ಎಚ್ಚರ: ಟಾಪ್ ಹ್ಯಾಕಿಂಗ್ ಸೈಟ್‌ಗಳು ನಿಮ್ಮ ಮೇಲೂ ಕಣ್ಣಿಟ್ಟಿರಬಹುದು

Written By:

ಕಂಪ್ಯೂಟರ್ ಯುಗದಲ್ಲಿ ಎಲ್ಲಾ ಕಡೆ ಕೂಡ ಹದ್ದಿನ ಕಣ್ಣನ್ನಿಟ್ಟುಕೊಂಡೇ ನಾವು ಕೆಲಸವನ್ನು ನಿರ್ವಹಿಸಬೇಕಾಗುತ್ತದೆ. ಇಂಟರ್ನೆಟ್ ಬಳಸುವಾಗ ನೀವು ಮುಂಜಾಗ್ರತಾ ಕ್ರಮವಾಗಿ ಏನಾದರೂ ರಕ್ಷಣೆಗಳನ್ನು ಪಡೆದುಕೊಂಡಿಲ್ಲ ಎಂದಾದಲ್ಲಿ ಖಂಡಿತ ನಿಮ್ಮ ಗೌಪ್ಯ ಮಾಹಿತಿಗಳು ಹೊರಗೆ ಲೀಕ್ ಆಗಬಹುದಾಗಿದೆ. ನಿಮ್ಮ ಮಾಹಿತಿಯನ್ನು ಕದಿಯುವ ಹುನ್ನಾರವನ್ನು ನಡೆಸುತ್ತಿರುವವರು ಇಂತಹ ಉತ್ತಮ ಸಮಯವನ್ನು ಕಾದು ನೋಡುತ್ತಿದ್ದು ಖಂಡಿತ ನಿಮ್ಮನ್ನು ಇದು ಅಪಾಯಕ್ಕೆ ಸಿಕ್ಕಿಸಬಹುದಾಗಿದೆ.

ಓದಿರಿ: ಹ್ಯಾಕಿಂಗ್ ತಪ್ಪಿಸಲು 'ಹ್ಯಾಕಿಂಗ್ ವಿತ್‌ ಸ್ಮಾರ್ಟ್‌ಫೋನ್ಸ್' ಬುಕ್‌

ಹಾಗಿದ್ದರೆ ಇಂದಿನ ಲೇಖನದಲ್ಲಿ ಹ್ಯಾಕಿಂಗ್ ಸೈಟ್‌ಗಳ ಮಾಹಿತಿಗಳನ್ನು ನಾವು ನೀಡುತ್ತಿದ್ದೇವೆ. ಈ ಸೈಟ್‌ಗಳು ಹೆಚ್ಚು ಅಪಾಯಕಾರಿ ಎಂದೆನಿಸಿದ್ದು ಬಳಕೆದಾರರಿಗೆ ಸದಾ ಕಾಲ ತೊಂದರೆಯನ್ನುಂಟು ಮಾಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಂಡ್ರಾಯ್ಡ್ ಫೋನ್ ಹ್ಯಾಕ್

ಆಂಡ್ರಾಯ್ಡ್ ಫೋನ್ ಹ್ಯಾಕ್

ಸ್ಟೇಜ್ ಫ್ರೈಟ್

ಬಳಕೆದಾರರಿಗೆ ತಿಳಿಯದೆಯೇ ಹೆಚ್ಚಿನ ಹ್ಯಾಕರ್‌ಗಳು ಆಂಡ್ರಾಯ್ಡ್ ಫೋನ್ ಅನ್ನು ಹ್ಯಾಕ್ ಮಾಡಿದ್ದಾರೆ. 1 ಬಿಲಿಯನ್ ಆಂಡ್ರಾಯ್ಡ್ ಫೋನ್‌ಗಳು ಸಂಕಷ್ಟಕ್ಕೆ ಸಿಲಕಿದ್ದು, ಫೋನ್‌ನ ಭದ್ರತಾ ವ್ಯವಸ್ಥೆಯ ಸೋಲು ಎಂಬುದಾಗಿಯೇ ಇದು ಖ್ಯಾತಿಗೊಂಡಿದೆ.

ಯುಸಿ ಕನೆಕ್ಟ್ ಫೀಚರ್

ಯುಸಿ ಕನೆಕ್ಟ್ ಫೀಚರ್

ಕಾರು ಹ್ಯಾಕಿಂಗ್

1.4 ಮಿಲಿಯನ್ ಕಾರುಗಳನ್ನು 2015 ರಲ್ಲಿ ಹ್ಯಾಕ್ ಮಾಡಲಾಗಿದ್ದು ಯುಸಿ ಕನೆಕ್ಟ್ ಫೀಚರ್ ಪ್ರವೇಶವನ್ನು ಪಡೆದುಕೊಂಡು ಫೋನ್ ಕರೆಗಳು, ನ್ಯಾವಿಗೇಶನ್ ಮತ್ತು ವೈಫೈ ಹಾಟ್‌ಸ್ಪಾಟ್ ಮಾಹಿತಿಯನ್ನು ದೋಚಿದ್ದಾರೆ. ಕಾರಿನ ಐಪಿ ವಿಳಾಸವನ್ನು ಪತ್ತೆಹಚ್ಚಲು ಯುಸಿ ಸಂಪರ್ಕವಿರುವ ಸೆಲ್ಯುಲಾರ್ ಕನೆಕ್ಶನ್ ಅನ್ನು ಹ್ಯಾಕರ್‌ಗಳು ಬಳಸಿಕೊಂಡಿದ್ದು ದೇಶದ ಯಾವ ಭಾಗದಲ್ಲಾದರೂ ಕಾರನ್ನು ದೋಚುವ ಪದ್ಧತಿ ಇದಾಗಿತ್ತು.

ಮೋಸದ ಬಲೆ

ಮೋಸದ ಬಲೆ

ಆಶ್ಲೆ ಮೆಡಿಸನ್

ಮೋಸಗಾರರಿಗೆ ಇದು ಉತ್ತ ವರ್ಷವಾಗಿ ಪರಿಣಮಿಸಿದೆ. ಆಶ್ಲೆ ಮೆಡಿಸನ್ ವೆಬ್‌ಸೈಟ್‌ ಹ್ಯಾಕ್ ಮಾಡಿದ ಹ್ಯಾಕರ್‌ಗಳ 32 ಮಿಲಿಯನ್ ಬಳಕೆದಾರರನ್ನು ತಮ್ಮ ಮೋಸದ ಬಲೆಯಲ್ಲಿ ಕೆಡವಿದ್ದಾರೆ. ಅಂತೆಯೇ ಅವರ ಇಮೇಲ್ ವಿಳಾಸ ಮತ್ತು ಕ್ರೆಡಿಟ್ ಕಾರ್ಡ್ ಮಾಹಿತಿಯನ್ನು ಇಂಟರ್ನೆಟ್‌ನಲ್ಲಿ ಅನಾವರಣಗೊಳಿಸಿ ಅವರನ್ನು ಬ್ಲ್ಯಾಕ್‌ಮೇಲ್ ಮಾಡಿದ್ದಾರೆ.

ಆನ್‌ಸ್ಟರ್ ಸಿಸ್ಟಮ್

ಆನ್‌ಸ್ಟರ್ ಸಿಸ್ಟಮ್

ಜಿಎಮ್ಸ್ ಆನ್ ಸ್ಟಾರ್ ಸಿಸ್ಟಮ್

29 ವರ್ಷದ ಹ್ಯಾಕರ್ ಸಾಮಿ ಕಾಮ್‌ಕರ್ ಡಿವೈಸ್ ಒಂದನ್ನು ನಿರ್ಮಿಸಿದ್ದು ಆನ್‌ಸ್ಟರ್ ಸಿಸ್ಟಮ್ ಹೊಂದಿರುವ ಜಿಎಮ್ ಕಾರುಗಳನ್ನು ಇದು ವಶಪಡಿಸಿಕೊಳ್ಳುತ್ತದೆ.

ಕಾರ್ ಡಾಂಗಲ್‌

ಕಾರ್ ಡಾಂಗಲ್‌

ಪಠ್ಯ ಸಂದೇಶಗಳ ಮೂಲಕ ಹ್ಯಾಕಿಂಗ್

ಕಾರ್ ಡಾಂಗಲ್‌ಗಳು ಹ್ಯಾಕರ್‌ಗಳಿಗೆ ಕಾರನ್ನು ನಿಯಂತ್ರಿಸಲು ಸಹಾಯ ಮಾಡುವಂತಿದ್ದು ಕಾರನ್ನು ಸ್ಮಾರ್ಟ್ ಮಾಡುವ ಈ ಅಂಶವೇ ಕಾರು ಮಾಲೀಕರುಗಳಿಗೆ ಉರುಳಾಗಿ ಪರಿಣಮಿಸಿದೆ.

ಆಪಲ್ ದೌರ್ಬಲ್ಯತೆ DYLD

ಆಪಲ್ ದೌರ್ಬಲ್ಯತೆ DYLD

ಆಪಲ್‌ಗೂ ಹ್ಯಾಕರ್‌ ಕಾಟ

DYLD ಎಂದು ಕರೆಯಲಾದ ಆಪಲ್ ದೌರ್ಬಲ್ಯತೆಯನ್ನು ಹ್ಯಾಕರ್‌ಗಳು ತಮಗೆ ಬೇಕಾದ ಹಾಗೆ ಬಳಸಿಕೊಂಡಿದ್ದಾರೆ. ಜೀರೊ ಡೇ ಎಕ್ಸ್‌ಪ್ಲೊಯಿಟ್ ಎಂದು ಕರೆಯಲಾದ DYLD ಹ್ಯಾಕರ್‌ಗಳ ದಾಳಿಗೆ ಗುರಿಯಾಗಿತ್ತು.

ಮೊಜಿಲ್ಲಾ

ಮೊಜಿಲ್ಲಾ

ಫೈರ್‌ಫಾಕ್ಸ್ ಹ್ಯಾಕ್

ಆಗಸ್ಟ್ ಪ್ರಥಮ ವಾರದಲ್ಲಿ ರಷ್ಯಾದ ನ್ಯೂಸ್ ಸೈಟ್‌ನಲ್ಲಿ ಫೈರ್‌ಫಾಕ್ಸ್ ಅನ್ನು ದುರ್ಬಳಕೆ ಮಾಡಿರುವುದನ್ನು ಮೊಜಿಲ್ಲಾ ಬಳಕೆದಾರರಿಗೆ ಎಚ್ಚರಿಸಿತ್ತು.

ಗ್ಯಾಜೆಟ್ ಒಂದನ್ನು ರೂಪಿಸಿ ಕಾರುಗಳನ್ನು ಕದಿಯಲಾಗುತ್ತಿತ್ತು.

ಗ್ಯಾಜೆಟ್ ಒಂದನ್ನು ರೂಪಿಸಿ ಕಾರುಗಳನ್ನು ಕದಿಯಲಾಗುತ್ತಿತ್ತು.

ಕಾರು ಲಾಕ್ ತೆರೆಯುವ ಗ್ಯಾಜೆಟ್

ಕಾರಿನ ಕೀಯನ್ನು ಬಳಸದೆಯೇ ಬಾಗಿಲನ್ನು ತೆರೆಯುವ ಗ್ಯಾಜೆಟ್ ಒಂದನ್ನು ರೂಪಿಸಿ ಕಾರುಗಳನ್ನು ಕದಿಯಲಾಗುತ್ತಿತ್ತು.

ಡೆಲ್ ಕಂಪ್ಯೂಟರ್

ಡೆಲ್ ಕಂಪ್ಯೂಟರ್

ಡೆಲ್ ಕಂಪ್ಯೂಟರ್ ಹ್ಯಾಕ್

ನವೆಂಬರ್‌ನಲ್ಲಿ ಡೆಲ್ ಕಂಪ್ಯೂಟರ್‌ಗಳನ್ನು ಹ್ಯಾಕ್ ಮಾಡಲಾಗಿತ್ತು. ಬಳಕೆದಾರರಿಗೆ ತಿಳಿಯದೆಯೇ ಹ್ಯಾಕರ್‌ಗಳು ಕಂಪ್ಯೂಟರ್‌ಗಳಲ್ಲಿದ್ದ ಮಾಹಿತಿಯನ್ನು ಕದಿಯುತ್ತಿದ್ದರು.

ವಿಟೆಕ್

ವಿಟೆಕ್

ಟಾಯ್ ಮೇಕರ್ ವಿಟೆಕ್ ಹ್ಯಾಕ್ಸ್

ನವೆಂಬರ್‌ನಲ್ಲಿ ಚೀನಾದ ಆಟಿಕೆ ತಯಾರಿ ಸಂಸ್ಥೆ ವಿಟೆಕ್ ಅನ್ನು ಹ್ಯಾಕ್ ಮಾಡಿದ್ದು ಇದು ಮಕ್ಕಳು ಮತ್ತು ಅವರ ಪೋಷಕರ ಮೇಲೆ ಗಂಭೀರ ಪರಿಣಾಮವನ್ನು ಬೀರಿತ್ತು. ಕದಿಯಲಾದ ಮಾಹಿತಿಗಳು ಹೆಸರುಗಳು, ಇಮೇಲ್ ವಿಳಾಸ ಮತ್ತು ಎನ್‌ಕ್ರಿಪ್ಟ್ ಮಾಡಲಾದ ಪಾಸ್‌ವರ್ಡ್‌ಗಳು, ಐಪಿ ವಿಳಾಸ ಹಾಗೂ ಇತರ ಸೂಕ್ಷ್ಮ ಮಾಹಿತಿಗಳನ್ನು ಒಳಗೊಂಡಿತ್ತು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
In this article we are listing out 10 biggest hacking attacks of 2015 which will effects users in a danger. These websites stolen all the informations of users and blackmailed them.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot