ಆಕಾಶ್ 2 ಟ್ಯಾಬ್ಲೆಟ್:ಲೇಟ್ ಆದ್ರೂ ಲೇಟೆಸ್ಟ್ ಆಗುತ್ತಾ?

By Varun
|
ಆಕಾಶ್ 2 ಟ್ಯಾಬ್ಲೆಟ್:ಲೇಟ್ ಆದ್ರೂ ಲೇಟೆಸ್ಟ್ ಆಗುತ್ತಾ?

"ಸರಕಾರೀ ಸಂಬಳ ತರಕಾರಿಗೂ ಸಾಲಲ್ಲ, ಸರಕಾರೀ ಯೋಜನೆ ಪ್ರಯೋಜನಕ್ಕೆ ಬರಲ್ಲ". ಹಾಗಂತ ನನಗೆ ಈ ಆಕಾಶ್ ಟ್ಯಾಬ್ಲೆಟ್ 2 ಬಗ್ಗೆ ಯೋಚನೆ ಮಾಡಿದಾಗ ತಲೆಗೆ ಹೊಳೀತು.

ಇನ್ನೇನು ಸ್ವಾಮೀ ಹೇಳೋದು. ವಿದ್ಯಾರ್ಥಿಗಳಿಗೆ ಆಸೆ ಹುಟ್ಟಿಸಿ ಸಬ್ಸಿಡಿ ದರದಲ್ಲಿ ಕೊಡ್ತೀನಿ ಅಂತ ಹೇಳಿ ಇರೋ ಬರೋಪ್ರಾಣಿಗಳನ್ನೆಲ್ಲಾ ಹಾರಿಸಿದ್ದಾಯ್ತು. ಆದರೆ ಟ್ಯಾಬ್ಲೆಟ್ ಅಂತೂ ಆಚೆಗೆ ಬರಲಿಲ್ಲ.

ಈ ಟ್ಯಾಬ್ಲೆಟ್ ನ ಉತ್ಪಾದಕ ಡೇಟಾವಿಂಡ್ ಹಾಗು ಅಸೆಂಬ್ಲರ್ ಆದ ಕ್ವಾಡ್ ಕಂಪನಿಯ ಪರಸ್ಪರ ಕೆಸರೆರೆಚಾಟದಿಂದ ಆಕಾಶ್ ಟ್ಯಾಬ್ಲೆಟ್ ನ ಉತ್ಪಾದನೆಗೆ ಈಗ ತೀವ್ರ ಹಿನ್ನೆಡೆಯಾಗಿದ್ದು, ಈಗ ಅನೇಕ ವಿದೇಶೀ ಕಂಪನಿಗಳು ಆಕಾಶ್ ಟ್ಯಾಬ್ಲೆಟ್ ಉತ್ಪಾದನೆ ಮಾಡಲು ಮುಂದೆ ಬಂದಿದೆಯಂತೆ.

ಅದೇನೇ ಆಗಲಿ ಮೇ ತಿಂಗಳಲ್ಲಿ ಆಕಾಶ್ 2 ಟ್ಯಾಬ್ಲೆಟ್ ಬರುವುದು ಗ್ಯಾರಂಟಿ ಎಂದು ಮತ್ತೆ ಅದೇ ರಾಗ ಹಾಡಿದ್ದಾರೆ, ಕಪಿಲ್ ಸಿಬಾಲ್.

ಡೇಟಾವಿಂಡ್ ಕಂಪನಿಯು ಕ್ವಾಡ್ ಕಂಪನಿಗೆ ಮೊದಲ ಕಂತಿನಲ್ಲಿ ಬಿಡುಗಡೆ ಮಾಡಿದ್ದ 20,000 ಟ್ಯಾಬ್ಲೆಟ್ಗೆ ಹಣಕೊಟ್ಟಿಲ್ಲದ ಕಾರಣ ಸದ್ಯಕ್ಕೆ ಆಕಾಶ್ 2 ಟ್ಯಾಬ್ಲೆಟ್ ನ ಉತ್ಪಾದನೆ ನಿಂತಿದೆ.

ಕಡಿಮೆ ಬೆಲೆಗೆ ಒಳ್ಳೇ ಫೀಚರುಗಳನ್ನೇ ಹೊಂದಿದ್ದ ಆಕಾಶ್ 2 ನಿಜವಾಗಲೂ ಮೇ ಗೆ ಬರುತ್ತೆ ಅಂತಾ ನಿಮಗೆ ಅನ್ನಿಸುತ್ತಾ?

ಇದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X