Home
ಸಂಗೀತ

Foldable phone: ಶಾಕಿಂಗ್‌... ಈ ಕಂಪನಿಗಳಿಂದ ಫೋಲ್ಡಬಲ್ ಫೋನ್ ಯೋಜನೆ ಸ್ಥಗಿತ?

ಫೋಲ್ಡಬಲ್‌ ಸ್ಮಾರ್ಟ್‌ಫೋನ್‌ಗಳು (Foldable smartphone) ಇಂದು ಸ್ಮಾರ್ಟ್‌ಫೋನ್ ವಲಯದಲ್ಲಿ ದೊಡ್ಡ ಸಂಚಲನವನ್ನೇ ಉಂಟು ಮಾಡಿವೆ. ಸಾಕಷ್ಟು ಜನರು ಈ ಫೋನ್‌ ಖರೀದಿ ಮಾಡಲು ಆಲೋಚನೆ ಮಾಡುತ್ತಿರುವ ಬೆನ್ನಲ್ಲೇ ಶಾಕಿಂಗ್‌ ವರದಿಯೊಂದು ಹೊರಬಿದ್ದಿದೆ.

ಹೌದು, ಸ್ಮಾರ್ಟ್‌ಫೋನ್‌ಗಳಲ್ಲಿ ಮುಂದಿನ ಹಾಗೂ ಹೊಸ ಆವಿಷ್ಕಾರ ಎಂದು ಶ್ಲಾಘಿಸಲಾದ ಫೋಲ್ಡಬಲ್‌ ಫೋನ್ ಮಾರುಕಟ್ಟೆಯು ಕೆಲವು ಅನಿರೀಕ್ಷಿತ ಸವಾಲುಗಳನ್ನು ಎದುರಿಸುತ್ತಿದೆ ಎಂದು ತಿಳಿದುಬಂದಿದೆ. ಈ ಕಾರಣಕ್ಕೆ ಮೂರು ಕಂಪೆನಿಗಳು ಈಗ ಈ ಫೋಲ್ಡಬಲ್‌ ಫೋನ್‌ ನಿರ್ಮಾಣ ಕಾರ್ಯದಿಂದ ಹಿಂದೆ ಕಾಲಿಟ್ಟಿವೆ ಎನ್ನಲಾಗಿದೆ. ಹಾಗಿದ್ರೆ ಯಾವೆಲ್ಲಾ ಕಂಪೆನಿಗಳು ಈ ನಿರ್ಧಾರ ಮಾಡಿವೆ?, ಇದಕ್ಕೆ ಇತರೆ ಕಾರಣಗಳು ಏನು ಅನ್ನೋದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

Foldable phone: ಶಾಕಿಂಗ್‌... ಈ ಕಂಪನಿಗಳಿಂದ ಫೋಲ್ಡಬಲ್ ಫೋನ್ ಯೋಜನೆ ಸ್ಥಗಿತ?

ಫೋಲ್ಡಬಲ್‌ ಫೋನ್‌: ಟಿಪ್‌ಸ್ಟರ್ ಡಿಜಿಟಲ್ ಚಾಟ್ ಸ್ಟೇಷನ್ (DCS) ಪ್ರಕಾರ, ಕನಿಷ್ಠ ಮೂರು ಪ್ರಮುಖ ಬ್ರಾಂಡ್‌ಗಳು ತಮ್ಮ ಫೋಲ್ಡಬಲ್‌ ಸ್ಮಾರ್ಟ್‌ಫೋನ್ ಯೋಜನೆಗಳನ್ನು ಸ್ಥಗಿತಗೊಳಿಸಬಹುದು ಅಥವಾ ಫೋನ್ ಅನ್ನು ತಯಾರು ಮಾಡುವ ಕಾರ್ಯವನ್ನು ವಿಳಂಬಗೊಳಿಸಬಹುದು ಎಂದು ತಿಳಿದುಬಂದಿದೆ. ಅದರಂತೆ ವಿಶ್ವದಾದ್ಯಂತ ಅಗ್ರ ಐದು ಸ್ಮಾರ್ಟ್‌ಫೋನ್ ತಯಾರಕರಲ್ಲಿ ಫೋಲ್ಡಬಲ್‌ ಸ್ಮಾರ್ಟ್‌ಫೋನ್‌‌ ತಯಾರಿಕಾ ಪ್ರಯತ್ನಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ ಎಂದು ಡಿಸಿ‌ಎಸ್‌ ವರದಿ ಮಾಡಿದೆ. ಇದರೊಂದಿಗೆ ಹೆಚ್ಚುವರಿಯಾಗಿ, ಎರಡು ಕಂಪನಿಗಳು ಫ್ಲಿಪ್-ಶೈಲಿಯ ಫೋಲ್ಡಬಲ್ ಫೋನ್ ಯೋಜನೆಗಳನ್ನು ತಡೆಹಿಡಿದಿವೆ ಎಂದು ಹೇಳಲಾಗಿದೆ.

ನಿಖರವಾಗಿ ಈ ಯೋಜನೆ ಸ್ಥಗಿತಕ್ಕೆ ಅಥವಾ ಮುಂದೂಡಲು ಕಾರಣಗಳು ಇನ್ನೂ ಸ್ಪಷ್ಟವಾಗಿಲ್ಲ, ಜೊತೆಗೆ ನಿರ್ದಿಷ್ಟ ಬ್ರ್ಯಾಂಡ್‌ಗಳನ್ನು ಟಿಪ್‌ಸ್ಟರ್ ಬಹಿರಂಗಪಡಿಸಿಲ್ಲ. ಅದಾಗ್ಯೂ ಫೋಲ್ಡ ಮಾಡಬಹುದಾದ ವಿಭಾಗದಲ್ಲಿ ಆಂಡ್ರಾಯ್ಡ್‌ ತಯಾರಕರು ಪ್ರಾಬಲ್ಯ ತೋರುತ್ತಿದ್ದಾರೆ ಇದರಲ್ಲಿ ಸ್ಯಾಮ್‌ಸಂಗ್ (Samsung) ಅಗ್ರಸ್ಥಾನ ಪಡೆದಿದೆ. ಈ ಮೂಲಕ ಅತಿದೊಡ್ಡ ಮಾರುಕಟ್ಟೆ ಪಾಲನ್ನು ಹೊಂದಿದೆ ಅಲ್ಲದೆ ಟ್ರಿಪಲ್-ಫೋಲ್ಡಿಂಗ್ ಮಾಡೆಲ್ (triple-folding model) ಸೇರಿದಂತೆ Z- ಸರಣಿಯ ಫೋಲ್ಡಬಲ್‌ ಫೋನ್‌ಗಳ ಮೇಲೂ ಕೆಲಸ ಮಾಡುತ್ತಿದೆ ಎನ್ನಲಾಗಿದೆ.

Foldable phone: ಶಾಕಿಂಗ್‌... ಈ ಕಂಪನಿಗಳಿಂದ ಫೋಲ್ಡಬಲ್ ಫೋನ್ ಯೋಜನೆ ಸ್ಥಗಿತ?

ಈ ನಡುವೆ ಹುವಾವೇ (Huawei) ಕೂಡ ಟ್ರಿಪಲ್-ಫೋಲ್ಡಿಂಗ್ ಶೈಲಿಯ ಫೋನ್ ಆಲೋಚನೆಯನ್ನು ಬದಲಾಯಿಸುತ್ತಿದೆ ಎಂದು ಹೇಳಲಾಗಿದೆ. ಈ ವಿಭಾಗದಲ್ಲಿ ಒಪ್ಪೋ ಮತ್ತು ವಿವೋ (Oppo and Vivo) ಸೇರಿದಂತೆ ಇತರ ಪ್ರಮುಖ ಪ್ಲೇಯರ್‌ಗಳು ಸಹ ಇದ್ದಾರೆ. ಆದರೆ ಒಪ್ಪೋ ಮತ್ತು ವಿವೋ ಫೋಲ್ಡಬಲ್ ಮಾರುಕಟ್ಟೆಯಿಂದ ಹಿಂದೆ ಸರಿಯಲು ಮುಂದಾಗಿವೆ ಎಂದು ವದಂತಿಗಳಿವೆ. ಕಳೆದ ವರ್ಷ ಈ ವಿಭಾಗದಲ್ಲಿ ಅವರ ಮಾರುಕಟ್ಟೆ ಷೇರಿನಲ್ಲಿ ಗಣನೀಯ ಕುಸಿತ ಕಂಡ ಹಿನ್ನೆಲೆ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ವರದಿಗಳಲ್ಲಿ ಉಲ್ಲೇಖ ಮಾಡಲಾಗಿದೆ.

ಆದರೂ ಸಹ ಈ ಎರಡೂ ಬ್ರಾಂಡ್‌ಗಳಿಂದ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಗಳಿಲ್ಲ. ಈ ವದಂತಿಗಳು ನಿಜವಾದರೆ ಒನ್‌ಪ್ಲಸ್‌ನ (OnePlus) ಫೋಲ್ಡ ಮಾಡಬಹುದಾದ ಡಿವೈಸ್‌ಗಳ ಮೇಲೂ ಪರಿಣಾಮ ಬೀರಬಹುದು ಎನ್ನಲಾಗಿದೆ. ಯಾಕೆಂದರೆ ಅವರು ಒಪ್ಪೋ ಮೇಲೆ ಹೆಚ್ಚು ಅವಲಂಬಿತವಾಗಿದ್ದು, ಈಗಾಗಲೇ ತಮ್ಮ ಬ್ರಾಂಡ್ ಹೆಸರಿನಲ್ಲಿ ಕೇವಲ ಒಂದು ಫೋಲ್ಡಬಲ್‌ ಫೋನ್‌ ಅನ್ನು ಮಾತ್ರ ಲಾಂಚ್ ಮಾಡಿದ್ದಾರೆ.

Foldable phone: ಶಾಕಿಂಗ್‌... ಈ ಕಂಪನಿಗಳಿಂದ ಫೋಲ್ಡಬಲ್ ಫೋನ್ ಯೋಜನೆ ಸ್ಥಗಿತ?

ಈ ನಡವೆ ಆಪಲ್‌ನ ವಿಚಾರ ಸಹ ಮುನ್ನೆಲೆಗೆ ಬಂದಿದೆ. ಆಪಲ್‌ನ ಫೋಲ್ಡಬಲ್‌ ಐಫೋನ್ ಯೋಜನೆಯು ದುರ್ಬಲವಾದ ಡಿಸ್‌ಪ್ಲೇ ಸಮಸ್ಯೆಗಳಿಂದಾಗಿ ಸವಾಲುಗಳನ್ನು ಎದುರಿಸುತ್ತಿದೆ ಎಂದು ವರದಿಯಾಗಿದೆ. ಫೋಲ್ಡಬಲ್ ಫೋನ್‌ಗಳು ವಿಶೇಷ ರೂಪದ ಅಂಶಗಳು ಮತ್ತು ಸಾಧ್ಯತೆಗಳನ್ನು ನೀಡುವ ಹಿನ್ನೆಲೆ ಅವು ದುಬಾರಿಯಾಗಿರಲಿವೆ. ಇದರಿಂದಾಗಿ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಕೆಲವು ಬದಲಾವಣೆಗಳು ಅನಿರೀಕ್ಷಿತವಾಗಿ ನಡೆಯುತ್ತಲೇ ಇರುತ್ತವೆ.

ಈ ಅನಿರೀಕ್ಷಿತ ಅಡಚಣೆಯು ಆಪಲ್‌ನ ಫೋಲ್ಡಬಲ್‌ ಪ್ರಯತ್ನಗಳಿಗೆ ವಿಳಂಬದ ಸಮಸ್ಯೆ ನೀಡಲಿದೆ. ಆದರೂ ಸಹ ಆಪಲ್‌ನಿಂದ ಈ ಫೋನ್‌ಗಳು 2026 ಮತ್ತು 2027 ರ ನಡುವೆ ಆಗಬಹುದು ಎನ್ನಲಾಗಿದೆ. ಈ ಮೂಲಕ ಕಂಪನಿಯು ಫೋಲ್ಡ ಮಾಡಬಹುದಾದ ತಂತ್ರಜ್ಞಾನದ ಜಟಿಲತೆಗಳನ್ನು ನ್ಯಾವಿಗೇಟ್ ಮಾಡುವ ಕೆಲಸ ಮಾಡಲಿದೆ. ನಿಮಗೆ ಫೋಲ್ಡಬಲ್‌ ಸ್ಮಾರ್ಟ್‌ಫೋನ್‌ಗ ಬಗ್ಗೆ ಇಂಚಿಂಚು ಮಾಹಿತಿ ಬೇಕು ಎಂದುಕೊಂಡರೆ ಗಿಜ್‌ಬಾಟ್‌ನೊಂದಿಗೆ ಸಂಪರ್ಕದಲ್ಲಿರಿ.

Best Mobiles in India

English summary
According to tipster Digital Chat Station (DCS), at least three major brands may either shelve their foldable smartphone plans or delay the production of the phone.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+