ಪಾಕೆಟ್‌ಗೆ ಸೂಕ್ತವಾಗಿರುವ ಮಿನಿ ಕಂಪ್ಯೂಟರ್ಸ್

By Shwetha
|

ನಮ್ಮ ದೈನಂದಿನ ಕೆಲಸಗಳಿಗೆ ಅಗತ್ಯವಾಗಿರುವ ಡಿವೈಸ್‌ಗಳು ಆದಷ್ಟು ಸಣ್ಣ ಗಾತ್ರದಲ್ಲಿ ಇರಲಿ ಎಂದೇ ನಾವು ಬಯಸುತ್ತೇವೆ. ಈ ಸಣ್ಣ ಡಿವೈಸ್‌ಗಳು ಸಣ್ಣ ಗಾತ್ರದಲ್ಲಿ ಬಂದರೆ ಅದೂ ಇನ್ನೂ ಉತ್ತಮವಾಗಿರುತ್ತದೆ.

ಓದಿರಿ: ಹಾಲಿವುಡ್‌ನ್ನಾಳಿದ ರೊಬೋಟ್ ಚಿತ್ರಗಳು

ಅದಕ್ಕೆಂದೇ ಇಂದಿನ ಲೇಖನದಲ್ಲಿ ನಿಮಗಾಗಿ ಮಿನಿ ಕಂಪ್ಯೂಟರ್‌ಗಳನ್ನು ನಾವು ಪ್ರಸ್ತುಪಡಿಸುತ್ತಿದ್ದು ಇದು ಪ್ರೊಸೆಸರ್, ಆಪರೇಟಿಂಗ್ ಸಿಸ್ಟಮ್ಸ್, RAM ಮತ್ತು ಸಂಗ್ರಹಣಾ ಮಾಧ್ಯಮವನ್ನು ಒಳಗೊಂಡು ಬಂದಿದೆ. ಕಾರ್ಯನಿರ್ವಹಿಸಲು ಇದಕ್ಕೆ ಪವರ್ ಸಪ್ಲೈ ಅಗತ್ಯವಿದೆ. ನಿಮ್ಮ ಕೈಗೆಟಕುವ ಬೆಲೆಯಲ್ಲಿ ಬಂದಿರುವ ಟಾಪ್ ಡಿವೈಸ್ ಸಂಗ್ರಹವನ್ನು ಕೆಳಗಿನ ಸ್ಲೈಡರ್‌ನಲ್ಲಿ ನಾವು ನೀಡುತ್ತಿದ್ದೇವೆ.

ಹ್ಯಾನ್ಸ್‌ಪ್ರಿ

ಹ್ಯಾನ್ಸ್‌ಪ್ರಿ

ಯುಎಸ್‌ಬಿ ಫ್ಲ್ಯಾಶ್ ಡ್ರೈವ್‌ಗಿಂತಲೂ ಸ್ವಲ್ಪ ದೊಡ್ಡದಾಗಿರುವ ಇದು ಕ್ವಾಡ್ ಕೋರ್ ವೇಗವಾದ ಪ್ರೊಸೆಸಿಂಗ್ ಪವರ್ ಜೊತೆಗೆ ಬಂದಿದೆ. 2 ಜಿಬಿ RAM, 32 ಜಿಬಿ ಸಂಗ್ರಹಣಾ ಸಾಮರ್ಥ್ಯ ಇದರಲ್ಲಿದೆ.

ಇಂಟೆಲ್ ಕಂಪ್ಯೂಟರ್ ಸ್ಟಿಕ್

ಇಂಟೆಲ್ ಕಂಪ್ಯೂಟರ್ ಸ್ಟಿಕ್

ನಿಮ್ಮ ಟಿವಿಯನ್ನು ಸಂಪೂರ್ಣ ಕಂಪ್ಯೂಟರ್ ಅನ್ನಾಗಿ ಮಾರ್ಪಡಿಸುತ್ತದೆ ಈ ಡಿವೈಸ್. ಇಂಟೆಲ್ ಆಟಮ್ ಒದಗಿಸುವ ಕ್ವಾಡ್ ಕೋರ್ ಪ್ರೊಸೆಸರ್ ಅನ್ನು ಇದು ಬಳಸುತ್ತದೆ. 2ಜಿಬಿ RAM, 32 ಜಿಬಿ ಸಂಗ್ರಹಣಾ ಸಾಮರ್ಥ್ಯ ಇದರಲ್ಲಿದೆ.

ಮಿನಿಕ್ಸ್ ನಿಯೊ z64

ಮಿನಿಕ್ಸ್ ನಿಯೊ z64

ವಿಂಡೋಸ್ 8.1 ಈ ಡಿವೈಸ್‌ನಲ್ಲಿದ್ದು ಈ ಬಾಕ್ಸ್ ಕಂಪ್ಯೂಟರ್‌ನಂತೆಯೇ ಕಾರ್ಯನಿರ್ವಹಿಸುತ್ತದೆ. 32ಜಿಬಿ MMC ಬಿಲ್ಟ್ ಇನ್ ಸಂಗ್ರಹಣಾ ಸಾಮರ್ಥ್ಯ ಇದರಲ್ಲಿದ್ದು, 2ಜಿಬಿ DDR3L ಮೆಮೊರಿ ಇದರಲ್ಲಿದೆ.

ಜೊಟಾಕ್ ZBOX PI320

ಜೊಟಾಕ್ ZBOX PI320

ಈ ಡಿವೈಸ್ Zotac Pico mini-PC ಸಿರೀಸ್‌ನಿಂದ ಬಂದಿದೆ. ಇದು ಸಣ್ಣ ಗಾತ್ರದಲ್ಲಿದ್ದು, ನಿಮ್ಮ ಪಾಕೆಟ್‌ನಲ್ಲಿ ಸರಿಯಾಗಿ ಕೂರುತ್ತದೆ. ಕ್ವಾಡ್ ಕೋರ್ ಇಂಟೆಲ್ ಆಟಮ್ ಪ್ರೊಸೆಸರ್ ಇದರಲ್ಲಿದ್ದು, ವಿಂಡೋಸ್ 8 ಇದರಲ್ಲಿದೆ. ಎಚ್‌ಡಿ ವೀಡಿಯೊಗಳನ್ನು ಇದರಲ್ಲಿ ಚಾಲನೆ ಮಾಡಬಹುದಾಗಿದೆ.

ವೆನ್ಸ್‌ಮೈಲ್ iPC002

ವೆನ್ಸ್‌ಮೈಲ್ iPC002

ವಿಂಡೋಸ್ 8.1 ಅನ್ನು ಇದರಲ್ಲಿ ನಾವು ಚಾಲನೆ ಮಾಡಬಹುದಾಗಿದ್ದು 2 ಜಿಬಿ RAM ಅನ್ನು ಡಿವೈಸ್ ಹೊಂದಿದೆ. 32 ಮೀಡಿಯಾ ಸಂಗ್ರಹಣೆ ಇದರಲ್ಲಿದೆ.

Cloudsto X86 Nano Mini PC

Cloudsto X86 Nano Mini PC

ನಿಮ್ಮ ಪಾಕೆಟ್‌ಗೆ ಸೂಕ್ತವಾಗಿರುವ ಕಂಪ್ಯೂಟರ್ ಆಗಿದೆ. ಎರಡು ಆವೃತ್ತಿಗಳಲ್ಲಿ ಈ ಕಂಪ್ಯೂಟರ್ ಬಂದಿದ್ದು ವಿಂಡೋಸ್ 8.1 ಇದರಲ್ಲಿದೆ ಮತ್ತು ಇನ್ನೊಂದು ಆವೃತ್ತಿ ಉಬಂಟು 14.04 ನ ಚಾಲನೆ ಮಾಡುತ್ತಿದೆ. 3 ಯುಎಸ್‌ಬಿ ಪೋರ್ಟ್‌ಗಳನ್ನು ಇದು ಹೊಂದಿದ್ದು, ಎಸ್‌ಡಿ ಕಾರ್ಡ್ ಸ್ಲಾಟ್ ಇದರಲ್ಲಿದೆ. 2 ಜಿಬಿ RAM ಡಿವೈಸ್‌ನಲ್ಲಿದೆ.

ಅಸೂಸ್ VivoMini UN62

ಅಸೂಸ್ VivoMini UN62

16 ಜಿಬಿ ವರೆಗೆ ಸಂಗ್ರಹಣಾ ಸಾಮರ್ಥ್ಯ ಇದರಲ್ಲಿದೆ. ಕಡಿಮೆ ಪವರ್‌ನಲ್ಲೂ ಇದು ಅದ್ಭುತವಾಗಿ ಕಾರ್ಯನಿರ್ವಹಿಸುತ್ತದೆ. ಉತ್ತಮ ಧ್ವನಿಯನ್ನು ಇದು ಪಡೆದುಕೊಂಡಿದೆ. 4K/UHD ಗುಣಮಟ್ಟದ ಚಿತ್ರಗಳನ್ನು ನಿಮ್ಮ ಪರದೆಯಲ್ಲಿ ಇದು ಗೋಚರಿಸುವಂತೆ ಮಾಡುತ್ತದೆ.

MSI ಕ್ಯೂಬಿ

MSI ಕ್ಯೂಬಿ

ಈ ಕಂಪ್ಯೂಟರ್‌ಗೆ ನೀವು ಮೆಮೊರಿ, ಸ್ಟೋರೇಜ್ ಮತ್ತು ಆಪರೇಟಿಂಗ್ ಸಿಸ್ಟಮ್‌ಗಳನ್ನು ಅಳವಡಿಸಬೇಕಾಗುತ್ತದೆ.

ಮೀರ್‌ಕ್ಯಾಟ್

ಮೀರ್‌ಕ್ಯಾಟ್

ಸುಂದರವಾದ ಅದ್ಭುತ ವಿನ್ಯಾಸವನ್ನು ಈ ಮೀರ್‌ಕ್ಯಾಟ್ ಹೊಂದಿದೆ. 4ಜಿಬಿ/16ಜಿಬಿ ಹೀಗೆ ಎರಡು ಆವೃತ್ತಿಗಳನ್ನು ನಿಮಗಿದರಲ್ಲಿ ಪಡೆಯಬಹುದಾಗಿದೆ.

ಇಂಟೆಲ್ ಎನ್‌ಯುಸಿ

ಇಂಟೆಲ್ ಎನ್‌ಯುಸಿ

ಮೆಮೊರಿ, ಸ್ಟೋರೇಜ್ ಮತ್ತು ಓಎಸ್ ಅನ್ನು ಪಡೆದುಕೊಂಡು ಈ ಕಂಪ್ಯೂಟರ್ ಬಂದಿದೆ. ನೀವು ಇದನ್ನು ನಿಮ್ಮಷ್ಟಕ್ಕೆ ಇನ್‌ಸ್ಟಾಲ್ ಮಾಡಿಕೊಳ್ಳಬೇಕು. 16 ಜಿಬಿ ಸಂಗ್ರಹಣಾ ಸಾಮರ್ಥ್ಯ ಇದರಲ್ಲಿದೆ.

Most Read Articles
Best Mobiles in India

English summary
For those who are on a tight budget or who are always on the go, perhaps these mini computers are the solution they seek. Here are 10 mini PCs that show you how far computers have, and can, shrink.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more