿದೆ. ಈ ಸೇಲ್‌ನಲ್ಲಿ ಐಕ್ಯೂ ಫೋನ್‌ಗಳ ಮೇಲೆ ಭರ್ಜರಿ ಆಫರ್ ಘೋಷಣೆ ಮಾಡಲಾಗಿದೆ. ಅಂದರೆ, ಐಕ್ಯೂ ಭಾರತದಲ್ಲಿ ತನ್ನ ನಾಲ್ಕನೇ ವಾರ್ಷಿಕೋತ್ಸವವನ್ನು ಆಚರಣೆ ಮಾಡುತ್ತಿರುವ ಭಾಗವಾಗಿ ಈ ಸೇಲ್ ಆಯೋಜನೆ ಮಾಡಲಾಗಿದೆ. ಈ ವಿಶೇಷ ಸೇಲ್ ಇಂದಿನಿಂದ ಆರಂಭ ಆಗಿದೆ.

ಈ ಸೇಲ್ ಐಕ್ಯೂ ಇಂಡಿಯಾ ವೆಬ್‌ಸೈಟ್ ಮತ್ತು ಅಮೆಜಾನ್ ನಲ್ಲಿ ಲಭ್ಯ ಇದೆ. ಈ ಸೇಲ್‌ನಲ್ಲಿ ಐಕ್ಯೂ 12 ವಾರ್ಷಿಕೋತ್ಸವ ಆವೃತ್ತಿ ಡೆಸರ್ಟ್ ರೆಡ್ ಬಣ್ಣದ ವೇರಿಯಂಟ್ ಅನ್ನು 49,999 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಇದರ ಸಾಮಾನ್ಯ ದರ 52,999 ರೂ.ಗಳು. ಹಾಗೆಯೇ ಐಕ್ಯೂ 11 ಸ್ಮಾರ್ಟ್‌ಫೋನ್ ಅನ್ನು 25,000ರೂ.ಗಳ ರಿಯಾಯಿತಿ ಜೊತೆಗೆ 41,999 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಇದರ ಸಾಮಾನ್ಯ ಬೆಲೆ ರೂ. 64,999ರೂ.ಗಳಾಗಿದೆ.


Click it and Unblock the Notifications








