ವಾಟ್ಸಾಪ್‌ಗೆ ನೀವು ದಾಸರಾಗಿದ್ದೀರಿ ಎಂಬುದನ್ನು ಸೂಚಿಸುವ 10 ಅಂಶಗಳು

Written By:

ಕಚೇರಿ ಅಥವಾ ನಿವಾಸದಲ್ಲಿ ನಾವು ಕಂಪ್ಯೂಟರ್ ಎದುರು ಕಳೆಯುವ ಸಮಯಕ್ಕಿಂತಲೂ ವಾಟ್ಸಾಪ್‌ಗೆ ಹೆಚ್ಚು ಆಧೀನರಾಗುತ್ತಿದ್ದೇವೆ. ಚಾಟ್ ಮಾಡುವುದು, ಪಠ್ಯ ವಿನಿಮಯ, ಚಿತ್ರಗಳನ್ನು ಫಾರ್ವರ್ಡ್ ಮಾಡುವುದು, ಹಾಸ್ಯಗಳ ಶೇರಿಂಗ್ ಹೀಗೆ ವಾಟ್ಸಾಪ್ ಅನ್ನು ಸಂಪೂರ್ಣವಾಗಿ ನಮ್ಮ ಕ್ರಿಯೆಗಳಿಗೆ ಬಳಸಿಕೊಳ್ಳುತ್ತೇವೆ.

ಇದನ್ನೂ ಓದಿ: ಸೆಲ್ಫೀ ಪದದ ಅದ್ಭುತ ಇತಿಹಾಸ

ಇಷ್ಟೆಲ್ಲಾ ಅಂಶಗಳನ್ನು ಗಮನಿಸುವಾಗ ವಾಟ್ಸಾಪ್‌ಗೆ ನಾವು ಅಡಿಕ್ಟ್ ಆಗಿರುವುದು ತಿಳಿದುಬರುತ್ತದೆ. ಮಾದಕ ದ್ರವ್ಯದ ಮತ್ತಿಗೆ ಮನುಷ್ಯರು ದಾಸರಾಗುವಂತೆ ಈ ತ್ವರಿತ ಮೆಸೇಜಿಂಗ್ ಸೇವೆಗೂ ನಾವು ದಾಸರಾಗುತ್ತಿದ್ದೇವೆ ಎಂಬುದು ತಿಳಿದು ಬರುತ್ತದೆ. ಹಾಗಿದ್ದರೆ ಅದನ್ನು ಅರಿತುಕೊಳ್ಳುವುದು ಹೇಗೆ ಎಂಬುದನ್ನು ಕಂಡುಕೊಳ್ಳಲು ಕೆಳಗಿನ ಸ್ಲೈಡರ್‌ಗಳನ್ನು ಗಮನಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಗಾಗ್ಗೆ ಮೊಬೈಲ್ ಗಮನಿಸುವುದು

ಆಗಾಗ್ಗೆ ಮೊಬೈಲ್ ಗಮನಿಸುವುದು

ವಾಟ್ಸಾಪ್‌ಗೆ ನೀವು ದಾಸರಾಗಿದ್ದೀರಿ ಎಂಬುದನ್ನು ಸೂಚಿಸುವ 10 ಅಂಶಗಳು

ಪದೇ ಪದೇ ಮೊಬೈಲ್ ಅನ್ನು ತಡಕಾಡುವುದು ವಾಟ್ಸಾಪ್‌ನಲ್ಲಿ ಹೊಸ ಸಂದೇಶ ಬಂದಿದೆಯೇ ಎಂಬುದನ್ನು ಹುಡುಕಾಡುವುದು. ನೀವು ಮುಖ್ಯವಾದ ಮೀಟಿಂಗ್‌ನಲ್ಲಿದ್ದರೂ ಕೂಡ ಮನಸ್ಸು ಮಾತ್ರ ಮೊಬೈಲ್ ಅನ್ನು ನೋಡುವ ಕಾತರದಲ್ಲಿರುತ್ತದೆ.

ವಾಟ್ಸಾಪ್ ಸರ್ವಸ್ವ

ವಾಟ್ಸಾಪ್ ಸರ್ವಸ್ವ

ವಾಟ್ಸಾಪ್‌ಗೆ ನೀವು ದಾಸರಾಗಿದ್ದೀರಿ ಎಂಬುದನ್ನು ಸೂಚಿಸುವ 10 ಅಂಶಗಳು

ಪದೇ ಪದೇ ವಾಟ್ಸಾಪ್ ಬಳಸಿ ಅದುವೇ ಜೀವನದ ಸರ್ವಸ್ವ ಎಂಬ ಸ್ಥಿತಿಗೆ ನಾವು ತಲುಪುತ್ತೇವೆ. ಇದರಿಂದ ನಾವು ಅದಕ್ಕೆ ದಾಸರಾಗಿರುವುದು ಮನದಟ್ಟಾಗುತ್ತದೆ.

ಲಾಸ್ಟ್ ಸೀನ್ ಪರಿಶೀಲಿಸುವುದು

ಲಾಸ್ಟ್ ಸೀನ್ ಪರಿಶೀಲಿಸುವುದು

ವಾಟ್ಸಾಪ್‌ಗೆ ನೀವು ದಾಸರಾಗಿದ್ದೀರಿ ಎಂಬುದನ್ನು ಸೂಚಿಸುವ 10 ಅಂಶಗಳು

ನಿಮ್ಮ ಸ್ನೇಹಿತರು ಆನ್‌ಲೈನ್‌ನಲ್ಲಿ ಇದ್ದಾರೆಯೇ ಎಂಬುದನ್ನು ಗಮನಿಸಲು ಲಾಸ್ಟ್ ಸೀನ್ ಅನ್ನು ಪರಿಶೀಲಿಸುವುದು ವಾಟ್ಸಾಪ್ ಬಳಕೆದಾರರು ಮಾಡುವ ಕಾರ್ಯವಾಗಿದೆ.

ವಾಟ್ಸಾಪ್ ಪ್ರೊಫೈಲ್ ಚಿತ್ರ

ವಾಟ್ಸಾಪ್ ಪ್ರೊಫೈಲ್ ಚಿತ್ರ

ವಾಟ್ಸಾಪ್‌ಗೆ ನೀವು ದಾಸರಾಗಿದ್ದೀರಿ ಎಂಬುದನ್ನು ಸೂಚಿಸುವ 10 ಅಂಶಗಳು

ನಿಮ್ಮ ಸ್ನೇಹಿತರ ವಾಟ್ಸಾಪ್ ಪ್ರೊಫೈಲ್ ಚಿತ್ರವನ್ನು ನೋಡುವುದು ಅವರಿಗೆ ಶುಭಾಶಯಗಳನ್ನು ತಿಳಿಸುವುದು ವಾಟ್ಸಾಪ್‌ನಲ್ಲಿ ಪ್ರತಿಯೊಬ್ಬರೂ ಮಾಡುವ ಕಾರ್ಯವಾಗಿದೆ.

ಸ್ಟೇಟಸ್ ಮತ್ತು ಪ್ರೊಫೈಲ್ ಚಿತ್ರ ಬದಲಾಯಿಸುವುದು

ಸ್ಟೇಟಸ್ ಮತ್ತು ಪ್ರೊಫೈಲ್ ಚಿತ್ರ ಬದಲಾಯಿಸುವುದು

ವಾಟ್ಸಾಪ್‌ಗೆ ನೀವು ದಾಸರಾಗಿದ್ದೀರಿ ಎಂಬುದನ್ನು ಸೂಚಿಸುವ 10 ಅಂಶಗಳು

ವಾಟ್ಸಾಪ್‌ನಲ್ಲಿ ಸ್ಟೇಟಸ್ ಮತ್ತು ಪ್ರೊಫೈಲ್ ಚಿತ್ರವನ್ನು ಆಗಾಗ್ಗೆ ಬದಲಾಯಿಸುವುದು ನೀವು ವಾಟ್ಸಾಪ್‌ನಲ್ಲಿ ಹೆಚ್ಚು ಸಮಯವನ್ನು ಕಳೆಯುತ್ತಿದ್ದೀರಿ ಎಂಬುದನ್ನು ತೋರಿಸುತ್ತದೆ.

ಸಮಯ ವ್ಯರ್ಥ

ಸಮಯ ವ್ಯರ್ಥ

ವಾಟ್ಸಾಪ್‌ಗೆ ನೀವು ದಾಸರಾಗಿದ್ದೀರಿ ಎಂಬುದನ್ನು ಸೂಚಿಸುವ 10 ಅಂಶಗಳು

ವಾಟ್ಸಾಪ್‌ನಲ್ಲಿ ನಿಮ್ಮ ಸ್ನೇಹಿತರಿಗೆ ಒಮ್ಮೆ ಸಂದೇಶವನ್ನು ವಿನಿಮಯ ಮಾಡಿಕೊಂಡ ನಂತರ ಅವರ ಉತ್ತರಕ್ಕಾಗಿ ನೀವು ಕಾಯುತ್ತಿರುತ್ತೀರಿ. ವಾಟ್ಸಾಪ್ ಅನ್ನು ಆಗಾಗ್ಗೆ ಪರಿಶೀಲಿಸುತ್ತೀರಿ. ಇದರಿಂದ ನಿಮ್ಮ ಸಮಯ ವ್ಯರ್ಥವಾಗುತ್ತಿರುವುದು ನಿಜ ತಾನೇ.

ವಾಟ್ಸಾಪ್ ಎಡಿಕ್ಟ್

ವಾಟ್ಸಾಪ್ ಎಡಿಕ್ಟ್

ವಾಟ್ಸಾಪ್‌ಗೆ ನೀವು ದಾಸರಾಗಿದ್ದೀರಿ ಎಂಬುದನ್ನು ಸೂಚಿಸುವ 10 ಅಂಶಗಳು

ನಿಮ್ಮಲ್ಲಿರುವ ಜೋಕ್ಸ್ ಪಠ್ಯ ಸಂದೇಶಗಳನ್ನು ಇನ್ನೊಬ್ಬರಿಗೆ ಕಳುಹಿಸುವಲ್ಲಿ ನಿಮಗೆ ಮನರಂಜನೆ ದೊರೆಯುತ್ತದೆ. ಆದರೆ ಆಚೆ ಕಡೆ ಇರುವವರು ಇದಕ್ಕೆ ಹಾಗೆಯೇ ಉತ್ತರಿಸಬೇಕು ಎಂದೇನಿಲ್ಲ. ಆದರೂ ನಿಮ್ಮ ಕ್ರಿಯೆ ನಡೆಯುತ್ತಲೇ ಇರುತ್ತದೆ.

ಅಪ್‌ಡೇಟ್ ಪರಿಶೀಲಿಸುವುದು

ಅಪ್‌ಡೇಟ್ ಪರಿಶೀಲಿಸುವುದು

ವಾಟ್ಸಾಪ್‌ಗೆ ನೀವು ದಾಸರಾಗಿದ್ದೀರಿ ಎಂಬುದನ್ನು ಸೂಚಿಸುವ 10 ಅಂಶಗಳು

ವಾಟ್ಸಾಪ್‌ನಲ್ಲಿ ಏನೇನು ಅಪ್‌ಡೇಟ್ ನಡೆಯುತ್ತಿದೆ ಎಂಬುದರ ಮೇಲೆ ಕಣ್ಣಿಡುವುದು ಮೊದಲಾದ ಕೆಲಸಗಳನ್ನು ಪ್ರತೀ ವಾಟ್ಸಾಪ್ ಬಳಕೆದಾರ ಮಾಡುತ್ತಿರುತ್ತಾರೆ.

ವೃಥಾ ಜಗಳ ಮಾಡುವುದು

ವೃಥಾ ಜಗಳ ಮಾಡುವುದು

ವಾಟ್ಸಾಪ್‌ಗೆ ನೀವು ದಾಸರಾಗಿದ್ದೀರಿ ಎಂಬುದನ್ನು ಸೂಚಿಸುವ 10 ಅಂಶಗಳು

ವಾಟ್ಸಾಪ್‌ನಲ್ಲಿ ಆಗಾಗ್ಗೆ ಜಗಳ ಮಾಡುವುದು, ಸಂದೇಶ ರವಾನೆಯಲ್ಲಿ ಕಿತ್ತಾಟ ಮೊದಲಾದ ನಿಮ್ಮ ಕ್ರಿಯೆಗಳು ನಿಜಕ್ಕೂ ವಾಟ್ಸಾಪ್‌ನಲ್ಲಿ ನಡೆಯುತ್ತಿರುತ್ತದೆ ಆದರೆ ನಿಮ್ಮ ಅಮೂಲ್ಯ ಸಮಯ ಕೂಡ ಇಲ್ಲಿ ವ್ಯರ್ಥವಾಗುತ್ತಿರುತ್ತದೆ.

ಸರ್ವವೂ ವಾಟ್ಸಾಪ್ ಮಯ

ಸರ್ವವೂ ವಾಟ್ಸಾಪ್ ಮಯ

ವಾಟ್ಸಾಪ್‌ಗೆ ನೀವು ದಾಸರಾಗಿದ್ದೀರಿ ಎಂಬುದನ್ನು ಸೂಚಿಸುವ 10 ಅಂಶಗಳು

ನಿದ್ರಿಸುವಾಗ, ಊಟ ಮಾಡುವಾಗ, ಕಾರು ಚಲಾಯಿಸುವಾಗ ಹೀಗೆ ನಿಮ್ಮ ಪ್ರತಿಯೊಂದು ಚಟುವಟಿಕೆಯಲ್ಲೂ ವಾಟ್ಸಾಪ್ ಪ್ರಧಾನವಾಗಿರುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about 10 signs you are addicted to WhatsApp.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot