Subscribe to Gizbot

ಆರೋಗ್ಯ ಮಾಹಿತಿಯನ್ನೊದಗಿಸುವ ಟಾಪ್ 10 ಗ್ಯಾಜೆಟ್‌ಗಳು

Written By:

ನಾವು ಪ್ರತಿಯೊಂದು ರೀತಿಯ ಗ್ಯಾಜೆಟ್ ಅನ್ನು ಇಷ್ಟಪಡುತ್ತೇವೆ. ಅಡುಗೆ ಕೋಣೆಗೆ ಸಂಬಂಧಪಟ್ಟದ್ದಾಗಿರಬಹುದು ಇಲ್ಲವೇ ಇಲೆಕ್ಟ್ರಾನಿಕ್‌ಗೆ ಸಂಬಂಧಿಸಿದ್ದೇ ಆಗಿರಬಹುದು. ಇನ್ನು ವೇರಿಯೇಬಲ್ ಗ್ಯಾಜೆಟ್‌ಗಳೂ ಕೂಡ ಬಹಳಷ್ಟಿದ್ದು ನಿಮ್ಮ ಸಾಕುಪ್ರಾಣಿಗಾಗಿ ವಿನ್ಯಾಸಪಡಿಸಿರುವ ಗ್ಯಾಜೆಟ್‌ಗಳೂ ಇದೆ ಅಂದರೆ ನಿಮ್ಮ ಮನೆಯ ಪ್ರತಿಯೊಬ್ಬರೂ ಇಷ್ಟಪಡುವ ಗ್ಯಾಜೆಟ್‌ಗಳು ಕೂಡ ಇವೆ.

ಇದನ್ನೂ ಓದಿ: ಪೆನ್ ಡ್ರೈವ್ ಚಿಕ್ಕದಾದರೂ ಕಾರ್ಯ ಮಾತ್ರ ಭಿನ್ನವಾದುದು ಹೇಗೆ?

ನಿಮ್ಮ ಸ್ಮಾರ್ಟ್‌ಫೋನ್‌ನೊಂದಿಗೆ ಸಂಯೋಜಿಸಲಾಗುವ ಗ್ಯಾಜೆಟ್‌ಗಳು ಕೂಡ ಇದ್ದು ಇದು ನಿಮ್ಮನ್ನು ಆರೋಗ್ಯಕರ ಮತ್ತು ಫಿಟ್ ಆಗಿ ಮಾಡುತ್ತವೆ. ಇಂದಿನ ಲೇಖನದಲ್ಲಿ ಆ ಗ್ಯಾಜೆಟ್‌ಗಳು ಯಾವುವು ಎಂಬುದನ್ನು ಕುರಿತು ಅರಿತುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫಿನಿಸ್ ನೆಪ್ಚೂನ್

ಆರೋಗ್ಯ ಮಾಹಿತಿಯನ್ನೊದಗಿಸುವ ಟಾಪ್ 10 ಗ್ಯಾಜೆಟ್‌ಗಳು

ಇದನ್ನು ನಿಮ್ಮ ಕಿವಿಗೆ ಅಳವಡಿಸಿ ಚಟುವಟಿಕೆಗಳನ್ನು ಕೈಗೊಳ್ಳಬಹುದಾಗಿದೆ. ಇದನ್ನು ನಿಮ್ಮ ಕಿವಿಗೆ ಸಿಕ್ಕಿಸಿದರೆ ಸಾಕು ಹಾಡುಗಳನ್ನು ಆನಂದಿಸುತ್ತಾ ನಿಮ್ಮ ಮೆಚ್ಚಿನ ಕ್ರೀಡೆಯಲ್ಲಿ ಭಾಗವಹಿಸಬಹುದು.

ಮಿಸ್‌ಫಿಟ್ ಶೈನ್

ಆರೋಗ್ಯ ಮಾಹಿತಿಯನ್ನೊದಗಿಸುವ ಟಾಪ್ 10 ಗ್ಯಾಜೆಟ್‌ಗಳು

ನಿಮ್ಮ ಪಾಕೆಟ್‌ಗೆ ಸರಿಹೊಂದುವ ಗ್ಯಾಜೆಟ್ ಇದಾಗಿದ್ದು, ನಿಮ್ಮ ಚಲನವಲನಗಳನ್ನು ಇದು ಟ್ರ್ಯಾಕ್ ಮಾಡುತ್ತದೆ.

ಸ್ಪೋರ್ಟೀಸ್

ಆರೋಗ್ಯ ಮಾಹಿತಿಯನ್ನೊದಗಿಸುವ ಟಾಪ್ 10 ಗ್ಯಾಜೆಟ್‌ಗಳು

ಇದು ನಿಮ್ಮ ಹೃದಯಬಡಿತವನ್ನು ಸುರಕ್ಷಿತವಾಗಿ ಟ್ರ್ಯಾಕ್ ಮಾಡುತ್ತದೆ ಮತ್ತು ಇದು ಎಲ್‌ಇಡಿಯನ್ನು ಒಳಗೊಂಡಿದ್ದು ನಿಮ್ಮ ಹಾರ್ಟ್ ರೇಟ್ ಅನ್ನು ಸೂಚಿಸುತ್ತದೆ.

SpO2 Pulse Oximeter (SpO2 ಪಲ್ಸ್ ಓಕ್ಸಿಮೀಟರ್)

ಆರೋಗ್ಯ ಮಾಹಿತಿಯನ್ನೊದಗಿಸುವ ಟಾಪ್ 10 ಗ್ಯಾಜೆಟ್‌ಗಳು

ನಿಮ್ಮ ರಕ್ತದಲ್ಲಿನ ಆಮ್ಲಜನಕದ ಮಟ್ಟ, ನಾಡಿಮಿಡಿತವನ್ನು ಇದು ಟ್ರ್ಯಾಕ್ ಮಾಡುತ್ತದೆ ಮತ್ತು ನಿಮ್ಮ ಐಓಎಸ್‌ಗೆ ಕಳುಹಿಸುತ್ತದೆ.

ಹ್ಯಾಪಿಫೋರ್ಕ್

ಆರೋಗ್ಯ ಮಾಹಿತಿಯನ್ನೊದಗಿಸುವ ಟಾಪ್ 10 ಗ್ಯಾಜೆಟ್‌ಗಳು

ನಿಮ್ಮ ತಿನ್ನುವ ಅಭ್ಯಾಸಕ್ಕೆ ಕಡಿವಾಣ ಹಾಕುವ ಹ್ಯಾಪಿಪೋರ್ಕ್ ಗ್ಯಾಜೆಟ್ ಅಧಿಕ ತೂಕದ ಮೇಲೆ ನಿಯಂತ್ರಣವನ್ನು ಹೇರುತ್ತದೆ.

ಫಿಟ್‌ಬಿಟ್ ಅರಿಯಾ

ಆರೋಗ್ಯ ಮಾಹಿತಿಯನ್ನೊದಗಿಸುವ ಟಾಪ್ 10 ಗ್ಯಾಜೆಟ್‌ಗಳು

ತಮ್ಮ ತೂಕದ ಬಗ್ಗೆ ಚಿಂತೆಯನ್ನು ಹೊಂದಿರುವವರಿಗೆ ಈ ಫಿಟ್‌ಬಿಟ್ ಆರಿಯಾ ಅತ್ಯುತ್ತಮ ಗ್ಯಾಜೆಟ್ ಆಗಿದೆ ಇದನ್ನು 8 ಬಳಕೆದಾರರು ಬಳಸಬಹುದಾಗಿದ್ದು ದೇಹದ ಕೊಬ್ಬಿನ ಪ್ರಮಾಣವನ್ನು ಇದು ಟ್ರ್ಯಾಕ್ ಮಾಡುತ್ತದೆ ಹಾಗೂ ನಿಮ್ಮ ಕಂಪ್ಯೂಟರ್‌ನಲ್ಲಿ ತೋರಿಸುತ್ತದೆ.

ಟ್ರೇಸ್

ಆರೋಗ್ಯ ಮಾಹಿತಿಯನ್ನೊದಗಿಸುವ ಟಾಪ್ 10 ಗ್ಯಾಜೆಟ್‌ಗಳು

ಕ್ರೀಡೆಗಳಿಗೆ ಬಳಸಬಹುದಾದ ಗ್ಯಾಜೆಟ್ ಇದಾಗಿದ್ದು ಆಕ್ಷನ್ ಕ್ರೀಡೆಗಳಿಗೆ ಇದು ಹೇಳಿಮಾಡಿಸಿದ್ದಾಗಿದೆ.

ಅಮಿಗೊ ಫಿಟ್‌ನೆಸ್ ಬ್ರಾಸ್‌ಲೆಟ್

ಆರೋಗ್ಯ ಮಾಹಿತಿಯನ್ನೊದಗಿಸುವ ಟಾಪ್ 10 ಗ್ಯಾಜೆಟ್‌ಗಳು

ನೀವು ಮಾಡುವ ನಿರ್ದಿಷ್ಟ ವರ್ಕ್‌ಔಟ್ ಮೇಲೆ ಇದು ನಿಗಾಇರಿಸಿ ನಿಮಗೆ ಸರಿಯಾದ ಮಾಹಿತಿಯನ್ನು ನೀಡುತ್ತದೆ. ನಿಮ್ಮ ದೇಹದ ಮೇಲ್ಭಾಗ ಹಾಗೂ ಕೆಳಭಾಗದ ಚಲನೆಗಳನ್ನು ಇದು ಟ್ರ್ಯಾಕ್ ಮಾಡುತ್ತದೆ.

ಸೆನ್ಸೋರಿಯಾ ಸ್ಮಾರ್ಟ್ ಸಾಕ್

ಆರೋಗ್ಯ ಮಾಹಿತಿಯನ್ನೊದಗಿಸುವ ಟಾಪ್ 10 ಗ್ಯಾಜೆಟ್‌ಗಳು

ವಿಶೇಷವಾಗಿ ಕ್ರೀಡಾಳುಗಳಿಗಾಗಿ ಈ ಗ್ಯಾಜೆಟ್ ಅನ್ನು ತಯಾರಿಸಲಾಗಿದ್ದು, ನಿಮ್ಮ ಓಡಾಟದಲ್ಲಿ ನೀವೆಷ್ಟು ನಿಷ್ಣಾತರು ಹಾಗೂ ನಿಮ್ಮ ಪರ್ಫಾಮೆನ್ಸ್ ಅನ್ನು ಇನ್ನಷ್ಟು ಉತ್ತಮವಾಗಿ ಹೇಗೆ ಮಾಡಬಹುದು ಎಂಬುದನ್ನು ಈ ಗ್ಯಾಜೆಟ್ ನಿಮಗೆ ತಿಳಿಸುತ್ತದೆ.

ಉಮೋರೋ ಒನ್

ಆರೋಗ್ಯ ಮಾಹಿತಿಯನ್ನೊದಗಿಸುವ ಟಾಪ್ 10 ಗ್ಯಾಜೆಟ್‌ಗಳು

ಜಿಮ್‌ನಲ್ಲಿ ಅಭ್ಯಾಸ ನಡೆಸುವವರಿಗೆ ಈ ಬಾಟಲ್ ನಿಜಕ್ಕೂ ಅತ್ಯುತ್ತಮವಾಗಿದೆ. ಇದು ಪ್ರೊಟೀನ್ ಮಿಕ್ಸ್ ಪೇಯವಾಗಿದ್ದು ನಿಮ್ಮ ವರ್ಕ್ ಔಟ್ ಸಮಯದಲ್ಲಿ ನೆರವನ್ನು ನೀಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about These gadgets may be able to help you make the best of your workout sessions, track your health progress and have fun at the same time.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot