Home
ಸುದ್ದಿಜಾಲ

ವಿ ಟೆಲಿಕಾಂನ ವಿಶೇಷ ಪ್ಲ್ಯಾನ್‌ಗಳಿವು! ನಿತ್ಯವೂ 1.5GB ಜೊತೆಗೆ ಹಲವು ಪ್ರಯೋಜನ!

ವಿ ಟೆಲಿಕಾಂ (Vi Telecom) ಇದೀಗ ಇತರೆ ಟೆಲಿಕಾಂ ಸಂಸ್ಥೆಗಳಾದ ಏರ್‌ಟೆಲ್‌ ಹಾಗೂ ಜಿಯೋ (Airtel, Jio) ರೀತಿಯಲ್ಲೇ ಬಳಕೆದಾರರಿಗೆ ಹೆಚ್ಚಿನ ಪ್ರಯೋಜನ ನೀಡುವ ರೀಚಾರ್ಜ್‌ ಪ್ಲ್ಯಾನ್‌ಗಳನ್ನು (Recharge Plan) ಪರಿಚಯಿಸುತ್ತಿದೆ. ಈ ನಡುವೆ ಬಳಕೆದಾರರು ತಮ್ಮ ಅಗತ್ಯಕ್ಕೆ ತಕ್ಕಂತೆ ರೀಚಾರ್ಜ್‌ ಮಾಡಿಕೊಳ್ಳಲು ಹಲವಾರು ಆಯ್ಕೆಗಳನ್ನು ನೀಡಲಾಗಿದ್ದು, ಈ ನಡುವೆ ನಿಮಗೆ ನಿತ್ಯವೂ 1.5GB ಡೇಟಾ ಬೇಕು ಎಂದರೆ ಈ ಪ್ಲ್ಯಾನ್‌ ಅತ್ಯುತ್ತಮ ಆಯ್ಕೆ ಆಗಿದೆ.

ಹೌದು, ಮೂರನೇ ಅತಿ ದೊಡ್ಡ ಟೆಲಿಕಾಂ ಆಪರೇಟರ್ (Telecom operator) ಆಗಿ ಗುರುತಿಸಿಕೊಂಡಿರುವ ವೋಡಾಫೋನ್‌ ಐಡಿಯಾ (Vi),ತನ್ನ ರೀಚಾರ್ಜ್‌ ಪ್ಲ್ಯಾನ್‌ಗಳ ಲಿಸ್ಟ್‌ನಲ್ಲಿ ಮೂರು1.5GB ದೈನಂದಿನ ಡೇಟಾ ಯೋಜನೆಗಳನ್ನು ಹೊಂದಿದೆ. ಇವು ಪ್ರಿಪೇಯ್ಡ್ ಯೋಜನೆಗಳಾಗಿದ್ದು, ವಿ ಹೀರೋ ಅನ್‌ಲಿಮಿಟೆಡ್ ಪ್ರಯೋಜನಗಳೊಂದಿಗೆ ಕಾಣಿಸಿಕೊಂಡಿವೆ. ಇದರೊಂದಿಗೆ ಇನ್ನೂ ಹಲವು ಪ್ರಯೋಜನಗಳನ್ನು ಪಡೆಯಬಹುದು. ಹಾಗಿದ್ರೆ, ಬನ್ನಿ ಯಾವೆಲ್ಲಾ ಪ್ಲ್ಯಾನ್‌ನಲ್ಲಿ ಏನೆಲ್ಲಾ ಸೌಲಭ್ಯ ಇದೆ, ಮಾನ್ಯತೆ ದಿನಗಳು ಎಷ್ಟು ಎಂಬುದನ್ನು ನೋಡೋಣ.

ವಿ ಟೆಲಿಕಾಂನ ವಿಶೇಷ ಪ್ಲ್ಯಾನ್‌ಗಳಿವು! ನಿತ್ಯವೂ 1.5GB ಜೊತೆಗೆ ಹಲವು ಪ್ರಯೋಜನ!

ವಿ ಟೆಲಿಕಾಂ ನ 299ರೂ.ಗಳ ಪ್ಲ್ಯಾನ್‌: ಈ ಪ್ಲ್ಯಾನ್ ಸದ್ಯಕ್ಕೆ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಈ ಪ್ಲ್ಯಾನ್‌ ಮೂಲಕ ಗ್ರಾಹಕರು ನಿತ್ಯವೂ ಅನಿಯಮಿತ ಕರೆ ಸೌಲಭ್ಯ ಹಾಗೂ ನಿತ್ಯವೂ
100 ಎಸ್‌ಎಮ್‌ಎಸ್‌ ಸೌಲಭ್ಯದೊಂದಿಗೆ 1.5GB ದೈನಂದಿನ ಡೇಟಾ ಪ್ರಯೋಜನ ಪಡೆಯಲಿದ್ದಾರೆ. ಇದರೊಂದಿಗೆ ವಿ ಮೂವೀಸ್ ಮತ್ತು ಟಿವಿ ಕ್ಲಾಸಿಕ್‌ನೊಂದಿಗೆ ವಿ ಹೀರೋ ಸೌಲಭ್ಯವನ್ನೂ ಸಹ ಈ ಪ್ಲ್ಯಾನ್‌ನಲ್ಲಿ ಪಡೆದುಕೊಳ್ಳಬಹುದು. ಇದು 28 ದಿನಗಳ ಮಾನ್ಯತೆಯನ್ನು ಹೊಂದಿದೆ.

ವಿ ಟೆಲಿಕಾಂ ನ 479ರೂ.ಗಳ ಪ್ಲ್ಯಾನ್‌: ವೋಡಾಫೋನ್‌ ಐಡಿಯಾದ (Vodafone Idea) 479 ರೂ.ಗಳ ಪ್ಲ್ಯಾನ್‌ನಲ್ಲಿ ಬಳಕೆದಾರರು 1.5GB ದೈನಂದಿನ ಡೇಟಾ, ಅನಿಯಮಿತ ವಾಯ್ಸ್ ಕಾಲ್‌ ಮತ್ತು ನಿತ್ಯವೂ 100 ಎಸ್ಎಮ್‌ಎಸ್‌ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ. ಇದರೊಂದಿಗೆ ವಿ ಮೂವಿಸ್ ಆಂಡ್‌ ಟಿವಿ ಕ್ಲಾಸಿಕ್‌ ಜೊತೆಗೆ ವಿ ಹೀರೋ ಅನ್‌ಲಿಮಿಟೆಡ್ ಪ್ರಯೋಜನಗಳನ್ನು ಈ ಪ್ಲ್ಯಾನ್‌ನಲ್ಲಿ ನೀಡಲಾಗಿದೆ. ಇದು 56 ದಿನಗಳ ಮಾನ್ಯತೆ ದಿನಗಳನ್ನು ಹೊಂದಿದೆ.

