Subscribe to Gizbot

ಹೆಚ್ಚು ಖರ್ಚಿಲ್ಲದ ಮಿತದರದ ಪ್ರಾಣ ರಕ್ಷಕಗಳು

Written By:

ನೀವು ದೂರಪ್ರಯಾಣಕ್ಕೆ ಅಣಿಯಾಗುತ್ತಿದ್ದೀರಿ ಮತ್ತು ಅಲ್ಲಿ ಎದುರಾಗುವ ಅಪಾಯಗಳನ್ನು ನಿವಾರಿಸಬಲ್ಲಂತಹ ಗ್ಯಾಜೆಟ್‌ಗಳನ್ನು ನಿಮ್ಮೊಂದಿಗೆ ಕೊಂಡೊಯ್ಯುವುದು ನಿಮ್ಮ ಸಹಾಯಕ್ಕೆ ಬರಬಲ್ಲುದು. ನೀವು ಪ್ರಯಾಣಿಸುವಲ್ಲೆಲ್ಲಾ ಈ ಗ್ಯಾಜೆಟ್‌ಗಳ ಬಳಕೆಯನ್ನು ನೀವು ಮಾಡುವುದರ ಜೊತೆಗೆ ನಿಮ್ಮ ಅಗತ್ಯ ಸಂದರ್ಭಕ್ಕೆ ಇದು ಬಳಕೆಯಾಗಲಿದೆ.

ಓದಿರಿ: ನೀರಿಗೆ ಬಿದ್ದ ಮೊಬೈಲ್‌ ರಕ್ಷಿಸುವುದು ಹೇಗೆ

ಬನ್ನಿ ಇಂದಿನ ಲೇಖನದಲ್ಲಿ ಈ ಗ್ಯಾಜೆಟ್‌ಗಳ ಬಗ್ಗೆ ಮಾಹಿತಿಗಳನ್ನು ಪಡೆದುಕೊಳ್ಳೋಣ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಯಾವುದೇ ಅಪಾಯವಿಲ್ಲ

ಲೈಫ್ ಸ್ಟ್ರಾ

ಯಾವುದೇ ಅಪಾಯವಿಲ್ಲದೆ ಕೊಳದಲ್ಲಿರುವ ನೀರನ್ನು ಸೇವಿಸಲು ಇದು ಸಹಾಯ ಮಾಡಲಿದೆ.

ಬೆಂಕಿ ಹೊತ್ತಿಸಲು

ಸ್ವೀಡಿಶ್ ಆರ್ಮಿ ಫೈರ್ ಸ್ಟೀಲ್

ಯಾವುದೇ ಹವಾಮಾನದಲ್ಲೂ, ಸ್ವೀಡಿಶ್ ಆರ್ಮಿ ಫೈರ್ ಸ್ಟೀಲ್ ಬೆಂಕಿಯನ್ನು ಹೊತ್ತಿಸಲು ನೆರವಾಗಲಿದೆ.

400 ಡಿಗ್ರಿಗಳ ಫ್ಯಾರನ್ ಹೀಟ್‌

ಗ್ಲೋಬಲ್ ಸನ್ ಓವನ್

ಸೂರ್ಯನ ಶಾಖವನ್ನು ಬಳಸಿಕೊಂಡು 400 ಡಿಗ್ರಿಗಳ ಫ್ಯಾರನ್ ಹೀಟ್‌ನಲ್ಲಿ ಆಹಾರವನ್ನು ನಿಮಗೆ ಬೇಯಿಸಿಕೊಳ್ಳಬಹುದು.

ಸೋಲಾರ್ ಟಾರ್ಚ್

ಎಲ್‌ಇಡಿ ಸೋಲಾರ್ ಟಾರ್ಚ್

ಅಪಾಯ ಸಂದರ್ಭದಲ್ಲಿ ಈ ಟಾರ್ಚ್ ನಿಮಗೆ ಹೆಚ್ಚು ಪರಿಣಾಮಕಾರಿಯಾಗಿ ಬಳಕೆಯಾಗಲಿದೆ. 80 ನಿಮಿಷಗಳ ಕಾಲ ಇದು ಕಾರ್ಯನಿರ್ವಹಿಸಬಲ್ಲುದು.

ಕ್ಯಾಂಪ್ ಸ್ಟವ್

ಬಯೋ ಲೈಟ್ ಕ್ಯಾಂಪ್ ಸ್ಟವ್

ಇದು ಸ್ಟವ್ ಮಾತ್ರವಲ್ಲದೆ, ಚಾರ್ಜರ್ ಕೂಡ ಹೌದು. ಆಹಾರ ಬೇಯಿಸುವುದರ ಜೊತೆಗೆ ನಿಮ್ಮ ಫೋನ್‌ನ ಚಾರ್ಜಿಂಗ್ ಕಾರ್ಯವನ್ನು ಇದು ನಡೆಸುತ್ತದೆ.

ವಾಟರ್ ಬಾಟಲ್

ಹೈಡ್ರಾಪ್ಯಾಕ್ ಬಾಟಲ್

ಹೊತ್ತೊಯ್ಯಲು ಸುಲಭವಾಗಿರುವ ಈ ವಾಟರ್ ಬಾಟಲ್ ನಿಮ್ಮ ಬ್ಯಾಕ್ ಪ್ಯಾಕ್‌ನಲ್ಲಿ ಸುಭದ್ರವಾಗಿ ಕೂರುತ್ತದೆ.

ಸನ್ ಲೈಟ್

ಸನ್ ರಾಕೆಟ್ ಸನ್ ಲೈಟ್

ಸೂರ್ಯನ ಶಾಖವನ್ನು ಬಳಸಿಕೊಂಡು ನೀರು ಕಾಯಿಸಲು ಈ ಸನ್ ರಾಕೆಟ್ ಸನ್ ಲೈಟ್ ನಿಮಗೆ ನೆರವನ್ನು ನೀಡುತ್ತದೆ.

15 ಸಾಮಾಗ್ರಿ

ಬಿಯರ್ ಗ್ರಿಲ್ಸ್ ಸರ್ವೈವಲ್ ಕಿಟ್

ಈ ಸರ್ವೈವಲ್ ಕಿಟ್ ನಿಮಗೆ ಎಲ್ಲಾ ಸಂದರ್ಭದಲ್ಲೂ ನೆರವನ್ನು ಉಂಟುಮಾಡುತ್ತದೆ. 15 ಸಾಮಾಗ್ರಿಗಳ ಈ ಕಿಟ್ ಎಲ್ಲಾ ಉಪಯುಕ್ತ ವಸ್ತುಗಳನ್ನು ಒಳಗೊಂಡಿದೆ.

ಹ್ಯಾಂಡ್ ವಾರ್ಮರ್

ಜಿಪ್ಪೊ ಹ್ಯಾಂಡ್ ವಾರ್ಮರ್

ಈ ಹ್ಯಾಂಡ್ ವಾರ್ಮಿಂಗ್ ಉಳಿದ ಹ್ಯಾಂಡ್ ವಾರ್ಮಿಂಗ್‌ಗಿಂತಲೂ ಹೆಚ್ಚು ಪರಿಣಾಕಾರಿ ಮತ್ತು ಉಪಯುಕ್ತವಾದುದು. 12 ಗಂಟೆಗಳ ಕಾಲ ಕಾರ್ಯನಿರ್ವಹಿಸುವ ಸಾಮರ್ಥ್ಯ ಇದಕ್ಕಿದೆ.

ಕಡಿಮೆ ಸ್ಥಳಾವಕಾಶ

ಲೆದರ್ ಮ್ಯಾನ್

ಈ ಮಲ್ಟಿ ಟೂಲ್ ಕೇವಲ ಚಾಕುವನ್ನು ಮಾತ್ರ ಒಳಗೊಂಡಿರದೇ ಇತರ ವಸ್ತುಗಳನ್ನು ಒಳಗೊಂಡು ಬಂದಿದೆ. ನಿಮ್ಮ ಬ್ಯಾಗ್‌ನಲ್ಲಿ ಕಡಿಮೆ ಸ್ಥಳಾವಕಾಶವನ್ನು ಈ ಟೂಲ್ ಪಡೆದುಕೊಳ್ಳಲಿದ್ದು ಕಷ್ಟಕರ ಸಂದರ್ಭದಲ್ಲಿ ನಿಮ್ಮ ಅಂಗರಕ್ಷಕನಾಗಿ ಕಾರ್ಯನಿರ್ವಹಿಸಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
From portable torches to multi-tools and firestarters, these awesome survival gadgets could make your life a whole lot easier just when you need exactly that.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot