ಫೋನ್ ಬ್ಯಾಟರಿ ಖಾಲಿಯಾಗುತ್ತಿದೆಯೇ? ಏನಿರಬಹುದು ಕಾರಣ

By Shwetha
|

ದಿನವಿಡೀ ಫೋನ್ ಚಾರ್ಜ್ ಮಾಡಿದರೂ ಫೋನ್ ಬ್ಯಾಟರಿ ಸಮಸ್ಯೆಯಿಂದ ಕಂಗೆಟ್ಟಿದ್ದೀರಾ? ಅದೂ ನಿಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿ ಬ್ಯಾಟರಿ ಸಮಸ್ಯೆಯೇ? ನಿಮ್ಮ ಫೋನ್ ಚಾರ್ಜ್ ಮಾಡುವಾಗ ಕೆಲವೊಂದು ಅಂಶಗಳನ್ನು ಎಚ್ಚರಿಕೆಯಿಂದ ಪಾಲಿಸಿದಲ್ಲಿ ನೀವೆಲ್ಲಿ ತಪ್ಪಿದ್ದೀರಿ ಎಂಬ ಅಂಶ ನಿಮಗೆ ತಿಳಿಯುತ್ತದೆ.

ಓದಿರಿ: ನಿಮ್ಮ ಸ್ಮಾರ್ಟ್‌ಫೋನ್‌ನ ಬ್ಯಾಟರಿ ಬಾಳಿಕೆಗೆ ಈ ಅಪ್ಲಿಕೇಶನ್‌ಗಳು

ಫೋನ್ ಚಾರ್ಜ್ ಮಾಡುವಾಗ ನೀವು ಏನೆಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂಬ ಸಣ್ಣ ಸಲಹೆಗಳನ್ನು ಇಂದಿನ ಲೇಖನದಲ್ಲಿ ನಾವು ನಿಮಗೆ ತಿಳಿಹೇಳುತ್ತಿದ್ದೇವೆ. ನೀವು ಸಾಮಾನ್ಯದಂತೆ ನಿಮ್ಮ ಫೋನ್ ಅನ್ನು ಚಾರ್ಜ್ ಮಾಡುತ್ತಿದ್ದರೂ ನೀವು ಮಾಡುವ ಸಣ್ಣ ತಪ್ಪುಗಳು ನಿಮ್ಮ ಫೋನ್ ಬ್ಯಾಟರಿಯನ್ನು ನುಂಗಿಹಾಕಬಹುದು.

ಸ್ಕ್ರೀನ್ ಬ್ರೈಟ್‌ನೆಸ್ ಕಡಿಮೆ ಮಾಡಿ

ಸ್ಕ್ರೀನ್ ಬ್ರೈಟ್‌ನೆಸ್ ಕಡಿಮೆ ಮಾಡಿ

ನಿಮ್ಮ ಡಿವೈಸ್ ಅಮೋಲೆಡ್ ಸ್ಕ್ರೀನ್ ಅನ್ನು ಹೊಂದಿದೆ ಎಂದಾದಲ್ಲಿ ನಿಮ್ಮ ಹೋಮ್ ಸ್ಕ್ರೀನ್‌ಗೆ ಕಪ್ಪು ಹಿನ್ನಲೆಯನ್ನು ಅಳವಡಿಸಿ. ಏಕೆಂದರೆ ಕಪ್ಪು ಡಿಸ್‌ಪ್ಲೇಯನ್ನು ಗೋಚರಿಸಲು ಅಮೋಲೆಡ್ ಸ್ಕ್ರೀನ್ಸ್ ಕಡಿಮೆ ಪವರ್ ಅನ್ನು ಬಳಸುತ್ತದೆ.

ಬ್ಲ್ಯೂಟೂತ್ ನಿಷ್ಕ್ರಿಯಗೊಳಿಸಿ

ಬ್ಲ್ಯೂಟೂತ್ ನಿಷ್ಕ್ರಿಯಗೊಳಿಸಿ

ನಿಮ್ಮ ಫೋನ್‌ನೊಂದಿಗೆ ಯಾವುದೇ ಬ್ಲ್ಯೂಟೂತ್ ಆಕ್ಸಸರೀಸ್ ಅನ್ನು ಬಳಸುತ್ತಿಲ್ಲ ಎಂದಾದಲ್ಲಿ ಬ್ಲ್ಯೂಟೂತ್ ಆಫ್ ಮಾಡಿ.

ಜಿಪಿಎಸ್ ಆಫ್ ಮಾಡಿ

ಜಿಪಿಎಸ್ ಆಫ್ ಮಾಡಿ

ಸೆಟ್ಟಿಂಗ್ಸ್ > ಲೊಕೇಶನ್ ಮತ್ತು ಹೆಚ್ಚುವರಿ ಬ್ಯಾಟರಿ ಸೇವಿಂಗ್ ಮೋಡ್‌ನಿಂದ ಕಡಿಮೆ ಬ್ಯಾಟರಿ ಮೋಡ್‌ಗೆ ಇದನ್ನು ಬದಲಾಯಿಸಿಕೊಳ್ಳಿ.

ವಾಯ್ಸ್ ಸೇವೆಗಳನ್ನು ಆಫ್ ಮಾಡಿಕೊಳ್ಳಿ

ವಾಯ್ಸ್ ಸೇವೆಗಳನ್ನು ಆಫ್ ಮಾಡಿಕೊಳ್ಳಿ

ಆದೇಶವನ್ನು ಕೇಳಿಸಿಕೊಳ್ಳುವ ಕೆಲವೊಂದು ಫೋನ್‌ಗಳು ಕೂಡ ಬ್ಯಾಟರಿಯನ್ನು ಬೇಗನೇ ಮುಗಿಸಬಹುದು. ಇದಕ್ಕಾಗಿ ಗೂಗಲ್ ಸೆಟ್ಟಿಂಗ್ಸ್ ತೆರೆಯಿರಿ ಮತ್ತು ಸರ್ಚ್ ಹಾಗೂ ನೌ ವಾಯ್ಸ್ ಮತ್ತು ಇದನ್ನು ಅನ್‌ಚೆಕ್ ಮಾಡಿ. ಓಕೆ ಗೂಗಲ್ ಸರ್ಚ್ ಕಮಾಂಡ್ ಆಫ್ ಆಗುತ್ತದೆ.

ವೈಫೈ ವೀಕ್ಷಿಸಿ

ವೈಫೈ ವೀಕ್ಷಿಸಿ

ವೈಫೈ ಇಲ್ಲದ ಪ್ರದೇಶದಲ್ಲಿ ನೀವಿದ್ದೀರಿ ಎಂದಾದಲ್ಲಿ, ವೈಫೈ ಸೌಲಭ್ಯವನ್ನು ಆಫ್ ಮಾಡಿ. ಇನ್ನು ಡೇಟಾ ಕನೆಕ್ಶನ್ ಬೇಡದೇ ಇರುವ ಸಮಯದಲ್ಲಿ ಸೆಲ್ಯುಲಾರ್ ಡೇಟಾ ಮತ್ತು ಬ್ಲ್ಯೂಟೂತ್ ನಿಷ್ಕ್ರಿಯಗೊಳಿಸುವ ಏರ್‌ಪ್ಲೇನ್ ಮೋಡ್ ಅನ್ನು ಆಫ್ ಮಾಡಿ.

ಪ್ರತಿಯೊಂದನ್ನು ಸಿಂಕ್ ಮಾಡಬೇಡಿ

ಪ್ರತಿಯೊಂದನ್ನು ಸಿಂಕ್ ಮಾಡಬೇಡಿ

ನಿಮ್ಮ ಗೂಗಲ್ ಖಾತೆಯೊಂದಿಗೆ ಆಂಡ್ರಾಯ್ಡ್ ಡಿವೈಸ್ ನಿಮ್ಮೆಲ್ಲಾ ಡೇಟಾವನ್ನು ಸಿಂಕ್ ಮಾಡಲು ಪ್ರಯತ್ನಿಸುತ್ತದೆ. ಇದೂ ಕೂಡ ನಿಮ್ಮ ಬ್ಯಾಟರಿಯನ್ನು ನುಂಗಿ ಹಾಕಬಹುದು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ.

ವಿಡ್ಜೆಟ್‌ಗಳೊಂದಿಗೆ ಸೆಟ್ಟಿಂಗ್ ನಿರ್ವಹಿಸಿ

ವಿಡ್ಜೆಟ್‌ಗಳೊಂದಿಗೆ ಸೆಟ್ಟಿಂಗ್ ನಿರ್ವಹಿಸಿ

ನಿಮ್ಮ ಮುಖ್ಯ ಪರದೆಗೆ ಆಂಡ್ರಾಯ್ಡ್ ಪವರ್ ವಿಡ್ಜೆಟ್ ಅನ್ನು ಸೇರಿಸಿ. ವಿಡ್ಜೆಟ್‌ಗಳಿಗೆ ಹೋಗಿ ತದನಂತರ ಪವರ್ ಕಂಟ್ರೋಲ್ ಆಯ್ಕೆಮಾಡಿ

ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ

ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ

ಇನ್ನು ನಿಮ್ಮ ಫೋನ್‌ನ ಬ್ಯಾಟರಿ ಸಮಸ್ಯೆಯನ್ನು ನಿವಾರಿಸುವ ಹಲವಾರು ಅಪ್ಲಿಕೇಶನ್‌ಗಳು ಗೂಗಲ್ ಸ್ಟೋರ್‌ನಲ್ಲಿ ಲಭ್ಯವಿದ್ದು ಅವುಗಳನ್ನು ಬಳಸಿ ಫೋನ್‌ನ ಬ್ಯಾಟರಿ ಇಂಗುವಿಕೆ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದಾಗಿದೆ.

ಲೈವ್ ಅನಿಮೇಟೆಡ್ ವಾಲ್‌ಪೇಪರ್ಸ್ ಆಫ್ ಮಾಡಿ

ಲೈವ್ ಅನಿಮೇಟೆಡ್ ವಾಲ್‌ಪೇಪರ್ಸ್ ಆಫ್ ಮಾಡಿ

ಡಿಸ್‌ಪ್ಲೇಗೆ ಹೋಗಿ ಇಲ್ಲಿ ವಾಲ್‌ಪೇಪರ್ ಮತ್ತು ನಾನ್ ಲೈಬ್ ಹಿನ್ನಲೆಯನ್ನು ಆಯ್ಕೆಮಾಡಿ.

 ವೈಬ್ರೇಶನ್ ಆಫ್ ಮಾಡಿ

ವೈಬ್ರೇಶನ್ ಆಫ್ ಮಾಡಿ

ವೈಬ್ರೇಶನ್ ರಿಂಗ್‌ಟೋನ್ ಬ್ಯಾಟರಿಯನ್ನು ಇನ್ನಷ್ಟು ಕಡಿಮೆ ಮಾಡುತ್ತದೆ. ಆದ್ದರಿಂದ ವೈಬ್ರೇಶನ್ ಆಫ್ ಮಾಡಿ.

Best Mobiles in India

English summary
Tired of carrying your Android phone charger or backup battery to ensure a full day's worth of use? Fortunately, Android has some of the best tools to find out what's killing your battery.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X