ತಂತ್ರಜ್ಞಾನ ಕ್ಷೇತ್ರ ಕುರಿತಾದ ಹತ್ತು ಸತ್ಯಗಳು

Posted By: Staff
ತಂತ್ರಜ್ಞಾನ ಕ್ಷೇತ್ರ ಕುರಿತಾದ ಹತ್ತು ಸತ್ಯಗಳು

ತಂತ್ರಜ್ಞಾನ ಕ್ಷೇತ್ರದಲ್ಲಂತೂ ಒಂದು ನೂತನ ಆವಿಷ್ಕಾರಗಳು ನಡೆಯುತ್ತಲೇ ಇರುತ್ತದೆ. ಇಂತಹ ಆವಿಷ್ಕಾರಗಳಿಂದಲೇ ಇಂದು ತಂತ್ರಜ್ಞಾನ ಕ್ಷೇತ್ರವು ಆತ್ಯಾಧುನಿಕ ಹಂತಕ್ಕೆ ಬಂದು ತಲುಪಿದೆ. ಇದಕ್ಕಾಗಿ ಈ ಹೀಂದೆ ಹಲವಾರು ಮಂದಿ ಅನೇಕ ಆವಿಷ್ಕಾರಗಳನ್ನು ಮಾಡುವ ಮೂಲಕ ತಂತ್ರಜ್ಞಾನ ಕ್ಷೇತ್ರಕ್ಕೆ ಅಮೋಘ ಕೊಡುಗೆಯನ್ನು ನೀಡುವ ಮೂಲಕ ಇತಿಹಾಸದ ಪುಟ ಸೇರಿದ್ದಾರೆ. ಈ ನಡುವೆ ತಂತ್ರಜ್ಞಾನ ಕ್ಷೇತ್ರದ ಕುರಿತಾಗಿಅನೇಕ ಸತ್ಯಾಸತ್ಯತೆಗೂ ಹೊರ ಬರದೆ ಹಾಗೆಯೇ ಉಳಿದು ಬಿಡುತ್ತವೆ. ಅದಕ್ಕಾಗಿಯೇ ಇಂದು ಗಿಜ್ಬಾಟ್‌ ತಂತ್ರಜ್ಞಾನ ಕ್ಷೇತ್ರದ ಕುರಿತಾಗಿ ತಿಳಿಯ ಬೇಕಾದ 10 ಸತ್ಯಗಳನ್ನು ತಂದಿದೆ ಓದಿ ನೋಡಿ.

1. ಕಂಪ್ಯೂಟರ್‌ ಮುಂದೆ ನಿರಂತರವಾಗಿ ಕಾರ್ಯ ನಿರ್ವಹಿಸುವ ವ್ಯಕ್ಕತ ನಿಮಿಷಕ್ಕೆ 7 ಬಾರಿ ಮಾತ್ರ ಕಣ್ಣು ಮಿಟುಕಿಸುತ್ತಾನೆ. ಅಂದಹಾಗೆ ಸಾಮಾನ್ಯವಾಗಿ 20 ಬಾರಿ ಕಣ್ಣು ಮಿಟುಕಿಸಲಾಗುತ್ತದೆ.

2. ಬಿಲ್ಗೇಟ್ಸ್‌ನ ಮನೆಯ ಡಿಸೈನ್‌ ಮಾಡಲು ಆಪಲ್‌ನ ಮ್ಯಾಕಿಂಥೋಶ್‌ ಕಂಪ್ಯೂಟರ್‌ನ ಬಳಕೆ ಮಾಡಲಾಗಿತ್ತು.

3. ವಿಶ್ವದ ಮೊದಲ ಕಂಪ್ಯೂಟರ್‌ ಮೌಸ್‌ ಡಾಂಗ್‌ ಎಲ್ಜಬರ್ಟ್‌ ಎಂಬಾತ 1964 ರಲ್ಲಿ ಆವಿಷ್ಕರಿಸಿದನು.

4. ಸಾಮಾನ್ಯವಾಗಿ ನಾವು ಒಂದು ದಿನದಲ್ಲಿ ಮಾಡುವ ಟೈಪಿಂಗ್‌ನ ಅಳತೆ ಮಾಡಿದಲ್ಲಿ 12.6 ಮೈಲಿ ದೂರ ಸಾಗಬಹುದಾಗಿದೆ.

5. ಇಡೀ ವಿಶ್ವದಲ್ಲಿ ಕೇವಲ ಅಲಾಸ್ಕಾ ರಾಷ್ಟ್ರದಲ್ಲಿ ಮಾತ್ರವಷ್ಟೇ QWERT ಕೀಬೋರ್ಡ್‌ ಬದಲಾಗಿ ABCD ಶೈಲಿಯ ಕೀಬೋರ್ಡ್‌ ಮಾಡಲಾಗುತ್ತದೆ.

6. ಒಂದು ವರ್ಷದಲ್ಲಿ ಸುಮಾರು 10 ಲಕ್ಷ ಡೊಮೈನ್‌ ಹೆಸರುಗಳನ್ನು ನೊಂದಾಯಿಸಲಾಗುತ್ತದೆ.

7. 14 ಫೆಬ್ರವರಿ 2005 ರಂದು www.youtube.com ಡೋಮೈನ್‌ ಹೆಸರನ್ನು ನೊಂದಣಿ ಮಾಡಿಸಲಾಗಿತ್ತು.

8. 1994 ರಲ್ಲಿ ಮೊದಲ ಬಾರಿಗೆ ಜಾಹಿರಾತಿಗಾಗಿ ಮೊದಲ ಬ್ಯಾನರ್‌ ಬಳಸಲಾಯಿತು.

9. ಬೃಹತ್‌ ಕಂಪ್ಯೂಟರ್‌ ತಯಾರಿಕಾ ಸಂಸ್ಥೆಯಾದ ಹ್ಯಾವ್ಲೆಟ್‌ ಪೆಕಾರ್ಡ್‌ ಸಂಸ್ಥೆಯು 1939 ರಲ್ಲಿ ಒಂದು ಪುಟ್ಟ ಗ್ಯಾರೇಜಿನಲ್ಲಿ ಆರಂಭಿಸ ಲಾಯಿತು.

10. ವಿಶ್ವದಲ್ಲಿ ಈವರೆಗೂ ಬರೋಬ್ಬರಿ 17 ಶತಕೋಟಿ ಡಿವೈಸ್‌ಗಳಲ್ಲಿ ಇಂಟರ್ನೆಟ್‌ ಸಂಪರ್ಕ ಹೊಂದಿವೆ.

ವಿಮಾನವನ್ನೇ ಮೀರಿಸುವಂತೆ ಹಾರಾಡುತ್ತಾನೆ ಈತ!

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot