ಮಾರಾಟ ಕಾಣದೆ ನೆಲಕ್ಕಚ್ಚಿದ ಟಾಪ್ ಉತ್ಪನ್ನಗಳು

By Shwetha
|

ನಾವೀನ್ಯತೆಯ ಅತಿವೇಗ ಎಂದರೆ ಗ್ಯಾಜೆಟ್‌ಗಳು ಕಡಿಮೆ ಆಯುಷ್ಯವನ್ನು ಹೊಂದಿವೆ ಎಂದರ್ಥವಾಗಿದೆ. ಕೆಲವೊಂದು ತಿಂಗಳಿಂದೀಚೆಗೆ, ಕೆಲವೊಂದು ಡಿವೈಸ್‌ಗಳು ಮುಂದುವರಿಯದೇ ಹಾಗೆಯೇ ಅವಸಾನವಾಗಿರುವುದನ್ನು ನೀವು ಕಾಣಬಹುದು. ಕಡಿಮೆ ಮಾರಾಟಗಳಿಂದಾಗಿಯೇ ಹೆಚ್ಚಿನ ಡಿವೈಸ್‌ಗಳು ಅಂತ್ಯವನ್ನು ಕಂಡಿವೆ.

ಇದನ್ನೂ ಓದಿ: ಟಿಮ್ ಕುಕ್: ಪೇಪರ್ ಮಾರುವ ಹುಡುಗ ಪ್ರಪಂಚವನ್ನು ಗೆದ್ದ ಕಥೆ

ನಿರೀಕ್ಷಿತ ಮಾರಾಟಕ್ಕಿಂತ ಕಡಿಮೆ ಮಾರಾಟ ಹಾಗೂ ದರವನ್ನು ಈ ಗ್ಯಾಜೆಟ್‌ಗಳು ಹೊಂದಿರುವುದರಿಂದ ಇವುಗಳ ಉತ್ಪಾದನೆಯನ್ನು ನಿಲ್ಲಿಸಲಾಗಿದೆ. ಗೂಗಲ್ ಎಲ್‌ಜಿ ತಯಾರಿಕೆಯ ನೆಕ್ಸಸ್ 5 ಅನ್ನು ನಿಲ್ಲಿಸಿರುವುದು ಅಂತೆಯೇ 8 ಜಿಬಿ ಆವೃತ್ತಿಯ ನೆಕ್ಸಸ್ 4 ಉತ್ಪಾದನೆಯನ್ನು ನಿಲ್ಲಿಸಿರುವುದು ಇದಕ್ಕೆ ಉದಾಹರಣೆಯಾಗಿದೆ.

ಇಂದಿನ ಲೇಖನದಲ್ಲಿ ಇತ್ತೀಚೆಗೆ ನಿಲ್ಲಿಸಿರುವ 10 ಗ್ಯಾಜೆಟ್‌ಗಳ ಪಟ್ಟಿಯನ್ನು ನಾವು ಕೆಳಗೆ ನೀಡುತ್ತಿದ್ದೇವೆ.

ನೋಕಿಯಾ ಲ್ಯೂಮಿಯಾ 1020

ನೋಕಿಯಾ ಲ್ಯೂಮಿಯಾ 1020

ಅಕ್ಟೋಬರ್ 2014 ರಂದು ನಿಲ್ಲಿಸಲ್ಪಟ್ಟ ನೋಕಿಯಾ ಲ್ಯೂಮಿಯಾ 1020, ನೋಕಿಯಾದ ಪ್ರಥಮ ಕ್ಯಾಮೆರಾ ಸ್ಮಾರ್ಟ್‌ಫೋನ್ ಆಗಿದೆ.

ಸರ್ಫೇಸ್ 2

ಸರ್ಫೇಸ್ 2

ಇತ್ತೀಚೆಗೆ ಮೈಕ್ರೋಸಾಫ್ಟ್‌ ಲಾಂಚ್ ಮಾಡಿದ ಸರ್ಫೇಸ್ 3 ಯೊಂದಿಗೆ ಸರ್ಫೇಸ್ 2 ಉತ್ಪಾದನೆಯನ್ನು ನಿಲ್ಲಿಸಲಾಯಿತು. ವಿಂಡೋಸ್ ಆರ್‌ಟಿ ಆಪರೇಟಿಂಗ್ ಸಿಸ್ಟಮ್ ಅನ್ನು ಹೊಂದಿರುವ ಸರ್ಫೇಸ್ 2 ಹೆಚ್ಚು ಯಶಸ್ಸನ್ನು ಪಡೆದುಕೊಳ್ಳಲಿಲ್ಲ.

ನೈಕ್ ಫ್ಯುಯೆಲ್

ನೈಕ್ ಫ್ಯುಯೆಲ್

2014 ರ ನವೆಂಬರ್‌ನಲ್ಲಿ, ನೈಕ್ ತನ್ನ ಹೆಚ್ಚು ಯಶಸ್ವಿ ಫಿಟ್‌ನೆಸ್ ಟ್ರ್ಯಾಕಿಂಗ್ ಪರಿಹಾರವಾದ ನೈಕ್ ಫ್ಯುಯೆಲ್ ಅನ್ನು ನಿಲ್ಲಿಸುವ ತೀರ್ಮಾನ ಕೈಗೊಂಡಿತು.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಕೆ ಜೂಮ್

ಸ್ಯಾಮ್‌ಸಂಗ್ ಗ್ಯಾಲಕ್ಸಿ ಕೆ ಜೂಮ್

ಮಾರುಕಟ್ಟೆಯಲ್ಲಿ ಅತ್ಯುತ್ತಮ ಕ್ಯಾಮೆರಾ ಫೋನೆಂಬ ಹೆಗ್ಗಳಿಕೆಯನ್ನು ಪಡೆದುಕೊಂಡರೂ ಸ್ಯಾಮ್‌ಸಂಗ್ ಮತ್ತು ಅದರ ಮಾರುಕಟ್ಟೆ ತಂಡ 6 ತಿಂಗಳುಗಳಿಗಿಂತ ಕಡಿಮೆ ಅವಧಿಯಲ್ಲೇ ಉತ್ಪನ್ನವನ್ನು ನಿಲ್ಲಿಸಿತು.

