ಕಂಪ್ಯೂಟರ್‌ ಸಮಸ್ಯೆಗಳನ್ನು ನೀವೇ ಬಗೆಹರಿಸಿಕೊಳ್ಳುವುದು ಹೇಗೆ ?

By Suneel
|

ಕಂಪ್ಯೂಟರ್‌ ಬಳಸುವ ಎಲ್ಲರೂ ಸಹ ಇಂದು ಕಂಪ್ಯೂಟರ್‌ ಬಳಸುವುದು ಬಿಟ್ಟರೆ ಅದನ್ನು ದೀರ್ಘಕಾಲ ಬಾಳಿಕೆ ಬರುವಂತೆ ಕಾಪಾಡಿಕೊಳ್ಳಲು ಬಹುಶಃ ಯಾರಿಗೂ ತಿಳಿಯದು. ಆದರೆ ಕಂಪ್ಯೂಟರ್‌ ಕಾರ್ಯನಿರ್ವಹಣೆಯಲ್ಲಿ ಸ್ವಲ್ಪ ಸಮಸ್ಯೆ ನೀಡಿದರು ಸಹ ಗ್ಯಾಜೆಟ್‌ ರಿಪೇರಿ ಅಂಗಡಿಗಳಿಗೆ ಖಂಡಿತ ಹೋಗಲೇಬೇಕಾಗುತ್ತದೆ. ಹಾಗೂ ಅವರು ಹೇಳಿದಷ್ಟು ಹಣ ನೀಡಿ ಸರಿಪಡಿಸಿಕೊಳ್ಳಬೇಕಾಗುತ್ತದೆ. ಆದ್ರೆ ಇಂತಹ ಸಮಸ್ಯೆಗಳಿಂದ ಮನೆಗಳಲ್ಲಿ, ಕಛೇರಿಗಳಲ್ಲಿ ಕಂಪ್ಯೂಟರ್‌ ಬಳಸುವವರು ಗಿಜ್‌ಬಾಟ್‌ನ ಲೇಖನ ಓದಿ ತಪ್ಪಿಸಿಕೊಳ್ಳಬಹುದಾಗಿದೆ.

ಓದಿರಿ: ನಿಮ್ಮ ಹಾವಭಾವದಿಂದಲೇ ಕಂಪ್ಯೂಟರ್ ನಿರ್ವಹಿಸಿ

ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ಕಂಪ್ಯೂಟರ್‌ ಅನ್ನು ದೀರ್ಘಕಾಲ ಬಾಳಿಕೆ ಬರುವಂತೆ ನೋಡಿಕೊಳ್ಳಲು, ಹಾಗೂ ಆಗಾಗ ಕಂಪ್ಯೂಟರ್‌ನಲ್ಲಿ ಎದುರಾಗುವ ಸಮಸ್ಯೆಗಳಿಂದ ಪಾರಾಗಲು ಸರಳ ವಿಧಾನಗಳನ್ನು ಸಲಹೆಗಳಾಗಿ ತಿಳಿಸುತ್ತಿದೆ. ಈ ಸಲಹೆಗಳಿಂದ ನಿಮ್ಮ ಹಣವನ್ನು ಉಳಿಸಬಹುದಾಗಿದೆ.

#1

#1

ನಿಮ್ಮ ಕಂಪ್ಯೂಟರ್‌ನಲ್ಲಿ ಬೇಡದೇ ಇರುವ ಪ್ರೊಗ್ರಾಮ್‌ಗಳು ಇನ್‌ಸ್ಟಾಲ್ ಆಗಿರಬಹುದು. ನಿಮ್ಮ ಕಂಪ್ಯೂಟರ್ ಪ್ಯಾನೆಲ್‌ನಲ್ಲಿ ಇನ್‌ಸ್ಟಾಲ್ ಮಾಡಿರುವ ಪ್ರೊಗ್ರಾಮ್‌ಗಳನ್ನು ಪ್ರವೇಶಿಸುವ ಮೂಲಕ, ಇವುಗಳನ್ನು ನಿವಾರಿಸಿಕೊಳ್ಳಬಹುದು.

#2

#2

ಸಿಸ್ಟಮ್ ಸ್ಕ್ಯಾನ್ ಅನ್ನು ನಿಯಮಿತವಾಗಿ ಮಾಡುವುದು ಮತ್ತು ಅತ್ಯುತ್ತಮವಾದ ಆಂಟಿವೈರಸ್‌ನ ಸ್ಥಾಪನೆಯನ್ನು ಮಾಡುವುದರಿಂದ ಕೂಡ ನಿಮ್ಮ ಕಂಪ್ಯೂಟರ್ ಉತ್ತಮವಾಗಿರುತ್ತದೆ.

#3

#3

ಕೆಲವೊಮ್ಮೆ ಹಲವು ಪ್ರೋಗ್ರಾಮ್‌ಗಳು ವಿಶೇಷವಾಗಿದ್ದು, ಬ್ಯಾಗ್ರೌಂಡ್‌ನಲ್ಲಿ ರನ್‌ ಆಗುತ್ತಿರುತ್ತವೆ. ಆದ್ದರಿಂದ ನಿಮ್ಮ ಸಿಸ್ಟಮ್‌ ವೇಗ ಕುಸಿಯುತ್ತದೆ. ವೇಗ ಹೆಚ್ಚಿಸಲು ರಿಸ್ಟಾರ್ಟ್‌ ಮಾಡಿ.

#4

#4

ಕೆಲವೊಮ್ಮೆ ನೇರವಾಗಿ ಸಿಸ್ಟಮ್‌ ಆಫ್‌ ಮಾಡುವುದರ ಬದಲಾಗಿ ಸ್ಲೀಪ್‌ ಮೋಡ್‌ನಲ್ಲಿಡುವುದು ಸರಿಯಾದರೂ ಸಹ, ಇದು ಕೆಲವೊಮ್ಮೆ ಸಮಸ್ಯೆ ಉಂಟು ಮಾಡುತ್ತದೆ. ಇದನ್ನು ಕಡಿಮೆಮಾಡಿ.

#5

#5

ನಿಮ್ಮ ಸಿಸ್ಟಮ್‌ ನಲ್ಲಿ ವಿಂಡೋಸ್‌ ವರ್ಸನ್‌ ರನ್‌ ಆಗದೆಯೇ ವೀಕ್ಷಣೆ ಅಂದಗೊಳಿಸಲು ವಿಸ್ಯುವಲ್‌ ಎಪೆಕ್ಟ್‌ ಅನ್ನು ಆಗಾಗ ಸ್ಕೇಲಿಂಗ್ ಮಾಡುವುದರಿಂದ ನಿಮ್ಮ ಅನುಭವ ಹೆಚ್ಚಿಸಬಹುದು.

#6

#6

ನಿಮ್ಮ ಸಿಸ್ಟಮ್‌ ಕೆಲಸ ಅಭಿವೃದ್ದಿ ಪಡಿಸಲು ಪ್ರಸ್ತುತ ಡ್ರೈವ್‌ಗಳನ್ನು ತಿಳಿದು ರನ್‌ ಮಾಡಿ ಹಾಗು ಅಪ್‌ಡೇಟ್‌ ಮಾಡುವ ಹವ್ಯಾಸ ರೂಢಿಸಿಕೊಳ್ಳಿ.

#7

#7

ಡಿಸ್ಕ್‌ ಕ್ಲೀನ್ಅಪ್‌ ಸಿಸ್ಟಮ್‌ನಲ್ಲಿನ ಅನಾವಶ್ಯಕ ಫೈಲ್‌ಗಳನ್ನು ತೆಗೆದು ಕೆಲಸ ವೇಗಗೊಳಿಸುತ್ತದೆ. ಇನ್‌ಸ್ಟಾಲೇಶನ್‌ ಸಂದರ್ಭದಲ್ಲಿಯ ತಾತ್ಕಾಲಿಕ ಫೈಲ್‌ಗಳನ್ನು ತೆಗೆಯುವುದರಿಂದ ಇದನ್ನು ಬಳಸಿ ನಿಮಗೆ ಬೇಡವಾದ ಫೈಲ್‌ಗಳನ್ನು ತೆಗೆಯಿರಿ.

#8

#8

ನಿಮಗೆ ತಿಳಿಯದೇ ಆದ ಕೆಲವು ಅನಾಹುತಗಳಿಗೆ ಹೆದರಬೇಡಿ. ವಿಂಡೋಸ್‌ನಲ್ಲಿ ಡಿಫ್ರ್ಯಾಮೆಂಟ್‌ ಇದ್ದು, ಇದು ಏನು ಮಾಡಬೇಕೆಂದು ತಿಳಿಸುತ್ತದೆ.

#9

#9

ನಿಮ್ಮ ಸಿಸ್ಟಮ್‌ನಲ್ಲಿನ ಫ್ಯಾನ್‌ ಹೆಚ್ಚು ಡಸ್ಟ್‌ಅನ್ನು ಸೆಳೆಯುವುದರಿಂದ ಅದನ್ನು ಆಗಾಗ ಸ್ವಚ್ಛತೆ ಮಾಡಿ.

#10

#10

ಲ್ಯಾಪ್‌ಟಾಪ್‌ ಬಳಕೆದಾರರಿಗೆ ಮಲ್ಟಿಪಲ್‌ ಪವರ್‌ ಸೆಟ್ಟಿಂಗ್ಸ್‌ ಇದ್ದು ಅದರ ಬಳಕೆಯಲ್ಲಿ ಬ್ಯಾಲೆನ್ಸ್ಡ್‌ ಎಂದು ನೀಡಿ.

Best Mobiles in India

English summary
After owning your computer for an extended period of time, you'll probably start to notice that it just doesn't perform the way it did out of the box. The good news is that you’re not crazy -- the ghosts in the machine are real. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X