Subscribe to Gizbot

ಯಾರೂ ಅರಿಯದ ಭಯಾನಕ ಬ್ರಹ್ಮಾಂಡ ಗುಟ್ಟುಗಳು

Written By:

ಆಧುನೀಕತೆಗೆ ತಕ್ಕಂತೆ ತಂತ್ರಜ್ಞಾನದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ನೀವು ಗಮನಿಸರಬಹುದು. ದಿನದಿಂದ ದಿನಕ್ಕೆ ಪ್ರಗತಿಯನ್ನು ಹೊಂದುತ್ತಿರುವ ತಂತ್ರಜ್ಞಾನಕ್ಕೆ ಬೆರಗಾಗದವರು ಯಾರಿದ್ದಾರೆ ಹೇಳಿ.

ಓದಿರಿ: ನಿಮ್ಮನ್ನೇ ಖೈದಿಯನ್ನಾಗಿಸುವ ವಿಚಿತ್ರ ವಾಟ್ಸಾಪ್ ತಂತ್ರ

ಜಗತ್ತಿನಲ್ಲೇ ಹೆಚ್ಚು ಸಾಧನೆಯನ್ನು ಮಾಡಿರುವ ಟಾಪ್ 10 ಸಾಧನೆಗಳ ಪಟ್ಟಿಯನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದು ಈ ಸಾಧನೆಗಳು ಏಕೆ ವಿಶೇಷವಾಗಿವೆ ಎಂಬುದನ್ನು ನೀವು ಅರಿಯಲಿದ್ದೀರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ತಾರಾಗಣ

ಬ್ರಹ್ಮಾಂಡದಲ್ಲೇ ತೆಳುವಾದ ತಾರಾಗಣ

2013 ರಲ್ಲಿ ನಾಸಾ ಮತ್ತು ಈಸಾ ESA ನ ವಿಜ್ಞಾನಿಗಳು IC 2233 ಎಂಬ ಸುರುಳಿಯಾಕಾರದ ತಾರಾಗಣವನ್ನು ಅನ್ವೇಷಿಸಿದ್ದು ಇದನ್ನು ಹೆಚ್ಚು ಸಪಾಟಾವಾದ ತಾರಾಗಣವೆಂದು ಕರೆಯಲ್ಪಟ್ಟಿದೆ.

ದೊಡ್ಡದಾದ ಕಪ್ಪು ರಂಧ್ರ

ಕಪ್ಪು ರಂಧ್ರ

NGC 1277 ಡಿಸ್ಕ್ ತಾರಾಗಣವನ್ನು ಬ್ರಹ್ಮಾಂಡದ ಅತಿ ದೊಡ್ಡದಾದ ಕಪ್ಪು ರಂಧ್ರವೆಂದು ಗುರುತಿಸಲಾಗಿದೆ.

ದೊಡ್ಡ ತಾರಾಗಣ

ದೊಡ್ಡ ತಾರಾಗಣ

IC 1101 ಅನ್ನು ದೊಡ್ಡ ತಾರಾಗಣವೆಂದು ಪರಿಗಣಿಸಲಾಗಿದ್ದು ಇದನ್ನು ಬ್ರಿಟಿಷ್ ಖಗೋಳಶಾಸ್ತ್ರಜ್ಞ ಫ್ರೆಡ್ರಿಕ್ ವಿಲಿಯಮ್ ಹರ್ಸಚಲ್ ಅನ್ವೇಷಿಸಿದ್ದಾರೆ.

ಹಳೆಯ ತಾರಾಗಣ

ಹಳೆಯ ತಾರಾಗಣ

2013 ರಲ್ಲಿ, z8_GND_5296 ಯನ್ನು ಅತ್ಯಂತ ಹಳೆಯ ತಾರಾಗಣವೆಂದು ಶೋಧಿಸಲಾಗಿದೆ. ಇದು 13.1 ಬಿಲಿಯನ್ ಜ್ಯೋತಿರ್ವರ್ಷ ಅಂತರದಲ್ಲಿದೆ.

ನೈಸರ್ಗಿಕ ಪ್ರೊಟೀನ್

ನೈಸರ್ಗಿಕ ಪ್ರೊಟೀನ್

ನಮ್ಮ ದೇಹದಲ್ಲಿ ನೈಸರ್ಗಿಕವಾಗಿ ಉತ್ಪತ್ತಿಯಾಗುವ ಅತ್ಯಂತ ದೊಡ್ಡದಾದ ಪ್ರೊಟೀನ್ ಇದಾಗಿದ್ದು ಇದು ಒಂದು ಮೈಕ್ರೋಮೀಟರ್‌ಗಿಂತಲೂ ದೊಡ್ಡದಾಗಿದೆ.

 ದೊಡ್ಡದಾದ ಜೀವಿ

ದೊಡ್ಡದಾದ ಜೀವಿ

ದೊಡ್ಡ ಜೀವಿಗಳ ವಿಷಯಕ್ಕೆ ಬಂದಾಗ ತಿಮಿಂಗಿಲ ಅಥವಾ ಆನೆ ನಮ್ಮ ನೆನಪಿಗೆ ಬರುತ್ತದೆ. ಆದರೆ ಇವೆಲ್ಲವುಗಳಿಗಿಂತಲೂ ದೊಡ್ಡದಾದ ಜೀವಿ ಯುಎಸ್‌ನ ಒರೆಗಾನ್ ಪರ್ವತ ಪ್ರದೇಶಗಳಲ್ಲಿ ಕಂಡುಬರುವ ಈ ಅಣಬೆಯಾಗಿದೆ ಎಂಬುದು ಪ್ರಕೃತಿ ಸೋಜಿಗವಾಗಿದೆ. ಇದರ ಅಳತೆ 3.8 ಕಿಲೋಮೀಟರ್‌ಗಳಾಗಿದೆ.

ಬ್ರಹ್ಮಾಂಡ ರಚನೆ

ದೊಡ್ಡದಾದ ಬ್ರಹ್ಮಾಂಡ ರಚನೆ

ನವೆಂಬರ್ 2013 ರಲ್ಲಿ ಪತ್ತೆಯಾದ ಹರ್ಕ್ಯುಲೆಸ್ ಕೊರೊನಾ ಬೊರೀಲ್ಸ್ ಅತ್ಯಂತ ದೊಡ್ಡದಾದ ಬ್ರಹ್ಮಾಂಡ ರಚನೆಯಾಗಿದೆ. ಗಾಮಾ ವಿಕಿರಣಗಳ ಸ್ಫೋಟದ ಸ್ಥಾನದಲ್ಲಿ ಇದು ಪತ್ತೆಯಾಗಿದೆ.

ಚಿಪ್ಪಿನ ಪ್ರಾಣಿ

ಸದೃಢ ಸ್ವಾಭಾವಿಕ ವಸ್ತು

ಚಿಪ್ಪಿನ ಪ್ರಾಣಿಯು ಬಸವನ ಹುಳು ಜಾತಿಗೆ ಸೇರಿದ ಜೀವಿಯಾಗಿದ್ದು ಇದು ಹಲ್ಲನ್ನು ಒಳಗೊಂಡಿದೆ. ಇವುಗಳ ಹಲ್ಲು ಅತ್ಯಂತ ಸುದೃಢವಾಗಿದೆ ಎಂಬುದು ಅಸಾ ಬಾರ್ಬರ್ ಮತ್ತು ಅವರ ಅನ್ವೇಷಕ ತಂಡದಿಂದ ನಿರೂಪಿತವಾಗಿದೆ.

ಗಣಿತದ ಸಮಸ್ಯೆ

ಗಣಿತದ ಸಮಸ್ಯೆ

1995 ರವರೆಗೆ ಹೆಚ್ಚು ದೀರ್ಘ ಸಮಯದವರೆಗೆ ಬಿಡಿಸಲಾರದ ಕಗ್ಗಂಟಾಗಿ ಫರ್ಮಾಟ್‌ನ ಕೊನೆಯ ಪ್ರಮೇಯ ಉಳಿದುಕೊಂಡಿತ್ತು. ಕೊನೆಗೂ ಇದನ್ನು ಗಣಿತಜ್ಞ ಆಂಡ್ರ್ಯೂ ವೈಲ್ಸ್ ಬಿಡಿಸಿದರು.

ಅಯಸ್ಕಾಂತ

ಪ್ರಕೃತಿಯಲ್ಲಿರುವ ಅತ್ಯಂತ ಶಕ್ತಿಶಾಲಿ ಅಯಸ್ಕಾಂತ

SGR 1806-20 and SGR 0418 ಎಂಬ ಅಯಸ್ಕಾಂತವು ಹೆಚ್ಚು ಬಲಶಾಲಿ ಅಯಸ್ಕಾಂತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
There's a lot to be discovered in the universe but there is also a sea of things which we already know. Here is a collection of ten records and its record holders from this universe.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot