ಈ ಎಲ್ಲಾ ಉದ್ಯೋಗಗಳನ್ನು ಕಸಿದುಕೊಳ್ಳಲಿದೆ AI: ಮುಂದಿನ ಐದು ವರ್ಷಗಳಲ್ಲಿ ಇವರೆಲ್ಲಾ ನಿರುದ್ಯೋಗಿಗಳು!
ಈಗಾಗಲೇ ಸಾಕಷ್ಟು ವಿದ್ಯಾವಂತರು ಉದ್ಯೋಗ ಇಲ್ಲದೆ ನಿರುದ್ಯೋಗಿಗಳಾಗಿದ್ದಾರೆ. ಈ ನಡುವೆ ಮುಂದಿನ ಐದು ವರ್ಷಗಳಲ್ಲಿ ಈ ಕೆಲಸಗಳನ್ನು ಎಐ ಆಕ್ರಮಿಸಿಕೊಳ್ಳಲಿದ್ದು, ಭಾರತವೂ ಸೇರಿದಂತೆ ಅನೇಕ ಕಡೆ ವಿರುದ್ಯೋಗ ತಾಂಡವ ಆಡುವ ಸಮಯ ಹತ್ತಿರ ಬರುತ್ತಿದೆ. ಈ ಮೂಲಕ ಎಐ ಹಲವಾರು ಜನರ ಜೀವನಕ್ಕೆ ಮುಳ್ಳಾಗಿ ಪರಿಣಮಿಸಿದರೆ ಕಂಪೆನಿಗಳಿಗೆ ಮಾತ್ರ ವರದಾನವಾಗಲಿವೆ.
ಹೌದು, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಮತ್ತು ಇತರ ತಂತ್ರಜ್ಞಾನಗಳು ಅನೇಕ ಜನರಿಗೆ ಉತ್ತಮ ರೀತಿಯಲ್ಲಿ ಸಹಾಯ ಮಾಡುತ್ತಿವೆಯಾದರೂ ಸಹ ಇವು ಜನರ ಉದ್ಯೋಗಗಳನ್ನು ನಿಧಾನವಾಗಿ ತನ್ನದೇ ಆದ ರೀತಿಯಲ್ಲಿ ಕಸಿದುಕೊಳ್ಳಲಿದೆ. ಈ ಸಂಬಂಧ ವರ್ಲ್ಡ್ ಎಕನಾಮಿಕ್ ಫೋರಮ್ (WEF) ಅಚ್ಚರಿ ಮಾಹಿತಿಯನ್ನು ಬಿಡುಗಡೆ ಮಾಡಿದೆ. ಹಾಗಿದ್ರೆ, ಯಾವೆಲ್ಲಾ ಕೆಲಸಗಳಿಗೆ ಇನ್ಮುಂದೆ ಕುತ್ತು ಬರಲಿದೆ?, ಇದರಿಂದ ಆಗುವ ಸಮಸ್ಯೆಗಳು ಏನೇನು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

WEF ವರದಿಯ ಆಧಾರದಂತೆ ಇನ್ಮುಂದೆ AI ಮತ್ತು ಸ್ಮಾರ್ಟ್ ತಂತ್ರಜ್ಞಾನಗಳು ಬ್ಯಾಂಕ್ ಟೆಲ್ಲರ್, ಕ್ಯಾಷಿಯರ್ ಮತ್ತು ಡೇಟಾ ಎಂಟ್ರಿ ಕ್ಲರ್ಕ್‌ನಂತಹ ಉದ್ಯೋಗದ ಪಾತ್ರಗಳನ್ನು ಅಪಾಯಕ್ಕೆ ತಳ್ಳಲಿದೆಯತೆ. ಈ ಮೂಲಕ ಮುಂದಿನ ಐದು ವರ್ಷಗಳಲ್ಲಿ ಈ ಕೆಲಸಗಳು ಅಸ್ತಿತ್ವದಲ್ಲೇ ಇರುವುದಿಲ್ಲ ಎನ್ನಲಾಗಿದೆ. ಅದರಲ್ಲೂ ಮುಂಬರುವ ವರ್ಷಗಳಲ್ಲಿ ದೊಡ್ಡ ಡೇಟಾ, ಕ್ಲೌಡ್ ಕಂಪ್ಯೂಟಿಂಗ್ ಮತ್ತು ಎಐ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು 803 ಕಂಪೆನಿಗಳು ಮುಂದಾಗಿವೆ.
ಈ ನಡುವೆ ಕೊರೊನಾ ಸಹ ಜನರನ್ನು ಇನ್ನಿಲ್ಲದಂತೆ ಮೂರು ವರ್ಷಗಳ ಕಾಲ ಕಾಡಿತ್ತು. ಆ ವೇಳೆ ಹಲವಾರು ಜನರು ಉದ್ಯೋಗ ಇಲ್ಲದೆ ತುತ್ತು ಅನ್ನಕ್ಕಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣ ಆಗಿತ್ತು. ಅಂದರೆ ಭೌಗೋಳಿಕ ರಾಜಕೀಯ ಮತ್ತು ಆರ್ಥಿಕ ಬದಲಾವಣೆಗಳು ಮತ್ತು ಎಐ ಮತ್ತು ಇತರ ತಂತ್ರಜ್ಞಾನಗಳ ಕ್ಷಿಪ್ರ ಪ್ರಗತಿಯು ಅವರ ಜೀವನ ಮತ್ತು ಜೀವನೋಪಾಯಕ್ಕಾಗಿ ದೊಡ್ಡ ಸಂಕಷ್ಟ ನಿರ್ಮಾಣ ಮಾಡಿತ್ತು. ಈಗ ಈ ಸಂಕಷ್ಟ ಇನ್ನೊಂದು ರೀತಿಯಲ್ಲಿ ಎದುರಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಯಾವೆಲ್ಲಾ ಕೆಲಸಗಳಿಗೆ ಅಪಾಯ ಇದೆ?: ಈಗಾಗಲೇ ಆನ್‌ಲೈನ್ ಬ್ಯಾಂಕಿಂಗ್ ಜಗತ್ತಿನಲ್ಲಿ ಜನಪ್ರಿಯವಾದಾಗಿನಿಂದ, ಅನೇಕ ಭೌತಿಕ ಬ್ಯಾಂಕ್ ಶಾಖೆಗಳ ಮೇಲೆ ಕೆಟ್ಟ ಪರಿಣಾಮವನ್ನು ಉಂಟುಮಾಡಿದೆ. ಇದು ಬ್ಯಾಂಕ್‌ಗಳ ಮುಚ್ಚುವಿಕೆಗೂ ಸಹ ಕಾರಣವಾಗಿದೆ. ಬ್ಯಾಂಕ್ ಟೆಲ್ಲರ್ ಮತ್ತು ಸಂಬಂಧಿತ ಕ್ಲರ್ಕ್ ಉದ್ಯೋಗಗಳು ಈ ಮೂಲಕ ಅಪಾಯದಲ್ಲಿವೆ. ಜೊತೆಗೆ ಈ ವಿಭಾಗದಲ್ಲಿ 40 ಪ್ರತಿಶತದಷ್ಟು ಕುಸಿತವನ್ನು ಕಾಣಬಹುದು ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.

ಇದರೊಂದಿಗೆ ಆಟೊಮೇಷನ್, ಸೆನ್ಸಾರ್ ತಂತ್ರಜ್ಞಾನಗಳು ಮತ್ತು ಆನ್‌ಲೈನ್ ಸೇವೆಗಳ ವಿಭಾಗದಲ್ಲಿ ಅಂಚೆ ಸೇವಾ ಗುಮಾಸ್ತರು, ಕ್ಯಾಷಿಯರ್ ಮತ್ತು ಟಿಕೆಟ್ ಕಚೇರಿ ಗುಮಾಸ್ತರು ಮತ್ತು ಡೇಟಾ ಎಂಟ್ರಿ ಸಿಬ್ಬಂದಿಗಳ ಅಗತ್ಯವನ್ನು ಕಡಿಮೆ ಮಾಡಲಾಗುತ್ತದೆ ಎನ್ನಲಾಗಿದೆ. ಮುಂದಿನ ಐದು ವರ್ಷಗಳಲ್ಲಿ ಈ ರೀತಿಯ ಉದ್ಯೋಗಗಳು ಮೂರನೇ ಒಂದು ಭಾಗಕ್ಕಿಂತ ಹೆಚ್ಚು ಕುಸಿತವನ್ನು ಕಾಣಬಹುದು ಎಂದು ವರದಿಯಿಂದ ತಿಳಿದುಬಂದಿದೆ.
ಅದರಲ್ಲೂ ಡೇಟಾ ಗುಮಾಸ್ತರು ಮುಂದಿನ ಐದು ವರ್ಷಗಳಲ್ಲಿ 8 ಮಿಲಿಯನ್ ಉದ್ಯೋಗ ನಷ್ಟಗಳನ್ನು ಎದುರಿಸಲಿದ್ದಾರೆ. ನಂತರ ಆಡಳಿತಾತ್ಮಕ ಮತ್ತು ಕಾರ್ಯನಿರ್ವಾಹಕ ಕಾರ್ಯದರ್ಶಿಗಳು, ಮತ್ತು ಲೆಕ್ಕಪತ್ರ ನಿರ್ವಹಣೆ, ಬುಕ್ಕೀಪಿಂಗ್ ಮತ್ತು ಗಸ್ತು ಗುಮಾಸ್ತರ ವಿಭಾಗದಲ್ಲಿ ಅರ್ಧಕ್ಕಿಂತ ಹೆಚ್ಚು ಕಡಿಮೆ ಆಗಲಿವೆ. ಹೀಗಾಗಿ ಹಲವಾರು ಮಧ್ಯಮ ವರ್ಗದ ಕುಟುಂಬಗಳು ಇನ್ಮುಂದೆ ಉದ್ಯೋಗಕ್ಕಾಗಿ ಅಲೆಯುವ ಪರಿಸ್ಥಿತಿ ನಿರ್ಮಾಣ ಆಗಲಿದೆ.
ಇದಿಷ್ಟೇ ಅಲ್ಲದೆ ಎಲೆಕ್ಟ್ರಿಕ್ ವಾಹನ ಪರಿಣಿತರು ಅದ್ಯಕ್ಕೆ ಹೆಚ್ಚಿನ ಬೇಡಿಕೆಯಲ್ಲಿದ್ದಾರೆ. 2023 ರ ಹೆಚ್ಚಿನ ಬೇಡಿಕೆಯ ಉದ್ಯೋಗಗಳ ಪಟ್ಟಿಯಲ್ಲಿ ಇವರು ಅಗ್ರಸ್ಥಾನದಲ್ಲಿದ್ದಾರೆ. ಆದರೆ, ಮುಂಬರುವ ಐದು ವರ್ಷಗಳಲ್ಲಿ 40% ಕ್ಕಿಂತ ಹೆಚ್ಚಿನ ಬೆಳವಣಿಗೆಯನ್ನು ನಿರೀಕ್ಷಿಸಲಾಗಿದ್ದು, ಈ ವಿಭಾಗದಲ್ಲಿ ಎಐ ಮತ್ತು ಯಂತ್ರ ಕಲಿಕೆ ತಜ್ಞರು ಸ್ವಲ್ಪ ಕಡಿಮೆ ಉದ್ಯೋಗವನ್ನು ಮಾತ್ರ ನಿರೀಕ್ಷೆ ಮಾಡಬಹುದಾಗಿದೆ.

ಹಾಗೆಯೇ ಫಿನ್‌ಟೆಕ್ ಎಂಜಿನಿಯರ್‌ಗಳು ಮತ್ತು ವ್ಯಾಪಾರ, ಮಾಹಿತಿ ಭದ್ರತೆ ಮತ್ತು ಡೇಟಾ ಸೇರಿದಂತೆ ಹಲವಾರು ವಿಶ್ಲೇಷಕ ಹುದ್ದೆಗಳಲ್ಲಿಯೂ ಹೊಡೆತ ಬೀಳಲಿದ್ದು, ಇದರೊಂದಿಗೆ 30%ಗಿಂತ ಹೆಚ್ಚಿನ ಬೆಳವಣಿಗೆ ದರವನ್ನು ಡೇಟಾ ವಿಜ್ಞಾನಿಗಳ ಉದ್ಯೋಗದಲ್ಲಿ ಗಮನಿಸಬಹುದು. ಹಾಗೆಯೇ ಹೆವಿ ಟ್ರಕ್ ಮತ್ತು ಬಸ್ ಡ್ರೈವರ್‌ಗಳು, ವೃತ್ತಿಪರ ಶಿಕ್ಷಣ ಶಿಕ್ಷಕರು ಮತ್ತು ಮೆಕ್ಯಾನಿಕ್ಸ್ ಮತ್ತು ಮೆಷಿನರಿ ರಿಪೇರಿಗಳಂತಹ ಪ್ರದೇಶಗಳಲ್ಲಿ ಸುಮಾರು 2ಮಿಲಿಯನ್ ಹೊಸ ಉದ್ಯೋಗಗಳನ್ನು 2023ರಿಂದ 2027ರ ನಡುವೆ ರಚಿಸಲಾಗುವುದು ಎಂದು ವರದಿಯಿಂದ ತಿಳಿದುಬಂದಿದೆ.


Click it and Unblock the Notifications








