OnePlus: ಒನ್‌ಪ್ಲಸ್ ನಾರ್ಡ್ N30 SE 5G ಸ್ಮಾರ್ಟ್‌ಫೋನ್ ಲಾಂಚ್! 50MP ಕ್ಯಾಮೆರಾ, ಬೆಲೆ ಎಷ್ಟು?
ಒನ್‌ಪ್ಲಸ್ ಸ್ಮಾರ್ಟ್‌ಫೋನ್‌ಗಳು (OnePlus smartphone) ದೊಡ್ಡ ಪ್ರಮಾಣದ ಗ್ರಾಹಕರನ್ನು ಸೆಳೆದಿವೆ. ಈ ನಡುವೆ ಭಿನ್ನ ಫೋನ್‌ಗಳನ್ನು ಅನಾವರಣ ಮಾಡಿಕೊಂಡು ಬರುತ್ತಿರುವ ಒನ್‌ಪ್ಲಸ್ ಇದೀಗ ಮತ್ತೊಂದು ಹೊಸ ಸ್ಮಾರ್ಟ್‌ಫೋನ್ ಅನ್ನು ಇಂದು ಅನಾವರಣ ಮಾಡಿದೆ.
ಹೌದು, ಆಗಾಗ್ಗೆ ವಿಶೇಷ ಫೀಚರ್ಸ್ ಆಯ್ಕೆಯೊಂದಿಗೆ ಉತ್ತಮವಾದ ಫೋನ್‌ಗಳನ್ನು ನೀಡುತ್ತಿರುವ ಒನ್‌ಪ್ಲಸ್ ಇದೀಗ ಒನ್‌ಪ್ಲಸ್ ನಾರ್ಡ್ N30 SE 5G ಸ್ಮಾರ್ಟ್‌ಫೋನ್ (OnePlus Nord N30 SE 5G smartphone) ಅನ್ನು ಲಾಂಚ್ ಮಾಡಿದೆ. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6020 ಪ್ರೊಸೆಸರ್ ಬಲ ಹಾಗೂ 50 ಮೆಗಾಪಿಕ್ಸೆಲ್‌ನೊಂದಿಗೆ ಡ್ಯುಯಲ್ ರಿಯರ್ ಕ್ಯಾಮೆರಾ ಆಯ್ಕೆ ಪಡೆದಿದೆ. ಆಗಿದ್ರೆ, ಈ ಸ್ಮಾರ್ಟ್‌ಫೋನ್‌ನ ಪ್ರಮುಖ ಫೀಚರ್ಸ್ ಹಾಗೂ ಬೆಲೆ ವಿವರ ಇಲ್ಲಿದೆ ನೋಡಿ.

ಒನ್‌ಪ್ಲಸ್ ನಾರ್ಡ್ N30 SE 5G ಸ್ಮಾರ್ಟ್‌ಫೋನ್ ಫೀಚರ್ಸ್: ಚೀನಾದ ಸ್ಮಾರ್ಟ್‌ಫೋನ್ ತಯಾರಕ ಒನ್‌ಪ್ಲಸ್ ಕಳೆದ ವರ್ಷ ಯುಎಸ್ ನಲ್ಲಿ ನಾರ್ಡ್ N30 5G (Nord N30 5G) ಅನ್ನು ಲಾಂಚ್ ಮಾಡಿತ್ತು. ಈಗ ಅದೇ ಸ್ಮಾರ್ಟ್‌ಫೋನ್‌ನ ವಿಶೇಷ ಆವೃತ್ತಿಯನ್ನು ಬಿಡುಗಡೆ ಅನಾವರಣ ಮಾಡಿದೆ. ಈ ಫೋನ್ 2400 x 1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.72 ಇಂಚಿನ FHD+ LCD ಡಿಸ್‌ಪ್ಲೇ ಆಯ್ಕೆ ಪಡೆದಿದೆ.
ಒನ್‌ಪ್ಲಸ್ ನಾರ್ಡ್ N30 SE 5G ಸ್ಮಾರ್ಟ್‌ಫೋನ್ ಪ್ರೊಸೆಸರ್ ಮಾಹಿತಿ: ಈ ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6020 7nm SoC ನಲ್ಲಿ ಕಾರ್ಯನಿರ್ವಹಿಸಲಿದ್ದು, ಮಾಲಿ G57 MC2 ಗ್ರಾಫಿಕ್ಸ್ ಕಾರ್ಡ್ ಬಲದೊಂದಿಗೆ ಉತ್ತಮವಾಗಿ ಕೆಲಸ ಮಾಡಲಿದೆ. ಅಲ್ಲದೆ 4GB RAM ಮತ್ತು 128GB ಇಂಟರ್ ಸ್ಟೋರೇಜ್‌ನಲ್ಲಿ ಈ ಫೋನ್ ಲಭ್ಯ ಇದ್ದು, ಮೈಕ್ರೋ ಎಸ್‌ಡಿ ಕಾರ್ಡ್ ಬಲದೊಂದಿಗೆ ಸ್ಟೋರೇಜ್ ಅನ್ನು ವಿಸ್ತರಣೆ ಮಾಡಬಹುದಾಗಿದೆ. ಮತ್ತು ಈ ಫೋನ್ ಆಂಡ್ರಾಯ್ಡ್ 13 ನಲ್ಲಿ ಆಕ್ಸಿಜನ್ ಓಎಸ್ 13.1 ಅನ್ನು ರನ್ ಮಾಡಲಿದೆ.

