Home
ಸುದ್ದಿಜಾಲ

ಜಪಾನೀ ಮಹಿಳೆಯರ ಸೌಂದರ್ಯ ಗುಟ್ಟು ರಟ್ಟು

By Shwetha

ಜಪಾನ್‌ನ ಮಹಿಳೆಯರು ತಮ್ಮ ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿಯನ್ನು ವಹಿಸುತ್ತಾರೆ. ಅದಕ್ಕೆಂದೇ ಅತ್ಯಾಕರ್ಷಕವಾಗಿರುವ ಕೆಲವೊಂದು ಗ್ಯಾಜೆಟ್‌ಗಳ ಬಳಕೆಯನ್ನು ಅವರು ಮಾಡುತ್ತಿದ್ದು ಅವರ ಸೌಂದರ್ಯ ವೃದ್ಧಿಗೆ ಈ ಗ್ಯಾಜೆಟ್‌ಗಳು ಸಹಕಾರಿಯಾಗಿವೆ. ಜಪಾನೀ ಮಹಿಳೆಯರ ಸೌಂದರ್ಯ ಗುಟ್ಟಾಗಿರುವ ಈ ಗ್ಯಾಜೆಟ್‌ಗಳಿಂದ ಅವರ ಅಂದಚೆಂದ ಹೆಚ್ಚುತ್ತದೆಯಂತೆ. ಇಂದಿನ ಲೇಖನದಲ್ಲಿ ಆ ಗ್ಯಾಜೆಟ್‌ಗಳು ಯಾವುವು ಎಂಬುದನ್ನು ನೋಡೋಣ.

ರಬ್ಬರ್ ಲಿಪ್ಸ್

ರಬ್ಬರ್ ಲಿಪ್ಸ್

ಈ ಗ್ಯಾಜೆಟ್ ಅನ್ನು ನಿಮ್ಮ ತುಟಿಗೆ ಸಿಕ್ಕಿಸಬೇಕು. ಇದನ್ನು ಧರಿಸಿ ಉಚ್ಛಾರಣೆಯನ್ನು ಮಾಡಿದರೆ ನಿಮ್ಮ ಮುಖ ಸ್ಲಿಮ್ ಮತ್ತು ಯವ್ವೌನ ಭರಿತವಾಗುತ್ತದೆ.

ರಿಬ್ಬನ್ ಸ್ಕಾಲ್ಪ್

ರಿಬ್ಬನ್ ಸ್ಕಾಲ್ಪ್

ಈ ರಿಬ್ಬನ್ ಎರಡು ಕ್ಲಿಪ್‌ಗಳೊಂದಿಗೆ ಬಂದಿದ್ದು ತಲೆಬುರುಡೆಯನ್ನು ಎಳೆದು ಹಿಡಿದಿಡುತ್ತದೆ. ನಿಮ್ಮ ತ್ವಚೆಯನ್ನು ತಾರುಣ್ಯಪೂರ್ಣವಾಗಿಸುವ ಕರಾಮತ್ತು ಈ ಸಾಮಾಗ್ರಿಯಲ್ಲಿದೆ.

ಐ ಸ್ಲೇಕ್ ಹರುಕಾ ಡಿವೈಸ್

ಐ ಸ್ಲೇಕ್ ಹರುಕಾ ಡಿವೈಸ್

ಕಣ್ಣಿನ ಸುತ್ತಲಿನ ಕಪ್ಪು ಕಲೆಗಳು, ಕಣ್ಣು ಊದಿರುವುದು, ನೆರಿಗೆಗಳನ್ನು ಕಡಿಮೆ ಮಾಡುತ್ತದೆ. ಇದನ್ನು ಕಣ್ಣಿನ ಸುತ್ತಲೂ 3 ನಿಮಿಷಗಳ ಕಾಲ ಧರಿಸಿರಬೇಕು.

ಫೇಶಿಯಲ್ ಮಾಸ್ಕ್ ಟೂಲ್

ಫೇಶಿಯಲ್ ಮಾಸ್ಕ್ ಟೂಲ್

ಈ ಸೌಂದರ್ಯ ಉಪಕರಣ ನಿಮ್ಮ ಸೌಂದರ್ಯ ವೃದ್ಧಿಗೆ ಸಹಕಾರಿಯಾಗಿರುವ ತರಕಾರಿ ಕತ್ತರಿಸುವಿಕೆ ಸಹಾಯ ಮಾಡಲಿದೆ.

ಹೇಪಿ ಫೇಸ್ ಟ್ರೈನರ್

ಹೇಪಿ ಫೇಸ್ ಟ್ರೈನರ್

ಈ ಮೌತ್ ಪೀಸ್ ಅನ್ನು 5 ನಿಮಿಷಗಳ ಕಾಲ ಬಾಯಿಯಲ್ಲಿ ನೀವು ಕಚ್ಚಿ ಹಿಡಿದುಕೊಂಡಿರಬೇಕು. ನಿಮ್ಮ ಮುಖದಲ್ಲಿ ಭದ್ರವಾಗಿ ಕೂರುವ ಈ ಮೌತ್ ಪೀಸ್ ಮುಖದ ಆರೋಗ್ಯವನ್ನು ವರ್ಧಿಸುತ್ತದೆ.

ಫೇಸ್ ಮಾಸ್ಕ್

ಫೇಸ್ ಮಾಸ್ಕ್

ಮುಖದಲ್ಲಿರುವ ಹೆಚ್ಚುವರಿ ಕೊಬ್ಬಿನ ನಿವಾರಣೆಗೆ ಈ ಮಾಸ್ಕ್ ಸಹಕಾರಿ.

 ಡೈಮೆಂಟ್ ವಿ ಫಿಟ್ ಮಾಸ್ಕ್

ಡೈಮೆಂಟ್ ವಿ ಫಿಟ್ ಮಾಸ್ಕ್

ನಿಮ್ಮ ಮುಖವನ್ನು ವಿ ಆಕಾರದಲ್ಲಿ ಸ್ಲಿಮ್ ಮಾಡುವ ಮಾಸ್ಕ್ ಇದಾಗಿದೆ. ಮುಖವನ್ನು ಸುಂದರವಾಗಿಸುವುದರ ಜೊತೆಗೆ ರಕ್ತ ಪರಿಚಲನೆಯನ್ನು ಇದು ಸರಾಗಗೊಳಿಸುತ್ತದೆ.

ಓಮ್ನಿ ಐರನ್

ಓಮ್ನಿ ಐರನ್

ಮುಖದ ಸುಕ್ಕು ನಿವಾರಣೆಗೆ ಇದು ಸಹಕಾರಿಯಾಗಿದೆ. ನಿಮ್ಮ ಹಣೆಯಲ್ಲಿ ಈ ಗ್ಯಾಜೆಟ್ ಅನ್ನು ಇರಿಸಬೇಕು ಮತ್ತು ಐರನ್ ಮಾಡಿಕೊಳ್ಳಿ.

ನೋಸ್ ಸ್ಟ್ರೈಟ್‌ನರ್

ನೋಸ್ ಸ್ಟ್ರೈಟ್‌ನರ್

ಮೂಗನ್ನು ಸರಿಪಡಿಸಿಕೊಳ್ಳಲು ಆಪರೇಶನ್‌ ಮಾಡಬೇಕಾಗಿಲ್ಲ ಈ ಡಿವೈಸ್ ಅನ್ನು ಮೂಗಿಗೆ ಸಿಕ್ಕಿಸಿಕೊಂಡು ಮೂಗು ಅನ್ನು ನೇರಗೊಳಿಸಬಹುದಾಗಿದೆ.

ಲಿಪ್ ಎನ್‌ಹಾನ್ಸರ್ ಟೂಲ್

ಲಿಪ್ ಎನ್‌ಹಾನ್ಸರ್ ಟೂಲ್

ಏಂಜಲೀನಾ ಜೋಲಿಯ ತುಟಿಗಳನ್ನು ನಿಮ್ಮದಾಗಿಸಿಕೊಳ್ಳುವ ಆಸೆಯೇ? ಈ ಡಿವೈಸ್ ಅನ್ನು ನಿಮ್ಮ ತುಟಿಗಿಟ್ಟುಕೊಂಡು ಗಾಳಿಯನ್ನು ವರ್ಧಕದ ಮೂಲಕ ಎಳೆದುಕೊಳ್ಳಿ. ಈ ವರ್ಧಕದೊಳಗೆ ನಿಮ್ಮ ತುಟಿ ಸರಿಯಾಗಿ ಕುಳಿತಿದೆ ಎಂದಾದಲ್ಲಿ ಅದನ್ನು ಕೆಲವು ಸೆಕೆಂಡ್‌ಗಳವರೆಗೆ ಹಾಗೆಯೇ ಬಿಡಿ.

Best Mobiles in India

English summary
Japanese women are very particular about their beauty and complexion. Looking at these gadgets, I feel they are much more fun than Doremon’s gadgets.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+