ಅಂಗವಿಕಲತೆಯನ್ನು ಮೆಟ್ಟಿನಿಂತ ಆವಿಷ್ಕಾರಗಳು

By Shwetha
|

ಇಂದಿನ ತಂತ್ರಜ್ಞಾನದಲ್ಲಿ ಸರ್ವವಿಧದ ಸಮಸ್ಯೆಗಳಿಗೂ ಪರಿಹಾರವಿದೆ. ಈ ಪರಿಹಾರ ಅಂಗವೈಕಲ್ಯದಂತಹ ಸಮಸ್ಯೆಯನ್ನು ಎದುರಿಸುತ್ತಿರುವವರಗೂ ವರದಾನವಾಗಿ ಪರಿಣಮಿಸಿದೆ. ಕಿವುಡರು, ಮೂಕರು, ನಡೆದಾಡುವ ವಿಕಲತೆಯನ್ನು ಹೊಂದಿರುವವರು ಹೀಗೆ ಅಂಗವೈಕಲ್ಯದಿಂದ ನೊಂದವರಿಗೆ ಇಂದಿನ ಆಧುನಿಕ ತಂತ್ರಜ್ಞಾನ ವರವಾಗಿ ಪರಿಣಮಿಸಿದೆ.

ಓದಿರಿ: ಜಪಾನೀ ಮಹಿಳೆಯರ ಸೌಂದರ್ಯ ಗುಟ್ಟು ರಟ್ಟು

ಅಂಗವಿಕಲರು ದೈನಂದಿನ ಕೆಲಸಗಳನ್ನು ನಿರ್ವಹಿಸಲು ಸಹಾಯ ಮಾಡುವಂತಹ ಟಾಪ್ 10 ಗ್ಯಾಜೆಟ್‌ಗಳ ಪಟ್ಟಿಯೊಂದಿಗೆ ನಾವು ಬಂದಿದ್ದು ಸಾಮಾನ್ಯರಂತೆಯೇ ಅವರಿಗೆ ಸಂವಹನ ನಡೆಸಲು ಈ ಗ್ಯಾಜೆಟ್‌ಗಳು ಸಹಾಯವನ್ನು ಮಾಡಲಿವೆ. ಬನ್ನಿ ಈ ವಿಶೇಷ ಗ್ಯಾಜೆಟ್‌ಗಳ ಬಗ್ಗೆ ತಿಳಿದುಕೊಳ್ಳೋಣ.

ಡಾಟ್

ಡಾಟ್

ಇದೊಂದು ವೇರಿಯೇಬಲ್ ಆಗಿದ್ದು ವಿಶ್ವದ ಪ್ರಥಮ ಬ್ರೈಲ್ ಸ್ಮಾರ್ಟ್‌ವಾಚ್ ಆಗಿದೆ. ಅಂಧರಿಗಾಗಿ ಈ ಗ್ಯಾಜೆಟ್ ಅನ್ನು ವಿಶೇಷವಾಗಿ ಸಿದ್ಧಪಡಿಸಲಾಗಿದೆ. ಸಂದೇಶಗಳನ್ನು ಮಾಡಲು, ಟ್ವೀಟ್ ಮಾಡಲು, ಪುಸ್ತಕಗಳನ್ನು ಓದಲು ಇದು ಸಹಾಯಕ.

ಟಾಕಿಟ್

ಟಾಕಿಟ್

ಸಂವಹನ ನಡೆಸುವ ಸಾಮರ್ಥ್ಯವನ್ನು ಕಳೆದುಕೊಂಡವರಿಗೆ ಟಾಕಿಟ್ ಅಪ್ಲಿಕೇಶನ್ ರೂಪದಲ್ಲಿ ಕಾರ್ಯನಿರ್ವಹಿಸಲಿದೆ. ಇದು ಉಚ್ಛಾರಣೆಯನ್ನು ಅನುವಾದಿಸಿ ಅವರ ಮಾತನ್ನು ಮತ್ತೊಬ್ಬರಿಗೆ ಅರ್ಥಪಡಿಸುತ್ತದೆ. ಟಾಕಿಟ್ ಯಾವುದೇ ಭಾಷೆಗಳಲ್ಲಿ ಕೂಡ ಕಾರ್ಯನಿರ್ವಹಿಸಲಿದೆ.

ಸೆಸಮೆ ಫೋನ್

ಸೆಸಮೆ ಫೋನ್

ಅಸಾಮರ್ಥ್ಯಗಳನ್ನು ಹೊಂದಿರುವವರಿಗೂ ಮೊಬೈಲ್ ಫೋನ್‌ಗಳ ಅಗತ್ಯವಿದೆ. ಇದಕ್ಕೆಂದೇ ಸೆಸಮೆ ಫೋನ್‌ಗಳು ಇದ್ದು, ಟಚ್ ರಹಿತ ವಿಶೇಷ ಸ್ಮಾರ್ಟ್‌ಫೋನ್‌ಗಳಾಗಿವೆ. ವಿಕಲಚೇತನರು ಈ ಫೋನ್‌ಗಳ ಬಳಕೆಯನ್ನು ಮಾಡಬಹುದಾಗಿದೆ. ಡಿವೈಸ್ ಅನ್ನು ಸ್ಪರ್ಶಿಸದೆಯೇ ಸ್ಮಾರ್ಟ್‌ಫೋನ್‌ನ ಎಲ್ಲಾ ಫೀಚರ್‌ಗಳನ್ನು ಪ್ರವೇಶಿಸಬಹುದಾಗಿದೆ.

ಯುಎನ್‌ಐ

ಯುಎನ್‌ಐ

ಮೂಗರಿಗೆ ಸನ್ನೆ ಮತ್ತು ಮಾತಿನ ತಂತ್ರಜ್ಞಾನವನ್ನು ಬಳಸಿಕೊಂಡು ಕಾರ್ಯನಿರ್ವಹಿಸುವ ಯುಎನ್‌ಐ ಟು ವೇ ಕಮ್ಯುನಿಕೇಶನ್ ಪರಿಕರವಾಗಿದೆ.

ಫಿಂಗರ್ ರೀಡರ್

ಫಿಂಗರ್ ರೀಡರ್

ವೇರಿಯೇಬಲ್ ಟೂಲ್ ಆಗಿರುವ ಫಿಂಗರ್ ರೀಡರ್ ಎರಡು ಫಂಕ್ಶನ್‌ಗಳನ್ನು ಒಳಗೊಂಡಿದೆ. ಮುದ್ರಣಗೊಂಡ ಪುಸ್ತಕಗಳನ್ನು ಓದಲು ಇಲೆಕ್ಟ್ರಾನಿಕ್ ಡಿವೈಸ್‌ಗಳನ್ನು ಅಭ್ಯಸಿಸಲು ಅಂತೆಯೇ ಭಾಷಾ ಅನುವಾದ ಪರಿಕರವಾಗಿ ಇದನ್ನು ಬಳಸಿಕೊಳ್ಳಬಹುದಾಗಿದೆ. ಕೈಬೆರಳಿಗೆ ಬಳಕೆದಾರರು ಇದನ್ನು ಸಿಕ್ಕಿಸಿಕೊಳ್ಳಬೇಕು ಮತ್ತು ಓದಿದರೆ ಆಯಿತು.

ಬಿ ಮೈ ಐಸ್

ಬಿ ಮೈ ಐಸ್

ಬಿ ಮೈ ಐಸ್ ಅದ್ಭುತ ಅಪ್ಲಿಕೇಶನ್ ಆಗಿದ್ದು ಅಂಧರಿಗೆ ಜಗತ್ತನ್ನು ಕಾಣಲು ಸಹಾಯ ಮಾಡಲಿದೆ. ಸ್ವಯಂಸೇವಕರೊಂದಿಗೆ ಅಂಧರನ್ನು ಸಂಪರ್ಕಪಡಿಸುವ ನೆಟ್‌ವರ್ಕ್ ಅನ್ನು ತಯಾರಿಸುವ ಮೂಲಕ ಇದು ಕೆಲಸ ಮಾಡುತ್ತದೆ.

