ಭವಿಷ್ಯದಲ್ಲಿ ಬದುಕುತ್ತಿರುವ ಫೀಲ್ ನೀಡುತ್ತಿರುವ 10 ಆವಿಷ್ಕಾರಗಳು
2013 ರ ರಿಂದೀಚೆಗೆ ಟೆಕ್ನಾಲಜಿ ಕ್ಷೇತ್ರದಲ್ಲಿ ಮಹತ್ತರ ಬೆಳವಣಿಗೆ ಆಗಿದೆ. 2013 ಇಸವಿಯ ಹಿಂದಿನ ವರ್ಷದ ಟೆಕ್ ಹವ್ಯಾಸಗಳನ್ನು ನೆನಪು ಮಾಡಿಕೊಳ್ಳಲು ಸ್ವಲ್ಪ ಕಷ್ಟಾನೆ ಆಗುತ್ತೆ.
ಕೇವಲ ಮೂರು ವರ್ಷದ ಟೆಕ್ನಾಲಜಿ ಬೆಳವಣಿಗೆಯಿಂದ ಯಾವುದೇ ವಸ್ತುಗಳನ್ನು ಖರೀದಿಸಲು ಮಾರುಕಟ್ಟೆಗೆ ಹೋಗುವ ಅಗತ್ಯವಿಲ್ಲ. ಮೊಬೈಲ್ ಕೈಯಲ್ಲಿ ಹಿಡಿದು ಆನ್‌ಲೈನ್ ಶಾಫ್‌ಗಳಲ್ಲಿ ಬುಕ್ ಮಾಡಿದರೆ ಮನೆ ಬಾಗಿಲಿಗೆ ಬುಕ್ ಮಾಡಿದ ವಸ್ತು ಬಂದು ಸೇರುತ್ತದೆ.
ತಂತ್ರಜ್ಞಾನ ಕ್ಷೇತ್ರದಲ್ಲಿ ಕೇವಲ ಮೂರು ವರ್ಷದಲ್ಲಿ ಅತ್ಯಧುನಿಕವಾಗಿ ಅಭಿವೃದ್ದಿ ಹೊಂದಿದ 10 ಟೆಕ್ ಪ್ರಾಡಕ್ಟ್‌ಗಳು ಯಾವುವು ಎಂದು ಇಂದಿನ ಲೇಖನದಲ್ಲಿ ತಿಳಿಸುತ್ತಿದ್ದೇವೆ. ಈ ಟೆಕ್ ಪ್ರಾಡಕ್ಟ್‌ಗಳಿಂದ ಪ್ರತಿಯೊಬ್ಬರು ಸಹ ನಾವು ಭವಿಷ್ಯದ ಜಗತ್ತಿನಲ್ಲಿ ಜೀವಿಸುತ್ತಿದ್ದೇವೆ ಎಂದು ಭಾವಿಸಲು ಕಾರಣವಾಗಿದೆ. ಅಂತಹ ಫೀಲ್ ನೀಡುತ್ತಿರುವ ನಮ್ಮ ಸುತ್ತಮುತ್ತಲ ಟೆಕ್ ಪ್ರಾಡಕ್ಟ್‌ಗಳು ಯಾವುವು ಎಂದು ಸ್ಲೈಡರ್‌ನಲ್ಲಿ ಓದಿರಿ.
ಅಚ್ಚರಿ: ನೀವು ಧರಿಸಿರುವ ದಿರಿಸಿನಲ್ಲೇ ಫೋನ್ ಚಾರ್ಜ್ ಮಾಡಿ

ವಾಚ್ ಮೂಲಕ ದೇಹದ ಫಿಟ್‌ನೆಸ್ ಟ್ರ್ಯಾಕ್
2013 ರ ಹಿಂದೆ ಯಾರು ಸಹ ಸ್ಮಾರ್ಟ್‌ವಾಚ್ ಬಗ್ಗೆ ಕನಸನ್ನು ಕಂಡಿರಲಿಲ್ಲ. ಇಂದು ಸ್ಮಾರ್ಟ್‌ವಾಚ್‌ಗಳು ದೇಹದ ಫಿಟ್‌ನೆಸ್ ಟ್ರ್ಯಾಕ್ ಮಾಡುವುದರ ಜೊತೆಗೆ ಮೊಬೈಲ್ ನೋಟಿಫಿಕೇಶನ್, ಎಸ್‌ಎಂಎಸ್, ಕ್ಯಾಲೆಂಡರ್, ಅಲಾರಂ, ಹೃದಯ ಬಡಿತವನ್ನು ಟ್ರ್ಯಾಕ್ ಮಾಡುತ್ತದೆ.
ವರ್ಚುವಲ್ ರಿಯಾಲಿಟಿ ಡಿವೈಸ್
ನಾವು ಇದ್ದ ಪ್ರದೇಶದಲ್ಲೇ ಇದ್ದರೂ ಸಹ ಯಾವುದೋ ಪ್ರದೇಶದಲ್ಲಿ ಇರುವ ಅನುಭವ ನೀಡುವ ಡಿವೈಸ್ ಅನ್ನು ಇಂದು ಎಲ್ಲರು ಖರೀದಿಸಬಹುದಾಗಿದೆ.

ಡಿಜಿಟಲ್ ಹಣ ಪಾವತಿ
ಭಾರತದ ಯುವಜನತೆಗೆ ಮೊಬೈಲ್ ವಾಲ್ಲೆಟ್ಸ್‌ಗಳು ಹೆಚ್ಚು ಪ್ರಿಯ. ಇಂದು ಆನ್‌ಲೈನ್ ಆಹಾರ ಖರೀದಿಯಿಂದ ಮನೆ ಕೊಳ್ಳುವವರೆಗೂ ಸಹ ಕೇವಲ ಮೊಬೈಲ್‌ನಿಂದಲೇ ಹಣ ಪಾವತಿ ಮಾಡಬಹುದು.

ಸೆಂಡ್ ಮಾಡಿದ ಫೋಟೋ ಮೆಸೇಜ್ ಸ್ವಯಂ ಡಿಲೀಟ್
ಈ ಫೀಚರ್ ಸ್ವಲ್ಪ ಎಲ್ಲರಿಗೂ ಕುತೂಹಲ ಅನಿಸುತ್ತೆ. ಯಾಕಂದ್ರೆ ಸ್ನಾಪ್‌ಚಾಟ್ ಸಾಮಾಜಿಕ ತಾಣ ಅಪ್ಲಿಕೇಶನ್, ಬಳಕೆದಾರರಿಗೆ ಮೆಸೇಜ್ ಮತ್ತು ಫೋಟೋಗಳನ್ನು ಸೆಂಡ್ ಮಾಡಲು ಅವಕಾಶ ನೀಡುತ್ತದೆ. ಆದರೆ ಸ್ವೀಕೃತದಾರ ವೀಕ್ಷಿಸಿದ ಕೆಲ ಕ್ಷಣದಲ್ಲಿ ಸ್ವಯಂಕೃತವಾಗಿ ಮೆಸೇಜ್ ಮತ್ತು ಫೋಟೊಗಳು ಡಿಲೀಟ್ ಆಗುತ್ತವೆ. ಅಲ್ಲದೇ ಈ ಆಪ್‌ನಲ್ಲಿ ವೀಡಿಯೊ ಕರೆ ಸಹ ಮಾಡಬಹುದಾಗಿದೆ.

ನಿಮ್ಮ ಫೋಟೋ ನೀವೇ ಕ್ಯಾಪ್ಚರ್ ಮಾಡಿಕೊಳ್ಳಿ
ಇಂದು ಸೆಲ್ಫಿ ಫೀಚರ್‌ನಿಂದ ಎಲ್ಲರೂ ಸಹ ಅವರವರ ಫೋಟೋವನ್ನು ಅವರೇ ಕ್ಯಾಪ್ಚರ್ ಮಾಡಿಕೊಳ್ಳುತ್ತಾರೆ. ಸೆಲ್ಫಿ ಫೀಚರ್ ಬಂದ ಕೇವಳ ಒಂದು ವರ್ಷದಲ್ಲಿ ಅದೊಂದು ಆಧುನಿಕ ಸಂಸ್ಕೃತಿಯಾಗಿಬಿಟ್ಟಿತು. ಸೆಲ್ಫಿಯನ್ನು ಇಂದು ಎಲ್ಲಾ ರೀತಿಯ ಜನರು ಸಹ ಬಳಸುತ್ತಾರೆ. ಅಮೆರಿಕದ ಅಧ್ಯಕ್ಷರು ಹೊರತಲ್ಲ.

ಆನ್‌ಲೈನ್ ವಿಡಿಯೊ ನೋಡಲು ನಿಮ್ಮದೇ ಆಂಗಲ್ ಆಯ್ಕೆ ಮಾಡಿ
ಫೇಸ್‌ಬುಕ್ 360 ಡಿಗ್ರಿ ಫೋಟೋ ಮತ್ತು ವೀಡಿಯೋ ಫೀಚರ್ ಪರಿಚಯಿಸಿದ್ದು, ವೀಕ್ಷಕರು ತಮ್ಮ ಇಷ್ಟದ ಆಂಗಲ್ ಅನ್ನು ವೀಕ್ಷಿಸಲು ಆಯ್ಕೆ ಮಾಡಿಕೊಳ್ಳಬಹುದು.

ಬೆಳಕಿನ ವೇಗದಲ್ಲಿ ವೀಡಿಯೊ ಡೌನ್‌ಲೋಡ್
ದಿನದಿಂದ ದಿನಕ್ಕೆ ಆನ್‌ಲೈನ್ ಡಾಟಾ ಅಪ್‌ಲೋಡ್ ಮತ್ತು ಡೌನ್‌ಲೋಡ್ ವೇಗ ಹೆಚ್ಚಾಗುತ್ತಿದೆ. ಇಂದು ಯಾವುದೇ ವೀಡಿಯೋಗಳನ್ನು ಬೆಳಕಿನ ವೇಗದಲ್ಲಿ 4G ಟೆಕ್ನಾಲಜಿಯಿಂದ ಡೌನ್‌ಲೋಡ್ ಮಾಡಬಹುದಾಗಿದೆ.

ಮೊಬೈಲ್‌ನಲ್ಲೇ ಸ್ವಯಂ ಸಿನಿಮಾ ದೃಶ್ಯ ರಚಿಸಿ
ಇಂದು ಡಬ್‌ಸ್ಮಾಶ್ ಎಂಬ ಆಪ್ ಎಲ್ಲರಿಗೂ ತಿಳಿದಿದೆ. ನಿರಂತರ ಮನರಂಜನೆಗಾಗಿ ಇಂತಹ ಆಪ್‌ಗಳನ್ನು ಬಳಸಿಕೊಂಡು ತಮ್ಮದೇ ಮ್ಯೂಸಿಕ್, ದೃಶ್ಯಗಳನ್ನು ಸೇರಿಸಿ ಸಿನಿಮಾ ದೃಶ್ಯವನ್ನು ರಚಿಸಬಹುದಾಗಿದೆ.

ಲಿಖಿತ ಅಥವಾ ಮೌಖಿಕ ಪಠ್ಯ ಮೂಲಕ ಕಂಪ್ಯೂಟರ್ ಚಾಟ್
ಬಾಟ್ಸ್ ಎಂಬ ಕೃತಕ ಬುದ್ಧವಂತಿಕೆಯ ಸಾಫ್ಟ್‌ವೇರ್ ನಿಮ್ಮ ಜೊತೆ ಸಂವಹನ ನೆಡೆಸಬಲ್ಲದು. ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಬಲ್ಲದು. ಈಗಾಗಲೇ ಹಲವರು ಚಾಟ್‌ಬಾಟ್ಸ್ ಸಾಫ್ಟ್‌ವೇರ್ ಬಳಸಿದ್ದಾರೆ. ಆಪಲ್ ಸಿರಿ ಆಪ್‌ನಂತೆ, ಮೈಕ್ರೋಸಾಫ್ಟ್ ಕೋರ್ಟಾನಾದಂತೆ "ಬಾಟ್ಸ್' ಕಾರ್ಯನಿರ್ವಹಿಸುತ್ತದೆ. ಫೇಸ್‌ಬುಕ್ ಇತ್ತೀಚೆಗೆ ತನ್ನ ಮೆಸೇಂಜರ್ ಆಪ್‌ಗೆ ಬಾಟ್ ಅನ್ನು ಅಭಿವೃದ್ದಿ ಪಡಿಸಿದೆ.

ನೀವು ಪಡೆದ ಸೇವೆಗಷ್ಟೆ ಮೊಬೈಲ್ ಬಿಲ್ ಪಾವತಿ
2013 ರ ಹಿಂದೆ ಪೋಸ್ಟ್ ಪೇಯ್ಡ್ ಯೋಜನೆ ಇರಲಿಲ್ಲ. ಬಿಲ್ ಪಡೆಯುವುದು ಒಂದು ರೀತಿಯ ಬೇಸರದ ಸಂಗತಿ. ಆದ್ದರಿಂದ ಇಂದು ನಮಗೆ ಅಗತ್ಯವೆಷ್ಟಿದೆಯೋ ಅಂತಹ ಯೋಜನೆಗಳನ್ನು ಪಡೆಯುವ ಪೋಸ್ಟ್ ಪೇಯ್ಡ್ ಯೋಜನೆ ಎಲ್ಲರಿಗೂ ಲಭ್ಯವಿದೆ. ಇದರಿಂದ ನಮಗೆ ಬೇಕಾದಂತಹ ಮೊಬೈಲ್ ಕರೆ ಯೋಜನೆಯನ್ನು ಆಕ್ಷಿವೇಟ್ ಮಾಡಿಸಬಹುದು.


Click it and Unblock the Notifications