ವಿ ಟೆಲಿಕಾಂನ 719 ರೂ.ಗಳ ಪ್ಲ್ಯಾನ್‌: ಇನ್ನು ಮೂರನೇ ಪ್ಲ್ಯಾನ್ ಕಡೆ ಕಣ್ಣಾಯಿಸುವುದಾದರೆ ಇದು ಮೇಲೆ ತಿಳಿಸಿದ ಯೋಜನೆಗಳಂತೆಯೇ ಇರುತ್ತದೆ. ಮಾನ್ಯತೆಯಲ್ಲಿ ಮಾತ್ರ ಹೆಚ್ಚಿನ ದಿನಗಳನ್ನು ಪಡೆದುಕೊಂಡಿದೆ. ಅಂದರೆ ಇದೂ ಸಹ ಅನಿಯಮಿತ ವಾಯ್ಸ್‌ ಕಾಲ್‌, ನಿತ್ಯವೂ 100 ಎಸ್‌ಎಮ್ಎಸ್‌ ಮತ್ತು 1.5GB ದೈನಂದಿನ ಡೇಟಾದೊಂದಿಗೆ ಬರಲಿದ್ದು, ವಿ ಮೂವಿಸ್ ಆಂಡ್‌ ಟಿವಿ ಕ್ಲಾಸಿಕ್ ಚಂದಾದಾರಿಕೆಗೆ ಹೆಚ್ಚುವರಿ ವೆಚ್ಚವಿಲ್ಲದೆ ಎಂಟ್ರಿ ಕೊಡಿಸುತ್ತದೆ. ಈ ಮೂಲಕ ನೀವು 84 ದಿನಗಳ ವರೆಗೆ ಇದರ ಸೌಲಭ್ಯ ಪಡೆದುಕೊಳ್ಳಬಹುದು.

ವಿ ಹೀರೋ ಅಂದರೆ ಏನು? : ಈ ಎಲ್ಲಾ ಪ್ಲ್ಯಾನ್‌ಗಳಲ್ಲಿಯೂ ಸಹ ವಿ ಹೀರೋ ಎಂಬ ವಿಶೇಷ ಸೌಲಭ್ಯವನ್ನು ನೀಡಲಾಗಿದೆ. ಇದು ಅನ್‌ಲಿಮಿಟೆಡ್ ಪ್ರಯೋಜನಗಳು ವಾರಾಂತ್ಯದ ಡೇಟಾ ರೋಲ್‌ಓವರ್ ಅನ್ನು ಒಳಗೊಂಡಿವೆ. ಇದರರ್ಥ ನೀವು ಸೋಮವಾರದಿಂದ ಶುಕ್ರವಾರದವರೆಗೆ ಬಳಸದ ಯಾವುದೇ FUP ಡೇಟಾ ವಾರಾಂತ್ಯದಲ್ಲಿ ಅಂದರೆ ಶನಿವಾರ ಹಾಗೂ ಭಾನುವಾರ ಬಳಕೆ ಮಾಡಲು ಅನುಕೂಲ ಮಾಡಿಕೊಡುತ್ತದೆ.

ವಿ ಟೆಲಿಕಾಂನ ವಿಶೇಷ ಪ್ಲ್ಯಾನ್‌ಗಳಿವು! ನಿತ್ಯವೂ 1.5GB ಜೊತೆಗೆ ಹಲವು ಪ್ರಯೋಜನ!

ಇದರೊಂದಿಗೆ ಬಿಂಜ್ ಆಲ್ ನೈಟ್ ಆಯ್ಕೆಯೂ ಇದ್ದು, ನೀವು ಪ್ರತಿದಿನ 12 AM ನಿಂದ 6 AM ನಡುವೆ ಅನಿಯಮಿತ ವೇಗದ ಡೇಟಾವನ್ನು ಬಳಸಬಹುದು. ಇಷ್ಟು ಮಾತ್ರವಲ್ಲದೆ ಡೇಟಾ ಡಿಲೈಟ್‌ಗಳನ್ನು ಆಯ್ಕೆಯನ್ನೂ ಸಹ ನೀಡಲಾಗಿದ್ದು, ಇದರ ಅಡಿಯಲ್ಲಿ 2GB ತುರ್ತು ಡೇಟಾವನ್ನು ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ. ನಿರ್ದಿಷ್ಟ ತಿಂಗಳಲ್ಲಿ ಪ್ರತಿ ದಿನ 1GB ಯಂತೆ ರಿಡೀಮ್ ಮಾಡಿಕೊಳ್ಳಬಹುದು.

Best Mobiles in India

English summary
Vodafone Idea (Vi), the third largest telecom operator, has three 1.5GB daily data plans in its list of recharge plans.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+