Just In
- 50 min ago
ನಾಯ್ಸ್ ಬಡ್ಸ್ ಕಾಂಬ್ಯಾಟ್ ಇಯರ್ಬಡ್ಸ್ ಅನಾವರಣ; ದೀರ್ಘ ಬ್ಯಾಟರಿ ಬ್ಯಾಕಪ್!
- 1 hr ago
ಕೈಗೆಟಕುವ ಬೆಲೆಯಲ್ಲಿ ಎಂಟ್ರಿ ಕೊಟ್ಟ ಇನ್ಫಿನಿಕ್ಸ್ ನೋಟ್ 12i! ಸ್ಟೈಲಿಶ್ ಲುಕ್!
- 2 hrs ago
Co-Win ಬಗ್ಗೆ ನಿಮಗೆಲ್ಲಾ ಗೊತ್ತು U-WIN ಬಗ್ಗೆ ಗೊತ್ತಾ!?: ಇಲ್ಲಿದೆ ಸಂಪೂರ್ಣ ವಿವರ!
- 3 hrs ago
ಭಾರತಕ್ಕೆ ಕೋಕ-ಕೋಲಾ ಫೋನ್ ಬರುತ್ತೆ!..ನೋಡೊಕೆ ಯಾವ ತರಹ ಇದೆ ಗೊತ್ತಾ?
Don't Miss
- Movies
ಪುಟ್ಟಕ್ಕನ ಮನೆಗೆ ಆಗಮಿಸಿದ ರಾಜಿ; ಲಗ್ನ ಪತ್ರಿಕೆಯಲ್ಲಿ ರಾಜಿ ಹೆಸರು ಹಾಕುತ್ತಾಳಾ ಸ್ನೇಹಾ?
- News
ಕಡಿಮೆ ಬಡ್ಡಿದರದಲ್ಲಿ ರೈತರಿಗೆ 20 ಲಕ್ಷ ಸಾಲ ಘೋಷಿಸಿದ ಸಿದ್ದರಾಮಯ್ಯ
- Automobiles
ಮಂಗಳೂರಿನಲ್ಲಿ ಐಕಾನಿಕ್ ವಿಲ್ಲೀಸ್ ಜೀಪ್ನಂತೆ ಮಾಡಿಫೈಗೊಂಡ ಮಹೀಂದ್ರಾ ಥಾರ್
- Finance
ಬಜೆಟ್ 2023: ಗಣರಾಜ್ಯೋತ್ಸವ ದಿನದಂದೇ ಬಜೆಟ್ ಹಲ್ವಾ ಸಮಾರಂಭ
- Sports
ICC ODI Rankings: ಏಕದಿನ ರ್ಯಾಂಕಿಂಗ್ನಲ್ಲಿ ಅಗ್ರ 10ರೊಳಗೆ ಶುಭ್ಮನ್ ಗಿಲ್; ಕೊಹ್ಲಿ ಸ್ಥಾನ ಕುಸಿತ
- Lifestyle
ಗರ್ಭಾವಸ್ಥೆಯಲ್ಲಿ ಕಾಡುವ ಮೂತ್ರ ಸೋಂಕುUTI: ತಡೆಗಟ್ಟುವುದು ಹೇಗೆ, ಚಿಕಿತ್ಸೆಯೇನು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
4,000ರೂ ಪ್ರೈಸ್ ಟ್ಯಾಗ್‌ನಲ್ಲಿ ಸದ್ಯ ಲಭ್ಯವಿರುವ 5 ಬೆಸ್ಟ ಬ್ಲೂಟೂತ್ ಇಯರ್‌ಫೋನ್‌ಗಳು!
ಪ್ರಸ್ತುತ ಬಹುತೇಕ ಸ್ಮಾರ್ಟ್‌ಪೋನ್ ಬಳಕೆದಾರರು ಜರ್ನಿ ಸಮಯದಲ್ಲಿ ಇಯರ್‌ಫೋನ್‌ನಲ್ಲಿ ಮ್ಯೂಸಿಕ್ ಕೇಳಲು ಇಷ್ಟಪಡುತ್ತಾರೆ. ಹಾಗಾಗಿ ಯಾವುದೋ ಒಂದು ಇಯರ್‌ಫೋನ್ ಖರೀದಿಸುವುದಿಲ್ಲ. ಬದಲಿಗೆ ಗ್ರಾಹಕರು ಗುಣಮಟ್ಟದ ಇಯರ್‌ಫೋನ್ ಖರೀದಿಸಲು ಮುಂದಾಗುತ್ತಾರೆ. ಸದ್ಯ ಟ್ರೆಂಡಿಂಗ್‌ನಲ್ಲಿರುವ ವಾಯರ್‌ಲೇಸ್ ಇಯರ್‌ಫೋನ್ ಖರೀದಿಯ ಲಿಸ್ಟ್‌ನಲ್ಲಿ ಮೊದಲಿರುತ್ತದೆ.

ವಾಯರ್‌ಲೆಸ್ ಇಯರ್‌ಫೋನ್ ಸಾಧನಗಳು ಬ್ಲೂಟೂತ್ ಮೂಲಕ ಕಾರ್ಯನಿರ್ವಹಿಸುವುದರಿಂದ ಸ್ಮಾರ್ಟ್‌ಪೋನ್‌ಗೆ ಕನೆಕ್ಟ್ ಮಾಡುವ ಅವಶ್ಯಕತೆ ಇರುವುದಿಲ್ಲ. ಹೀಗಾಗಿ ಈ ಸಾಧನಗಳು ಗ್ರಾಹಕರನ್ನು ಹೆಚ್ಚಾಗಿ ಸೆಳೆದಿದ್ದು, ಇವುಗಳು ಬಳಕೆಯು ಸಹ ಸರಳವಾಗಿವೆ. ಕಿವಿಗೆ ಕಂಫರ್ಟ್ ಆದ ರಚನೆಯೊಂದಿಗೆ, ಸೌಂಡ್ ನಿಯಂತ್ರಿಸುವ ಮತ್ತು ಸಾಂಗ್ಸ್ ಬದಲಾಯಿಸುವ ಆಯ್ಕೆಗಳನ್ನು ಹೊಂದಿವೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಹಲವು ಕಂಪನಿಗಳ ಇಯರ್‌ಫೋನ್‌ಗಳು ಲಭ್ಯವಿದ್ದು, ಅವುಗಳನ್ನು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಗ್ರಾಹಕರು ಖರೀದಿಸಬಹುದಾಗಿದೆ. ಅಗ್ಗದ ದರದಿಂದ ದುಬಾರಿ ಬೆಲೆವರೆಗೂ ವಿವಿಧ ಮಾದರಿಗಳಲ್ಲಿ ಸೀಗುತ್ತವೆ. ಹಾಗಾದರೇ 4000ರೂ.ಗಳ ಪ್ರೈಸ್ ಟ್ಯಾಗ್‌ನಲ್ಲಿ ಲಭ್ಯವಿರುವ 5 ಬೆಸ್ಟ್ ಬ್ಲೂಟೂತ್ ಇಯರ್‌ಫೋನ್‌ಗಳು/ಹೆಡ್‌ಫೋನ್ ಯಾವುವು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಜೆಬಿಎಲ್-JBL Signature Sound
ಅತ್ಯುತ್ತಮ ಆಡಿಯೋ ಉತ್ಪನ್ನಗಳ ತಯಾರಿಕೆಗೆ ಹೆಸರುವಾಸಿ ಆಗಿದ್ದು, ಹಲವು ಶ್ರೇಣಿಗಳನ್ನು ಹೊಂದಿದೆ. ಅವುಗಳಲ್ಲಿ ಜೆಬಿಎಲ್ ಸಿಗ್ನೇಚರ್ ಸೌಂಡ್ ಬ್ಲೂಟೂತ್ ಇಯರ್‌ಫೋನ್ ನೆಕ್‌ಬ್ಯಾಂಡ್ ಮಾದರಿಯಲ್ಲಿದ್ದು, ಗ್ರಾಹಕರಿಗೆ ಕಂಫರ್ಟ್ ಎನಿಸಲಿದೆ. ಉತ್ತಮ ಸೌಂಡ್ ಔಟ್‌ಪುಟ್ ಅನ್ನು ಹೊಂದಿರುವ ಈ ಇಯರ್‌ಫೋನ್ ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ ಸುಮಾರು 8 ಗಂಟೆಗಳ ನಿರಂತರ ಬಳಸಬಹುದಾಗಿದ್ದು, ವ್ಯಾಲ್ಯೂಮ್ ನಿಯಂತ್ರಿಸುವ ಬಟನ್‌ಗಳನ್ನು ಒಳಗೊಂಡಿದೆ. ಇದರ ಬೆಲೆಯು 2,799ರೂ.ಗಳು ಆಗಿವೆ.

ಕ್ರಿಯೆಟಿವ್ ಸೌಂಡ್ ಬ್ಲಾಸ್ಟರ್ ಜಾಮ್-Creative Sound Blaster Jam
ಬ್ಲೂಟೂತ್ ಮಾದರಿಯ ಹೆಡ್‌ಫೋನ್‌ಗಳ ಬೆಸ್ಟ್ ಲಿಸ್‌ನಲ್ಲಿ ಕ್ರಿಯೆಟಿವ್ ಸೌಂಡ್ ಬ್ಲಾಸ್ಟರ್ ಸಹ ಒಂದಾಗಿದ್ದು, ಅತ್ಯುತ್ತಮ ಸೌಂಡ್ ಕ್ಲಿಯರಿಟಿಯನ್ನು ಹೊಂದಿದೆ. ಈ ಸಾಧನ ತುಂಬಾ ಹಗುರಾಗಿದ್ದು, ಕೇವಲ 83 ಗ್ರಾಂ ತೂಕವನ್ನು ಪಡೆದಿದೆ. ಇದರ ಬ್ಯಾಟರಿ ಬಾಳಿಕೆಯು ಪವರ್‌ಫುಲ್ ಆಗಿದ್ದು, ಸುಮಾರು 12 ಗಂಟೆಗಳ ಕಾಲ ಮ್ಯೂಸಿಕ್ ಕೇಳಬಹುದಾಗಿದೆ. ಸೌಂಡ್ ನಿಯಂತ್ರಿಸುವ ಆಯ್ಕೆ ಮತ್ತು ಕರೆಗಳ ಸ್ವೀಕರಿಸುವ ಆಯ್ಕೆಗಳು ಸಹ ಇವೆ. ಈ ಹೆಡ್‌ಫೋನ್ ಬೆಲೆಯು 3489ರೂ.ಗಳು ಆಗಿವೆ.

ಸೋನಿ-Sony C400 Wireless
ಮ್ಯೂಸಿಕ್ ಪ್ರಿಯರಿಗೆ ಚಿರಪರಿಚಿತವಿರುವ ಸೋನಿ ಕಂಪನಿಯ ಸೌಂಡ್ ಕ್ವಾಲಿಟಿಯ ಬಗ್ಗೆ ಗೊತ್ತಿದ್ದೆ ಇರುತ್ತದೆ. ಸೋನಿ ಸಿ400 ಬ್ಲೂಟೂತ್ ಇಯರ್‌ಫೋನ್ ವಾಯರ್‌ಲೇಸ್ ಮಾದರಿಯಲ್ಲಿದ್ದು, ನೆಕ್‌ಬ್ಯಾಂಡ್ ಡಿಸೈನ್‌ನಲ್ಲಿದೆ. ಒನ್‌ಟಚ್ ಕನೆಕ್ಟ್ ಆಯ್ಕೆಯನ್ನು ಹೊಂದಿದ್ದು, ಸುಮಾರು 20 ಗಂಟೆಗಳ ವರೆಗೂ ಬಾಳಿಕೆ ಬರುವ ಶಕ್ತಿಯುತ ಬ್ಯಾಟರಿ ಹೊಂದಿದೆ. ಸೌಂಡ್, ಕರೆ, ಆನ್, ಆಫ್ ನಿಯಂತ್ರಿಸುವ ಬಟನ್‌ಗಳನ್ನು ಹೊಂದಿದೆ. ಈ ಸಾಧನವು 3,799ರೂ.ಗಳಿಗೆ ಲಭ್ಯವಾಗಲಿದೆ.

ಒನ್‌ಪ್ಲಸ್ OnePlus Bullets Wireless
ಒನ್‌ಪ್ಲಸ್ ಕಂಪನಿಯ ಈ ಇಯರ್‌ಫೋನ್ ವಾಯರ್‌ಲೇಸ್ ಮಾದರಿಯಲ್ಲಿದ್ದು, ನೆಕ್‌ಬ್ಯಾಂಡ್ ಸ್ಟೈಲ್‌ನಲ್ಲಿದೆ. ಹಗುರವಾದ ರಚನೆಯ ಪಡೆದಿದ್ದು, ಬಡ್ಸ್ ಮ್ಯಾಗ್ನೇಟಿಕ್ ಆಗಿ ಒಂದಕ್ಕೊಂದು ಕನೆಕ್ಟ್ ಆಗುತ್ತವೆ. ಔಟ್‌ಪುಟ್ ಸೌಂಡ್ ಕ್ವಾಲಿಟಿಯೂ ಉತ್ತಮವಾಗಿದ್ದು, ಕ್ವಾಲ್ಕಮ್ aptX ಆಡಿಯೊ ಸೌಲಭ್ಯವನ್ನು ಪಡೆದಿದೆ. ಬ್ಯಾಟರಿ ಬ್ಯಾಕ್‌ಅಪ್ ಸಹ ಉತ್ತಮವಾಗಿದ್ದು, ಸುಮಾರು 8 ಗಂಟೆಗಳ ನಿರಂತರ ಬಳಸಬಹುದಾಗಿದೆ. ಯುಎಸ್‌ಬಿ ಟೈಪ್ ಸಿ ಮಾದರಿಯ ಚಾರ್ಜರ್ ನೀಡಿರುವುದರಿಂದ ಬೇಗನೆ ಜಾರ್ಜ್ ಪಡೆಯುತ್ತದೆ. ಇದು 3,990ರೂ.ಗಳ ಬೆಲೆಯಲ್ಲಿ ಲಭ್ಯ.

ಜೆಬಿಎಲ್ -JBL Endurance Jump
ಜೆಬಿಎಲ್ ಕಂಪನಿಯ ಈ ಸಾಧನವು ಸ್ಪೋರ್ಟ್ಸ್‌ನಲ್ಲಿ ಭಾಗವಹಿಸುವವರಿಗೆ ಮತ್ತು ಕ್ರಿಡಾಪಟುಗಳಿಗೆ ಅತ್ಯುತ್ತಮ ಎನಿಸಲಿದೆ. IPX7ನ ಗುಣಮಟ್ಟದಲ್ಲಿ ರಚನೆಯಾಗಿದ್ದು, ಬೆವರು ಹಿಡಿದುಕೊಳ್ಳುವುದಿಲ್ಲ. ನೆಕ್‌ಬ್ಯಾಂಡ್ ಮಾದರಿಯ ಡಿಸೈನಿನಲ್ಲಿದ್ದು, ಧರಿಸಿದಾಗ ಕಂಫರ್ಟ್ ಎನಿಸಲಿದೆ. ಸೌಂಡ್ ಮತ್ತು ಕರೆಗಳ ಕಂಟ್ರೋಲ್ ಆಯ್ಕೆಗಳು ಇದ್ದು, ಟಚ್ ಮಾದರಿಯ ಆಯ್ಕೆಯಲ್ಲಿವೆ. ಇದು ಸಹ 8ಗಂಟೆಗಳ ಕಾಲ ಬಾಳಿಕೆ ಬರುವ ಸಾಮರ್ಥ್ಯವನ್ನು ಹೊಂದಿರುವ ಜೊತೆಗೆ ಫಾಸ್ಟ್ ಚಾರ್ಜ್‌ರ ಸೌಲಭ್ಯವನ್ನು ಪಡೆದಿದೆ. ಇದರ ಬೆಲೆಯು 3,999ರೂ.ಗಳು ಆಗಿವೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470