ನಿಮ್ಮ ಫೋನ್ ಅನ್ನು ಕಾಪಾಡುವ 10 ಅದ್ಭುತ ಸಲಹೆಗಳು
ನಿಮ್ಮ ನೆಚ್ಚಿನ ಫೋನ್ ಕಳೆದು ಹೋಗುವುದೆಂದರೆ ಅದಕ್ಕಿಂತ ದೊಡ್ಡ ಬೇರೊಂದಿಲ್ಲ ಅಲ್ಲವೇ? ಅದನ್ನು ಮಾತಿನಲ್ಲಿ ಕೂಡ ಬಣ್ಣಿಸಲಾಗದ ಸ್ಥಿತಿ ನಮ್ಮದಾಗಿರುತ್ತದೆ. ಆದರೆ ಅದು ಕಳೆದು ಹೋಗಿ ದುಃಖಪಡುವುದಕ್ಕಿಂತ ಕದ್ದು ಹೋಗುವ ಮುನ್ನ ಏನಾದರೂ ಮುನ್ನೆಚ್ಚರಿಕೆಗಳನ್ನು ಪಾಲಿಸಿ ಅದರ ಸಂರಕ್ಷಣೆಯನ್ನು ಮಾಡುವುದು ಅದ್ಭುತ ಉಪಾಯವಲ್ಲವೇ?
ಆ ಉಪಾಯವನ್ನು ನೀವು ಅರಿತುಕೊಳ್ಳಬೇಕೆಂಬ ಹಂಬಲದಲ್ಲಿದ್ದೀರಾ ಹಾಗಿದ್ದರೆ ಇಲ್ಲಿದೆ ಕೆಲವೊಂದು ಟಿಪ್ಸ್‌ಗಳು. ಈ ಸಲಹೆಗಳನ್ನು ಅರಿತುಕೊಂಡರೆ ನಿಮ್ಮ ಫೋನ್ ಕಳೆದು ಹೋಗುವುರ ಮೊದಲ ಎಚ್ಚರಿಕೆಯನ್ನು ಪಾಲಿಸಿಕೊಳ್ಳಬಹುದು.

ಟೈಮ್ ಸೈಲೆಂಟ್ ಮೋಡ್ ಬಳಕೆ
ನೀವು ಫೋನ್ ಅನ್ನು ಮರೆತು ಬಿಟ್ಟರೂ, ಫೋನ್ ಸ್ವಯಂಚಾಲಿತವಾಗಿ ರಿಂಗರ್ ಅನ್ನು ಆನ್ ಮಾಡುತ್ತದೆ.

ಡಾಕಿಂಗ್ ಸ್ಟ್ಯಾಂಡ್ಸ್
ಡಾಕಿಂಗ್ ಸ್ಟ್ಯಾಂಡಿಂಗ್ ಹಣ ವೆಚ್ಚ ಮಾಡಿ ಅದನ್ನು ಬಳಸಿಕೊಂಡು ಫೋನ್ ಅನ್ನು ಸಂರಕ್ಷಿಸಿಕೊಳ್ಳಿ.

ಸ್ನೇಹಿತರಿಗೆ ನೀಡುವುದು
ಪಾರ್ಟಿಯಲ್ಲಿ ನೀವು ಮೈಮರೆತಿದ್ದೀರಿ ಎಂದಾದಲ್ಲಿ ನಿಮ್ಮ ಸ್ನೇಹಿತರ ಬಳಿ ಫೋನ್ ನೀಡಿರಿ ಮತ್ತು ಫೋನ್ ಅನ್ನು ನೆನಪಿಸಲು ಅವರಲ್ಲಿ ವಿನಂತಿಸಿಕೊಳ್ಳಿ.

ಹ್ಯಾಂಡ್‌ಸೆಟ್ ಇನ್ಶೂರೆನ್ಸ್
ಫೋನ್‌ನ ಸುಭದ್ರತೆಗಾಗಿ ಇನ್ಶೂರೆನ್ಸ್ ಮಾಡಿಸಿಕೊಳ್ಳಿ ಇದು ಹೆಚ್ಚು ಫಲಪ್ರದವಾದುದಾಗಿದೆ.

ನಿಮ್ಮ ಹೆಸರು ಮತ್ತು ತುರ್ತು ವಿಳಾಸ ಸಂಖ್ಯೆ ವಾಲ್‌ಪೇಪರ್‌ನಲ್ಲಿರಲಿ
ನಿಮ್ಮ ಲಾಕ್ ಸ್ಕ್ರೀನ್‌ನ ವಾಲ್‌ಪೇಪರ್‌ನಲ್ಲಿ ನಿಮ್ಮ ಹೆಸರು ಮತ್ತು ತುರ್ತು ವಿಳಾಸ ಸಂಖ್ಯೆಯನ್ನು ಹಾಕಿಡಿ.

ಹಿಂಭಾಗ ಪಾಕೆಟ್‌ನಲ್ಲಿ ಫೋನ್ ಅನ್ನು ಇರಿಸದಿರಿ
ಯಾವಾಗಲೂ ನಿಮ್ಮ ಪ್ಯಾಂಟ್‌ನ ಹಿಂಭಾಗ ಕಿಸೆಯಲ್ಲಿ ಫೋನ್ ಅನ್ನು ಇರಿಸಬೇಡಿ. ಕದ್ದು ಹೋದ ನಂತರ ಬೇರೆಯವರಿಗೆ ಹಿಡಿಶಾಪ ಹಾಕಿ ಪ್ರಯೋಜನವಿಲ್ಲ.

ಅರ್ಮರ್ಡ್ ಕೇಸ್ ಬಳಸಿ
ಲೈನ್ ಆರ್ಮರ್ಡ್ ಕೇಸ್ ಅನ್ನು ಬಳಸಿ ಫೋನ್ ಅನ್ನು ಸಂರಕ್ಷಿಸಿಕೊಳ್ಳಿ. ನಿಮ್ಮ ಕಿಸೆಯಿಂದ ಫೋನ್ ಅನ್ನು ಎಗರಿಸುವುದು ಕಷ್ಟಾಸಾಧ್ಯ.

ಉತ್ತಮ ಪವರ್ ಬ್ಯಾಂಕ್
ಉತ್ತಮ ಪವರ್ ಬ್ಯಾಂಕ್‌ನ ಬಳಕೆಯನ್ನು ಮಾಡಿ ಇದರಿಂದ ಶೀಘ್ರವೇ ಫೋನ್ ಚಾರ್ಜ್ ಆಗಿ ಅದನ್ನು ನಿಮಗೆ ಕೊಂಡೊಯ್ಯಬಹುದಾಗಿದೆ.

ಅಲಾರ್ಮ್ ಇರಿಸಿಕೊಳ್ಳಿ
ನಿಮ್ಮ ಫೋನ್‌ನಲ್ಲಿ ಅಲಾರ್ಮ್ ಇರಿಸಿಕೊಳ್ಳುವುದು ಎಚ್ಚರಿಕೆಯ ಘಂಟೆಯಾಗಿ ಕಾರ್ಯನಿರ್ವಹಿಸಬಹುದು.

ಆಂಡ್ರಾಯ್ಡ್ ಡಿವೈಸ್ ಮ್ಯಾನೇಜರ್ ಸಹಾಯ
ಫೈಂಡ್ ಮೈ ಫೋನ್ ಅಥವಾ ಆಂಡ್ರಾಯ್ಡ್ ಡಿವೈಸ್ ಮ್ಯಾನೇಜರ್ ಸೇವೆಯನ್ನು ಆನ್ ಮಾಡಿ ನಿಮ್ಮ ಫೋನ್ ಕಳೆದು ಹೋಗಿದ್ದರೂ ಇದು ಟ್ರ್ಯಾಕ್ ಮಾಡಲು ಸಹಾಯ ಮಾಡುತ್ತದೆ.

ಮರೆಯದೆ ಓದಿರಿ
ನಿಮ್ಮ ಮೊಬೈಲ್ ಇಂಟರ್ನೆಟ್ ದುಡ್ಡು ನುಂಗುತ್ತಿದೆಯೇ?
ಸ್ಮಾರ್ಟ್‌ಫೋನ್ ಬಳಕೆದಾರರು ತ್ಯಜಿಸಬೇಕಾದ ದುರಾಭ್ಯಾಸಗಳು
ಮಾಲ್ವಿಯ ಸಾಹಸ: ಮಣ್ಣಿನ ಸ್ಟವ್‌ನಿಂದ ಫೋನ್ ಚಾರ್ಜ್
ಸ್ಮಾರ್ಟ್‌ಫೋನ್‌ನಿಂದ ವೈರಸ್ ನಿವಾರಣೆ ಹೇಗೆ
ನಮ್ಮ ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ಪುಟಕ್ಕೆ ಭೇಟಿ ನೀಡುತ್ತಿರಿ:https://www.facebook.com/GizBotKannada/?ref=hl


Click it and Unblock the Notifications








