Home
ಸುದ್ದಿಜಾಲ

ಫೋನ್ ಸ್ಲೋ ಆಗಿದೆಯೇ? ಚಿಂತೆ ಬಿಡಿ ಇಲ್ಲಿದೆ ಟಿಪ್ಸ್

By Shwetha

ಹೊಸ ಆಂಡ್ರಾಯ್ಡ್ ಫೋನ್‌ಗಳು ಆರಂಭದಲ್ಲಿ ವೇಗವಾಗಿರುತ್ತವೆ ನಿಧಾನಕ್ಕೆ ಇದರ ವೇಗ ಕುಗ್ಗುತ್ತದೆ. ಇನ್ನು ಇದು ಪ್ರತಿಕ್ರಿಯಿಸಲು ಇದನ್ನು ಎರಡು ಬಾರಿ ತಟ್ಟಬೇಕಾಗುತ್ತದೆ. ಮತ್ತು ಇದು ಪ್ರತ್ಯುತ್ತರಿಸಲು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತದೆ. ಆದರೆ ಇದು ಆಂಡ್ರಾಯ್ಡ್ ಫೋನ್‌ಗೆ ಮಾತ್ರವಲ್ಲ ಐಫೋನ್‌ನಲ್ಲೂ ಇದೇ ಸಮಸ್ಯೆಯಿದೆ.

ಓದಿರಿ: ಫೋನ್ ಬ್ಯಾಟರಿ ಖಾಲಿಯಾಗುತ್ತಿದೆಯೇ? ಏನಿರಬಹುದು ಕಾರಣ

ಹಾಗಿದ್ದರೆ ನಿಧಾನಗತಿಯಲ್ಲಿರುವ ಫೋನ್ ಅನ್ನು ವೇಗಗೊಳಿಸುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ನಾವು ನಿಮಗೆ ತಿಳಿಸಿಕೊಡಲಿದ್ದೇವೆ. ನಿಮ್ಮ ಫೋನ್‌ನ ಕಾರ್ಯಕ್ಷಮತೆ ಅಂದರೆ ವೇಗವನ್ನು ಹೆಚ್ಚಿಸುವುದಕ್ಕಾಗಿ ಇಂದಿನ ಲೇಖನದಲ್ಲಿ ನಾವು ಕೆಲವೊಂದು ಸಲಹೆಗಳನ್ನು ನೀಡುತ್ತಿದ್ದು ಇದು ನಿಮಗೆ ಹೆಚ್ಚು ಪ್ರಯೋಜನಕಾರಿ ಎಂದೆನಿಸುವುದು ಖಂಡಿತ.

ಅಧಿಸೂಚನೆ ಪ್ಯಾನೆಲ್ ಕಸ್ಟಮೈಸ್ ಮಾಡಿಕೊಳ್ಳಿ

ಅಧಿಸೂಚನೆ ಪ್ಯಾನೆಲ್ ಕಸ್ಟಮೈಸ್ ಮಾಡಿಕೊಳ್ಳಿ

ಆಂಡ್ರಾಯ್ಡ್ ಲಾಲಿಪಪ್ ಉಳ್ಳ ಸ್ಮಾರ್ಟ್‌ಫೋನ್‌ಗಳು ನೋಟಿಫಿಕೇಶನ್ ಅನ್ನು ಕಸ್ಟಮೈಸ್ ಮಾಡಿಕೊಳ್ಳುವ ಸಾಮರ್ಥ್ಯವನ್ನು ಪಡೆದುಕೊಂಡಿರುತ್ತವೆ. ಈ ಓಎಸ್ ಹೆಚ್ಚು ಆದ್ಯತಾ ಮೋಡ್‌ನೊಂದಿಗೆ ಬಂದಿದ್ದು, ಅನಗತ್ಯ ಅಧಿಸೂಚನೆಗಳನ್ನು ನಿರ್ಬಂಧಿಸಬಹುದಾಗಿದೆ.

ಡೇಟಾ ಬಳಕೆ ಟ್ರ್ಯಾಕ್ ಮತ್ತು ಸೀಮಿತಗೊಳಿಸುವುದು

ಡೇಟಾ ಬಳಕೆ ಟ್ರ್ಯಾಕ್ ಮತ್ತು ಸೀಮಿತಗೊಳಿಸುವುದು

ಸೆಟ್ಟಿಂಗ್ ಟ್ವೀಕ್‌ಗಳೊಂದಿಗೆ ನಿಮ್ಮ ಡೇಟಾ ಬಳಕೆಯನ್ನು ಟ್ರ್ಯಾಕ್ ಮಾಡಿ. ಟಿವೈಸ್ ಸೆಟ್ಟಿಂಗ್ಸ್‌ಗೆ ನ್ಯಾವಿಗೇಟ್ ಮಾಡಿ, ಡೇಟಾ ಬಳಕೆಗೆ ಹೋಗಿ ಮತ್ತು ಪ್ರತೀ ತಿಂಗಳು ಎಷ್ಟು ಡೇಟಾವನ್ನು ನೀವು ಮುಗಿಸಿದ್ದೀರಿ ಎಂಬುದನ್ನು ಕಂಡುಕೊಳ್ಳಿ. ನೀವು ಮಿತಿಯನ್ನು ಇಲ್ಲಿ ಹೊಂದಿಸಿಕೊಳ್ಳಬಹುದು ಮತ್ತು ಮಿತಿ ದಾಟಿದಲ್ಲಿ ಎಚ್ಚರಿಕೆಗಳನ್ನು ಅಳವಡಿಸಿಕೊಳ್ಳಬಹುದು.

ಬ್ಯಾಟರಿ ಬಾಳ್ವಿಕೆ ಉಳಿಸಿ

ಬ್ಯಾಟರಿ ಬಾಳ್ವಿಕೆ ಉಳಿಸಿ

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಬ್ಯಾಟರಿ ಬಾಳ್ವಿಕೆಯನ್ನು ಉಳಿಸುವುದು ಎಂದರೆ ಪ್ರತೀ ದಿನ ಇದಕ್ಕೆ ಅಗತ್ಯವಾಗಿರುತ್ತದೆ. ಇದನ್ನು ನಿರ್ವಹಿಸಲು ಹೆಚ್ಚು ಸುಲಭ ವಿಧಾನಗಳಿವೆ. ವೈಫೈ, ಬ್ಲ್ಯೂಟೂತ್, ಜಿಪಿಎಸ್, ಸಿಂಕ್ ಮತ್ತು ಇತರ ಹಿನ್ನಲೆ ಅಪ್ಲಿಕೇಶನ್‌ಗಳನ್ನು ಆಫ್ ಮಾಡಿ ನಿಮಗೆ ಇವುಗಳ ಉಪಯೋಗ ಇಲ್ಲ ಎಂದ ಸಂದರ್ಭದಲ್ಲಿ ಅವುಗಳ ಬಳಕೆಯನ್ನು ನಿಲ್ಲಿಸಿ.

ಪೋರ್ಟೇಬಲ್ ಚಾರ್ಜರ್ ಪಡೆದುಕೊಳ್ಳಿ

ಪೋರ್ಟೇಬಲ್ ಚಾರ್ಜರ್ ಪಡೆದುಕೊಳ್ಳಿ

ಬ್ಯಾಟರಿ ಸೇವಿಂಗ್ ಸಲಹೆಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದಾದಲ್ಲಿ, ಪೋರ್ಟೇಬಲ್ ಚಾರ್ಜರ್ ಖರೀದಿಸಿ. ಪವರ್ ಬ್ಯಾಂಕ್ ಬ್ಯಾಟರಿ ಇಂಗದಂತೆ ನೋಡಿಕೊಳ್ಳಲು ಸಹಾಯ ಮಾಡುತ್ತದೆ.

