ಇಯರ್‌ಫೋನ್ ವೈರ್‌ಗಳ್ಯಾಕೆ ಹೀಗಾಗುತ್ತವೆ ಅಂತಾ ಗೊತ್ತಿದೆಯಾ? ಕಾರಣ ಇಲ್ಲಿದೆ
ಸ್ಮಾರ್ಟ್‌ಫೋನ್ (Smartphone) ಹೊಂದಿರುವ ಯಾರೇ ಆದರೂ ಸಹ ಇಯರ್‌ಬಡ್ಸ್(Earbuds) ಅಥವಾ ಇಯರ್‌ಫೋನ್‌ಗಳನ್ನು (Earphone) ಬಳಕೆ ಮಾಡುವುದು ಸಹಜ. ಅದರಲ್ಲೂ ಇಂದಿನ ದಿನಗಳಲ್ಲಿ ಉತ್ತಮ ಬ್ರ್ಯಾಂಡ್‌ನ ಇಯರ್‌ಫೋನ್‌ಗಳು ಅಗ್ಗದ ಬೆಲೆಗೆ ಲಭ್ಯ ಆಗುತ್ತಿದ್ದು, ನೀವೇನಾದರೂ ಇಯರ್‌ಫೋನ್ ಬಳಕೆ ಮಾಡುತ್ತಿದ್ದರೆ ಈ ಸಮಸ್ಯೆಗಳನ್ನು ಖಂಡಿತಾ ಎದುರಿಸುತ್ತಲೇ ಇರುತ್ತೀರಾ.
ಹೌದು, ಇಯರ್‌ಫೋನ್‌ಗಳು ಹಲವಾರು ರೀತಿಯ ಭಿನ್ನ ಫೀಚರ್ಸ್ ಆಯ್ಕೆ ಹೊಂದಿದ್ದರು ಅಥವಾ ನೋಡಲು ಆಕರ್ಷಕವಾಗಿದ್ದರೂ ಸಹ ಈ ಒಂದು ಸಮಸ್ಯೆ ಇಯರ್‌ಫೋನ್ ಬಳಕೆದಾರರಿಗೆ ಇರುಸು ಮುರುಸು ಮಾಡಲಿದೆ. ಅಂದರೆ ಜೇಬಿನಿಂದ ಅಥವಾ ಬ್ಯಾಗ್‌ನಿಂದ ಇಯರ್‌ಪೋನ್ ಅನ್ನು ಹೊರತೆಗೆದಾಗ ಗಂಟು ಹಾಕಿಕೊಂಡ ವೈರ್ ಅನ್ನು ಬಿಡಿಸುವುದೇ ದೊಡ್ಡ ಕೆಲಸವಾಗುತ್ತದೆ. ಹಾಗಿದ್ರೆ, ಯಾಕೆ ಈ ರೀತಿ ಆಗುತ್ತದೆ?, ಈ ಸಮಸ್ಯೆಗಳಿಂದ ಪಾರಾಗುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಇಯರ್‌ಫೋನ್‌ಗಳ ಬಳಕೆ ಈಗ ನಿಧಾನವಾಗಿ ಕಡಿಮೆಯಾಗುತ್ತಿದೆ ಎಂದರೆ ತಪ್ಪಾಗಲಾರದು. ಯಾಕೆಂದರೆ ಜನರು ಇಯರ್‌ಬಡ್‌ಗಳಿಗೆ ಬದಲಾಗುತ್ತಿದ್ದಾರೆ. ಅದಾಗ್ಯೂ ಬಜೆಟ್ ಬೆಲೆಯಲ್ಲಿ ಲಭ್ಯ ಆಗುತ್ತಿರುವ ಹಿನ್ನೆಲೆ ಅನೇಕ ಜನರು ಇಯರ್‌ಫೋನ್‌ಗಳನ್ನು ಬಳಕೆ ಮಾಡುವುದನ್ನು ಮುಂದುವರೆಸಿದ್ದಾರೆ. ಇಯರ್‌ಫೋನ್‌ಗಳು ಮತ್ತು ಇಯರ್‌ಬಡ್‌ಗಳ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ವೈರ್.
ಈ ವೈರ್ ವಿಷಯಕ್ಕೆ ಬಂದರೆ ಇಯರ್‌ಫೋನ್ ಬಳಸುವವರಿಗೆ ಒಂದು ರೀತಿಯ ತಲೆನೋವಿನ ವಿಚಾರವಾಗಿದೆ. ತಕ್ಷಣಕ್ಕೆ ಯಾರ ಜೊತೆಯಾದರೂ ಮಾತನಾಡಲು ಮುಂದಾಗುವಾಗ ಅಥವಾ ವಿಡಿಯೋ ಹಾಗೂ ಆಡಿಯೋ ಸೇವೆ ಪಡೆಯಲು ಮುಂದಾದಾಗ ಇಯರ್‌ಫೋನ್ ಅನ್ನು ತಕ್ಷಣವೇ ಪ್ಲಗ್ ಇನ್ ಮಾಡಲು ಸಾಧ್ಯವೇ ಇಲ್ಲ. ಯಾಕೆಂದರೆ ಹಲವಾರು ಗಂಟುಗಳು ನಿರ್ಮಾಣ ಆಗಲಿದ್ದು, ವೈರ್‌ಗಳು ಒಂದಕ್ಕೊಂದು ಸಿಕ್ಕಿ ಹಾಕಿಕೊಳ್ಳುವುದರಿಂದ ಅವುಗಳನ್ನು ಬಿಡಿಸಲು ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ.
ತಜ್ಞರು ಹೇಳುವುದೇನು?: ಸಾಮಾನ್ಯವಾಗಿ ಯಾವುದೇ ಡಿವೈಸ್ ಹಲವಾರು ವೈಜ್ಞಾನಿಕ ಕಾರಣಗಳನ್ನು ಹೊಂದಿರುತ್ತದೆ. ಅದರಂತೆ ಈ ಜೇಬಿನಲ್ಲಿ ಇರಿಸಲಾದ ಇಯರ್‌ಫೋನ್ ವೈರ್‌ಗಳು ಒಂದಕ್ಕೊಂದು ಸಿಕ್ಕಿಹಾಕಿಕೊಳ್ಳಲು ವೈಜ್ಞಾನಿಕ ಕಾರಣ ಇದೆ. ಸ್ಯಾನ್ ಡಿಯಾಗೋದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಂಶೋಧಕರು 46 ಸೆಂ.ಮೀ ಗಿಂತ ಕಡಿಮೆ ಉದ್ದದ ವೈರ್‌ಗಳಲ್ಲಿ ಸಿಕ್ಕುಗಳು ಉಂಟಾಗುವುದಿಲ್ಲ ಎಂದು ಕಂಡುಕೊಂಡಿದ್ದಾರೆ.
ಆದರೆ ಈ ವೈರ್‌ನ ಉದ್ದವು 46 ರಿಂದ 150 ಸೆಂಟಿಮೀಟರ್ ಅಥವಾ ಅದಕ್ಕಿಂತ ಹೆಚ್ಚು ಇದ್ದಾಗ ವೈರ್‌ಗಳು ತಂತಾನೆ ಗಂಟು ಹಾಕಿಕೊಳ್ಳುತ್ತವೆ. ಈ ಸಾಧ್ಯತೆಯು 50% ವರೆಗೆ ಇರುತ್ತದೆ. ಅದರಂತೆ ನಾವು ನಿತ್ಯ ಬಳಕೆ ಮಾಡುವ ಇಯರ್‌ಫೋನ್ ವೈರ್‌ನ ಉದ್ದವು 46 ಸೆಂಟಿಮೀಟರ್‌ಗಿಂತ ಹೆಚ್ಚಾಗಿದ್ದರಿಂದಾಗಿ ಈ ಸಮಸ್ಯೆಗಳು ಸಾಮಾನ್ಯವಾಗಿವೆ ಎಂದು ತಿಳಿಸಲಾಗಿದೆ.
