ರೂ 5,000 ಕ್ಕೆ ಅತ್ಯುತ್ತಮ ಗ್ಯಾಜೆಟ್ ಖರೀದಿ ಇಲ್ಲಿದೆ

By Shwetha
|

ಈ ಸೀಸನ್ ಮಾರಾಟದಲ್ಲಿ ಗ್ಯಾಜೆಟ್‌ಗಳ ಮಾರಾಟವನ್ನು ನೀವು ಈಗಾಗಲೇ ಮುಗಿಸಿರುವಿರಿ. ಅದಾಗ್ಯೂ ನಿಮ್ಮಲ್ಲಿ ಹೆಚ್ಚಿನವರು ನಿಮ್ಮ ಇಷ್ಟದ ಡಿವೈಸ್‌ಗಳನ್ನು ಖರೀದಿಸುವ ಉತ್ಸಾಹದಲ್ಲಿರುತ್ತೀರಾ ಎಂಬುದು ನಮಗೆ ತಿಳಿದಿದೆ. ಆದ್ದರಿಂದಲೇ ನೀವು ಈ ಹೊಸ ವರ್ಷದ ಆರಂಭಕ್ಕಾಗಿ ಮಾಡುವ ಖರೀದಿ ಸದಾ ನೆನಪಿನಲ್ಲಿ ಉಳಿಯುವಂತಿರಬೇಕು.

ಇದನ್ನೂ ಓದಿ: ವಾಟ್ಸಾಪ್ ಸಮಸ್ಯೆಯೇ ಇಲ್ಲಿದೆ ಪರಿಹಾರ

ಆದ್ದರಿಂದ ಇಂದಿನ ಲೇಖನದಲ್ಲಿ ರೂ 5,000 ದ ಒಳಗೆ ನೀವು ಖರೀದಿ ಮಾಡಬಹುದಾದ ಅತ್ಯುತ್ತಮ ಗ್ಯಾಜೆಟ್‌ಗಳ ಪಟ್ಟಿಯನ್ನು ನೋಡೋಣ. ಇವುಗಳ ಬೆಲೆ ಕೇವಲ ರೂ 5,000 ಆಗಿರುವುದರಿಂದ ನೀವು ಸುಲಭವಾಗಿ ಇದನ್ನು ಖರೀದಿ ಮಾಡಬಹುದಾಗಿದೆ. ಹಾಗಿದ್ದರೆ ಆ ಡಿವೈಸ್‌ಗಳು ಯಾವುವು ಎಂಬುದನ್ನು ನೋಡೋಣ.

#1

#1

ಪುಸ್ತಕ ಪ್ರೇಮಿಗಳಿಗೆ ಈ ಕಿಂಡಲ್ ರೂ 4,999 ಕ್ಕೆ ದೊರೆಯುತ್ತಿದೆ. ಇದು ಟಚ್ ಸ್ಕ್ರೀನ್ ಅನ್ನು ಹೊಂದಿದೆ ಮತ್ತು ಖರೀದಿಗೆ ಉತ್ತಮವಾಗಿದೆ.

#2

#2

ಈ ದಿನಗಳಲ್ಲಿ ಹೆಚ್ಚಿನವರು ಮನಮೋಹಕ ವಸ್ತುಗಳ ಖರೀದಿಗೆ ಮನಸೋಲುತ್ತಾರೆ. ಗೂಗಲ್‌ನ ಕ್ರೋಮ್‌ಕಾಸ್ಟ್ ಕೂಡ ಈ ಪಟ್ಟಿಗೆ ಸೇರಿರುವ ಡಿವೈಸ್ ಆಗಿದೆ. ಇದು ಖರೀದಿಗೆ ತುಂಬಾ ಕಡಿಮೆಯಾಗಿದ್ದು, ಆಂಡ್ರಾಯ್ಡ್, ಐಓಎಸ್, ವಿಂಡೋಸ್ ಪಿಸಿ ಮತ್ತು ಮ್ಯಾಕ್‌ನಲ್ಲಿ ಸಂಯೋಜನೆಗೊಳ್ಳುತ್ತದೆ.

#3

#3

5,000 ಕ್ಕೆ ದೊರೆಯುವ ಮೋಟೋರೋಲಾ ಮೋಟೋ ಇ ನಿಜಕ್ಕೂ ಉತ್ತಮ ಸ್ಮಾರ್ಟ್‌ಫೋನ್ ಆಗಿದೆ. ಇದು ಆಂಡ್ರಾಯ್ಡ್ ಲಾಲಿಪಪ್ 5.0 ವನ್ನು ಒಳಗೊಂಡು ಮುಂದಿನ ದಿನಗಳಲ್ಲಿ ಗ್ರಾಹಕರ ಕೈ ಸೇರಲಿದೆ.

#4

#4

ರೂ 3,000 ಕ್ಕೆ ದೊರೆಯುವ ಆಪಲ್ ಐಪೋಡ್ ಸಂಗೀತ ಪ್ರೇಮಿಗಳಿಗೆ ರಸದೌತಣವನ್ನು ನೀಡುವುದು ಖಂಡಿತ. ಉತ್ತಮ ಬೆಲೆಗೆ ಸಂಗೀತದ ರಸದೌತಣವನ್ನು ಆಪಲ್ ಐಪೋಡ್ ನೀಡುತ್ತದೆ.

#5

#5

ರೂ 5,000 ಕ್ಕೆ ಈ ಪೋರ್ಟೇಬಲ್ ಸ್ಪೀಕರ್ ನಿಜಕ್ಕೂ ಉತ್ತಮ ಆಯ್ಕೆಯಾಗಿದೆ. ಬಹು ಬಣ್ಣಗಳಲ್ಲಿ ಇದು ಲಭ್ಯವಿದ್ದು, 5 ಗಂಟೆಗಳ ಬ್ಯಾಟರಿ ಬ್ಯಾಕಪ್ ಅನ್ನು ಇದು ಒದಗಿಸುತ್ತದೆ.

#6

#6

ರೂ 5,000 ದ ಒಳಗೆ ಖರೀದಿಸಲು ಈ ಕ್ಯಾನನ್ ಕ್ಯಾಮೆರಾ ಹೇಳಿಮಾಡಿಸಿದ್ದಾಗಿದೆ. 20ಎಮ್‌ಪಿ ಸೆನ್ಸಾರ್, 2.7 ಇಂಚಿನ ಎಲ್‌ಸಿಡಿ ಡಿಸ್‌ಪ್ಲೇ; 10x ಜೂಮ್ ಅನ್ನು ಡಿವೈಸ್ ಹೊಂದಿದೆ.

#7

#7

ನಿಮ್ಮ ಫೋನ್‌ನ ಬ್ಯಾಟರಿ ಬಾಳಿಕೆಯನ್ನು ಶ್ಯೋಮಿ ಎಮ್‌ಐ 10400mAh ಪವರ್ ಬ್ಯಾಂಕ್‌ನೊಂದಿಗೆ ವಿಸ್ತರಿಸಿ. ನಿಮ್ಮ ಹೆಚ್ಚಿನ ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್ ಡಿವೈಸ್‌ಗಳಿಗಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ.

#8

#8

4 ಇಂಚುಗಳಿಂದ 6.3 ಇಂಚುಗಳ ನಡುವಿನ ಅಳತೆಯಲ್ಲಿ ಈ ಗೇಮ್ ಕಂಟ್ರೋಲರ್ ಅತ್ಯುತ್ತಮವಾಗಿದೆ. ಆಂಡ್ರಾಯ್ಡ್ 4.1 ಅಥವಾ ಅದಕ್ಕಿಂತ ಹೆಚ್ಚಿನ ಓಎಸ್ ಇದರಲ್ಲಿ ಚಾಲನೆಯಾಗುತ್ತಿದೆ.

#9

#9

ಸೋನಿಯ ಪ್ಲೇಸ್ಟೇಶನ್ ಮತ್ತು ಮೆಂಬರ್‌ಶಿಪ್ ಕಾರ್ಡ್ ಗೇಮ್ ಆಡುವವರಿಗೆ ಅನನ್ಯ ಆಯ್ಕೆಯಾಗಿದೆ. ಇದು ಮೂರು ತಿಂಗಳ ಪ್ಯಾಕೇಜ್‌ನೊಂದಿಗೆ ಬಂದಿದ್ದು, ರೂ 885 ಕ್ಕೆ ನಿಮಗೆ ದೊರೆಯುತ್ತಿದೆ.

#10

#10

ಲ್ಯೂಮಿಯಾ 530 ಹೊರನೋಟಕ್ಕೆ ದುಬಾರಿ ಫೋನ್ ಆಗಿದ್ದರೂ ನಿಮಗಿದು ರೂ 5,000 ಕ್ಕೆ ಲಭ್ಯವಾಗುತ್ತಿದೆ. ವಿಂಡೋಸ್ ಫೋನ್ 8.1 ಇದರಲ್ಲಿ ಚಾಲನೆಯಾಗುತ್ತಿದೆ. ಮೈಕ್ರೋಸಾಫ್ಟ್ ಅಪ್ಲಿಕೇಶನ್ ಫೋನ್‌ನಲ್ಲಿ ಬರುತ್ತಿದ್ದು, ಎಮ್‌ಎಸ್ ಆಫೀಸ್ ಮತ್ತು ಸ್ಕೈಪ್‌ಗೆ ಉಚಿತ ಪ್ರವೇಶ ದೊರೆಯಲಿದೆ.

Best Mobiles in India

English summary
This article tells about While most of you may have already finished buying gadgets in the end season sale, we're sure some of you are still thinking of buying your favorite devices.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X