ಕ್ರೋಮ್ ಅನ್ನು ಎಲ್ಲಿಂದ ಬೇಕಾದರೂ ಪ್ರವೇಶಿಸಿ

ಕ್ರೋಮ್ ಅನ್ನು ಎಲ್ಲಿಂದ ಬೇಕಾದರೂ ಪ್ರವೇಶಿಸಿ

ನಿಮ್ಮೆಲ್ಲಾ ಡಿವೈಸ್‌ನಲ್ಲಿ ಕ್ರೋಮ್ ಬ್ರೌಸರ್ ಅನ್ನು ನೀವು ಬಳಸುತ್ತಿದ್ದೀರಾ ಎಂದಾದಲ್ಲಿ, ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್‌ನಿಂದ ಎಲ್ಲಾ ತೆರೆದ ಟ್ಯಾಬ್‌ಗಳನ್ನು ನೀವು ಪ್ರವೇಶಿಸಬಹುದು. ಇತ್ತೀಚಿನ ಟ್ಯಾಬ್‌ಗಳು ಅಥವಾ ಇತಿಹಾಸವನ್ನು ಕ್ಲಿಕ್ ಮಾಡುವ ಮೂಲಕ ಈ ಕಾರ್ಯವನ್ನು ನೆರವೇರಿಸಿಕೊಳ್ಳಬಹುದು.

ಬೇಡದ ಕರೆಗಳನ್ನು ಬ್ಲಾಕ್ ಮಾಡಿ

ಬೇಡದ ಕರೆಗಳನ್ನು ಬ್ಲಾಕ್ ಮಾಡಿ

ಬೇಡದ ಕರೆಗಳನ್ನು ನೀವು ಸ್ವೀಕರಿಸುತ್ತಿದ್ದೀರಿ ಎಂದಾದಲ್ಲಿ, ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇಂತಹ ಕರೆಗಳನ್ನು ಬ್ಲಾಕ್ ಮಾಡಬಹುದಾಗಿದೆ. ಸಂಖ್ಯೆಗಳನ್ನು ಉಳಿಸಿ ಮತ್ತು ಸಂಪರ್ಕಗಳ ಅಪ್ಲಿಕೇಶನ್‌ಗೆ ಹೋಗಿ ಆ ಸಂಖ್ಯೆಯನ್ನು ಹುಡುಕಿ ಮತ್ತು ಆಟೊ ರಿಜೆಕ್ಟ್ ಪಟ್ಟಿಗೆ ಅವುಗಳನ್ನು ಸೇರಿಸಿ.

ಸ್ಮಾರ್ಟ್‌ಫೋನ್ ರೂಟ್ ಮಾಡಿ

ಸ್ಮಾರ್ಟ್‌ಫೋನ್ ರೂಟ್ ಮಾಡಿ

ಆಂಡ್ರಾಯ್ಡ್ ಹೆಚ್ಚಿನ ಕಸ್ಟಮೈಸ್ ಆಯ್ಕೆಗಳೊಂದಿಗೆ ಬಂದಿದೆ. ಆಂಡ್ರಾಯ್ಡ್‌ನ ಮುಕ್ತ ಪ್ಲಾಟ್‌ಫಾರ್ಮ್ ಸ್ಮಾರ್ಟ್‌ಫೋನ್ ರೂಟ್ ಮಾಡಲು ನಿಮ್ಮನ್ನು ಅನುಮತಿಸುತ್ತದೆ. ಕಸ್ಟಮೈಸೇಶನ್‌ನ ಗರಿಷ್ಟ ಸಾಮರ್ಥ್ಯವನ್ನು ನಿಮಗೆ ನೀಡುತ್ತದೆ.