ಈ ರೀತಿಯ ಸಮಸ್ಯೆಗಳಿಗೆ ಮತ್ತೊಂದು ಕಾರಣ ಏನೆಂದರೆ ಇಯರ್‌ಫೋನ್ ವೈರ್ ಮೂರು ತುದಿಗಳಿಂದ ಹೊಂದಿರುತ್ತದೆ. ಎರಡು ಇಯರ್‌ಬಡ್‌ಗಳು ಹಾಗೂ ಮತ್ತೊಂದು ಪಿನ್ ಪಾಯಿಂಟ್. ಪರಿಣಾಮ ನೀವು ಜೇಬಿನಲ್ಲಿ ಅಥವಾ ಬ್ಯಾಗ್‌ನಲ್ಲಿ ಇರಿಸಿದ್ದಾಗ ಒಂದಕ್ಕೊಂದು ಸಿಕ್ಕಿಹಾಕಿಕೊಳ್ಳುವ ಪ್ರಕ್ರಿಯೆ ಸಹಜವಾಗಿ ಜರುಗುತ್ತದೆ. ಅದರಲ್ಲೂ ನೀವೇನಾದರೂ ಒಂದಕ್ಕಿಂತ ಹೆಚ್ಚು ಇಯರ್‌ಫೋನ್‌ಗಳನ್ನು ಜೇಬಿನಲ್ಲಿ ಇಟ್ಟುಕೊಂಡರೆ ಈ ಪ್ರಕ್ರಿಯೆ ಇನ್ನೂ ವೇಗವಾಗಿ ಜರುಗುತ್ತದೆ.
ಈ ಸಮಸ್ಯೆಗಳಿಗೆ ಪರಿಹಾರ ಏನು? : ಈ ಇಯರ್‌ಫೋನ್ ವೈರ್ ಸಿಕ್ಕು ಬೀಳದಂತೆ ಮಾಡಲು ನಿಖರವಾದ ಪರಿಹಾರಗಳು ಇಲ್ಲ. ಜೊತೆಗೆ ಇವುಗಳ ಉದ್ದದ ವಿಷಯಕ್ಕೂ ಕೈ ಹಾಕುವಂತೆಯೂ ಇಲ್ಲ. ಆದರೆ, ರಬ್ಬರ್ ಬ್ಯಾಂಡ್ ಅನ್ನು ಬಳಕೆ ಮಾಡುವುದರಿಂದ ಈ ಸಮಸ್ಯೆಯಿಂದ ಪಾರಾಗಬಹುದು. ಈಗಾಗಲೇ ಪ್ರಮುಖ ಇಯರ್‌ಫೋನ್ ತಯಾರಿಕಾ ಕಂಪೆನಿಗಳು ಈ ವೈರ್‌ಗಳಿಗೆ ಜಂಟಿಯಾಗಿಯೇ ರಬ್ಬರ್ ಬ್ಯಾಂಡ್ ಆಯ್ಕೆ ನೀಡುವುದನ್ನು ನೀವು ಗಮನಿಸಿರಬಹುದು.
ವೈರ್ಡ್ ಇಯರ್‌ಫೋನ್ ಬಳಕೆಯಿಂದಾಗುವ ಲಾಭ ಏನು?: ಇನ್ನು ವೈರ್‌ಲೆಸ್ ಬಗ್ಗೆ ಹೆಚ್ಚಿನ ಜನಪ್ರಿಯತೆಯ ಹೊರತಾಗಿಯೂ ಇಯರ್‌ಫೋನ್ ಅನೇಕ ಬಳಕೆದಾರರಿಗೆ ಜನಪ್ರಿಯ ಆಯ್ಕೆ ಆಗಿವೆ. ಯಾಕೆಂದರೆ ವೈರ್‌ಲೆಸ್ ಕೌಂಟರ್‌ಪಾರ್ಟ್‌ಗಳಿಗೆ ಹೋಲಿಸಿದರೆ ಉತ್ತಮ ಇವು ಆಡಿಯೊ ಗುಣಮಟ್ಟವನ್ನು ನೀಡುತ್ತವೆ. ಜೊತೆಗೆ ನಿಮ್ಮ ಡಿವೈಸ್‌ಗೆ ನೇರ ಸಂಪರ್ಕ ಪಡೆದುಕೊಳ್ಳುತ್ತವೆ. ಪರಿಣಾಮ ಯಾವುದೇ ಸಿಗ್ನಲ್‌ನ ನಷ್ಟ ಇರುವುದಿಲ್ಲ.

ವೈರ್ಡ್ ಇಯರ್‌ಫೋನ್‌ಗಳು ವೈರ್‌ಲೆಸ್ ಸಿಗ್ನಲ್‌ಗಳ ಮೇಲೆ ಅವಲಂಬಿತವಾಗಿಲ್ಲದ ಕಾರಣ ಡ್ರಾಪ್‌ಔಟ್‌ಗಳು ಅಥವಾ ಹಸ್ತಕ್ಷೇಪದಂತಹ ಸಮಸ್ಯೆಗಳನ್ನು ನೀವು ಎಂದಿಗೂ ಫೇಸ್ ಮಾಡುವುದಿಲ್ಲ ಅದರಲ್ಲೂ ಇದು ಕಾರ್ಯನಿರ್ವಹಿಸಲು ಆಂತರಿಕ ಬ್ಯಾಟರಿಗಳ ಅಗತ್ಯವೂ ಇರುವುದಿಲ್ಲ. ಪರಿಣಾಮ ಚಾರ್ಜ್ ಮಾಡುವ ಅಥವಾ ಬ್ಯಾಟರಿಗಳನ್ನು ಬದಲಾಯಿಸುವ ಬಗ್ಗೆ ಚಿಂತಿಸಬೇಕಾಗಿಲ್ಲ. ನಿಮ್ಮ ಫೋನ್ ಎಲ್ಲಿಯವರೆಗೆ ಬ್ಯಾಕಪ್ ಹೊಂದಿರುತ್ತದೋ ಅಲ್ಲಿಯವರೆಗೂ ಇವುಗಳನ್ನು ಬಳಸಬಹುದು.
ಉಳಿದಂತೆ ವಿಡಿಯೋ ಸ್ಟ್ರೀಮಿಂಗ್ ಅಥವಾ ವಾಯ್ಸ್ ಕಾಲ್‌ನಂತಹ ಅಪ್ಲಿಕೇಶನ್‌ಗಳಲ್ಲಿ, ವೈರ್‌ಲೆಸ್ ಇಯರ್‌ಬಡ್ಸ್‌ಗಳಿಗೆ ಹೋಲಿಸಿದರೆ ವೈರ್ಡ್ ಇಯರ್‌ಫೋನ್‌ಗಳು ಕಡಿಮೆ ಸುಪ್ತತೆಯನ್ನು ನೀಡುತ್ತವೆ. ಇದರರ್ಥ ಆಡಿಯೊ ಸಿಗ್ನಲ್ ಮತ್ತು ಅದನ್ನು ನಿಮ್ಮ ಕಿವಿಗೆ ತಲುಪಿಸುವ ನಡುವೆ ಕಡಿಮೆ ವಿಳಂಬ ಇರಲಿದೆ. ಇದು ಹೆಚ್ಚು ತಲ್ಲೀನಗೊಳಿಸುವ ಅನುಭವವನ್ನು ನೀಡುತ್ತದೆ.
ಅದೆಲ್ಲದಕ್ಕಿಂತ ಮಿಗಿಲಾಗಿ ವೈರ್‌ಲೆಸ್ ಇಯರ್‌ಫೋನ್‌ಗಳು ಕಡಿಮೆ ಪ್ರಮಾಣದ ರೇಡಿಯೊ ಫ್ರೀಕ್ವೆನ್ಸಿ ವಿಕಿರಣವನ್ನು ಹೊರಸೂಸುತ್ತವೆ. ಆದರೆ, ವೈರ್ಡ್ ಇಯರ್‌ಫೋನ್‌ಗಳು ಅಂತಹ ಯಾವುದೇ ವಿಕಿರಣವನ್ನು ಉತ್ಪಾದಿಸುವುದಿಲ್ಲ. ಇದು ವಿದ್ಯುತ್ಕಾಂತೀಯ ಮಾನ್ಯತೆಯ ಬಗ್ಗೆ ಕಾಳಜಿವಹಿಸುವವರಿಗೆ ಸಂಭಾವ್ಯ ಸುರಕ್ಷಿತ ಆಯ್ಕೆಯಾಗಿದೆ.


Click it and Unblock the Notifications