ಗೂಗಲ್ ಗ್ಲಾಸ್

ಗೂಗಲ್ ಗ್ಲಾಸ್

ತಂತ್ರಜ್ಞಾನ ಲೋಕದಲ್ಲೇ ಅದ್ಭುತವನ್ನು ಸಾಧಿಸಬಹುದೆಂಬ ಊಹೆ ಗೂಗಲ್ ಗ್ಲಾಸ್ ಹೊಂದಿತ್ತು. ಇತರ ಹೆಚ್ಚಿನ ಉತ್ಪನ್ನಗಳಂತೆ ಗೂಗಲ್ ಗ್ಲಾಸ್ ಯಶಸ್ಸನ್ನು ಪಡೆದುಕೊಳ್ಳಲಿಲ್ಲ.

ಮೋಟೋರೋಲಾ ಮೋಟೋ ಜಿ

ಮೋಟೋರೋಲಾ ಮೋಟೋ ಜಿ

ಮೋಟೋ ಜಿಯ ಪ್ರಥಮ ಜನರೇಶನ್, ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿದ್ದು ನಂತರ ಇದನ್ನು ಮುಚ್ಚಲಾಯಿತು. ಕಂಪೆನಿಯ ಬೆಸ್ಟ್ ಸೆಲ್ಲಿಂಗ್ ಫೋನ್ ಎಂಬ ಹೆಗ್ಗಳಿಕೆಯನ್ನು ಇದು ಪಡೆದುಕೊಂಡಿತ್ತು.

ನೋಕಿಯಾ ಎಕ್ಸ್ ಫ್ಯಾಮಿಲಿ

ನೋಕಿಯಾ ಎಕ್ಸ್ ಫ್ಯಾಮಿಲಿ

ಕಳೆದ ವರ್ಷ ತನ್ನ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಎಕ್ಸ್ ಶ್ರೇಣಿಯನ್ನು ನೋಕಿಯಾ ಪರಿಚಯಿಸಿತು. ನೋಕಿಯಾದ ಮೇಲ್ಭಾಗವು ವಿಂಡೋಸ್ ಫೋನ್‌ನಂತೆ ಕಾಣುತ್ತಿತ್ತು. ಇದರಿಂದಾಗಿ ಆಂಡ್ರಾಯ್ಡ್ ಫೋನ್‌ಗಳಿಗೆ ಪೈಪೋಟಿಯನ್ನು ನೀಡಬೇಕಾಗಿದ್ದ ನೋಕಿಯಾ ಎಕ್ಸ್ ಕೆಲವು ತಿಂಗಳ ನಂತರ ಕಣ್ಮುಚ್ಚಿತು.

ಗೂಗಲ್ ನೆಕ್ಸಸ್ 5

ಗೂಗಲ್ ನೆಕ್ಸಸ್ 5

ಗೂಗಲ್‌ನ ಅತ್ಯಂತ ಉತ್ತಮ ಮಾರಾಟ ಆಂಡ್ರಾಯ್ಡ್ ಫೋನ್ ಆಗಿದ್ದ ನೆಕ್ಸಸ್ 5, ಮಾರುಕಟ್ಟೆಯಲ್ಲಿ ಸದ್ಯಕ್ಕೆ ಲಭ್ಯವಿಲ್ಲ.

ಶ್ಯೋಮಿ ರೆಡ್ಮೀ 1ಎಸ್ ಮತ್ತು ಎಮ್ಐ 3

ಶ್ಯೋಮಿ ರೆಡ್ಮೀ 1ಎಸ್ ಮತ್ತು ಎಮ್ಐ 3

ಭಾರತದಲ್ಲಿ ಶ್ಯೋಮಿ ಎಮ್ಐ 3 ಮತ್ತು 1 ಎಸ್ ಅನ್ನು ಮಾರಾಟ ಮಾಡುತ್ತಿಲ್ಲ. ಬಜೆಟ್ ಸ್ನೇಹಿ ಡಿವೈಸ್‌ಗಳಾದ ಎಮ್ಐ 3 ಹಾಗೂ ರೆಡ್ಮೀ 1 ಎಸ್ ಮಾರಾಟಕ್ಕೆ ಕಂಪೆನಿ ತಿಲಾಂಜಲಿ ನೀಡಿದೆ.

ಫೈರ್‌ಫಾಕ್ಸ್ ಸ್ಮಾರ್ಟ್‌ಫೋನ್‌ಗಳು

ಫೈರ್‌ಫಾಕ್ಸ್ ಸ್ಮಾರ್ಟ್‌ಫೋನ್‌ಗಳು

ಯುವ ಗ್ರಾಹಕರನ್ನು ಉದ್ದೇಶಿಸಿ ಫೈರ್‌ಫಾಕ್ಸ್ ಸ್ಮಾರ್ಟ್‌ಫೋನ್‌ಗಳನ್ನು ಜಾರಿಗೆ ತರಲಾಯಿತಾದರೂ, ಭಾರತದಲ್ಲಿ ಈ ಫೋನ್‌ಗಳು ನೆಲಕಚ್ಚಿತು. ಫೈರ್‌ಫಾಕ್ಸ್ ದುಡ್ಡು ವ್ಯಯಿಸಿದ್ದು ಮಾತ್ರ ದಂಡವಾಯಿತು.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X