ಹಿಂದೆಯೇ ಇದ್ದ ಆಧುನಿಕ ಸಂಶೋಧನೆಗಳು

By Shwetha
|

ಇಂದಿನ ಯುಗದಲ್ಲಿ ಸಂಶೋಧನೆಗಳು ಹೆಚ್ಚು ಆಧುನೀಕವಾಗುತ್ತಿದ್ದು ನಮ್ಮ ನಿತ್ಯದ ಜೀವನದಲ್ಲಿ ಇದು ಕೆಲವೊಂದು ಬದಲಾವಣೆಗಳನ್ನು ಉಂಟುಮಾಡುತ್ತಿವೆ. ಆದರೆ ಈ ಎಲ್ಲಾ ಸಂಶೋಧನೆಗಳು ಹೊಸ ಮಾದರಿಯದ್ದಲ್ಲ ಹಳೆಯದರಿಂದ ಸ್ಫೂರ್ತಿಯನ್ನು ಪಡೆದುಕೊಂಡಿರುವಂಥದ್ದು ಎಂಬುದು ನಿಮಗೆ ಗೊತ್ತೇ?

ಓದಿರಿ: ಮಂಗಳ ಗ್ರಹದ ಗುರುತ್ವಾಕರ್ಷಣೆ ನಾಶಕ್ಕೆ ಕಾರಣ

ಹೌದ ಓದುಗರೇ ಇಂದಿನ ಆಧುನಿಕ ಯುಗದಲ್ಲಿ ನೀವು ಕಾಣುತ್ತಿರುವ ಈ ಹೊಸ ಸಂಶೋಧನೆಗಳನ್ನು ಈ ಹಿಂದೆಯೇ ಚಾಲ್ತಿಗೆ ತರಲಾಗಿತ್ತು. ಒಂದು ರೀತಿಯಲ್ಲಿ ಹಳೆಯ ಸಂಶೋಧನೆಗಳ ಪ್ರಭಾವಕ್ಕೆ ಒಳಗಾಗಿದೆ ಎಂಬುದನ್ನು ಹೇಳಬಹುದಾಗಿದೆ. ಬನ್ನಿ ಇಂದಿನ ಲೇಖನದಲ್ಲಿ ಆ ಸಂಶೋಧನೆಗಳು ಯಾವುವು ಎಂಬುದನ್ನು ಅರಿತುಕೊಳ್ಳೋಣ.

ಪಠ್ಯ ಸಂದೇಶ ಸ್ಲಾಂಗ್

ಪಠ್ಯ ಸಂದೇಶ ಸ್ಲಾಂಗ್

ಮೊಬೈಲ್ ಫೋನ್‌ಗಳಲ್ಲಿ ನಾವೀಗ ಬಳಸುತ್ತಿರುವ ಪಠ್ಯ ಸಂದೇಶಗಳ ಜನನ 1890 ರಲ್ಲೇ ನಡೆದಿತ್ತು ಎಂಬುದು ನಿಮಗೆ ಗೊತ್ತೇ? "ಟೆಲಿಗ್ರಾಮ್ ಸ್ಟೈಲ್" ಎಂಬ ಈ ಮಾದರಿ ಆಧುನಿಕ ಎಸ್‌ಎಮ್‌ಎಸ್‌ ಮಾದರಿಯಲ್ಲಿದೆ.

ಸಬ್‌ಮರೀನ್ಸ್

ಸಬ್‌ಮರೀನ್ಸ್

ಸಬ್‌ಮರೀನ್‌ಗಳ ಹುಟ್ಟು 1580 ರಲ್ಲೇ ನಡೆದಿತ್ತು. ಇದು ಜಲಪ್ರತಿರೋಧಕ ಚರ್ಮವನ್ನು ಒಳಗೊಂಡಿತ್ತು ಮತ್ತು ಮರದಿಂದ ಕೂಡಿತ್ತು.

ಆಂಟಿ ವ್ಯಾಸಿನೇಶನ್

ಆಂಟಿ ವ್ಯಾಸಿನೇಶನ್

1800 ರಲ್ಲೇ ಎಡ್‌ವರ್ಡ್ ಜೆನ್ನರ್ ಕೌಪಾಕ್ಸ್ ವ್ಯಾಸೀನ್ ಅನ್ನು ಪತ್ತೆಹಚ್ಚಿದ್ದು, ಜನರ ಟೀಕೆಗೆ ಗುರಿಯಾಗಿತ್ತು ಎನ್ನಲಾಗಿದೆ.

 ಆಟೊಮೊಬೈಲ್ಸ್

ಆಟೊಮೊಬೈಲ್ಸ್

1769 ರಲ್ಲಿ ಫ್ರೆಂಚ್ ಇಂಜಿನಿಯರ್ ಮತ್ತು ಮೆಕ್ಯಾನಿಕ್ ನಿಕೋಲಸ್ ಜೋಸೆಫ್ ತನ್ನದೇ ಸ್ವಂತ ವಾಹನವನ್ನು ವಿನ್ಯಾಸಗೊಳಿಸಿ ನಿರ್ಮಿಸಿದ ಪ್ರಥಮ ವ್ಯಕ್ತಿಯಾಗಿದ್ದಾನೆ.

ಟೆಲಿಫೋನ್

ಟೆಲಿಫೋನ್

ಗ್ರಹಂ ಬೆಲ್‌ನನ್ನು ಟೆಲಿಫೋನ್ ಜನಕನೆಂದೇ ಕರೆಯುತ್ತಾರೆ. ಆದರೆ ಇವರಿಗೂ ಮೊದಲು 1,200 ವರ್ಷಗಳ ಹಿಂದೆಯೇ ಟೆಲಿಫೋನ್ ವಿಚಾರವು ಅಸ್ತಿತ್ವದಲ್ಲಿತ್ತು. ಕಿಮು ನಾಗರೀಕತೆ ಈ ಅನ್ವೇಷಣೆಯ ರುವಾರಿ ಎಂದೆನಿಸಿದ್ದಾರೆ.

ಮೆದುಳು ಶಸ್ತ್ರ ಚಿಕಿತ್ಸೆ

ಮೆದುಳು ಶಸ್ತ್ರ ಚಿಕಿತ್ಸೆ

ಪುರಾತತ್ವಜ್ಞರ ಪ್ರಕಾರ ಮೆದುಳು ಶಸ್ತ್ರಚಿಕಿತ್ಸೆ ಅನ್ವೇಷಣೆಯಾಗಿರುವುದು 5,000 ವರ್ಷಗಳಲ್ಲಿ ಎಂದಾಗಿದೆ. ತಲೆಬುರುಡೆಯಿಂದ ಮೂಳೆಯ ತೆಗೆಯುವಿಕೆಯನ್ನು ಒಳಗೊಂಡಿರುವ ಕೊರೆತದ ವಿಧಾನ ಎಂಬುದಾಗಿ ಇದನ್ನು ಕರೆಯಲಾಗಿತ್ತು.

ಸಾಮಾಜಿಕ ಮಾಧ್ಯಮ

ಸಾಮಾಜಿಕ ಮಾಧ್ಯಮ

ಸಾಮಾಜಿಕ ಮಾಧ್ಯಮವನ್ನು ಜನಪ್ರಿಯತೆಗೆ ಹೊತ್ತೊಯ್ದ ಕೀರ್ತಿ ಮಾರ್ಕ್ ಜುಕರ್‌ಬರ್ಗ್‌ಗೆ ಸಲ್ಲುವುದಿಲ್ಲ ಬದಲಿಗೆ 1560 ರ ಆಸುಪಾಸಿನಲ್ಲಿಯೇ ಸಾಮಾಜಿಕ ಮಾಧ್ಯಮದ ಜನಪ್ರಿಯತೆಯನ್ನು ಹುಟ್ಟುಹಾಕಿದರು ಎನ್ನಲಾಗಿದೆ.

ಫಾಸ್ಟ್ ಫುಡ್ ರೆಸ್ಟೋರೆಂಟ್‌ಗಳು

ಫಾಸ್ಟ್ ಫುಡ್ ರೆಸ್ಟೋರೆಂಟ್‌ಗಳು

ಹಿಂದಿನ ರೋಮನ್ ಪುರಾತತ್ವ ಸೈಟ್‌ಗಳ ಪ್ರಕಾರ ರೆಸ್ಟೋರೆಂಟ್‌ಗಳ ಕಲ್ಪನೆ ಆ ಕಾಲದಲ್ಲಿಯೇ ಇತ್ತು ಎಂಬ ಮಾತಿದೆ.

ಕಾಂಟಾಕ್ಟ್ ಲೆನ್ಸ್

ಕಾಂಟಾಕ್ಟ್ ಲೆನ್ಸ್

ಪ್ರಥಮ ಕಾಂಟಾಕ್ಟ್ ಲೆನ್ಸ್ ಅನ್ನು 1887 ರಲ್ಲಿ ಅನ್ವೇಷಿಸಲಾಯಿತು ಎಂಬುದು ವರದಿಗಳಿಂದ ದೊರೆತ ಮಾಹಿತಿಯಾಗಿದೆ.

ಟೆಲಿವಿಶನ್ ಶೋಗಳು

ಟೆಲಿವಿಶನ್ ಶೋಗಳು

ಪ್ರಥಮ ರಿಯಾಲಿಟಿ ಟಿವಿ ಶೋ 1970 ರಲ್ಲಿ ಪ್ರಸಾರವಾಯಿತು ಎನ್ನಲಾಗಿದೆ. ಅಮೇರಿಕನ್ ಫ್ಯಾಮಿಲಿ ಎಂಬ ಹೆಸರನ್ನು ಇದು ಹೊಂದಿತ್ತು. ಇದನ್ನು 1973 ರಲ್ಲಿ ಪ್ರದರ್ಶಿಸಲಾಯಿತು ಎನ್ನಲಾಗಿದೆ.

Most Read Articles
Best Mobiles in India

English summary
Many modern inventions have been around longer than we think. Though they were not like their present-day counterparts, they served the same purpose and it is even true to say that many of recent invention were inspired by the older ideas.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more