ಎಕ್ಸ್‌ಎಸ್ ಮ್ಯಾಪ್

ಎಕ್ಸ್‌ಎಸ್ ಮ್ಯಾಪ್

ಗಾಲಿ ಕುರ್ಚಿಯ ಅಗತ್ಯವಿರುವವರಿಗೆ ಇದು ತಕ್ಕ ಸಮಯದಲ್ಲಿ ಇದರ ವ್ಯವಸ್ಥೆಯನ್ನು ಮಾಡುತ್ತದೆ. ಹೆಚ್ಚಿನ ಸಾರ್ವಜನಿಕ ಸ್ಥಳಗಳಲ್ಲಿ ಗಾಲಿ ಕುರ್ಚಿ ಮೊದಲಾದ ಸೌಲಭ್ಯಗಳಿರುವುದಿಲ್ಲ. ಈ ಮ್ಯಾಪ್ ಬಳಸಿಕೊಂಡು ವೀಲ್ ಚೇರ್ ವ್ಯವಸ್ಥೆ ಇರುವ ಸ್ಥಳಗಳ ಕುರಿತ ಮಾಹಿತಿಯನ್ನು ನೀಡುತ್ತದೆ.

ಟ್ರಾನ್ಸೆನ್ಸ್

ಟ್ರಾನ್ಸೆನ್ಸ್

ಮೂಗರಿಗೆ ಗುಂಪು ಸಂವಾದದಲ್ಲಿ ಸಹಾಯ ಮಾಡುವ ಟ್ರಾನ್ಸೆನ್ಸ್ ಒಂದು ಅಪ್ಲಿಕೇಶನ್ ಆಗಿದೆ. ಮೂಗರು ಏನು ಮಾತನಾಡುತ್ತಿದ್ದಾರೆ ಎಂಬುದನ್ನು ನೈಜ ಸಮಯದಲ್ಲಿ ಇದು ಪಠ್ಯ ರೂಪಕ್ಕೆ ಪರಿವರ್ತಿಸುತ್ತದೆ.

ಅಸಿಸ್ಟ್ ಮಿ

ಅಸಿಸ್ಟ್ ಮಿ

ಅಸಿಸ್ಟ್ ಮಿ ಅಪ್ಲಿಕೇಶನ್ ತಕ್ಕ ಸಮಯದಲ್ಲಿ ವಿಕಲಾಂಗರಿಗೆ ಸಹಾಯವನ್ನೊದಗಿಸುತ್ತದೆ. ಸೇವಾ ಒದಗಿಸುವವರನ್ನು ಸಂಪರ್ಕಪಡಿಸುವ ಈ ಅಪ್ಲಿಕೇಶನ್ ವಿಕಲಾಂಗರಿಗೆ ಸರಿಯಾದ ಸಮಯದಲ್ಲಿ ಸಹಾಯ ಹಸ್ತವನ್ನು ಚಾಚುತ್ತದೆ. ಶಾಪಿಂಗ್, ಪ್ರಯಾಣ, ಕೆಲಸಗಳನ್ನು ನಿರ್ವಹಿಸಲು ಸಹಾಯ ಹೀಗೆ ಇದರ ವಿಶೇಷತೆಗಳು ಮುಂದುವರಿಯುತ್ತವೆ.

ಲಿಫ್ಟ್‌ವೇರ್

ಲಿಫ್ಟ್‌ವೇರ್

ಕೈಗಳಲ್ಲಿ ಶಕ್ತಿ ಇಲ್ಲದವರು ಆಹಾರ ಸೇವಿಸಲು ಲಿಫ್ಟ್‌ವೇರ್ ಸಹಾಯ ಮಾಡಲಿದೆ. ತಿನ್ನುವ ಪರಿಕರವನ್ನು ಇದಕ್ಕೆ ಅಟ್ಯಾಚ್ ಮಾಡಿ ಆಹಾರ ಸೇವಿಸಬಹುದಾಗಿದೆ.

Most Read Articles
Best Mobiles in India

English summary
Technology has always lent a helping hand for people with disabilities such as visual impairment, speech impairment, people with motion disabilities or disorders etc.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more