ಜಗತ್ತಿನಲ್ಲೇ ಪ್ರಚಂಡನಾಗಿರುವ ಆಂಡ್ರಾಯ್ಡ್ ಟಾಪ್ ವಿಶೇಷತೆಗಳು
ಜಗತ್ತಿನಲ್ಲಿ ಅತಿ ಹೆಚ್ಚು ಬಳಸಲಾದ ಸ್ಮಾರ್ಟ್‌ಫೋನ್ ಆಪರೇಟಿಂಗ್ ಸಿಸ್ಟಮ್ ಆಂಡ್ರಾಯ್ಡ್ ಹೆಚ್ಚು ವೇಗದಲ್ಲಿ ಬೆಳೆಯುತ್ತಿದೆ. ತಮ್ಮ ಸ್ನೇಹಿತರೊಂದಿಗೆ ಒಡನಾಟದಲ್ಲಿರುವ ಈ ಮೊಬೈಲ್ ಅಪ್ಲಿಕೇಶನ್ ಹೆಚ್ಚು ಸಹಕಾರಿಯಾಗಿದ್ದು ಅವರಿಗೆ ಇದು ಹೆಚ್ಚು ಆರಾಮದಾಯಕ ಅಪ್ಲಿಕೇಶನ್ ಎಂದೆನಿಸಿದೆ.
ಇದನ್ನೂ ಓದಿ: ಆಪಲ್ ಫೋನ್‌ನಲ್ಲೂ ಸ್ಯಾಮ್‌ಸಂಗ್ ಫೋನ್‌ನಲ್ಲೂ ಇರುವ 10 ವ್ಯತ್ಯಾಸ
ಇಂದಿನ ಲೇಖನದಲ್ಲಿ ಈ ಗೂಗಲ್ ಆಂಡ್ರಾಯ್ಡ್ ಕುರಿತಾದ 10 ಆಸಕ್ತಿಕರ ಅಂಶಗಳನ್ನು ಅರಿತುಕೊಳ್ಳೋಣ. ನಿಮ್ಮ ಫೋನ್‌ನಲ್ಲಿ ಈ ಆಂಡ್ರಾಯ್ಡ್ ಅಪ್ಲಿಕೇಶನ ಇದೆ ಎಂದಾದಲ್ಲಿ ಅವುಗಳ ವಿಶೇಷತೆಗಳನ್ನು ನೀವು ಅರಿತುಕೊಳ್ಳುವುದು ಅತಿ ಮುಖ್ಯವಾಗಿದೆ.

ಜಗತ್ತಿನಲ್ಲೇ ಪ್ರಚಂಡನಾಗಿರುವ ಆಂಡ್ರಾಯ್ಡ್ ಟಾಪ್ ವಿಶೇಷತೆಗಳು
ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಅನ್ನು ಆಂಡಿ ರೂಬಿನ್ ಸ್ಥಾಪಿಸಿದರು. ಇದನ್ನು 2003 ರಲ್ಲಿ ಸ್ಥಾಪಿಸಲಾಯಿತು. ನಂತರ ಗೂಗಲ್ ಇದನ್ನು 2005 ರಲ್ಲಿ ಖರೀದಿಸಿತು.

ಜಗತ್ತಿನಲ್ಲೇ ಪ್ರಚಂಡನಾಗಿರುವ ಆಂಡ್ರಾಯ್ಡ್ ಟಾಪ್ ವಿಶೇಷತೆಗಳು
ಗೂಗಲ್ ನವೆಂಬರ್ 2007 ರಲ್ಲಿ ಅಧಿಕೃತವಾಗಿ ಲಾಂಚ್ ಮಾಡಿತು. ಇದನ್ನು ಕ್ಯಾಮೆರಾಗಳಿಗಾಗಿ ಅಭಿವೃದ್ಧಿಪಡಿಸಿದ್ದಾದರೂ ಗೂಗಲ್ ಕಂಡುಕೊಂಡಂತೆ ಓಎಸ್‌ನ ಹೆಚ್ಚು ಉಪಯೋಗ ಸ್ಮಾರ್ಟ್‌ಫೋನ್‌ಗಳಲ್ಲಿ ನಡೆದಿದೆ.

