Subscribe to Gizbot

ಎಳವೆಯಲ್ಲಿಯೇ ವಿಶ್ವ ಮನ್ನಣೆ ಪಡೆದ ಪ್ರತಿಭಾ ಕಾರಂಜಿಗಳು

Written By:

ದೇವರು ಕೆಲವರಿಗೆ ಅಸಾಧ್ಯ ಬುದ್ಧಿಮತ್ತೆಯನ್ನು ನೀಡಿರುತ್ತಾರೆ. ಅವರು ಸಣ್ಣ ವಯಸ್ಸಿನವರಾಗಿದ್ದರೂ ಮಾಡಿರುವ ಸಾಧನೆ ಪ್ರತಿಯೊಬ್ಬರೂ ಮೂಗಿನ ಮೇಲೆ ಬೆರಳಿಡಬೇಕು. ತಂತ್ರಜ್ಞಾನ ಲೋಕದಲ್ಲೂ ಈ ಎಳೆಯರು ಸಾಧನೆಯನ್ನು ಮಾಡಿದ್ದು ಎಂತವರನ್ನೂ ಆಶ್ಚರ್ಯಚಕಿತರನ್ನಾಗಿಸುತ್ತದೆ.

ಓದಿರಿ: ಬಾಹ್ಯಾಕಾಶ ಯಾನಮಾಡಿದ ಪ್ರಮುಖ ಪ್ರಾಣಿಗಳು

ಇಂದಿನ ಲೇಖನದಲ್ಲಿ ಇಂತಹುದೇ ಅಸಾಧ್ಯ ಬುದ್ಧಿಮತ್ತೆಯುಳ್ಳ ಮಕ್ಕಳ ವಿವರವನ್ನು ಇಲ್ಲಿ ನಾವು ನೀಡುತ್ತಿದ್ದು ಇದು ಹೆಚ್ಚು ಆಸಕ್ತಿದಾಯಕ ಎಂದೆನಿಸಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಲೆಕ್ಕಾಚಾರ ಪರಿಣಿತೆ

ಪ್ರಿಯಾಂಶಿ ಸೊಮಾನಿ

ಈ ಹುಡುಗಿ ಮನಸ್ಸಿನಲ್ಲಿಯೇ ಲೆಕ್ಕಾಚಾರವನ್ನು ಮಾಡುವುದರಲ್ಲಿ ಪರಿಣಿತಳು. ತನ್ನ 11 ರ ಹರೆಯದಲ್ಲೇ, ಮೆಂಟಲ್ ಕ್ಯಾಲ್ಕುಲೇಶನ್ ವರ್ಲ್ಡ್ ಕಪ್ 2010 ರಲ್ಲಿ ಭಾಗವಹಿಸಿದ ಅತಿ ಕಿರಿಯಳಾಗಿದ್ದಾಳೆ. "ಪೊಗೊ ಅಮೇಜಿಂಗ್ ಕಿಡ್ಸ್ ಅವಾರ್ಡ್ಸ್ 2010 ಅನ್ನು ಈಕೆ ಪಡೆದುಕೊಂಡಿದ್ದಾರೆ. ಲಿಮ್ಕಾ ಬುಕ್ ದಾಖಲೆಯಲ್ಲಿ ಈಕೆಯ ಹೆಸರು ಸೇರ್ಪಡೆಗೊಂಡಿದೆ.

ಪ್ರಸಾರ ಮಾಧ್ಯಮ

ಇಲೈನಾ ಸ್ಮಿತ್

ಪ್ರಸಾರ ಮಾಧ್ಯಮದಲ್ಲಿ ಹೆಸರು ಮಾಡಿರುವ ಅತಿ ಕಿರಿಯ ಬ್ರಿಟನ್ ನಿವಾಸಿ ಇಲೈನಾ ಸ್ಮಿತ್ ಆಗಿದ್ದಾರೆ. ಸ್ಥಳೀಯ ರೇಡಿಯೋ ಸ್ಟೇಶನ್ ಒಂದರಲ್ಲಿ ರೇಡಿಯೋ ಜಾಕಿಯಾಗಿರುವ ಇಲೈನಾ ಸ್ಮಿತ್ ಕೇಳುಗರಿಗೆ ಹಲವಾರು ಸಲಹೆಗಳನ್ನು ನೀಡಬಲ್ಲಳು.

ವಿಶ್ವ ದಾಖಲೆ

ಮಿಕೈಲ್ ಕೆವಿನ್ ಕೇರ್ನೆ

10 ನೇ ವಯಸ್ಸಿನಲ್ಲಿಯೇ ಕಾಲೇಜು ಪದವಿಯನ್ನು ಪಡೆದುಕೊಂಡ ಅತಿ ಕಿರಿಯ ವಯಸ್ಸಿಗ. ಹಲವಾರು ವಿಶ್ವ ದಾಖಲೆಗಳನ್ನು ಮಾಡಿರುವ ಈ ಪೋರ ತನ್ನ 17 ನೇ ವಯಸ್ಸಿನಲ್ಲಿಯೇ ಕಾಲೇಜಿನಲ್ಲಿ ಶಿಕ್ಷಣವನ್ನು ನೀಡುತ್ತಿದ್ದ.

ಪುಸ್ತಕ ಮನನ ಮತ್ತು ವಾಚನ

ಗ್ರೆಗೊರಿ ಆರ್ ಸ್ಮಿತ್

1990 ರಲ್ಲಿ ಜನಿಸಿದ ಗ್ರೆಗೊರಿ ಸ್ಮಿತ್, 14 ರ ಹರೆಯದಲ್ಲೇ ಪುಸ್ತಕಗಳನ್ನು ಮನನ ಮಾಡಲು ಮತ್ತು ವಾಚಿಸಲು ಆರಂಭಿಸಿದ. ತನ್ನ 10 ನೇ ವಯಸ್ಸಿನಲ್ಲಿಯೇ ಕಾಲೇಜನ್ನು ಪ್ರವೇಶಿಸಿದ.

ಹೀಬ್ರೂ ಭಾಷೆ

ಸಾಲ್ ಅರೇನ್ ಕ್ರಿಪ್

ನವೆಂಬರ್ 13, 1940 ರಂದು ನ್ಯೂಯಾರ್ಕ್‌ನಲ್ಲಿ ಜನಿಸಿದ ಸಾಲ್ ಅರೇನ್ ಕ್ರಿಪ್ ಪುರಾತನ ಹೀಬ್ರೂ ಭಾಷೆಯನ್ನು ಆರನೆಯ ವಯಸ್ಸಿನಲ್ಲಿಯೇ ಕಲಿತವರು. ಷೇಕ್ಸ್ಪಿಯರ್‌ನ ಸಂಪೂರ್ಣ ಕೃತಿಗಳನ್ನು ಒಂಭತ್ತನೆಯ ವಯಸ್ಸಿನಲ್ಲಿಯೇ ಓದಿ ಮುಗಿಸದವನು.

ಕಲಾವಿದೆ

ಅಲಿಟಾ ಆಂಡ್ರೆ

ಈ ಎರಡು ವರ್ಷದ ಕಲಾವಿದೆ ಜನಪ್ರಿಯ ಕಲಾ ಸಂಸ್ಥೆಗಳಲ್ಲಿ ತನ್ನ ಚಿತ್ರಗಳನ್ನು ಪ್ರದರ್ಶಿಸುತ್ತಾರೆ. 2007 ಜನವರಿ 9 ರಂದು ಜನಿಸಿದ ಅಲಿಟಾ ಆಂಡ್ರೆ ತನ್ನ ಚಿತ್ರಗಾರಿಕೆ ಮತ್ತು ಸಣ್ಣ ಪ್ರಾಯದ ಸಾಧಕಿ ಎಂಬ ಮನ್ನಣೆಗೆ ಪ್ರಸಿದ್ಧರಾಗಿದ್ದಾರೆ.

 ಕಿರಿ ಹಾಡುಗಾರ್ತಿ

ಕ್ಲಿಯೋಪಾತ್ರ ಸ್ಟ್ರಾಟನ್

ಈ ಮೂರು ವರ್ಷ ಪ್ರಾಯದ ಹಾಡುಗಾರ್ತಿ ಪ್ರತೀ ಹಾಡಿಗೆ ಕೈತುಂಬಾ ಗಳಿಕೆಯನ್ನು ಗಳಿಸುತ್ತಾಳೆ. 6 ಅಕ್ಟೋಬರ್ 2002 ರಲ್ಲಿ ಜನಿಸಿದ ಈಕೆ ಅತಿ ಕಿರಿಯ ವಯಸ್ಸಿನ ಹಾಡುಗಾರ್ತಿ ಎಂಬ ಮನ್ನಣೆಗೆ ಪಾತ್ರಳಾಗಿದ್ದಾಳೆ.

ಕಂಪ್ಯೂಟರ್ ಪ್ರಚಂಡೆ

ಅರ್ಫಾ ಕರೀಮ್

ಪಾಕಿಸ್ತಾನಿ ವಿದ್ಯಾರ್ಥಿನಿಯಾಗಿರುವ ಅರ್ಫಾ ಕರೀಮ್ ಕಂಪ್ಯೂಟರ್ ಪ್ರಚಂಡೆ ಎಂದೆನಿಸಿದ್ದು ಮೈಕ್ರೋಸಾಫ್ಟ್ ಪ್ರಮಾಣಿತ ವೃತ್ತಿನಿರತೆ ಎಂಬ ಮನ್ನಣೆಯನ್ನು ಗಳಿಸಿದವಳು. ಈಕೆಯ ವಯಸ್ಸು ಬರೇ ಒಂಭತ್ತು ವರ್ಷವಾಗಿದೆ.

ಬುದ್ಧಿವಂತ ಹುಡುಗ

ಆಕ್ರಿತ್ ಜಸ್ವಾಲ್

ಐಕ್ಯು ಲೆವೆಲ್ 146 ಅನ್ನು ಹೊಂದಿರುವ ಈ ಪ್ರಚಂಡ ಬಾಲಕ, ಭಾರತೀಯ ಎಳೆಯ ಬುದ್ಧಿವಂತನಾಗಿದ್ದಾನೆ. "ಪ್ರಪಂಚದ ಬುದ್ಧಿವಂತ ಹುಡುಗ" ಎಂಬ ಮನ್ನಣೆಗೆ ಈತ ಪಾತ್ರನಾಗಿದ್ದಾನೆ.

ಐಕ್ಯು ಲೆವೆಲ್

ಕಿಮ್ ಉಂಗ್ ಯಂಗ್

ಪ್ರಪಂಚದ ಪ್ರಚಂಡ ಬಾಲಕ ಎಂಬ ಬಿರುದೂ ಕಿಮ್‌ಗಿದೆ. ಮಾರ್ಚ್ 8, 1962 ರಂದು ಕೊರಿಯಾದಲ್ಲಿ ಜನಿಸಿದ ಈ ಪೋರ ಐಕ್ಯು ಲೆವೆಲ್ 210 ಅನ್ನು ಪಡೆದುಕೊಂಡು ಗಿನ್ನೀಸ್ ಬುಕ್ ರೆಕಾರ್ಡ್‌ನಲ್ಲಿ ಹೆಸರನ್ನು ಪಡೆದುಕೊಂಡಿದ್ದಾನೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
In this article we can see the 10 Most Genius Child Prodigies of The World.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot