Home
ಸುದ್ದಿಜಾಲ

Realme: 8 GB RAM ಆಯ್ಕೆಯ ಕರ್ವ್ಡ ಡಿಸ್‌ಪ್ಲೇ ಇರುವ ಈ ಫೋನ್‌ ಬೆಲೆಯಲ್ಲಿ ಇಳಿಕೆ! ಭರ್ಜರಿ ಉಳಿತಾಯ

ರಿಯಲ್‌ಮಿ ಫೋನ್‌ಗಳು (Realme phone) ಸಾಮಾನ್ಯವಾಗಿ ಅಗ್ಗದ ಬೆಲೆಯಲ್ಲಿ ಅತ್ಯುತ್ತಮವಾದ ಫೀಚರ್ಸ್‌ ನೀಡುವ ಮೂಲಕ ಬಳಕೆದಾರರಿಗೆ ಭಿನ್ನ ಅನುಭವ ನೀಡುವ ಕೆಲಸ ಮಾಡುತ್ತವೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಲಾಂಚ್‌ ಆಗುತ್ತಿರುವ ಫೋನ್‌ಗಳು ವಿಶೇಷ ಶೈಲಿಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ಭಾರತದಲ್ಲಿನ ಸಾಕಷ್ಟು ಗ್ರಾಹಕರ ಮನಸೆಳೆದಿವೆ. ಈ ನಡುವೆ ಇತ್ತೀಚೆಗಷ್ಟೇ ಲಾಂಚ್‌ ಆಗಿರುವ ಈ ರಿಯಲ್‌ಮಿ ಫೋನ್‌ಗೆ ಆಫರ್ ನೀಡಲಾಗಿದೆ.

ಹೌದು, ಹೊಸ ಫೋನ್‌ಗಳನ್ನು ಖರೀದಿ ಮಾಡುವುದು ಬಹಳಷ್ಟು ಮಂದಿಗೆ ಕಷ್ಟ. ಆದರೆ ನೀವು ಈ ಹೊಸ ರಿಯಲ್‌ಮಿ 11 ಪ್ರೊ 5G ಸ್ಮಾರ್ಟ್‌ಫೋನ್‌ (Realme 11 Pro 5G smartphone) ಅನ್ನು ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಈ ಸ್ಮಾರ್ಟ್‌ಫೋನ್‌ ಬರೋಬ್ಬರಿ 8 GB RAM ಆಯ್ಕೆ ಹೊಂದಿದ್ದು, 100 ಮೆಗಾಪಿಕ್ಸೆಲ್‌ನ ಮುಖ್ಯ ಕ್ಯಾಮೆರಾವನ್ನೂ ಸಹ ಪಡೆದಿಕೊಂಡಿದೆ. ಹಾಗಿದ್ರೆ, ಈ ಫೋನ್‌ಗೆ ಇರುವ ಆಫರ್ ಬೆಲೆ ಹಾಗೂ ಈ ಫೋನ್‌ನ ಪ್ರಮುಖ ಫೀಚರ್ಸ್‌ ಏನು ಅನ್ನೋದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

8 GB RAM ಆಯ್ಕೆಯ ಕರ್ವ್ಡ ಡಿಸ್‌ಪ್ಲೇ ಇರುವ ಈ ಫೋನ್‌ ಬೆಲೆಯಲ್ಲಿ ಇಳಿಕೆ!

ರಿಯಲ್‌ಮಿ 11 ಪ್ರೊ 5G ಡಿಸ್‌ಪ್ಲೇ ವಿವರ: ಈ ಹೊಸ ಸ್ಮಾರ್ಟ್‌ಫೋನ್‌ನ ಆಫರ್ ಬೆಲೆ ಬಗ್ಗೆ ತಿಳಿಯುವ ಮುನ್ನ ಇದರ ಕೆಲವು ಫೀಚರ್ಸ್ ಕಡೆ ಕಣ್ಣಾಯಿಸೋಣ. ಅದರಂತೆ ಈ ಸ್ಮಾರ್ಟ್‌ಫೋನ್ 6.7 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದ್ದು, 1080 x 2412 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದೊಂದಿಗೆ 120Hz ರಿಫ್ರೆಶ್‌ ರೇಟ್‌ 950 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆ ಹಾಗೂ 394 ppi ಸಾಂದ್ರತೆ ಹೊಂದಿದೆ.

ರಿಯಲ್‌ಮಿ 11 ಪ್ರೊ 5G ಪ್ರೊಸೆಸರ್‌ ಮಾಹಿತಿ: ಈ ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 7050 (6 nm) ಪ್ರೊಸೆಸರ್‌ ಬಲ ಹೊಂದಿದ್ದು, ಮಾಲಿ G68 MC4 ಗ್ರಾಫಿಕ್ಸ್ ಕಾರ್ಡ್‌ ಶಕ್ತಿಯೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಣೆ ಮಾಡಲಿದೆ. ಇದರೊಂದಿಗೆ ಆಂಡ್ರಾಯ್ಡ್ 13, ರಿಯಲ್‌ಮಿ ಯುಐ 4.0 ಓಎಸ್‌ ಅನ್ನು ರನ್‌ ಮಾಡಲಿದೆ. ಜೊತೆಗೆ 128GB ಇಂಟರ್‌ ಸ್ಟೋರೇಜ್‌ ಆಯ್ಕೆ ಹಾಗೂ 8GB RAM ಸ್ಟೋರೇಜ್‌ನಲ್ಲಿ ಈ ಫೋನ್‌ ಕಾಣಿಸಿಕೊಂಡಿದೆ.

8 GB RAM ಆಯ್ಕೆಯ ಕರ್ವ್ಡ ಡಿಸ್‌ಪ್ಲೇ ಇರುವ ಈ ಫೋನ್‌ ಬೆಲೆಯಲ್ಲಿ ಇಳಿಕೆ!

ರಿಯಲ್‌ಮಿ 11 ಪ್ರೊ 5G ಕ್ಯಾಮೆರಾ ರಚನೆ: ಈ ಫೋನ್‌ ಡ್ಯುಯಲ್‌ ರಿಯರ್ ಕ್ಯಾಮೆರಾ 100 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾ, 2 ಮೆಗಾಪಿಕ್ಸೆಲ್‌ ಸೆಕೆಂಡರಿ ಕ್ಯಾಮೆರಾ ಆಯ್ಕೆ ಪಡೆದಿದ್ದು, ಎಲ್‌ಇಡಿ ಫ್ಲ್ಯಾಶ್, ಹೆಚ್‌ಡಿಆರ್‌, ಪನೋರಮಾ ಫೀಚರ್ಸ್‌ ಆಯ್ಕೆ ಪಡೆದುಕೊಂಡಿವೆ. ಇದರೊಂದಿಗೆ 16 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿದ್ದು, 1080p@30fps ನಲ್ಲಿ ವಿಡಿಯೋ ರೆಕಾರ್ಡ್‌ ಮಾಡಲು ಅನುಮತಿಸುತ್ತದೆ.

ರಿಯಲ್‌ಮಿ 11 ಪ್ರೊ 5G ಬ್ಯಾಟರಿ ಹಾಗೂ ಇತರೆ: ಈ ಸ್ಮಾರ್ಟ್‌ಫೋನ್ 5000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, ಇದು 67W ವೈರ್ಡ್ ಚಾರ್ಜಿಂಗ್ ಬೆಂಬಲ ಪಡೆದಿದೆ. ಇದರೊಂದಿಗೆ ವೈ-ಫೈ 802.11 a/b/g/n/ac/6, ಡ್ಯುಯಲ್-ಬ್ಯಾಂಡ್, ಬ್ಲೂಟೂತ್ ಆವೃತ್ತಿ 5.2, A2DP, LE, aptX ಹೆಚ್‌ಡಿ, ಜಿಪಿಎಸ್, ಗೆಲಿಲಿಯೊ, ಗ್ಲೋನಾಸ್, ಬಿಡಿಎಸ್‌, ಯುಎಸ್‌ಬಿ ಟೈಪ್-ಸಿ 2.0 ಕನೆಕ್ಟಿವಿಟಿ ಬೆಂಬಲ ಪಡೆದಿದೆ.

8 GB RAM ಆಯ್ಕೆಯ ಕರ್ವ್ಡ ಡಿಸ್‌ಪ್ಲೇ ಇರುವ ಈ ಫೋನ್‌ ಬೆಲೆಯಲ್ಲಿ ಇಳಿಕೆ!

ರಿಯಲ್‌ಮಿ 11 ಪ್ರೊ 5G ಆಫರ್ ಮಾಹಿತಿ: ಇನ್ನು ಈ ಫೋನ್‌ನ ಮುಖ್ಯ ವಿಚಾರದ ಬಗ್ಗೆ ತಿಳಿಯುವುದಾದರೆ ಈ ಫೋನ್ 25,999 ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, ನೀವೀಗ ಇದನ್ನು 21,999ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಯಾಕೆಂದರೆ ಈ ಫೋನ್‌ ಮೇಲೆ ಫ್ಲಿಪ್‌ಕಾರ್ಟ್‌(Flipkart) 15% ರಿಯಾಯಿತಿ ಘೋಷಣೆ ಮಾಡಿದೆ. ಇದರೊಂದಿಗೆ ಫ್ಲಿಪ್‌ಕಾರ್ಟ್‌ ಆಕ್ಸಿಸ್‌ ಬ್ಯಾಂಕ್‌ ಕಾರ್ಡ್ ಬಳಕೆ ಮಾಡಿಕೊಂಡು ಖರೀದಿ ಮಾಡಿದ್ರೆ 5% ಕ್ಯಾಶ್‌ಬ್ಯಾಕ್, 3,667 ರೂ.ಗಳ ಆರಂಭಿಕ ಇಎಮ್‌ಐ ಆಯ್ಕೆ ಸೇರಿದಂತೆ ಅನೇಕ ಕೊಡುಗೆಗಳನ್ನು ನೀಡಲಾಗುತ್ತದೆ.

Best Mobiles in India

English summary
Realme 11 Pro 5G smartphone can be purchased at an offer price. This smartphone has an 8 GB RAM option and also gets a 100 megapixel main camera.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+