ಜಗತ್ತಿನಲ್ಲೇ ಪ್ರಚಂಡನಾಗಿರುವ ಆಂಡ್ರಾಯ್ಡ್ ಟಾಪ್ ವಿಶೇಷತೆಗಳು
ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಅನ್ನು ಡಿಜಿಟಲ್ ಕ್ಯಾಮೆರಾಗಳಿಗಾಗಿ ಮೊದಲು ಅಭಿವೃದ್ಧಿಪಡಿಸಲಾಗಿತ್ತು. ಆದರೆ ಗೂಗಲ್ ಇದನ್ನು ಸ್ಮಾರ್ಟ್‌ಫೋನ್‌ಗಳಿಗಾಗಿ ಬದಲಾಯಿಸಿತು. ಈ ಪ್ಲಾಟ್‌ಫಾರ್ಮ್‌ನ ಬಳಕೆ ಹೆಚ್ಚು ಸ್ಮಾರ್ಟ್‌ಫೋನ್‌ಗಳಲ್ಲೇ ನಡೆದಿದ್ದು ಇದಕ್ಕೆ ಕಾರಣ ಎಂದೂ ಹೇಳಬಹುದು.

ಜಗತ್ತಿನಲ್ಲೇ ಪ್ರಚಂಡನಾಗಿರುವ ಆಂಡ್ರಾಯ್ಡ್ ಟಾಪ್ ವಿಶೇಷತೆಗಳು
ಆಂಡ್ರಾಯ್ಡ್ ಚಾಲನೆಯಾದ ಪ್ರಥಮ ಫೋನ್ ಎಚ್‌ಟಿಸಿ ಡ್ರೀಮ್ ಆಗಿದೆ. ಇದನ್ನು ಅಕ್ಟೋಬರ್ 2008 ರಲ್ಲಿ ಮೊದಲು ಪ್ರಾರಂಭಿಸಲಾಯಿತು. ಗೂಗಲ್‌ನಿಂದ ಲೀನಕ್ಸ್ ಆಧಾರಿತ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಅನ್ನು ಡಿವೈಸ್ ಬಳಸಿತು. ಇದು ಆಂಡ್ರಾಯ್ಡ್ ಆವೃತ್ತಿ 1.0 ವನ್ನು ಬಳಸಿದ್ದು ನಂತರ ಇದನ್ನು 1.6 ಗೆ ಅಪ್‌ಗ್ರೇಡ್ ಮಾಡಲಾಯಿತು.

ಜಗತ್ತಿನಲ್ಲೇ ಪ್ರಚಂಡನಾಗಿರುವ ಆಂಡ್ರಾಯ್ಡ್ ಟಾಪ್ ವಿಶೇಷತೆಗಳು
ಆಂಡ್ರಾಯ್ಡ್‌ಗಾಗಿ ಗೂಗಲ್ ಉಪಾಧ್ಯಕ್ಷ ಸುಂದರ್ ಪಿಚ್ಚೈ, ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಇರುವ ಮಿಲಿಯಗಟ್ಟಲೆ ಮೊಬೈಲ್ ಡಿವೈಸ್‌ಗಳನ್ನು 190 ದೇಶಗಳಲ್ಲಿ ಹೊಂದಿದೆ ಎಂದು ತಿಳಿಸಿದ್ದಾರೆ. ಜಗತ್ತಿನ ಅತಿ ದೊಡ್ಡ ಆಪರೇಟಿಂಗ್ ಸಿಸ್ಟಮ್ ಎಂದೆನಿಸಿರುವ ಆಂಡ್ರಾಯ್ಡ್ ದಿನವೂ ಅತಿ ವೇಗದಲ್ಲಿ ಬೆಳೆಯುತ್ತಿದೆ.

ಜಗತ್ತಿನಲ್ಲೇ ಪ್ರಚಂಡನಾಗಿರುವ ಆಂಡ್ರಾಯ್ಡ್ ಟಾಪ್ ವಿಶೇಷತೆಗಳು
ಕ್ಯುಪೇಕ್: ಆಂಡ್ರಾಯ್ಡ್ 1.5
ಡೋನಟ್: ಆಂಡ್ರಾಯ್ಡ್ 1.6
ಇಕ್ಲೇರ್: ಆಂಡ್ರಾಯ್ಡ್ 2.0
ಆಂಡ್ರಾಯ್ಡ್: 2.1
ಫ್ರೊಯೊ
ಆಂಡ್ರಾಯ್ಡ್ 2.2
ಜಿಂಜರ್‌ಬ್ರೆಡ್
ಆಂಡ್ರಾಯ್ಡ್ 2.3
ಹನಿಕೋಂಬ್
ಆಂಡ್ರಾಯ್ಡ್ 3.0
ಆಂಡ್ರಾಯ್ಡ್ 3.1
ಆಂಡ್ರಾಯ್ಡ್ 3.2
ಐಸ್ ಕ್ರೀಮ್ ಸ್ಯಾಂಡ್‌ವಿಚ್
ಆಂಡ್ರಾಯ್ಡ್ 4.0
ಜೆಲ್ಲಿಬೀನ್
ಆಂಡ್ರಾಯ್ಡ್ 4.1
ಆಂಡ್ರಾಯ್ಡ್ 4.2
ಆಂಡ್ರಾಯ್ಡ್ 4.3
ಕಿಟ್‌ಕ್ಯಾಟ್
ಆಂಡ್ರಾಯ್ಡ್ 4.4
ಲಾಲಿಪಪ್
ಆಂಡ್ರಾಯ್ಡ್ 5.0
ಆಂಡ್ರಾಯ್ಡ್ 5.1

ಜಗತ್ತಿನಲ್ಲೇ ಪ್ರಚಂಡನಾಗಿರುವ ಆಂಡ್ರಾಯ್ಡ್ ಟಾಪ್ ವಿಶೇಷತೆಗಳು
A for Astro (1.0)
B for Bender (1.1)
C for Cupcake (1.5)
D for Donut (1.6)
E for Eclair (2.0)
F for Froyo (2.2.x)
G for Gingerbread (2.3.x)
H for Honeycomb (3.x)
I for Ice Cream Sandwich (4.0.x)
J for Jelly Bean (4.3)
K for KitKat (4.4)
L for Lollipop (5.0)

ಜಗತ್ತಿನಲ್ಲೇ ಪ್ರಚಂಡನಾಗಿರುವ ಆಂಡ್ರಾಯ್ಡ್ ಟಾಪ್ ವಿಶೇಷತೆಗಳು
ಇನ್ನಷ್ಟು ಪರಿಣಾಮಕಾರಿ ಮೊಬೈಲ್ ಅಪ್ಲಿಕೇಶನ್‌ಗಳ ಬೆಳವಣಿಗೆಗಾಗಿ ಆಂಡ್ರಾಯ್ಡ್ ಉತ್ತಮ ಸ್ಥಳವಾಗಿದ್ದು ತಯಾರಕರಿಗೆ ಆಪರೇಟಿಂಗ್ ಸಿಸ್ಟಮ್‌ಗೆ ಫೀಚರ್‌ಗಳನ್ನು ಸೇರಿಸಲು ಇದು ಉತ್ತಮ ಅನುಕೂಲತೆಯನ್ನು ಮಾಡಿಕೊಡುತ್ತದೆ.

ಜಗತ್ತಿನಲ್ಲೇ ಪ್ರಚಂಡನಾಗಿರುವ ಆಂಡ್ರಾಯ್ಡ್ ಟಾಪ್ ವಿಶೇಷತೆಗಳು
ತನ್ನ ಲೈಸೆನ್ಸ್‌ಗೆ ಪಾವತಿಯನ್ನು ಮಾಡದೆಯೇ ಸ್ಮಾರ್ಟ್‌ಫೋನ್ ತಯಾರಕರಿಗೆ ಗೂಗಲ್ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಅನ್ನು ಒದಗಿಸುತ್ತಿದೆ. ಆಂಡ್ರಾಯ್ಡ್ ಬಳಕೆದಾರರಿಗೆ ಇದು ಹೆಚ್ಚು ಉಪಯೋಗಕಾರಿ ಎಂದೆನಿಸಿದೆ.

ಜಗತ್ತಿನಲ್ಲೇ ಪ್ರಚಂಡನಾಗಿರುವ ಆಂಡ್ರಾಯ್ಡ್ ಟಾಪ್ ವಿಶೇಷತೆಗಳು
ಸ್ಮಾರ್ಟ್‌ಫೋನ್ ತಯಾರಕರಿಗೆ ಆಂಡ್ರಾಯ್ಡ್ ಸಾಫ್ಟ್‌ವೇರ್ ಅನ್ನು ಉಚಿತವಾಗಿ ಒದಗಿಸುವುದಲ್ಲದೆ, ಗೂಗಲ್ ಆಂಡ್ರಾಯ್ಡ್ ಡಿವೈಸ್‌ಗಳ ಮೂಲಕ ಮೊಬೈಲ್ ಜಾಹೀರಾತು ರಾಜ ಎಂದೆನಿಸಿದೆ. ಗೂಗಲ್‌ಗೆ ಹೆಚ್ಚುವರಿ ಆದಾಯ ಆಂಡ್ರಾಯ್ಡ್‌ನಿಂದ ಬರುತ್ತಿದೆ ಎಂಬುದಂತೂ ಸುಳ್ಳಲ್ಲ.

Click it and Unblock the Notifications