ಒನ್‌ಪ್ಲಸ್ ನಾರ್ಡ್ N30 SE 5G ಸ್ಮಾರ್ಟ್‌ಫೋನ್ ಕ್ಯಾಮೆರಾ ರಚನೆ: ಈ ಫೋನ್ 50 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಆಯ್ಕೆ ಪಡೆದಿದ್ದು, 1/2.76-ಇಂಚಿನ ಸೆನ್ಸರ್, f/1.8 ದ್ಯುತಿರಂಧ್ರ, ಎಲ್‌ಇಡಿ ಫ್ಲ್ಯಾಶ್ ಮತ್ತು f/2.4 ದ್ಯುತಿರಂಧ್ರದೊಂದಿಗೆ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ ಅನ್ನು ಹೊಂದಿದೆ. ಹಾಗೆಯೇ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಈ ಫೋನ್
f/2.0 ದ್ಯುತಿರಂಧ್ರದೊಂದಿಗೆ 8 ಮೆಗಾಪಿಕ್ಸೆಲ್ ಕ್ಯಾಮೆರಾ ಆಯ್ಕೆ ಪಡೆದಿದೆ.
ಒನ್‌ಪ್ಲಸ್ ನಾರ್ಡ್ N30 SE 5G ಸ್ಮಾರ್ಟ್‌ಫೋನ್ ಬ್ಯಾಟರಿ ಹಾಗೂ ಇತರೆ: ಈ ಸ್ಮಾರ್ಟ್‌ಫೋನ್ 33W ಸೂಪರ್‌ವೂಕ್ ಚಾರ್ಜಿಂಗ್ ತಂತ್ರಜ್ಞಾನದೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, 5G, ಡ್ಯುಯಲ್ 4G VoLTE, ಬ್ಲೂಟೂತ್ ಆವೃತ್ತಿ 5.3, ಯುಎಸ್‌ಬಿ ಟೈಪ್-ಸಿ, ಎನ್‌ಎಫ್‌ಸಿ, 3.5mm ಆಡಿಯೋ ಜ್ಯಾಕ್, ಸ್ಟಿರಿಯೊ ಸ್ಪೀಕರ್‌ಗಳು, ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಸೇರಿದಂತೆ ಉತ್ತಮ ಕನೆಕ್ಟಿವಿಟಿ ಫೀಚರ್ಸ್ ಪಡೆದಿದೆ.

ಒನ್‌ಪ್ಲಸ್ ನಾರ್ಡ್ N30 SE 5G ಸ್ಮಾರ್ಟ್‌ಫೋನ್ ಬೆಲೆ ಹಾಗೂ ಲಭ್ಯತೆ: ಈ ಸ್ಮಾರ್ಟ್‌ಫೋನ್ 4GB RAM ಮತ್ತು 128GB ಇಂಟರ್ ಸ್ಟೋರೇಜ್‌ನ ಒಂದೇ ವೇರಿಯಂಟ್‌ನಲ್ಲಿ ಲಭ್ಯ ಇದ್ದು, ಯುಎಇಯಲ್ಲಿ AED 599 ಬೆಲೆ ಪಡೆದಿದೆ. ಅಂದರೆ ಭಾರತದಲ್ಲಿ ಅಂದಾಜು 13,558 ರೂ.ಗಳಾಗಿರಬಹುದು. ಈ ಫೋನ್ ಬ್ಲ್ಯಾಕ್ ಸ್ಯಾಟಿನ್ ಮತ್ತು ಸಯಾನ್ ಸ್ಪಾರ್ಕಲ್ ಬಣ್ಣ ಆಯ್ಕೆಗಳಲ್ಲಿ ಕಂಡುಬಂದಿದೆ. ಪ್ರಸ್ತುತ, ಭಾರತ ಸೇರಿದಂತೆ ಇತರ ದೇಶಗಳಲ್ಲಿ ಇದರ ಲಭ್ಯತೆಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ.


Click it and Unblock the Notifications








