ಭಾರತೀಯ ಟೆಕ್ ವಲಯದ ಹತ್ತು ಶ್ರೀಮಂತ ಗಣ್ಯರು!

|

ಪ್ರತಿ ವರ್ಷ ಫೋರ್ಬ್ಸ್ ನಿಯತಕಾಲಿಕೆ ವಿಶ್ವದ ಶ್ರೀಮಂತರ ಪಟ್ಟಿಯನ್ನು ಪ್ರಕಟಿಸುತ್ತದೆ. ಈ ಲಿಸ್ಟಿನಲ್ಲಿ ವಿಶ್ವದ ಎಲ್ಲ ಕ್ಷೇತ್ರದಲ್ಲಿನ ಶ್ರೀಮಂತರನ್ನು ಪರಿಗಣಿಸಲಾಗಿರುತ್ತದೆ. ಅದೇ ರೀತಿ ತಂತ್ರಜ್ಞಾನ ವಲಯದಲ್ಲಿಯೂ ಶ್ರೀಮಂತರ ಪಟ್ಟಿ ಮಾಡಲಾಗುತ್ತದೆ. ಭಾರತದಲ್ಲಿಯೂ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಬಿಲಿಯನರಿಸ್ ಒಡೆಯರು ಇದ್ದಾರೆ. ಅವರೆಲ್ಲರು ಪ್ರಮುಖ ಸಂಸ್ಥೆಗಳ ಮಾಲೀಕರೇ ಆಗಿದ್ದು, ಆ ಪೈಕಿ ಮುಖೇಶ್ ಅಂಬಾನಿ ಮೊದಲ ಸ್ಥಾನದಲ್ಲಿ ಇದ್ದಾರೆ.

2019ರ ವರದಿಯಂತೆ

ಬ್ಯುಸಿನೆಸ್‌ ಇನ್‌ಸೈಡರ್ ವರದಿಯಂತೆ 2019ರ ಭಾರತೀಯ ತಂತ್ರಜ್ಞಾನ ಕ್ಷೇತ್ರದಲ್ಲಿನ ಪ್ರಮುಖ ಹತ್ತು ಜನ ಶ್ರೀಮಂತರ ಪಟ್ಟಿ ಬಹಿರಂಗವಾಗಿದ್ದು, ಆ ಲಿಸ್ಟಿನಲ್ಲಿ ಭಾರತದ ತಂತ್ರಜ್ಞಾನ ವಲಯದ ಬ್ಯುಸಿನೆಸ್ ಮಂದಿಯೇ ಮುಂದಿದ್ದಾರೆ. ರಿಲಾಯನ್ಸ್‌ ಜಿಯೋ ಒಡೆತನದ ಮುಖೇಶ್ ಅಂಬಾನಿ ಮೊದಲ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ. ಅವರ ನಂತರ ಹೆಚ್‌ಸಿಎಲ್‌ ಸಂಸ್ಥೆಯ ಸ್ಥಾಪಕ ಶಿವಾ ನಡಾರ್ ಅವರು ಇದ್ದಾರೆ. ಭಾರ್ತಿ ಎಂಟರ್ಪ್ರೈಸ್‌ನ ಸುನೀಲ್ ಮಿತ್ತಲ್ ಅವರು ತೃತೀಯ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಟಾಪ್ ಟೆನ್ ಲಿಸ್ಟ್‌ನಲ್ಲಿ ಸ್ಥಾನ ಪಡೆದ ಇತರೆ ತಂತ್ರಜ್ಞಾನ ವಲಯದ ಶ್ರೀಮಂತ ವ್ಯಕ್ತಿಗಳು ಯಾರು ಎಂಬುದನ್ನು ಮುಂದೆ ತಿಳಿಯೋಣ.

ಮುಖೇಶ್ ಅಂಬಾನಿ

ಮುಖೇಶ್ ಅಂಬಾನಿ

ರಿಲಾಯನ್ಸ್‌ ಜಿಯೋ ಸಂಸ್ಥೆಯ ಮಾಲೀಕರಾದ ಮುಖೇಶ್ ಅಂಬಾನಿ ಅವರು ಟೆಕ್/ತಂತ್ರಜ್ಞಾನ ವಲಯದ ಶ್ರೀಮಂತರ ಪ್ರಮುಖ ಹತ್ತರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಮುಖೇಶ್ ಅಂಬಾನಿ ಅವರು 2016 ರಲ್ಲಿ ಜಿಯೋ ಸಿಮ್ ಮೂಲಕ ಭಾರತದ ಟೆಲಿಕಾಂ ಕ್ಷೇತ್ರದಲ್ಲಿನ ದರ ಸಮರಕ್ಕೆ ಮಾಡಿ ಹೊಸ ಸಂಚಲನ ಮೂಡಿಸಿದ್ದರು. ಇವರು ಒಟ್ಟು 51.4 ಬಿಲಿಯನ್ ಮೌಲ್ಯದ ಆಸ್ತಿಯ ಸಾಹುಕಾರ ಆಗಿದ್ದಾರೆ.

ಶಿವಾ ನಡಾರ್

ಶಿವಾ ನಡಾರ್

ಪ್ರತಿಷ್ಠಿತ ಹೆಚ್‌ಸಿಎಲ್ ಟೆಕ್ನಾಲಜೀಸ್ (HCL) ಸಂಸ್ಥೆಯ ಸ್ಥಾಪಕ ಮತ್ತು ಚೇರ್ಮನ್ ಶಿವಾ ನಡಾರ್ ಅವರು ದೇಶದ ಟೆಕ್/ತಂತ್ರಜ್ಞಾನ ವಲಯದ ಶ್ರೀಮಂತರ ಪ್ರಮುಖ ಹತ್ತರ ಪಟ್ಟಿಯಲ್ಲಿ ಎರಡನೇಯವರಾಗಿ ಗುರುತಿಸಿಕೊಂಡಿದ್ದಾರೆ. ಒಟ್ಟು $14.4 ಬಿಲಿಯನ್ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ.

ಸುನೀಲ್ ಮಿತ್ತಲ್

ಸುನೀಲ್ ಮಿತ್ತಲ್

ಭಾರ್ತಿ ಎಂಟರ್ಪ್ರೈಸ್‌ ಸಂಸ್ಥೆಯ ಮಾಲೀಕರಾದ ಸುನೀಲ್ ಮಿತ್ತಲ್ ಅವರು ದೇಶದ ಟೆಕ್/ತಂತ್ರಜ್ಞಾನ ವಲಯದ ಹತ್ತು ಪ್ರಮುಖ ಶ್ರೀಮಂತರ ಪೈಕಿ ಮೂರನೇಯವರಾಗಿದ್ದಾರೆ. ಟೆಲಿಕಾಂ, ರಿಯಲ್ ಎಸ್ಟೇಟ್, ಶಿಕ್ಷಣ, ಇನ್ಸೂರೆನ್ಸ್‌, ಮಾಲ್ಸ್‌, ವಲಯಗಳಲ್ಲಿಯೂ ಇವರ ಸಂಸ್ಥೆಯ ಸೇವೆಗಳು ವ್ಯಾಪಿಸಿವೆ. ಇವರ ಒಟ್ಟು ಆಸ್ತಿ ಮೌಲ್ಯವು $7.6 ಬಿಲಿಯನ್ ಆಗಿದೆ.

ಅಜೀಮ್‌ ಪ್ರೇಮ್‌ಜೀ

ಅಜೀಮ್‌ ಪ್ರೇಮ್‌ಜೀ

ದೇಶದ ಟೆಕ್/ತಂತ್ರಜ್ಞಾನ ವಲಯದ ಹತ್ತು ಪ್ರಮುಖ ಶ್ರೀಮಂತರ ಪೈಕಿ ಅಜೀಮ್‌ ಪ್ರೇಮ್‌ಜೀ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಇವರು ಜನಪ್ರಿಯ ವಿಪ್ರೋ ಸಂಸ್ಥೆಯ ಸ್ಥಾಪಕ ಹಾಗೂ ಚೇರ್ಮನ್ ಆಗಿದ್ದಾರೆ. ಪ್ರಸ್ತುತ ಇವರ ಒಟ್ಟು ಆಸ್ತಿ ಮೌಲ್ಯವು $7.2 ಬಿಲಿಯನ್ ಆಗಿದೆ.

ಎನ್‌ ಆರ್ ನಾರಾಯಣ ಮೂರ್ತಿ

ಎನ್‌ ಆರ್ ನಾರಾಯಣ ಮೂರ್ತಿ

ಇನ್ಫೋಸಿಸ್‌ ಸಂಸ್ಥೆಯ ಸಹ-ಸ್ಥಾಪಕರಾದ ಎನ್‌. ಆರ್. ನಾರಾಯಣ ಮೂರ್ತಿ ಅವರು ದೇಶದ ಟೆಕ್ ಕ್ಷೇತ್ರದ ಪ್ರಮುಖ ಹತ್ತು ಶ್ರೀಮಂತರ ಪೈಕಿ ಐದನೇಯವರಾಗಿದ್ದಾರೆ. ಭಾರತದ ಪ್ರಮುಖ IT ಉದ್ಯಮಿಯಾಗಿ ಗುರುತಿಸಿಕೊಂಡಿರುವ ಇವರು ಕನ್ನಡಿಗರಾಗಿದ್ದು, ಇವರ ಪತ್ನಿ ಸುಧಾ ಮೂರ್ತಿ ಪ್ರಖ್ಯಾತ ಲೇಖಕರಾಗಿದ್ದಾರೆ. ಸದ್ಯ $2.47 ಬಿಲಿಯನ್ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ.

ಸೇನಾಪತಿ ಗೋಪಾಲಕೃಷ್ಣನ್

ಸೇನಾಪತಿ ಗೋಪಾಲಕೃಷ್ಣನ್

ದೇಶದ ತಂತ್ರಜ್ಞಾನ ವಲಯದ ಪ್ರಮುಖ ಹತ್ತು ಶ್ರೀಮಂತರ ಲಿಸ್ಟಿನಲ್ಲಿ ಗೋಪಾಲಕೃಷ್ಣನ್ ಅವರು ಆರನೇ ಸ್ಥಾನ ಪಡೆದಿದ್ದಾರೆ. ಇವರು ಅಕ್ಸಿಲರ್ ವೆಂಚರ್ಸ್‌ (axilor ventures) ಸಮೂಹ ಸಂಸ್ಥೆಗಳ ಮಾಲೀಕರಾಗಿದ್ದಾರೆ. ಇವರು ಸಂಸ್ಥೆಯು ಆರಂಭಿಕ ಸ್ಟಾರ್ಟಪ್ಗಳಿಗೆ ಸಫೋರ್ಟ್‌ ನೀಡುವ ಪ್ಲಾಟ್‌ಫಾರ್ಮ್ ಆಗಿದೆ. ಮೊದಲು ಇನ್ಫೊಸಿಸ್ ಸಂಸ್ಥೆಯಲ್ಲಿ ವೈಸ್‌ ಚೇರ್ಮನ್ ಆಗಿ ಕಾರ್ಯನಿರ್ವಹಿಸಿದ್ದರು, ಸದ್ಯ ಇವರು ಒಟ್ಟು ಆಸ್ತಿ ಮೌಲ್ಯವು $2.36 ಬಿಲಿಯನ್ ಆಗಿದೆ.

ಶ್ರೀಧರ್ ವೆಂಬೊ

ಶ್ರೀಧರ್ ವೆಂಬೊ

ದೇಶದ ತಂತ್ರಜ್ಞಾನ ವಲಯದ ಪ್ರಮುಖ ಹತ್ತು ಶ್ರೀಮಂತರ ಲಿಸ್ಟಿನಲ್ಲಿ ಶ್ರೀಧರ್ ವೆಂಬೊ ಅವರು ಸ್ಥಾನ ಪಡೆದಿದ್ದಾರೆ. ಇವರು ಜೋಹೊ ಕಾರ್ಪೋರೇಶನ್ ಸಿಇಓ ಆಗಿದ್ದಾರೆ. ಜೋಹೊ ಕಾರ್ಪೋರೇಶನ್ ಸಾಫ್ಟ್‌ವೇರ್ ಅಭಿವೃದ್ಧಿ ಸಂಸ್ಥೆಯಾಗಿದೆ. ಜೋಹೊ ಆಪ್‌ ವಿಶ್ವ ಮಟ್ಟದಲ್ಲಿ ಒಟ್ಟು 35 ಮಿಲಿಯನ್ ಬಳಕೆದಾರರನ್ನು ಹೊಂದಿದ್ದು, ಅಸ್ಟಿನ್‌ನಲ್ಲಿ 375 ಎಕರೆ ವಿಸ್ತಾರದಲ್ಲಿ ಕ್ಯಾಂಪಸ್ ಹೊಂದಿದೆ. ಒಟ್ಟು ಆಸ್ತಿ ಮೌಲ್ಯವು $1.83 ಬಿಲಿಯನ್ ಆಗಿದೆ.

ನಂದನ್ ನಿಲೇಕಣಿ

ನಂದನ್ ನಿಲೇಕಣಿ

ಇನ್ಫೋಸಿಸ್ ಸಂಸ್ಥೆಯ ಸಹ-ಸ್ಥಾಪಕರಲ್ಲಿ ನಂದನ್ ನಿಲೇಕಣಿ ಸಹ ಒಬ್ಬರಾಗಿದ್ದು, ಇವರು ಸಹ ದೇಶದ ತಂತ್ರಜ್ಞಾನ ವಲಯದ ಪ್ರಮುಖ ಹತ್ತು ಶ್ರೀಮಂತರ ಲಿಸ್ಟಿನಲ್ಲಿ ಸ್ಥಾನ ಪಡೆದಿದ್ದಾರೆ. ಹಾಗೆಯೇ ಇವರೊಬ್ಬ ರಾಜಕಾರಣಿಯಾಗಿಯು ಗುರುತಿಸಿಕೊಂಡಿದ್ದಾರೆ. ಸದ್ಯ ಇವರ ಒಟ್ಟು ಆಸ್ತಿ ಮೌಲ್ಯವು $1.81 ಬಿಲಿಯನ್ ಆಗಿದೆ.

ಕೆ. ದಿನೇಶ್

ಕೆ. ದಿನೇಶ್

ಕೆ. ದಿನೇಶ್ ಇವರು ಸಹ ಇನ್ಫೋಸಿಸ್ ಸಂಸ್ಥೆಯ ಸಹ-ಸ್ಥಾಪಕರಲ್ಲಿ ಒಬ್ಬರಾಗಿದ್ದಾರೆ. 1981 - 2011 ಅವಧಿಯಲ್ಲಿ ಇನ್ಫೋಸಿಸ್‌ ಬೋರ್ಡ್‌ ಸದಸ್ಯರಾಗಿದ್ದರು. ದೇಶದ ತಂತ್ರಜ್ಞಾನ ವಲಯದ ಪ್ರಮುಖ ಹತ್ತು ಶ್ರೀಮಂತರ ಲಿಸ್ಟಿನಲ್ಲಿ ಇವರು ಒಂಬತ್ತನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ. ಸದ್ಯ ಇವರ ಆಸ್ತಿ ಮೌಲ್ಯವು $1.61 ಬಿಲಿಯನ್ ಆಗಿದೆ.

ಎಸ್‌ ಡಿ ಶಿಬುಲಾಲ್

ಎಸ್‌ ಡಿ ಶಿಬುಲಾಲ್

ಎಸ್‌ ಡಿ ಶಿಬುಲಾಲ್ ಇವರು ಬ್ಯುಸಿನೆಸ್ ಎಕ್ಸಿಕ್ಯೂಟಿವ್ ಆಗಿದ್ದು ಗುರುತಿಸಿಕೊಂಡಿದ್ದು, ಇನ್ಫೋಸಿಸ್‌ನ ಮುಖ್ಯ ಕಾರ್ಯನಿರ್ವಾಹಕರಾಗಿ ಕೆಲಸ ಮಾಡಿದ್ದಾರೆ. ದೇಶದ ತಂತ್ರಜ್ಞಾನ ವಲಯದ ಪ್ರಮುಖ ಹತ್ತು ಶ್ರೀಮಂತರ ಪಟ್ಟಿಯಲ್ಲಿ ಇವರು ಹತ್ತನೇ ಸ್ಥಾನದಲ್ಲಿದ್ದಾರೆ. ಪ್ರಸ್ತುತ ಇವರ ಒಟ್ಟು ಆಸ್ತಿ ಮೌಲ್ಯವು $1.4 ಬಿಲಿಯನ್ ಆಗಿದೆ.

Most Read Articles
Best Mobiles in India

English summary
The list of the top ten people in the Indian technology sector has been revealed in the 2019 report, which is ahead of the Indian technology industry. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X