ವಾಟ್ಸಾಪ್ ಸಮಸ್ಯೆಯೇ ಇಲ್ಲಿದೆ ಪರಿಹಾರ

Written By:

ಅತ್ಯಂತ ಹೆಚ್ಚು ಜನಪ್ರಿಯವಾಗಿರುವ ಬಹು ಪ್ಲಾಟ್‌ಫಾರ್ಮ್ ಅಪ್ಲಿಕೇಶನ್ ವಾಟ್ಸಾಪ್ ಆಗಿದೆ. ನಿಮ್ಮ ಸ್ನೇಹಿತರು, ಕುಟುಂಬದವರು, ಹೀಗೆ ನಿಮ್ಮ ಸಂಬಂಧಪಟ್ಟವರಿಗೆಲ್ಲಾ ನೀವು ಇದರ ಮೂಲಕ ಸಂದೇಶಗಳನ್ನು ರವಾನಿಸಬಹುದು. ಇಂದಿನ ಸ್ಮಾರ್ಟ್‌ಫೋನ್ ಯುಗದಲ್ಲಿ ವಾಟ್ಸಾಪ್ ಇಲ್ಲದವರೂ ಯಾರೂ ಇಲ್ಲವೆಂದೇ ಹೇಳಬಹುದು. ವಾಟ್ಸಾಪ್ ಸ್ನೇಹವನ್ನು ವರ್ಧಿಸುವ ಅಪ್ಲಿಕೇಶನ್ ಆಗಿ ಕಾರ್ಯನಿರ್ವಹಿಸುತ್ತಿದೆಯಾದರೂ ಇದು ಕೂಡ ಕೆಲವೊಂದು ಸಮಸ್ಯೆಗಳನ್ನು ಹೊಂದಿದೆ ಎಂಬುದನ್ನು ನೀವು ಗಮನಿಸಿದ್ದೀರಾ?

ಇದನ್ನೂ ಓದಿ: ಮಾರುಕಟ್ಟೆಯಲ್ಲಿ ಸದ್ದು ಮಾಡಲಿರುವ ರೆಡ್ಮೀ ನೋಟ್

ವಾಟ್ಸಾಪ್ ಅನ್ನು ಹೊಂದಿರುವವರು ಪಟ್ಟಿ ಮಾಡಿರುವ ಕೆಲವೊಂದು ಸಮಸ್ಯೆಗಳು ಮತ್ತು ಅವುಗಳಿಗೆ ಇರುವ ಪರಿಹಾರವನ್ನು ಕೆಳಗಿನ ಲೇಖನದಲ್ಲಿ ನಾವು ನೋಡೋಣ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಾಟ್ಸಾಪ್ ಡೌನ್‌ಲೋಡ್ ಮಾಡಲು

ವಾಟ್ಸಾಪ್ ಡೌನ್‌ಲೋಡ್ ಮಾಡಲು

#1

ವಾಟ್ಸಾಪ್ ಅನ್ನು ನಿಮ್ಮ ಫೋನ್‌ನಲ್ಲಿ ಡೌನ್‌ಲೋಡ್ ಮಾಡಬೇಕಿದ್ದಲ್ಲಿ, ಆಂಡ್ರಾಯ್ಡ್ ಆವೃತ್ತಿ 2.1 ಅಥವಾ ಅದಕ್ಕಿಂತ ಹೆಚ್ಚಿನ ಓಎಸ್ ಅನ್ನು ನೀವು ಹೊಂದಿರಬೇಕು. ಇದನ್ನು ನೋಡಲು ಸೆಟ್ಟಿಂಗ್ಸ್ ಇಲ್ಲಿ "ಅಬೌಟ್ ಡಿವೈಸ್" ನೋಡಿ.

ರೂಟ್ ಅಥವಾ 3ಜಿ ಇಲ್ಲದೆ ವಾಟ್ಸಾಪ್ ಅನ್ನು ಹೇಗೆ ಇನ್‌ಸ್ಟಾಲ್ ಮಾಡಬೇಕು?

ರೂಟ್ ಅಥವಾ 3ಜಿ ಇಲ್ಲದೆ ವಾಟ್ಸಾಪ್ ಅನ್ನು ಹೇಗೆ ಇನ್‌ಸ್ಟಾಲ್ ಮಾಡಬೇಕು?

#2

ವೈಫೈ ಮಾತ್ರ ಕಾರ್ಯನಿರ್ವಹಿಸುವ ಟ್ಯಾಬ್ಲೆಟ್ ಅನ್ನು ನೀವು ಹೊಂದಿದ್ದೀರಿ ಎಂದಾದಲ್ಲಿ, ನಿಮಗೆ ವಾಟ್ಸಾಪ್ ಇನ್‌ಸ್ಟಾಲ್ ಮಾಡಲು ಸಾಧ್ಯವಿಲ್ಲ. ಕಾರ್ಯನಿರ್ವಹಿಸುತ್ತಿರುವ ಸೆಲ್ ಫೋನ್ ಅಥವಾ ನಿಮ್ಮ ಫೋನ್ ಅತ್ಯವಶ್ಯಕವಾಗಿರಬೇಕು.

ವಾಟ್ಸಾಪ್ ಸಂಪರ್ಕ ನಷ್ಟವಾದಾಗ

ವಾಟ್ಸಾಪ್ ಸಂಪರ್ಕ ನಷ್ಟವಾದಾಗ

#3

ನಿಮ್ಮ 3ಜಿ ಸಂಪರ್ಕವನ್ನು ಆಧರಿಸಿ ಅಥವಾ ವಾಟ್ಸಾಪ್ ಬಳಸಲು ಪ್ರಯತ್ನಿಸುವ ನೆಟ್‌ವರ್ಕ್ ಸಂಪರ್ಕವನ್ನು ಆಧರಿಸಿ ಸಂಪರ್ಕ ನಷ್ಟವಾಗುತ್ತದೆ ಆ ಸಂದರ್ಭದಲ್ಲಿ
*ನಿಮ್ಮ ಫೋನ್ ಸ್ವಿಚ್ ಆನ್ ಆಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.
*ಪ್ಲೇ ಸ್ಟೋರ್‌ನಿಂದ ಅಪ್ಲಿಕೇಶನ್‌ನ ಇತ್ತೀಚಿನ ಆವೃತ್ತಿಯನ್ನು ಇನ್‌ಸ್ಟಾಲ್ ಮಾಡಿಕೊಳ್ಳಿ.
*ನಿಮ್ಮ ಇಂಟರ್ನೆಟ್ ಸಂಪರ್ಕವನ್ನು ಪರಿಶೀಲಿಸಿಕೊಳ್ಳಿ ಅಪ್ಲಿಕೇಶನ್ ಕ್ಯಾಶ್ ಅನ್ನು ಖಾಲಿ ಮಾಡಿ.

ಸಂಪರ್ಕಗಳನ್ನು ವಾಟ್ಸಾಪ್ ಗುರುತಿಸದಿದ್ದರೆ

ಸಂಪರ್ಕಗಳನ್ನು ವಾಟ್ಸಾಪ್ ಗುರುತಿಸದಿದ್ದರೆ

#4

*ನಿಮ್ಮ ಸಂಪರ್ಕ ಮತ್ತು ಸಂಪರ್ಕ ಸಂಖ್ಯೆಗಳನ್ನು ಖಾತ್ರಿಪಡಿಸಿ.
*ನಿಮ್ಮ ಸ್ನೇಹಿತರೂ ವಾಟ್ಸಾಪ್ ಅನ್ನು ಹೊಂದಿದ್ದಾರೆ ಎಂಬುದನ್ನು ಖಾತ್ರಿಪಡಿಸಿ.
*ವಾಟ್ಸಾಪ್‌ನ ಅತ್ಯಾಧುನಿಕ ಆವೃತ್ತಿಯನ್ನು ನೀವು ಹೊಂದಿದ್ದೀರಿ ಎಂಬುದನ್ನು ಖಾತ್ರಿಪಡಿಸಿ.

ಅಂತರಾಷ್ಟ್ರೀಯ ಸಂಪರ್ಕಗಳನ್ನು ವಾಟ್ಸಾಪ್‌ನಲ್ಲಿ ಸೇರಿಸಲು

ಅಂತರಾಷ್ಟ್ರೀಯ ಸಂಪರ್ಕಗಳನ್ನು ವಾಟ್ಸಾಪ್‌ನಲ್ಲಿ ಸೇರಿಸಲು

#5

ನಿಮ್ಮ ಸಂಪರ್ಕಗಳಲ್ಲಿ ಅಂತರಾಷ್ಟ್ರೀಯ ಸಂಪರ್ಕವನ್ನು ಸೇರಿಸಲು, ಆ ಪ್ರದೇಶದ ಕೋಡ್ ಅನ್ನು ಹೊಂದಿರಬೇಕು ಮತ್ತು ನಿಮ್ಮ ಸಂಖ್ಯೆ ಅದೇ ಕೋಡ್ ಅನ್ನು ಬಳಸುತ್ತಿರಬೇಕು.

ಸಂಪರ್ಕಗಳನ್ನು ನಿರ್ಬಂಧಿಸಲು

ಸಂಪರ್ಕಗಳನ್ನು ನಿರ್ಬಂಧಿಸಲು

#6

ಸಂಪರ್ಕವನ್ನು ನಿರ್ಬಂಧಿಸಲು, ನೀವು ನಿರ್ಬಂಧ ಬಯಸುವ ಸಂಪರ್ಕದ ಸಂವಾದಕ್ಕೆ ಹೋಗಿ ಅಲ್ಲಿ ಆಪ್ಶನ್ ಬಟನ್ ಅನ್ನು ಸ್ಪರ್ಶಿಸಿ "ಮೋರ್" ಸ್ಪರ್ಶಿಸಿ ನಂತರ "ಬ್ಲಾಕ್" ಸ್ಪರ್ಶಿಸಿ.

ಮತ್ತೊಬ್ಬರ ಸಂದೇಶಗಳನ್ನು ಅವರಿಗೆ ತಿಳಿಯದೇ ಓದುವುದು

ಮತ್ತೊಬ್ಬರ ಸಂದೇಶಗಳನ್ನು ಅವರಿಗೆ ತಿಳಿಯದೇ ಓದುವುದು

#7

ವಾಟ್ಸಾಪ್‌ನಲ್ಲಿ ನೀವು ನಿಮ್ಮ ಸ್ನೇಹಿತರ ಸಂದೇಶಗಳನ್ನು ಅವರಿಗೆ ತಿಳಿಯದೇ ಓದಬಹುದಾಗಿದೆ.

ವಾಟ್ಸಾಪ್‌ಗೆ ಪಾವತಿಸುವುದು ಹೇಗೆ

ವಾಟ್ಸಾಪ್‌ಗೆ ಪಾವತಿಸುವುದು ಹೇಗೆ

#8

ನೀವು ಒಂದು ವರ್ಷಕ್ಕಿಂತಲೂ ಹೆಚ್ಚು ಸಮಯ ವಾಟ್ಸಾಪ್ ಅನ್ನು ಬಳಸುತ್ತಿದ್ದೀರಿ ಎಂದಾದಲ್ಲಿ ನೀವು ಸ್ವಲ್ಪ ಮೊತ್ತವನ್ನು ಪಾವತಿಸಬೇಕಾಗುತ್ತದೆ.
ನಿಮ್ಮ ಪೇಪಾಲ್ ಖಾತೆಯೊಂದಿಗೆ ನಿಮ್ಮ ನ್ಯಾವಿಗೇಟರ್ ಮೂಲಕ ಪಾವತಿಸಬೇಕಾಗುತ್ತದೆ.

ವಾಟ್ಸಾಪ್‌ನಲ್ಲಿ ಚೆಕ್ಸ್ ಎಂಬುದರ ಅರ್ಥವೇನು

ವಾಟ್ಸಾಪ್‌ನಲ್ಲಿ ಚೆಕ್ಸ್ ಎಂಬುದರ ಅರ್ಥವೇನು

#9

ನಿಮ್ಮ ವಾಟ್ಸಾಪ್‌ನಲ್ಲಿ ಕ್ಲಾಕ್ ಗುರುತು ನಿಮ್ಮ ಸಂದೇಶವನ್ನು ಇನ್ನೂ ಕಳುಹಿಸಬೇಕಾಗಿದೆ ಎಂಬುದನ್ನು ಸೂಚಿಸುತ್ತದೆ
ಒನ್ ಟಿಕ್‌ನ ಅರ್ಥ ಸಂದೇಶವನ್ನು ಕಳುಹಿಸಲಾಗಿದೆ ಎಂದಾಗಿದೆ ಮತ್ತು ವಾಟ್ಸಾಪ್ ಸರ್ವರ್ ಸಂದೇಶವನ್ನು ಸ್ವೀಕೃತಿದಾರರು ಸ್ವೀಕರಿಸಿದ್ದಾರೆ ಎಂಬುದನ್ನು ಸೂಚಿಸುತ್ತದೆ.
ಟು ಟಿಕ್ ಸಂದೇಶವು ನಿಮ್ಮ ಸಂಬಂಧಿತ ವ್ಯಕ್ತಿಗೆ ಡೆಲಿವರಿ ಆಗಿದೆ ಎಂಬುದನ್ನು ಸೂಚಿಸುತ್ತದೆ.

ನನ್ನ ವಾಟ್ಸಾಪ್ ಖಾತೆಯನ್ನು ಅಳಿಸುವುದು ಹೇಗೆ?

ನನ್ನ ವಾಟ್ಸಾಪ್ ಖಾತೆಯನ್ನು ಅಳಿಸುವುದು ಹೇಗೆ?

#10

ನಿಮ್ಮ ವಾಟ್ಸಾಪ್ ಖಾತೆಯನ್ನು ಅಳಿಸುವುದು ಮತ್ತು ವಾಟ್ಸಾಪ್ ಅಪ್ಲಿಕೇಶನ್ ಅನ್ನು ಅಳಿಸುವುದು ಎರಡೂ ಭಿನ್ನ ಭಿನ್ನ ಕಾರ್ಯವಾಗಿದೆ. ವಾಟ್ಸಾಪ್ ಅಪ್ಲಿಕೇಶನ್ ಅಳಿಸಲು ಸೆಟ್ಟಿಂಗ್ಸ್ > ಅಪ್ಲಿಕೇಶನ್ ಮ್ಯಾನೇಜರ್ > ವಾಟ್ಸಾಪ್ ಮತ್ತು "ಅನ್‌ಇನ್‌ಸ್ಟಾಲ್" ಒತ್ತಿರಿ.
ನಿಮ್ಮ ಖಾತೆಯನ್ನು ಅಳಿಸಲು, ವಾಟ್ಸಾಪ್ ಅಪ್ಲಿಕೇಶನ್‌ಗೆ ಹೋಗಿ ಮೆನು > ಸೆಟ್ಟಿಂಗ್ಸ್> ಖಾತೆ ಮಾಹಿತಿ ಮತ್ತು "ಡಿಲೀಟ್ ಅಕೌಂಟ್" ಹೀಗೆ ಮಾಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about Here are some common problems that many users run into with WhatsApp and how to solve them, along with answers to some of your most frequently asked questions.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot