ಹ್ಯಾಕಿಂಗ್ ತಪ್ಪಿಸಲು 'ಹ್ಯಾಕಿಂಗ್ ವಿತ್ ಸ್ಮಾರ್ಟ್‌ಫೋನ್ಸ್' ಬುಕ್
ಸಮಯ ಮತ್ತು ಸಮುದ್ರದ ಅಲೆಗಳು ಯಾರನ್ನು ಕಾಯೋದಿಲ್ಲ. ಅನ್ನೋದು ಬಹುಶಃ ಅಸಂಖ್ಯಾತ ಭಾರತೀಯರಿಗೆ ಅರ್ಥವಾಗಿಬಿಟ್ಟಿದೆ. ಟೆಕ್ ನ್ಯೂಸ್‌ನಲ್ಲಿ ಎನಪ್ಪಾ ಇದು ಈ ರೀತಿ ಹೇಳ್ತಿದ್ದಾರಲ್ಲಾ ಅಂತ ಗಾಬರಿ ಆಗಬೇಡಿ. ಹಾಗೆ ಹೇಳೋದಕ್ಕೂ ಭಾರತೀಯರೆಲ್ಲರೂ ತಿಳಿಯಲೇ ಬೇಕಾದ ಒಂದು ಪ್ರಮುಖ ಕಾರಣ ವಿದೆ.
ಓದಿರಿ: ಈ ವೆಬ್‌ಸೈಟ್‌ಗಳಲ್ಲಿ ಉಚಿತ ಸಿನಿಮಾಗಳನ್ನು ನೋಡಿರಿ
ಪ್ರಸ್ತುತದಲ್ಲಿ ಭಾರತದಲ್ಲಿ 319 ಮಿಲಿಯನ್‌ಗಿಂತ ಅಧಿಕ ಇಂಟರ್‌ನೆಟ್ ಬಳಕೆದಾರರನ್ನು ಹೊಂದಿದೆ. ಇವರಲ್ಲಿ 200 ಮಿಲಿಯನ್‌ಗಿಂತಲು ಹೆಚ್ಚು ಮೊಬೈಲ್ ಇಂಟರ್ನೆಟ್ ಬಳಕೆದಾರರಿದ್ದಾರೆ. ತಮ್ಮ ಅಮೂಲ್ಯ ಸಮಯವನ್ನು ಉಳಿಸಲು ಇಂದು ಇಂಟರ್‌ನೆಟ್ ಬಳಕೆದಾರರೆಲ್ಲಾ ಆನ್‌ಲೈನ್ ಶಾಪಿಂಗ್, ಬ್ಯಾಂಕಿಂಗ್ ಮುಂತಾದ ಹಲವು ಸೇವೆಗಳನ್ನು ಪಡೆಯುತ್ತಿದ್ದಾರೆ. ಇವರೆಲ್ಲಾ ಅಧಿಕವಾಗಿ ಹ್ಯಾಕಿಂಗ್ ಎಂಬ ಸಮಸ್ಯೆಗೆ ಸಿಲುಕುತ್ತಿದ್ದಾರೆ.
ಓದಿರಿ: ಹುವಾವೇಯಿಂದ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಹ್ಯಾಕ್
ಹೌದು, ಅಧಿಕವಾಗಿ ಬ್ಯಾಂಕಿಂಗ್ ಸೇವೆಯನ್ನು ಇಂಟರ್‌ನೆಟ್ ನಲ್ಲಿ ಬಳಸುವವರೆಲ್ಲಾ ಹ್ಯಾಕಿಂಗ್ ಸಮಸ್ಯೆಗೆ ಸಿಲುಕುತ್ತಿರುವ ಬಗ್ಗೆ ವರದಿಗಳು ಹೆಚ್ಚುತ್ತಿವೆ. ಇದರಿಂದ ಎಚ್ಚೆತ್ತು ಕೊಳ್ಳಲು ಈಗ ಭಾರತ ಸೈಬರ್ ಸೆಕ್ಯುರಿಟಿ ತಜ್ಞ ತ್ರಿಸ್ನೀಟ್ ಅರೋರಾ ಬುಕ್ ಒಂದನ್ನು ಬರೆದಿದ್ದಾರೆ. ಈ ಬಗ್ಗೆ ಪ್ರಮುಖ ಅಂಶಗಳನ್ನು ಗಿಜ್‌ಬಾಟ್ ನಿಮಗಾಗಿ ಈ ಲೇಖನದಲ್ಲಿ ನೀಡಿದೆ.

ಹ್ಯಾಕಿಂಗ್ ಸಮಸ್ಯೆಗೆ ಸಿಲುಕುತ್ತಿರುವುದು
ಮೊಬೈಲ್‌ನಲ್ಲಿ ಇಂಟರ್ನೆಟ್‌ನಿಂದ ಇ-ಕಾಮರ್ಸ್ ಮತ್ತು ನೆಟ್ ಬ್ಯಾಂಕಿಂಗ್ ಅನ್ನು ಭಾರತದಲ್ಲಿ ಬಳುಸುತ್ತಿದ್ದು, ಹೆಚ್ಚು ಹ್ಯಾಕಿಂಗ್ ಸಮಸ್ಯೆಗೆ ಸಿಲುಕಲು ಕಾರಣವಾಗುತ್ತಿದೆ.

'ಹ್ಯಾಕಿಂಗ್ ವಿತ್ ಸ್ಮಾರ್ಟ್‌ಫೋನ್ಸ್'
ತ್ರಿಸ್ನೀಟ್ ಅರೋರಾ 'ಹ್ಯಾಕಿಂಗ್ ವಿತ್ ಸ್ಮಾರ್ಟ್‌ಫೋನ್ಸ್' ಎಂಬ ಹೊಸ ಬುಕ್ ಒಂದನ್ನು ಬರೆದಿದ್ದು, ಇದರಲ್ಲಿ ಹ್ಯಾಕಿಂಗ್ ಆಗುವಂತಹ ಸಂಭವಗಳನ್ನು ಬರೆಯಲಾಗಿದೆ.

ತ್ರಿಸ್ನೀಟ್ ಅರೋರಾ
ಇವರು ಕೇವಲ 21 ವರ್ಷದವರಾಗಿದ್ದು, ಈ ಹಿಂದೆ 'ಹ್ಯಾಕಿಂಗ್ ಟಾಕ್ ವಿತ್ ತ್ರಿಸ್ನೀಟ್' ಮತ್ತು 'ಹ್ಯಾಕಿಂಗ್ ಎರಾ' ಎಂಬ ಎರಡು ಬುಕ್‌ಗಳನ್ನು ಬರೆದಿದ್ದಾರೆ.

ಬುಕ್ ಸಲಹೆಗಳು
ಈ ಬುಕ್‌ಗಳು ಸರಳ ರೀತಿಯಲ್ಲಿ ಸ್ಮಾರ್ಟ್‌ಫೋನ್ ಹ್ಯಾಕ್‌ಮಾಡುವ ತಂತ್ರಗಳು ಮತ್ತು ಅದರಿಂದ ಬಚಾವಾಗಲು ಏನು ಮಾಡಬೇಕೆಂಬ ಸಲಹೆಗಳನ್ನು ನೀಡಿದೆ.

ಸುಖ್‌ಚೈನ್
ಈ ಬುಕ್ ಚಂಡಿಗಢ್‌ನ ಪ್ರೆಸ್ ಕ್ಲಬ್‌ನಲ್ಲಿ ಶುಕ್ರವಾರ SSP ಸುಖ್‌ಚೈನ್‌ರಿಂದ ಬಿಡುಗಡೆಗೊಂಡಿದೆ.

ತ್ರಿಸ್ನೀಟ್ ಅರೋರಾ ಹೇಳಿದ್ದೇನು ?
ಭಾರತದಲ್ಲಿ ಸುಮಾರು 300 ಮಿಲಿಯನ್ ಇಂಟರ್ನೆಟ್ ಬಳಕೆದಾರರಿದ್ದು, ಇವರಲ್ಲಿ 200 ಮಿಲಿಯನ್ ಮೊಬೈಲ್ ಇಂಟರ್ನೆಟ್ ಬಳಕೆದಾರರಿದ್ದಾರೆ. ಇವರಲ್ಲಿ ಶೇಕಡ 40 ಬಳಕೆದಾರರು ಇ-ಕಾಮರ್ಸ್ ಮತ್ತು ಬ್ಯಾಂಕಿಂಗ್ ಸೇವೆಯನ್ನು ಮೊಬೈಲ್ ಇಂಟರ್ನೆಟ್ ನಿಂದ ಬಳಸುತ್ತಿದ್ದಾರೆ.

ತ್ರಿಸ್ನೀಟ್ ಅರೋರಾ ಹೇಳಿದ್ದೇನು ?
ಸರ್ಕಾರ ತನ್ನ ಸೇವೆಗಳನ್ನು ಆನ್‌ಲೈನ್ ಮೂಲಕ ನಿರ್ವಹಿಸಲು ಯೋಜನೆಗಳನ್ನು ಕೈಗೊಳ್ಳುತ್ತಿದೆ. ಅದರಲ್ಲೂ ವಿಶೇಷವಾಗಿ ಮೊಬೈಲ್ ಇಂಟರ್‌ನೆಟ್ ಮೂಲಕ ಈ ಸೇವೆಗಳು ದೊರೆಯಲಿವೆ. ಆದರೆ ಇಂತಹ ಚಟುವಟಿಕೆಗಳಿಂದ ಸ್ಮಾರ್ಟ್‌ಫೋನ್‌ಗಳು ಹ್ಯಾಕ್ ಆಗುವ ಸಮಸ್ಯೆಗಳು ಹೆಚ್ಚು. ಹ್ಯಾಕ್ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಸಲಹೆಗಳನ್ನು ಈ ಬುಕ್ ಹೊಂದಿದೆ.

ಸಲಹೆ ಮತ್ತು ತಂತ್ರಗಳು
ಈ ಬುಕ್‌ನಿಂದ ಸ್ಮಾರ್ಟ್‌ಫೋನ್ ಹ್ಯಾಕ್ ಮಾಡುವ ವಿಧಾನವನ್ನು ತಿಳಿಯಬಹುದು. ಹಾಗೆಯೇ ಆ ಸಮಸ್ಯೆಗಳಿಂದ ಬಚಾವಾಗಲು ತಂತ್ರಗಳನ್ನು ತಿಳಿಯ ಬಹುದಾಗಿದೆ.

ಸೈಬರ್ ಕ್ರೈಂನಿಂದ ರಕ್ಷಣೆ
ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಹೆಚ್ಚುತ್ತಿದ್ದು, ಇವುಗಳಿಂದ ಆಗಬಹುದಾದ ಸಮಸ್ಯೆಗಳಿಂದ ಪಾರಾಗಲು ಉತ್ತಮ ಸಲಹೆಗಳನ್ನು ಬುಕ್ ಹೊಂದಿದೆ.

ಪೋಲೀಸರಿಗೆ ಸಹಾಯ
ತ್ರಿಸ್ನೀಟ್ ತನ್ನ ಉತ್ತಮ ಟೆಕ್ ಸಲಹೆಯಿಂದ ಪಂಜಾಬ್ ಮತ್ತು ಗುಜರಾತ್ ಪೋಲೀಸರಿಗೆ ಸೈಬರ್ ಕ್ರೈಂ ಪ್ರಕರಣಗಳನ್ನು ತನಿಖೆ ಮಾಡಲು ಸಹಾಯ ಮಾಡಿದ್ದಾರೆ.


Click it and Unblock the Notifications