ಆಗಾಗ್ಗೆ ಅಪ್ಲಿಕೇಶನ್ ಅಪ್‌ಡೇಟ್ ಮಾಡುವುದು

ಆಗಾಗ್ಗೆ ಅಪ್ಲಿಕೇಶನ್ ಅಪ್‌ಡೇಟ್ ಮಾಡುವುದು

ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್‌ನ ಇತ್ತೀಚಿನ ಆವೃತ್ತಿಗೆ ಸ್ಮಾರ್ಟ್‌ಫೋನ್ ತಯಾರಕರು ಉತ್ತಮ ಬೆಂಬಲವನ್ನು ಒದಗಿಸುತ್ತಾರೆ. ಇದೇ ಸಮಯದಲ್ಲಿ ಅಪ್ಲಿಕೇಶನ್ ಡೆವಲಪರ್‌ಗಳು ಕಾರ್ಯಕ್ಷಮತೆಯನ್ನು ಸುಧಾರಿಸುತ್ತಾರೆ ಮತ್ತು ಪ್ರೊಗ್ರಾಮ್‌ಗಾಗಿ ನವೀಕರಣವನ್ನು ಬಿಡುಗಡೆ ಮಾಡುತ್ತಾರೆ. ಇನ್ನು ಆಂಡ್ರಾಯ್ಡ್ ಡಿವೈಸ್ ಅನ್ನು ವೇಗಗೊಳಿಸಲು ಇರುವ ಒಂದು ಹಂತ ಎಂದರೆ ಸಾಫ್ಟ್‌ವೇರ್ ಅಪ್‌ಡೇಟ್ ಮಾಡುವುದು.

ಸಾಕಷ್ಟು ಮೆಮೊರಿ ಇಲ್ಲ

ಸಾಕಷ್ಟು ಮೆಮೊರಿ ಇಲ್ಲ

ಹೆಚ್ಚಿನ ಅಪ್ಲಿಕೇಶನ್‌ಗಳಿಂದ ನಿಮ್ಮ ಆಂಡ್ರಾಯ್ಡ್ ಫೋನ್ ತುಂಬಿದೆ ಎಂದಾದಲ್ಲಿ ಇದು ನಿಮ್ಮ ಡಿವೈಸ್ ಅನ್ನು ನಿಧಾನಗೊಳಿಸುತ್ತದೆ. ಇನ್ನು ಸ್ಮಾರ್ಟ್‌ಫೋನ್‌ನಲ್ಲಿರುವ ಎಸ್‌ಎಸ್‌ಡಿ ಕಾರ್ಡ್ ಅವುಗಳನ್ನು ತುಂಬಿಸಿದಂತೆಲ್ಲಾ ನಿಧಾನವಾಗುತ್ತವೆ. ಸೆಟ್ಟಿಂಗ್ ಮೆನು ಅಡಿಯಲ್ಲಿ ಎಷ್ಟು ಮೆಮೊರಿ ಖಾಲಿಯಾಗಿದೆ ಎಂಬುದನ್ನು ಪರಿಶೀಲಿಸಬಹುದು ಮತ್ತು ಸ್ಪೇಸ್ ಅನ್ನು ನಿಮಗೆ ತೆರವುಗೊಳಿಸಬಹುದು.

ಬಳಕೆಯಲ್ಲಿಲ್ಲದ ಅಪ್ಲಿಕೇಶನ್‌ಗಳನ್ನು ನಿಷ್ಕ್ರಿಯಗೊಳಿಸಿ

ಬಳಕೆಯಲ್ಲಿಲ್ಲದ ಅಪ್ಲಿಕೇಶನ್‌ಗಳನ್ನು ನಿಷ್ಕ್ರಿಯಗೊಳಿಸಿ

ಹಿನ್ನಲೆಯಲ್ಲಿ ಚಾಲನೆಯಲ್ಲಿರುವ ಪೂರ್ವ ಸ್ಥಾಪಿತ ಅಪ್ಲಿಕೇಶನ್‌ಗಳು ನೀವು ಬಳಸದೇ ಇದ್ದರೂ ಕಾರ್ಯನಿರ್ವಹಿಸುತ್ತಿರುತ್ತವೆ. ಇವುಗಳನ್ನು ಅನ್‌ಇನ್‌ಸ್ಟಾಲ್ ಮಾಡಲು ಸಾಧ್ಯವಿಲ್ಲದಿದ್ದರೂ ನಿಷ್ಕ್ರಿಯಗೊಳಿಸಬಹುದು. ನಿಮ್ಮ ಸ್ಮಾರ್ಟ್‌ಫೋನ್ ರೂಟ್ ಆದಲ್ಲಿ ಪೂರ್ವ ಸ್ಥಾಪಿತ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಬಹುದು.

Best Mobiles in India

English summary
we came up with the tips and tricks that helps to boost your smartphone's performance. These tips are works by just tweaking setting on the device. Take a look at the slider below to know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+