ವಯಸ್ಸಾಗುವಿಕೆಯನ್ನು ನಿಧಾನಗೊಳಿಸುವ ಗೂಗಲ್ ಭವಿಷ್ಯ ಯೋಜನೆ

  By Shwetha
  |

  ಅತ್ಯುತ್ತಮ ಸರ್ಚ್ ಎಂಜಿನ್ ಎಂದೆನಿಸಿರುವ ಗೂಗಲ್ ತನ್ನ ಅದ್ಭುತ ಭವಿಷ್ಯ ಯೋಜನೆಗಳ ಮೂಲಕ ಬಳಕೆದಾರರಿಗೆ ಉಪಯುಕ್ತಕಾರಿ ಸಂಪನ್ಮೂಲಗಳನ್ನು ಒದಗಿಸುವ ನಿಟ್ಟಿನಲ್ಲಿದೆ. ಆಂಡ್ರಾಯ್ಡ್ ಓಎಸ್‌ನ ಮುಖ್ಯ ಸ್ಥಾನ ಎಂದೆನಿಸಿರುವ ಗೂಗಲ್ ಅದಕ್ಕೂ ಮಿಗಲಾಗಿ ಅತ್ಯುತ್ತಮವಾದುದನ್ನು ಬಳಕೆದಾರರಿಗೆ ಒದಗಿಸುವ ನಿರ್ಧಾರದಲ್ಲಿದೆ.

  ಓದಿರಿ: ಪ್ರಪಂಚದ ಟಾಪ್‌ 20 ಟೆಕ್ನಾಲಜಿ ಬ್ರಾಂಡ್‌ಗಳು

  ಭವಿಷ್ಯದ ಗೂಗಲ್ ಯೋಜನೆಗಳೇನು ಎಂಬುದನ್ನು ಈ ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ನೀಡುತ್ತಿದ್ದು ನಿಜಕ್ಕೂ ಈ ಪ್ರಾಜೆಕ್ಟ್‌ಗಳು ನಿಮ್ಮನ್ನು ಬೆರಗಾಗಿಸುವುದು ಖಂಡಿತ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ರೊಬೋಟಿಕ್ಸ್

  ರೊಬೋಟ್ ಸೈನ್ಯವನ್ನು ಕಟ್ಟುವ ಯೋಜನೆಯನ್ನು ಗೂಗಲ್ ಹೊಸದಾಗಿ ಆರಂಭಿಸಿದ್ದು, ಇದಕ್ಕಾಗಿ ರೊಬೋಟಿಕ್ ಕಂಪೆನಿಗಳೊಂದಿಗೆ ಸಂವಾದವನ್ನು ನಡೆಸುತ್ತಿದೆ.

  ಸೆಲ್ಫ್ ಡ್ರೈವಿಂಗ್ ಕಾರ್ಸ್

  ರಸ್ತೆಯಲ್ಲಿ ದೀರ್ಘ ಸಮಯದವರೆಗೆ ಟ್ರಾಫಿಕ್ ಜಾಮ್‌ನಲ್ಲಿ ಕಾಯುವಿಕೆಯ ಜಂಜಾಟವನ್ನು ತಪ್ಪಿಸಲು ಈ ಸೆಲ್ಫ್ ಡ್ರೈವಿಂಗ್ ಕಾರು ರೂಪಿತವಾಗಿದೆ. ಕಾರಿನ ಸ್ವಯಂ ದೋಷದಿಂದಲೇ ಕಳೆದ ಅರು ವರ್ಷಗಳಲ್ಲಿ ಈ ಕಾರು 11 ಸಣ್ಣ ಅಪಘಾತಗಳನ್ನು ನಡೆಸಿದೆ ಎಂಬುದೂ ದಾಖಲೆಯಾಗಿದೆ.

  ಸ್ಪೇಸ್ ಪರಿಶೋಧನೆ

  1.16 ಬಿಲಿಯನ್ ವೆಚ್ಚದಲ್ಲಿ ನಾಸಾ ಏರ್‌ಫೀಲ್ಡ್ ಅನ್ನು 60 ವರ್ಷಗಳಿಗಾಗಿ ಗೂಗಲ್ ಲೀಸ್ ಮಾಡಿದೆ.ಬಾಹ್ಯಾಕಾಶ ಅನ್ವೇಷಣೆಯಲ್ಲಿ ಇನ್ನಷ್ಟು ಸುಧಾರಣೆಗಳನ್ನು ತಂದು ಅದನ್ನು ಜನರಿಗೆ ತಲುಪಿಸುವ ಇರಾದೆ ಕಂಪೆನಿಯದ್ದಾಗಿದೆ.

  ಪ್ರಾಜೆಕ್ಟ್ ಅರಾ - ಆಧುನಿಕ ಫೋನ್‌ಗಳು

  ನಿಮ್ಮ ಫೋನ್ ಆಗಾಗ್ಗೆ ಬದಲಾಯಿಸಿ ದಣಿದಿದ್ದೀರಾ? ಪ್ರಾಜೆಕ್ಟ್ ಅರಾ ನಿಮ್ಮನ್ನು ಬೆಚ್ಚಿಬೀಳಿಸುವುದು ಖಂಡಿತ. ನಿಮಗೆ ಹೇಗೆ ಬೇಕೋ ಅದೇ ಮಾದರಿಯಲ್ಲಿ ಹಳೆಯ ಫೋನ್ ಅನ್ನು ಇದು ನಿಮಗೆ ಸಿದ್ಧಪಡಿಸುತ್ತದೆ.

  ಪ್ರಾಜೆಕ್ಟ್ ಟಾಂಗೊ

  ನಿಮ್ಮ ಸ್ಮಾರ್ಟ್‌ಫೋನ್ ಎಲ್ಲವನ್ನೂ ಮ್ಯಾಪ್ ಮಾಡುತ್ತದೆ. ಸೀಲಿಂಗ್, ಗೋಡೆ, ನೀವು ನಡೆಯುವಾಗಿನ ವಸ್ತುಗಳು ಹೀಗೆ ಎಲ್ಲವೂ ಮ್ಯಾಪ್ ಆಗುತ್ತದೆ.

  ಕ್ಯಾಲಿಕೊ

  ಗೂಗಲ್ ಇಂಕ್ ಸ್ಥಾಪಿಸಿರುವ ಸಂಸ್ಥೆ ಇದಾಗಿದೆ. ವಯಸ್ಸು ಹೇಗೆ ಏರಿಕೆಯಾಗುತ್ತದೆ ಮತ್ತು ಇದನ್ನು ನಿಧಾನವಾಗಿಸುವುದು ಹೇಗೆ ಅಂತೆಯೇ ವಯಸ್ಸು ಸಂಬಂಧಿ ರೋಗಗಳಾದ ಕ್ಯಾನ್ಸರ್ ಮೊದಲಾದವನ್ನು ಇದು ಪತ್ತೆಮಾಡುತ್ತದೆ.

  ಲಿಫ್ಟ್‌ವೇರ್

  ಸ್ನಾಯು ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಲಿಫ್ಟ್‌ವೇರ್ ಸ್ಪೂನ್ ಆಶಾದಾಯಕವಾಗಲಿದೆ.

  ಗೂಗಲ್ ಕಾಂಟ್ಯಾಕ್ಟ್ ಲೆನ್ಸ್

  ಮಧುಮೇಹಿಗಳಲ್ಲಿ ಸಕ್ಕರೆ ಪ್ರಮಾಣವನ್ನು ಇದು ನಿರ್ವಹಿಸಲಿದೆ. ಇದರ ಮೇಲ್ಮೈಗೆ ರಕ್ತದ ಹನಿಗಳನ್ನು ಹಾಕಿ ಮನೆಯಲ್ಲೇ ನಿಮ್ಮ ಸಕ್ಕರೆ ಪ್ರಮಾಣವನ್ನು ಕಂಡುಕೊಳ್ಳಬಹುದು.

  ಮಕಾನಿ

  ಈ ಪ್ರಾಜೆಕ್ಟ್ ಮೂಲಕ ಗಾಳಿಯ ಶಕ್ತಿಯನ್ನು ಬಳಸಿ ಶಕ್ತಿಯ ಉತ್ಪತ್ತಿಯನ್ನು ಮಾಡಲಿದೆ. ಕಡಿಮೆ ಖರ್ಚಿನ ಯೋಜನೆ ಇದು ಎಂದೆನಿಸಿದೆ.

  ಪ್ರಾಜೆಕ್ಟ್ ಲೂನ್

  ಬಲೂನ್ ಮೂಲಕ ಇಂಟರ್ನೆಟ್‌ನ ವರ್ಗಾವಣೆಯನ್ನು ನಡೆಸುವ ಬೃಹತ್ ಯೋಜನೆಯನ್ನು ಗೂಗಲ್ ಕೈಗೆತ್ತಿಕೊಂಡಿದೆ. ಈ ಬಲೂನ್‌ಗಳು ಇಪ್ಪತ್ತು ಕಿಲೀಮೀಟರ್‌ಗಳಷ್ಟು ಪ್ರಯಾಣ ಮಾಡಬಲ್ಲವು. ಸೋಲಾರ್ ಶಕ್ತಿಯ ಈ ಬಲೂನ್‌ಗಳ ಸಾಮರ್ಥ್ಯವಾಗಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Google sure has come a long way. And it isn’t stopping anytime soon. Let’s take a look at what Google has been up to.

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more