ಪತ್ತೇದಾರರಾಗಾಲು ಈ ಗ್ಯಾಜೆಟ್ಸ್ ಬಳಸಿದರೆ ಸಾಕು

Posted By:

ಪತ್ತೇದಾರಿ ಕೆಲಸಗಳೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ನಿಮ್ಮೊಳಗಿನ ಯುಕ್ತಿಯನ್ನು ಹೊರಹಾಕಲು ಪತ್ತೇದಾರಿಕೆ ಬಿಟ್ಟು ಬೇರೆ ವಿಧಾನವಿಲ್ಲ. ನಿಮ್ಮಲ್ಲಿ ಹಸಿರಾಗಿರುವ ಪತ್ತೇದಾರಿಕೆಯನ್ನು ಹೊರಹಾಕಬೇಕೆಂದೇ ಇಂದಿನ ಲೇಖನದಲ್ಲಿ ಕೆಲವೊಂದು ಗ್ಯಾಜೆಟ್‌ಗಳನ್ನು ನೀವು ನೀಡುತ್ತಿದ್ದು ಇದು ನಿಮ್ಮ ಪತ್ತೇದಾರಿಕೆಗೆ ಸಹಾಯ ಮಾಡುವುದರಲ್ಲಿ ಸಂದೇಹವೇ ಇಲ್ಲ.

ಓದಿರಿ: ಗೂಗಲ್ ಕುರಿತಾದ 10 ಆಸಕ್ತಿಕರ ಸಂಗತಿಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಇಯರ್ ಹಿಯರಿಂಗ್

ಬಯೋನಿಕ್ ಇಯರ್ ಹಿಯರಿಂಗ್ ಏಂಪ್ಲಿಫೈಯರ್

ಗುಪ್ತ ಚರ್ಚೆಗಳನ್ನು ಅರಿಯಲು ಈ ಗ್ಯಾಜೆಟ್ ಸಹಕಾರಿಯಾಗಿದೆ. ನೀವು 20 ಫೀಟ್ ಅಂತರದಲ್ಲಿದ್ದರೂ ಈ ಗ್ಯಾಜೆಟ್ ಬಳಸಿ ಸಂಭಾಷಣೆಯನ್ನು ಆಲಿಸಬಹುದು.

ಸ್ಪೈ ಗ್ಯಾಜೆಟ್ಸ್

ಕೂಲ್ ಸ್ಪೈ ಗ್ಯಾಜೆಟ್ಸ್

ಈ ಕನ್ನಡಕಗಳನ್ನು ಧರಿಸಿ ಕತ್ತಲೆಯಲ್ಲಿರುವ ವಸ್ತುಗಳನ್ನು ಪತ್ತೆಹಚ್ಚಬಹುದು. ಇದರಲ್ಲಿರುವ ಎಲ್‌ಇಡಿ ಲೈಟ್ ಕತ್ತಲೆಯಲ್ಲಿ ವಸ್ತುಗಳನ್ನು ಕಾಣಲು ನಿಮಗೆ ಸಹಾಯ ಮಾಡುತ್ತದೆ.

ಮೌಸ್ ಟ್ರಾನ್ಸಮೀಟರ್

ಕಂಪ್ಯೂಟರ್ ಮೌಸ್ ಟ್ರಾನ್ಸಮೀಟರ್

ಈ ಕಂಪ್ಯೂಟರ್ ಮೌಸ್ ನಿಂತು ಏನಾದರೂ ಹೇಳುವುದಿದ್ದರೆ ಸ್ವಲ್ಪ ಜಾಗ್ರತೆ ವಹಿಸಿ. ಇದರಲ್ಲಿ ಅಲ್ಟ್ರಾ ಮಿನಿ ಮೈಕ್ರೋಫೋನ್ ಮತ್ತು ಟ್ರಾನ್ಸ್‌ಮೀಟರ್ ಸರ್ಕ್ಯೂಟ್ ಇದ್ದು ಇದು 32 ಫೀಟ್ ಅಂತರದಲ್ಲೂ ಧ್ವನಿಯನ್ನು ಕೇಳಿಸಿಕೊಳ್ಳಬಹುದು.

ಸೇಫ್ ಗಾರ್ಡ್

ವೆಹಿಕಲ್ ಸೇಫ್ ಗಾರ್ಡ್

ಇದನ್ನು ಬಳಸಿ ಕೆಟ್ಟದಾಗಿ ವಾಹನ ಓಡಿಸುವವರನ್ನು ಸುಲಭವಾಗಿ ಸೆರೆಹಿಡಿಯಬಹುದಾಗಿದೆ. ಇದರಲ್ಲಿರುವ ಕ್ಯಾಮೆರಾ ವೀಡಿಯೋ ರೆಕಾರ್ಡಿಂಗ್ ಮಾಡುತ್ತದೆ.

ಅನ್‌ಶ್ರೆಡ್ಡರ್

ಅನ್‌ಶ್ರೆಡ್ಡರ್

ಡಾಕ್ಯುಮೆಂಟ್‌ಗಳನ್ನು ಮರುಜೋಡಿಸುವಲ್ಲಿ ಈ ಅನ್‌ಶ್ರೆಡ್ಡರ್ ನಿಮಗೆ ನೆರವನ್ನು ಒದಗಿಸುತ್ತದೆ.

ಚಾರ್ಜರ್ ಡಿವಿಆರ್

ಅಜೋಕಾ ಚಾರ್ಜರ್ ಡಿವಿಆರ್

ಇದು ಸಾಮಾನ್ಯವಾದ ಏಸಿ ಅಡಾಪ್ಟರ್ ಅಲ್ಲ. ಅಜೋಕಾದ ಚಾರ್ಜರ್ ಡಿವಿಆರ್ ಇದಾಗಿದ್ದು ಬಿಲ್ಟ್ ಇನ್ ಆಡಿಯೊ ವೀಡಿಯೋ ಕ್ಯಾಮೆರಾವನ್ನು ಒಳಗೊಂಡಿದೆ ಇದನ್ನು ಬಳಸಿ ರೆಕಾರ್ಡ್ ಮಾಡಬಹುದಾಗಿದೆ.

ಸೆಕ್ಯುರಿಟಿ ಸೆಲ್ ಫೋನ್

ಬ್ರಿಕ್ ಹೌಸ್ ಸೆಕ್ಯುರಿಟಿ ಸೆಲ್ ಫೋನ್

ಫೋನ್‌ನಿಂದ ಸಿಮ್ ಕಾರ್ಡ್ ಅನ್ನು ಹೊರತೆಗೆಯುವ ಮೂಲಕ ಸೆಲ್‌ಫೋನ್‌ನಲ್ಲಿರುವ ಫೈಲ್‌ಗಳನ್ನು ವೀಕ್ಷಿಸಲು, ಉಳಿಸಲು ಮತ್ತು ಸಂಪಾದಿಸಲು ನೆರವಾಗುತ್ತದೆ.

ಸನ್‌ಗ್ಲಾಸ್

ಸನ್‌ಗ್ಲಾಸ್ ಡಿವಿಆರ್ ಕ್ಯಾಮೆರಾ

ಅಜೋಕಾದ ಸನ್‌ಗ್ಲಾಸ್ ಡಿವಿಆರ್ ಕ್ಯಾಮೆರಾ ಜೇಮ್ಸ್ ಬಾಂಡ್ ಕಾಲದಿಂದಲೂ ಪ್ರಸಿದ್ಧಿಯಲ್ಲಿದೆ. ಈ ಸನ್ ಗ್ಲಾಸ್ ಏನನ್ನು ಬೇಕಾದರೂ ರೆಕಾರ್ಡ್ ಮಾಡುವ ಸಾಮರ್ಥ್ಯ ಪಡೆದುಕೊಂಡಿದೆ.

ಅಪಾಯಕಾರಿ ಪೋಲೀಸ್ ಚೇಸ್

ಸ್ಟಾರ್ ಚೇಸ್

ಅಪಾಯಕಾರಿ ಪೋಲೀಸ್ ಚೇಸ್ ಅನ್ನು ನಿವಾರಣೆ ಮಾಡಲು ಇದು ಸಹಕಾರಿಯಾಗಿದೆ. ವಾಹನದ ಹಿಂಭಾಗದಲ್ಲಿರುವ ಲೇಸರ್ ಮತ್ತು ಫೈರಿಂಗ್ ಪ್ರಾಜೆಕ್ಟಿಲ್ ಅನ್ನು ಒಳಗೊಂಡಿದೆ ಅಂದರೆ ಇದರಲ್ಲಿ ಜಿಪಿಎಸ್ ರಿಸೀವರ್, ವೈರ್‌ಲೆಸ್ ಟ್ರಾನ್ಸ್‌ಮೀಟರ್ ಮತ್ತು ಬ್ಯಾಟರಿಯನ್ನು ಕಾಣಬಹುದಾಗಿದೆ.

ನೋಕಿಯಾ ಫೋನ್

ಇಂಟರ್‌ಸೆಪ್ಟರ್ ಸಾಫ್ಟ್‌ವೇರ್

ಬೇರೆಯವರ ಸಂದೇಶಗಳು ಮತ್ತು ಅವರು ಯಾರಿಗೆ ಕರೆಮಾಡುತ್ತಿದ್ದಾರೆ ಎಂಬುದನ್ನು ಈ ನೋಕಿಯಾ ಫೋನ್ ಬಳಸಿ ಕಂಡುಹಿಡಿಯಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Here are the 10 Cool Spy Gadgets which will help you to find out the spy.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot